December 2018

ಹೊಸ ವರ್ಷ ಸ್ವಾಗತಕ್ಕೆ ಅರಮನೆ ಆವರಣದಲ್ಲಿ ನಡೆಯಲಿದೆ ವಿಶೇಷ ಕಾರ್ಯಕ್ರಮಗಳು..!

ಮೈಸೂರು: ಹೊಸ ವರ್ಷ ಆಚರಣೆಗೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದ್ದು ಇಂದು ಸಂಜೆಯಿಂದಲೇ ಅರಮನೆಯಲ್ಲಿ ಸಡಗರ ಆರಂಭವಾಗಲಿದೆ. ಇನ್ನು ನೂತನ ವರ್ಷವನ್ನು ಖುಷಿಯಿಂದ ಸ್ವಾಗತಿಸಲು ಮೈಸೂರು ಸಿಂಗಾರಗೊಂಡಿದೆ. ಇಂದು ರಾತ್ರಿ 10 ಗಂಟೆಯಿಂದ ಮಧ್ಯರಾತ್ರಿ 12 ರವರೆಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅರಮನೆ ಆವರಣದಲ್ಲಿ ನಡೆಯಲಿವೆ. 12 ಗಂಟೆಗೆ ಸರಿಯಾಗಿ ಪಟಾಕಿ, ಬಾಣಬಿರುಸುಗಳನ್ನು ಸಿಡಿಸಲು ಎಲ್ಲಾ ತಯಾರಿಯನ್ನು ಕೂಡ ಮಾಡಿಕೊಳ್ಳಲಾಗಿದೆ. ಅಲ್ಲದೆ ಈ ಸಂತೋಷದ ಮಧ್ಯೆ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಇಂದು ರಾತ್ರಿ ಚಾಮುಂಡಿ ಬೆಟ್ಟಕ್ಕೆ ಸಂಚಾರ […]

ಹೊಸ ವರ್ಷ ಸ್ವಾಗತಕ್ಕೆ ಅರಮನೆ ಆವರಣದಲ್ಲಿ ನಡೆಯಲಿದೆ ವಿಶೇಷ ಕಾರ್ಯಕ್ರಮಗಳು..! Read More »

ಹೊಸ ವರ್ಷಾಚರಣೆ ಹಿನ್ನೆಲೆ ನೂತನ ಫ್ಲೈಓವರ್ ಮೇಲೆ ವಾಹನ ಸಂಚಾರ ನಿರ್ಬಂಧ

ಹೊಸ ವರ್ಷಾಚರಣೆ ಹಿನ್ನೆಲೆ: ನೂತನ ಫ್ಲೈಓವರ್ ಮೇಲೆ ವಾಹನ ಸಂಚಾರ ನಿರ್ಬಂಧ

ಮೈಸೂರು: ಹೊಸ ವರ್ಷಾಚರಣೆ ಹಿನ್ನೆಲೆ ಸುರಕ್ಷತೆ ಮತ್ತು ಸುಗಮ ಸಂಚಾರದ ಹಿತದೃಷ್ಟಿಯಿಂದ ಇಂದು ರಾತ್ರಿ ಮೈಸೂರಿನ ಹಿನಕಲ್ ಬಳಿ ಇರುವ ನೂತನ ಫ್ಲೈ ಓವರ್ ಮೇಲೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ನಗರದನಲ್ಲಿ 2019ರ ಹೊಸ ವರ್ಷಾಚರಣೆ ಯನ್ನು ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಚರಿಸಲಿದ್ದು, ಹೊಸವರ್ಷಾಚರಣೆಯ ಸಂಬಂಧ ಮೈಸೂರು-ಹುಣಸೂರು ರಸ್ತೆ-ಹಿನಕಲ್ ರಿಂಗ್ ರಸ್ತೆ ಜಂಕ್ಷನ್ ಬಳಿಯ ನೂತನ ಫ್ಲೈ ಓವರ್ ಮೇಲೆ ವಾಹನಗಳನ್ನು ಚಾಲಕರು/ಸವಾರರು ಅಜಾಗರೂಕತೆಯಿಂದ ವೇಗವಾಗಿ ಚಾಲನೆ ಮಾಡುವ ಸಾಧ್ಯತೆ ಇರುವುದರಿಂದ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸಾರ್ವಜನಿಕರ

ಹೊಸ ವರ್ಷಾಚರಣೆ ಹಿನ್ನೆಲೆ: ನೂತನ ಫ್ಲೈಓವರ್ ಮೇಲೆ ವಾಹನ ಸಂಚಾರ ನಿರ್ಬಂಧ Read More »

ಕನ್ನಡದ ಹಿರಿಯ ನಟ ಸಿ.ಎಚ್​​ ಲೋಕನಾಥ್ ಇನ್ನಿಲ್ಲ

ಕನ್ನಡದ ಹಿರಿಯ ನಟ ಸಿ.ಎಚ್​​ ಲೋಕನಾಥ್ ಇನ್ನಿಲ್ಲ

ಬೆಂಗಳೂರು: ವರ್ಷದ ಕೊನೆ ದಿನ ಮತ್ತೊಂದು ಅಘಾತ ಎದುರಾಗಿದ್ದು ಕನ್ನಡ ಚಿತ್ರರಂಗದ ಹಿರಿಯ ನಟ ಸಿ.ಎಚ್​​ ಲೋಕನಾಥ್​​ ಕೊನೆಯುಸಿರೆಳೆದಿದ್ದಾರೆ. 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಕನ್ನಡದ ಮೇರು ಕಲಾವಿದ ಲೋಕನಾಥ್(90) ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು​​ ಇಂದು ಮುಂಜಾನೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ಧಾರೆ.  ಇವರು ಸುಮಾರು 5 ದಶಕಕ್ಕೂ ಹೆಚ್ಚು ಕಾಲ ಕಲಾಸೇವೆ ಮಾಡಿದ್ದ ಹಿರಿಯ ಕಲಾವಿದರಾಗಿದ್ದಾರು. ಸಂಸ್ಕಾರ, ಗೆಜ್ಜೆಪೂಜೆ, ಭೂತಯ್ಯನ ಮಗ ಅಯ್ಯು, ಬಂಗಾರದ ಮನುಷ್ಯ, ಮಿಂಚಿನ ಓಟ, ನಾಗರ ಹಾವು ಎಂಬ ಅದ್ಭುತ

ಕನ್ನಡದ ಹಿರಿಯ ನಟ ಸಿ.ಎಚ್​​ ಲೋಕನಾಥ್ ಇನ್ನಿಲ್ಲ Read More »

ಕನ್ನಡಿಗರೇ ಎಲ್ಲವನ್ನೂ ಕೊಟ್ಟಿದ್ದಾರೆ, ಬೇರೆ ಭಾಷೆಗೆ ಹೋಗಲ್ಲ ಎಂದ್ರು ಯಶ್

ಬೆಂಗಳೂರು: ಕನ್ನಡಿಗರೇ ಎಲ್ಲವನ್ನೂ ಕೊಟ್ಟಿದ್ದಾರೆ ನಾನು ಬೇರೆ ಭಾಷೆಗೆ ಹೋಗುವುದಿಲ್ಲ ಎಂದು ನಟ ರಾಕಿಂಗ್ ಸ್ಟಾರ್ ಯಶ್ ತಿಳಿಸಿದ್ದಾರೆ. ಕೆ.ಜಿ.ಎಫ್​ ಚಿತ್ರ ಬಿಡುಗಡೆಯಾದ ನಂತರ ಯಶ್​ ಶುಕ್ರವಾರ ಸಂಜೆ ನಿರ್ಮಾಪಕ ವಿಜಯ್​ ಕಿರಗಂದೂರು ಮತ್ತು ಚಿತ್ರತಂಡದ ಜತೆ ಒರಾಯನ್​ ಮಾಲ್​ನಲ್ಲಿ ಚಿತ್ರ ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ಇಷ್ಟು ದಿನ ಕನ್ನಡ ಚಿತ್ರವೊಂದರ ಗಳಿಕೆ ನೂರು ಕೋಟಿ ರೂ. ಗಡಿ ದಾಟುತ್ತೆ ಎಂದು ಮಾತನಾಡಿಕೊಳ್ಳುವುದು ಕಟ್ಟು ಕತೆ

ಕನ್ನಡಿಗರೇ ಎಲ್ಲವನ್ನೂ ಕೊಟ್ಟಿದ್ದಾರೆ, ಬೇರೆ ಭಾಷೆಗೆ ಹೋಗಲ್ಲ ಎಂದ್ರು ಯಶ್ Read More »

ಬುಮ್ರಾ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯ: 151ಕ್ಕೆ ಸರ್ವ ಪತನ

ಬುಮ್ರಾ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯ: 151ಕ್ಕೆ ಸರ್ವ ಪತನ

ಮೇಲ್ಬೋರ್ನ್: ಯಾರ್ಕರ್​​ ಸ್ಪೆಷಲಿಸ್ಟ್​​ ಜೆಸ್ಪ್ರೀತ್​​​​ ಬುಮ್ರಾ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯ 151 ರನ್ ಗಳಿಗೆ ಸರ್ವ ಪತನಗೋಂಡಿದೆ. ಮೇಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಮೂರನೇ ಕ್ರಿಕೆಟ್ ಟೆಸ್ಟ್‌ನ ಮುರನೆ ದಿನ ಆಸ್ಟ್ರೇಲಿಯ ಟೀಂ ಇಂಡಿಯಾ ಬೌಲರ್ಗ’ಳ ದಾಳಿಗೆ ತತ್ತರಿಸಿ ಅಲ್ಪ ಮೊತ್ತಕ್ಕೆ ಕುಸಿದಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 7 ವಿಕೆಟ್ ನಷ್ಟಕ್ಕೆ 443 ರನ್ ಬಾರಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಇದೀಗ ಭಾರತ ತಂಡ 292ರನ್ ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದೆ. ಸಂಕ್ಷಿಪ್ತ

ಬುಮ್ರಾ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯ: 151ಕ್ಕೆ ಸರ್ವ ಪತನ Read More »

ಪ್ರವಾಸಿಗರ ಆಕರ್ಷಣೆಯಾಗಿದ್ದ ವಿಶೇಷ ಚಿಂಪಾಂಜಿ ಸಾವು

ಪ್ರವಾಸಿಗರ ಆಕರ್ಷಣೆಯಾಗಿದ್ದ ವಿಶೇಷ ಚಿಂಪಾಂಜಿ ಸಾವು

ಮೈಸೂರು: ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರವಾಸಿಗರ ಆಕರ್ಷಣೆಯಾಗಿದ್ದ, ಮೈಮೇಲೆ ರೋಮಗಳನ್ನು ಹೊಂದಿರದ ವಿಶೇಷ ಚಿಂಪಾಂಜಿ ಯೊಂದು ಸಾವನ್ನಪ್ಪಿದೆ. 27ವರ್ಷದ ಗುರು ಎಂಬ ಚಿಂಪಾಂಜಿ ನಿನ್ನೆ ರಾತ್ರಿ 9.30ಕ್ಕೆ ಮೃತಪಟ್ಟಿದೆ. ಕಳೆದ 16 ವರ್ಷಗಳಿಂದ ಮೃಗಾಲಯದಲ್ಲಿ ಪ್ರವಾಸಿಗರ ಆಕರ್ಷಣೆಯಾಗಿದ್ದ ಚಿಂಪಾಂಜಿ ಗುರು ಅನಾರೋಗ್ಯದಿಂದ ಮೃತಪಟ್ಟಿದೆ. ಡಿ.23 ರಂದು ಸಪ್ಪೆಯಾಗಿ ಕುಳಿತಿರುವುದನ್ನು ಗಮನಿಸಿದ ಮೃಗಾಲಯದ ವೈದ್ಯರು ಗುರುವನ್ನು ಆರೈಕೆ ಮಾಡಿ, ಚಿಕಿತ್ಸೆ ನೀಡಲು ಆರಂಭಿಸಿದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಗುರು ಸೋಮವಾರ ರಾತ್ರಿ ಮೃತಪಟ್ಟಿದೆ. ಬೆಂಗಳೂರಿನ ಪಶು ಆರೋಗ್ಯ ಮತ್ತು

ಪ್ರವಾಸಿಗರ ಆಕರ್ಷಣೆಯಾಗಿದ್ದ ವಿಶೇಷ ಚಿಂಪಾಂಜಿ ಸಾವು Read More »

Scroll to Top