January 2019

ಒಂದು ಕಥೆ ಹೇಳ್ಲಾ

ಬಿಡುಗಡೆಯಾಯ್ತು ಐದು ಹಾರರ್ ಕಥೆಗಳ ಟ್ರೈಲರ್..!

ಬೆಂಗಳೂರು: ಜೋಡಿಹಕ್ಕಿ ಸೀರಿಯಲ್ ಮೂಲಕ ರಾಮಣ್ಣ ಎಂದೇ ಖ್ಯಾತರಾಗಿರುವವರು ತಾಂಡವ್. ಅವರೀಗ ಒಂದು ಕಥೆ ಹೇಳ್ಲಾ ಎಂಬ ವಿನೂತನ ಪ್ರಯೋಗದ ಹಾರರ್ ಚಿತ್ರವೊಂದರ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಹೊಸ ಥರದ ಪೋಸ್ಟರ್ ಸೇರಿದಂತೆ ನಾನಾ ರೀತಿಯಲ್ಲಿ ಈ ಸಿನಿಮಾ ಸುದ್ದಿ ಕೇಂದ್ರದಲ್ಲಿದೆ. ಇದೀಗ ಇದರ ಟ್ರೈಲರ್ ಹೊರ ಬಂದಿದೆ. ಇದುವೇ ಕ್ಷಣ ಕ್ಷಣವೂ ಬೆಚ್ಚಿ ಬೆರಗಾಗಿಸುವಂಥಾ ಡಿಫರೆಂಟಾದ ಕಂಟೆಂಟು ಈ ಚಿತ್ರದಲ್ಲಿದೆ ಎಂಬಂಥಾ ಸುಳಿವನ್ನೂ ಬಿಟ್ಟುಕೊಟ್ಟಿದೆ. ಕ್ರೌಡ್ ಫಂಡಿಂಗ್ ಮೂಲಕ ನಿರ್ಮಾಣಗೊಂಡಿರೋ ಈ ಚಿತ್ರವನ್ನು ಗಿರೀಶ್ […]

ಬಿಡುಗಡೆಯಾಯ್ತು ಐದು ಹಾರರ್ ಕಥೆಗಳ ಟ್ರೈಲರ್..! Read More »

ಪ್ರಧಾನಿ ಬ್ಯಾನರ್

ಕರ್ನಾಟಕ, ಗೋವಾ ಎನ್.ಸಿ.ಸಿ ತಂಡಕ್ಕೆ ‘ಪ್ರಧಾನಿ ಬ್ಯಾನರ್’ ಪ್ರಶಸ್ತಿ

ಮೈಸೂರು: ಗಣರಾಜ್ಯೋತ್ಸವದ ಅಂಗವಾಗಿ ಜ. 26ರಂದು ದೆಹಲಿಯಲ್ಲಿ ನಡೆದ ಪಥಸಂಚಲನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕರ್ನಾಟಕ ಮತ್ತು ಗೋವಾ ಎನ್.ಸಿ.ಸಿ ತಂಡಕ್ಕೆ ಈ ಬಾರಿಯ ಪ್ರತಿಷ್ಠಿತ “ಪ್ರಧಾನಿ ಬ್ಯಾನರ್” ಪ್ರಶಸ್ತಿ ಲಭಿಸಿದೆ. ಅಲ್ಲದೆ ವಿಶೇಷವಾಗಿ  ಮೈಸೂರಿನ ಜೆಎಸ್ಎಸ್ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಕೆಡೆಟ್ ಎಂ.ಆರ್.ಚಂದನ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇದು ರಾಜ್ಯದ ಪಾಲಿಗೆ ಹೆಮ್ಮೆಯ ಗರಿಯಾಗಿದ್ದು, ಕಳೆದ 27 ವರ್ಷಗಳ ನಂತರ ಇದೇ ಮೊದಲ ಬಾರಿಗೆ ರಾಜ್ಯದ ತಂಡ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಎನ್.ಸಿ.ಸಿ ಸೇರುವ ಪ್ರತಿಯೊಬ್ಬ

ಕರ್ನಾಟಕ, ಗೋವಾ ಎನ್.ಸಿ.ಸಿ ತಂಡಕ್ಕೆ ‘ಪ್ರಧಾನಿ ಬ್ಯಾನರ್’ ಪ್ರಶಸ್ತಿ Read More »

ಜಾರ್ಜ್ ಫರ್ನಾಂಡೀಸ್

ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಇನ್ನಿಲ್ಲ

ನವದೆಹಲಿ: ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಅವರು ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ. ಫರ್ನಾಂಡೀಸ್ ಅವರಿಗೆ 88 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ಕೋಮಾದಲ್ಲಿದ್ದ ಫರ್ನಾಂಡಿಸ್ ಅವರು ಮರೆಗುಳಿ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ 7 ಗಂಟೆಗೆ ದೆಹಲಿಯಲ್ಲಿ ಕೊನೆಯುಸಿರೆಳೆದರು. ಪ್ರಸಿದ್ಧ ಕಾರ್ಮಿಕ ಹೋರಾಟಗಾರ, ಮಾನವ ಹಕ್ಕುಗಳ ಹೋರಾಟಗಾರ, ಪತ್ರಕರ್ತ, ಸಮಾಜವಾದಿ, ರಾಜಕಾರಣಿ, ಕ್ರಿಯಾಶೀಲ ವ್ಯಕ್ತಿಯಾಗಿದ್ದ ಜಾರ್ಜ್ ಫರ್ನಾಂಡೀಸ್ ಅವರು ಜೂನ್ 3, 1930ರಂದು ಮಂಗಳೂರಿನಲ್ಲಿ ಜನಿಸಿದರು.

ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಇನ್ನಿಲ್ಲ Read More »

ಪ್ರಣಬ್ ಮುಖರ್ಜಿ ಸೇರಿದಂತೆ ಮೂವರಿಗೆ ಭಾರತ ರತ್ನ

ಪ್ರಣಬ್ ಮುಖರ್ಜಿ ಸೇರಿದಂತೆ ಮೂವರಿಗೆ ಭಾರತ ರತ್ನ

ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಮೂವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಹಿಂದಿ ಚಿತ್ರರಂಗದ ಸಾಧಕ ಡಾ. ಭೂಪೇನ್​​ ಹಜಾರಿಕಾ ಹಾಗೂ ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಹಾಗೂ ಸಾಮಾಜಿಕ ಕಾರ್ಯಕರ್ತ ನಾನಾಜಿ ದೇಶಮುಖ್​​ ದೇಶದ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಸಂಬಂಧ ರಾಷ್ಟ್ರಪತಿ ಭವನದ ಪ್ರಕಟಣೆ ಹೊರಡಿಸಲಾಗಿದೆ. ನಾಳೆ (ಶನಿವಾರ) ಗಣರಾಜ್ಯೋತ್ಸವದಂದು ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಸಾಧಕರಿಗೆ ಪುರಸ್ಕಾರ ನೀಡಿ ಗೌರವಿಸಲಿದ್ದಾರೆ.

ಪ್ರಣಬ್ ಮುಖರ್ಜಿ ಸೇರಿದಂತೆ ಮೂವರಿಗೆ ಭಾರತ ರತ್ನ Read More »

ವಿದ್ಯಾರ್ಥಿಗಳೇ ತಯಾರಿಸಿದ ಉಪಗ್ರವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ..!

ವಿದ್ಯಾರ್ಥಿಗಳೇ ತಯಾರಿಸಿದ ಉಪಗ್ರವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ..!

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ – ಇಸ್ರೋ ಇಂದು ‘ಕಲಾಂಸ್ಯಾಟ್ ವಿ2’​ ಮತ್ತು ‘ಮೈಕ್ರೋ ಸ್ಯಾಟ್​-ಆರ್’ ಎಂಬ​ ಎರಡು ಉಪಗ್ರಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‍ಎಲ್‍ವಿ-ಸಿ44 ರಾಕೆಟ್ ಮೂಲಕ ಕಲಾಂಸ್ಯಾಟ್ ವಿದ್ಯಾರ್ಥಿ ಉಪಗ್ರಹ ಹಾಗೂ ಮೈಕ್ರೋಸ್ಯಾಟ್-ಆರ್ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದೆ. ಸುಮಾರು 44.4 ಮೀಟರ್​ ಉದ್ದದ 260 ಟನ್​ ತೂಕದ ಪಿಎಸ್​ಎಲ್​ವಿ ಉಡಾವಣಾ ವಾಹಕವು ಈ ಎರಡೂ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಯಿತು. ‘ಕಲಾಂ-ಸ್ಯಾಟ್’​ ಅನ್ನು ವಿದ್ಯಾರ್ಥಿಗಳೇ ಸೇರಿ

ವಿದ್ಯಾರ್ಥಿಗಳೇ ತಯಾರಿಸಿದ ಉಪಗ್ರವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ..! Read More »

ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸಲು ಎಲ್‍ಇಡಿ ಡಿಸ್ಪ್ಲೇ ಬೋರ್ಡ್ ಅಳವಡಿಕೆ

ಮೈಸೂರು: ಮೈಸೂರನ್ನು ಮತ್ತೊಮ್ಮೆ ಸ್ವಚ್ಛನಗರಿಯನ್ನಾಗಿಸಲು ಹವಣಿಸುತ್ತಿರುವ ಮೈಸೂರು ಮಹಾನಗರ ಪಾಲಿಕೆ ಇದೀಗ ನಾಗರಿಕರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಎಲ್‍ಇಡಿ ಡಿಸ್ಪ್ಲೇ ಬೋರ್ಡ್ ಗಳ ಮೊರೆ ಹೋಗಿದೆ. ಎಲೆಕ್ಟ್ರಾನಿಕ್ ಎಲ್‍ಇಡಿ ವೀಡಿಯೋ ವಾಲ್ (ಎಲ್‍ಇಡಿ ಡಿಸ್ಪ್ಲೇ ಬೋರ್ಡ್) ಗಳ ಮೂಲಕ ಸ್ವಚ್ಛತೆ ಕಾಪಾಡುವ ಬಗ್ಗೆ ದೃಶ್ಯಾವಳಿಗಳನ್ನು ಪ್ರದರ್ಶಿಸಿ ಜನರಿಗೆ ಮನವರಿಕೆ ಮಾಡಲು ನಗರ ಪಾಲಿ ಕೆಯು ಪ್ರಯತ್ನಿಸುತ್ತಿದೆ. ನಗರದ ಕೆಆರ್‍ಎಸ್ ರಸ್ತೆಯ ಒಂಟಿ ಕೊಪ್ಪಲು ಸರ್ಕಲ್, ರೈಲು ನಿಲ್ದಾಣ ಬಳಿ ಜಗಜೀವನ ರಾಮ್ ಸರ್ಕಲ್, ರಾಮಸ್ವಾಮಿ ಸರ್ಕಲ್,

ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸಲು ಎಲ್‍ಇಡಿ ಡಿಸ್ಪ್ಲೇ ಬೋರ್ಡ್ ಅಳವಡಿಕೆ Read More »

ಗಮನಿಸಿ ನಾಳೆ ಬೆಳಗ್ಗೆ 6ರಿಂದ ರಾತ್ರಿ10ರವರೆಗೆ ಟಿವಿ ಕೇಬಲ್ ಬಂದ್..!

ಗಮನಿಸಿ: ನಾಳೆ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಟಿವಿ ಕೇಬಲ್ ಬಂದ್..!

ಬೆಂಗಳೂರು: ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಜಾರಿಗೊಳಿಸುತ್ತಿರುವ ತಮಗೆ ಬೇಕಾದ ಚಾನಲ್‍ಗಳನ್ನು ಗ್ರಾಹಕರೇ ಆಯ್ಕೆ ಮಾಡುವ ಕೇಬಲ್ ಮತ್ತು ಡಿಟಿಎಚ್ ನೀತಿ ವಿರೋಧಿಸಿ ನಾಳೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10ರವರೆಗೆ ಟಿವಿ ಕೇಬಲ್ ಬಂದ್ ಮಾಡಲು ಕೇಬಲ್ ಟಿವಿ ಆಪರೇಟರ್ ಸಂಘಟನೆಗಳು ನಿರ್ಧರಿಸಿವೆ. ಗ್ರಾಹಕರು ಮತ್ತು ಕೇಬಲ್ ಆಪರೇಟರ್‍ಗಳ ಹಿತದೃಷ್ಟಿಯಿಂದ ದಕ್ಷಿಣ ಭಾರತದಾದ್ಯಂತ ಕೇಬಲ್ ಟಿವಿ ಬಂದ್ ಮಾಡಲು ತೀರ್ಮಾನಿಸಲಾಗಿದೆ. ಹಾಗಾಗಿ ಕರ್ನಾಟಕದಲ್ಲೂ ಅಂದು ಕೇಬಲ್ ಟಿವಿಗಳು ಬಂದ್ ಆಗಲಿವೆ ಎಂದು ಕೇಬಲ್ ಆಪರೇಟರ್ಸ್

ಗಮನಿಸಿ: ನಾಳೆ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಟಿವಿ ಕೇಬಲ್ ಬಂದ್..! Read More »

ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು ಲಿಂಗೈಕ್ಯ

ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು ಲಿಂಗೈಕ್ಯ

ತುಮಕೂರು: ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು ಲಿಂಗೈಕ್ಯ ರಾಗಿದ್ದಾರೆ. 111 ವರ್ಷ ಸಾರ್ಥಕ ಜೀವನ ನಡೆಸಿದ್ದ ಶ್ರೀಗಳು ಕಳೆದ ಒಂದೂವರೆ ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ 11-44ರಲ್ಲಿ ವಿಧಿವಶರಾಗಿದ್ದಾರೆ. ಮಾಗಡಿ ತಾಲೂಕಿನ ವೀರಾಪುರದ ಶ್ರೀಯುತ ಹೊನ್ನೇಗೌಡ ಮತ್ತು ತಾಯಿ ಗಂಗಮ್ಮನವರಿಗೆ ಎಪ್ರಿಲ್ 1, 1908ರಲ್ಲಿ ೧೩ನೇ ಮಗು ಶಿವಣ್ಣನವರಾಗಿ ಜನಿಸಿದರು. 12ನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ “ಕಾಯಕವೇ ಕೈಲಾಸ” ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಗಳು. ಮಾರ್ಚ್ 3,

ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು ಲಿಂಗೈಕ್ಯ Read More »

ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು ಲಿಂಗೈಕ್ಯ

ಶಿವಕುಮಾರ ಸ್ವಾಮೀಜಿಗಳ ಸ್ಥಿತಿ ಗಂಭೀರ

ತುಮಕೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದ ಸ್ಥಿತಿ ಗಂಭೀರವಾಗಿದೆ ಎಂದು ಶ್ರೀಗಳ ಆರೈಕೆ ಮಾಡುತ್ತಿರುವ ಡಾ. ಪರಮೇಶ್​ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾನುವಾರ ರಾತ್ರಿಯಿಂದ ಶ್ರೀಗಳ ಬಿಪಿ ಹಾಗೂ ಶ್ವಾಸಕೋಶದಲ್ಲಿ ಏರುಪೇರುಗಳಾಗುತ್ತಿವೆ. ಅವರ ಶ್ವಾಸಕೋಶ, ರಕ್ತದೊತ್ತಡ, ಉಸಿರಾಟದಲ್ಲಿ ತೊಂದರೆಗಳಾಗುತ್ತಿವೆ. ಪರಿಸ್ಥಿತಿ ಈಗಲೂ ಹಾಗೆಯೇ ಮುಂದುವರಿದಿದೆ. ಸಮಸ್ಯೆ ಸರಿಪಡಿಸಲು ನಾವೂ ಕೂಡ ಶತ ಪ್ರಯತ್ನ ನಡೆಸುತ್ತಿದ್ದೇವೆ. ಮುಂದಿನ 2 ಗಂಟೆಗಳಲ್ಲಿ ಶ್ರೀಗಳ ಆರೋಗ್ಯದ ಬಗ್ಗೆ ಅಪ್‍ಡೇಟ್ಸ್ ಕೊಡುತ್ತೇವೆ ಎಂದು ಹೇಳಿದರು. ನಮ್ಮ ವೈದ್ಯರ

ಶಿವಕುಮಾರ ಸ್ವಾಮೀಜಿಗಳ ಸ್ಥಿತಿ ಗಂಭೀರ Read More »

Scroll to Top