February 2019

100ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಟಾರ್ ಡೈರೆಕ್ಟರ್ ನಿಧನ

ಹೈದರಾಬಾದ್: ತೆಲುಗಿನ ಅರುಂಧತಿ ಚಿತ್ರದ ಪ್ರಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ(64) ಇಂದು ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದಾಗಿ ನಿನ್ನೆ ಮುಂಜಾನೆ ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಂದು ನಿಧನರಾಗಿದ್ದಾರೆ. ಅರುಂಧತಿ, ನಾಗರಹಾವು(2016), ಅಂಜಿ, ಅವತಾರಂ ರೀತಿಯ ಅದ್ಭುತ ಸಿನಿಮಾಗಳನ್ನ ಕೋಡಿ ರಾಮಕೃಷ್ಣ ಅವರು ನಿರ್ದೇಶಿಸಿದ್ದರು. ಸುಮಾರು 100ಕ್ಕೂ ಅಧಿಕ ಚಿತ್ರಗಳನ್ನು ನಿರ್ದೇಶಿಸಿದ್ದ ಖ್ಯಾತಿ ಗಳಿಸಿರುವ ಕೋಡಿ ರಾಮಕೃಷ್ಣ ಅವರು ಕನ್ನಡದಲ್ಲಿ 2016ರಲ್ಲಿ ತೆರೆಕಂಡ ಡಾ.ವಿಷ್ಣುವರ್ಧನ್ […]

100ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಟಾರ್ ಡೈರೆಕ್ಟರ್ ನಿಧನ Read More »

ಕ್ಯಾನ್ಸರ್ ನಿಂದ ಬಳಲುತ್ತಿರುವ ಮಗನ ಚಿಕಿತ್ಸೆಗೆ ಅಂಗಲಾಚುತ್ತಿದ್ದಾಳೆ ತಾಯಿ: ಸಹಾಯಕ್ಕಾಗಿ ಮೊರೆ

ಮೈಸೂರು: ಕ್ಯಾನ್ಸರ್ ನಿಂದ ಬಳಲುತ್ತಿರುವ ಮಗನನ್ನು ಬದುಕಿಸಿಕೊಡಿ ಅಂತಾ ತಾಯಿಯೊಬ್ಬರು ಸಹಾಯಹಸ್ತ ಬೇಡಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ನಿವಾಸಿಯ ಸೋಮಶೇಖರ್ ಹಾಗೂ ಸವಿತ ದಂಪತಿಯ ಪುತ್ರ 8 ವರ್ಷದ ಸುಜನ್ ಬ್ಲೆಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾನೆ.ಕಳೆದ 6 ವರ್ಷಗಳಿಂದ ಸುಜನ್ ಎಂಬ ಪುಟ್ಟ ಹುಡುಗ ಬ್ಲೆಡ್ ಕ್ಯಾನ್ಸರ್ ಗೆ ತುತ್ತಾಗಿದ್ದಾನೆ. 1 ವರ್ಷದ ಮಗುವಾಗಿದ್ದಾಗ ಈ ಮಾರಕ ಕಾಯಿಲೆಯಿಂದ ನರಳುತ್ತಿದ್ದಾನೆ. ಸುಜನ್ ಸರ್ಕಾರಿ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಸೋಮಶೇಖರ್ ಕಾರು ಚಾಲಕ,

ಕ್ಯಾನ್ಸರ್ ನಿಂದ ಬಳಲುತ್ತಿರುವ ಮಗನ ಚಿಕಿತ್ಸೆಗೆ ಅಂಗಲಾಚುತ್ತಿದ್ದಾಳೆ ತಾಯಿ: ಸಹಾಯಕ್ಕಾಗಿ ಮೊರೆ Read More »

ಮೈಸೂರು ರೈಲ್ವೆ ನಿಲ್ದಾಣದಲ್ಲಿ ಬಾಂಬ್​ ಬೆದರಿಕೆ ಕರೆ: ಪೊಲೀಸರಿಂದ ಹೈ ಅಲರ್ಟ್​

ಮೈಸೂರು: ರೈಲ್ವೆ ನಿಲ್ದಾಣಗಳಲ್ಲಿ ಬಾಂಬ್​ ಇಟ್ಟಿರುವುದಾಗಿ ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಚಾಮರಾಜನಗರ, ಮೈಸೂರಿನಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. ಬೆಂಗಳೂರು ಕೇಂದ್ರ ರೈಲ್ವೆ ಕಂಟ್ರೋಲ್ ರೂಂಗೆ ತಡರಾತ್ರಿ ಸುಮಾರು 1.30ಕ್ಕೆ ಅನಾಮಧೇಯ ವ್ಯಕ್ತಿ ಕರೆ ಮಾಡಿ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಬಾಂಬ್​ ಇಟ್ಟಿರುವುದಾಗಿ ಬೆದರಿಕೆ ಒಡ್ಡಿದ್ದಾನೆ. ಹೀಗಾಗಿ ತಪಾಸಣೆ ನಡೆಸಿರುವ ಪೊಲೀಸರು ಕರೆ ಮಾಡಿದ ನಂಬರ್​ ಸಂಗ್ರಹಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುರುವಾರ ತಡರಾತ್ರಿ 2 ಗಂಟೆಗೆ ಹೆಚ್ಚುವರಿ ಪೊಲೀಸ್​ ಮಹಾ ನಿರ್ದೇಶಕರಿಗೆ (ಎಡಿಜಿಪಿ) ಕರೆ

ಮೈಸೂರು ರೈಲ್ವೆ ನಿಲ್ದಾಣದಲ್ಲಿ ಬಾಂಬ್​ ಬೆದರಿಕೆ ಕರೆ: ಪೊಲೀಸರಿಂದ ಹೈ ಅಲರ್ಟ್​ Read More »

ಇಂಡೋ – ಪಾಕ್ ವಿಶ್ವಕಪ್ ಪಂದ್ಯ: 25 ಸಾವಿರ ಟಿಕೆಟ್‍ಗೆ 4 ಲಕ್ಷ ಅರ್ಜಿ..!

ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ವಿರುದ್ಧ ವಿಶ್ವಕಪ್ ಪಂದ್ಯವನ್ನು ಬಹಿಷ್ಕಾರ ಮಾಡಬೇಕೆಂಬ ಒತ್ತಾಯ ಹೆಚ್ಚಾಗುತ್ತಿದೆ. ಇದರ ನಡುವೆಯೇ ಈ ಪಂದ್ಯದ ಟಿಕೆಟ್‍ಗಾಗಿ 4 ಲಕ್ಷ ಆನ್‍ಲೈನ್ ಅರ್ಜಿಗಳು ಬಂದಿರುವುದಾಗಿ ವಿಶ್ವಕಪ್ ಟೂರ್ನಿಯ ಆಯೋಜಕ ನಿರ್ದೇಶಕ ಸ್ಟೀವ್ ಎಲ್ವರ್ತಿ ಮಾಹಿತಿ ನೀಡಿದ್ದಾರೆ. ಜೂನ್ 16 ರಂದು ಪಾಕಿಸ್ತಾನ ಹಾಗೂ ಭಾರತದ ನಡುವಿನ ಪಂದ್ಯ ನಿಗದಿಯಾಗಿದ್ದು, ಇಂಗ್ಲೆಂಡ್‍ನ ಓಲ್ಡ್ ಟ್ರ್ಯಾಫೋರ್ಡ್ ಕ್ರೀಡಾಂಗಣದಲ್ಲಿ ಪಂದ್ಯ ನಡೆದಲಿದೆ. 25 ಸಾವಿರ ಮಂದಿ ಕುಳಿತುಕೊಳ್ಳುವ ಸಾಮಥ್ರ್ಯ ಹೊಂದಿರುವ ಕ್ರೀಡಾಂಗಣದ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರೀ

ಇಂಡೋ – ಪಾಕ್ ವಿಶ್ವಕಪ್ ಪಂದ್ಯ: 25 ಸಾವಿರ ಟಿಕೆಟ್‍ಗೆ 4 ಲಕ್ಷ ಅರ್ಜಿ..! Read More »

ರೆಡ್ ಮಿ ಸ್ಮಾರ್ಟ್ ಫೋನ್ ಗಳಲ್ಲಿ ಭಾರಿ ಡಿಸ್ಕೌಂಟ್!

ಮೈಸೂರು: ಸ್ಮಾರ್ಟ್ ಫೋನ್ ತಯಾರಕ ಸಂಸ್ಥೆಗಳಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಶಿಯೋಮಿ ರೆಡ್ ಮಿ ಮೊಬೈಲ್ ಸೆಟ್ ಗಳಲ್ಲಿ ಭಾರಿ ಡಿಸ್ಕೌಂಟ್ ಲಭ್ಯವಿದೆ. ಮೈಸೂರಿನ ಎಂಐ ಎಕ್ಷಕ್ಲ್ಯೂಸಿವ್ ಸ್ಟೋರ್ ನಲ್ಲಿ ಮಾತ್ರ ಈ ಆಫರ್ ನಿಮಗೆ ಸಿಗಲಿದೆ. 1.ರೆಡ್ ಮಿ ನೋಟ್ 5 ಪ್ರೋ (Redmi Note 5 pro) 4 ಜಿಬಿ ರ್ಯಾಮ್ ಹಾಗೂ 64 ಜಿಬಿ ಮೆಮೊರಿಯ ರೆಡ್ ಮಿ ನೋಟ್ 5 ಪ್ರೋ ಮೊಬೈಲ್ ದರ ₹11,999 ರೂಪಾಯಿಗಳಾಗಿದೆ (ಮೂಲ ಬೆಲೆ:

ರೆಡ್ ಮಿ ಸ್ಮಾರ್ಟ್ ಫೋನ್ ಗಳಲ್ಲಿ ಭಾರಿ ಡಿಸ್ಕೌಂಟ್! Read More »

ಮೈಸೂರಿನಲ್ಲಿ ನಟ ದರ್ಶನ್ ಸೆರೆ ಹಿಡಿದ ಛಾಯಾಚಿತ್ರಗಳ ಪ್ರದರ್ಶನ

ಮೈಸೂರು: ಚಾಲೆಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅರಣ್ಯದಲ್ಲಿ ಸೆರೆ ಹಿಡಿದಿರುವ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನ ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್‍ನಲ್ಲಿ ಮಾರ್ಚ್ 1 ರಿಂದ 3 ರವರೆಗೆ ನಡೆಯಲಿದೆ. ‘ಲೈಫ್ ಆನ್ ದಿ ವೈಲ್ಡ್ ಸೈಡ್’ ಹೆಸರಿನಲ್ಲಿ ನಟ ದರ್ಶನ್ ಅರಣ್ಯದಲ್ಲಿ ಸೆರೆ ಹಿಡಿದಿರುವ ಛಾಯಾಚಿತ್ರಗಳ ಪ್ರದರ್ಶನ ಆಯೋಜನೆಗೊಳ್ಳುತ್ತಿದೆ. ದರ್ಶನ್ ಸೆರೆ ಹಿಡಿದ ಛಾಯಚಿತ್ರಗಳ ಮಾರಾಟ ಕೂಡ ಇದ್ದು, ಮಾರಾಟದಿಂದ ಬಂದ ಹಣ ವನ್ಯಜೀವಿ ಸಂರಕ್ಷಣಾ ನಿಧಿಗೆ ಬಳಕೆಯಾಗಲಿದೆ. ಒಂದು ಛಾಯಾಚಿತ್ರಕ್ಕೆ ಎರಡರಿಂದ ಎರಡೂವರೆ ಸಾವಿರ

ಮೈಸೂರಿನಲ್ಲಿ ನಟ ದರ್ಶನ್ ಸೆರೆ ಹಿಡಿದ ಛಾಯಾಚಿತ್ರಗಳ ಪ್ರದರ್ಶನ Read More »

ನುಡಿದಂತೆ ನಡೆದು ಮಾದರಿಯಾದ ಬಿಗ್ ಬಾಸ್ ವಿಜೇತ ಶಶಿಕುಮಾರ್

ಬೆಂಗಳೂರು: ಇತ್ತೀಚೆಗೆ ಮುಕ್ತಾಯವಾಗಿದ್ದ ಬಿಗ್ ಬಾಸ್ ಸೀಜನ್ 6 ವಿಜೇತ ಶಶಿಕುಮಾರ್ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಅವರು ತಮ್ಮ ಕುಟುಂಬ ಸಮೇತರಾಗಿ ರಕ್ತದಾನ ಮಾಡಿದ್ದಲ್ಲದೆ ಅಂಗಾಂಗ ದಾನ ಮಾಡುವ ಕುರಿತು ಕಾಗದ ಪತ್ರಗಳಿಗೆ ಸಹಿ ಹಾಕಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿದ್ದಾಗಲೇ ತಾವು ಕುಟುಂಬ ಸಮೇತವಾಗಿ ರಕ್ತದಾನ ಮಾಡುವುದಾಗಿಯೂ, ಅಂಗಾಂಗಗಳ ದಾನ ಮಾಡುವುದಾಗಿಯೂ ಹೇಳಿಕೆ ನೀಡಿದ್ದರು. ಅದೇ ರೀತಿ ಶಶಿ ಕುಮಾರ್ ಕುಟುಂಬ, ಸ್ನೇಹಿತರೊಡನೆ ಎಂಎಸ್ ರಾಮಯ್ಯ ಆಸ್ಪತ್ರೆಗೆ ಆಗಮಿಸಿ ರಕ್ತದಾನ ಮಾಡಿದ್ದಾರೆ. ಅಂಗಾಗ ದಾನ ಮಾಡುವ ಅನುಮತಿ

ನುಡಿದಂತೆ ನಡೆದು ಮಾದರಿಯಾದ ಬಿಗ್ ಬಾಸ್ ವಿಜೇತ ಶಶಿಕುಮಾರ್ Read More »

ಫೆ.21ರಿಂದ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ

ಬೆಂಗಳೂರು: 11 ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇದೇ ಫೆಬ್ರವರಿ 21ರಿಂದ ಚಾಲನೆ ಸಿಗಲಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಂಜೆ 6ಕ್ಕೆ ಸಿಎಂ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಫೆಬ್ರವರಿ 22ರಿಂದ 28ರ ವರೆಗೆ ಚಿತ್ರ ಪ್ರದರ್ಶನ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸುಮಾರು 60 ರಾಷ್ಟ್ರಗಳ 125 ಚಲನಚಿತ್ರಗಳು ಪ್ರದರ್ಶನವಾಗಲಿವೆ. ಈ ಬಾರಿಯ ಪ್ರಕೃತಿ ವಿಕೋಪ ಕೇಂದ್ರಿ‌ಕರಿಸಿದ ಸಾಕ್ಷ್ಯಚಿತ್ರಗಳು ಪ್ರದರ್ಶನ‌ ಕಾಣಲಿದೆ. ವಿಶೇಷ ಅಂದ್ರೆ, ರೆಬಲ್​ ಸ್ಟಾರ್ ಅಂಬರೀಶ್ ನಟನೆಯ ಏಳು ಸುತ್ತಿನ ಕೋಟೆ, ಅಂತ, ಪಡುವಾರಳ್ಳಿ ಪಾಂಡವರು,

ಫೆ.21ರಿಂದ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ Read More »

ದೆಹಲಿ ಶೂಟಿಂಗ್ ವಿಶ್ವಕಪ್ ನಲ್ಲಿ ಪಾಲ್ಗೊಳ್ಳುವ ಪಾಕ್ ಆಟಗಾರರ ವೀಸಾಕ್ಕೆ ಅನುಮತಿ

ನವದೆಹಲಿ: ಇದೇ ತಿಂಗಳಲ್ಲಿ ದೆಹಲಿಯಲ್ಲಿ ನಡೆಯಲಿರುವ ಶೂಟಿಂಗ್ ವಿಶ್ವಕಪ್ ನಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸುವ ಪಾಕಿಸ್ತಾನದ ಆಟಗಾರರಿಗೆ ವೀಸಾ ನೀಡಲಾಗುವುದು ಎಂದು ರಾಷ್ಟ್ರೀಯ ರೈಪಲ್ ಅಸೋಸಿಯೇಷನ್ ಕಾರ್ಯದರ್ಶಿ ರಾಜೀವ್ ಭಾಟಿಯಾ ಸ್ಪಷ್ಪಪಡಿಸಿದ್ದಾರೆ. ಪಾಕ್ ಆಟಗಾರರ ವೀಸಾಕ್ಕೆ ಗೃಹ ಸಚಿವಾಲಯ ಅನುಮತಿ ನೀಡಿದ್ದು, ಅವುಗಳನ್ನು ಹೈಕಮೀಷನ್ ಹಾಗೂ ಇಸ್ಲಾಮಾಬಾದಿಗೆ ವರ್ಗಾಯಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಭಾರತೀಯ ಹೈಕಮೀಷನ್ ನಿಂದ ಶುಕ್ರವಾರ ಕರೆ ಮಾಡಿ ಶೂಟರ್ ಆಟಗಾರರ ಹೆಸರನ್ನು ಮತ್ತೆ ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನದ ಆಟಗಾರರಿಗೆ ವೀಸಾವನ್ನು ನೀಡುವುದಾಗಿ ಭಾಟಿಯಾ ವಿಶ್ವಾಸ

ದೆಹಲಿ ಶೂಟಿಂಗ್ ವಿಶ್ವಕಪ್ ನಲ್ಲಿ ಪಾಲ್ಗೊಳ್ಳುವ ಪಾಕ್ ಆಟಗಾರರ ವೀಸಾಕ್ಕೆ ಅನುಮತಿ Read More »

ಪುಟ್ಬಾಲ್ ಆಟಗಾರ ಸುನೀಲ್ ಚೆಟ್ರಿಗೆ ‘ಪುಟ್ಬಾಲ್ ರತ್ನ’ ಪ್ರಶಸ್ತಿ ಪ್ರದಾನ

ನವದೆಹಲಿ: ಭಾರತೀಯ ಪುಟ್ಬಾಲ್ ತಂಡದ ಸ್ಟಾರ್ ಸ್ಟ್ರೈಕರ್ ಸುನೀಲ್ ಚೆಟ್ರಿ ಅವರಿಗೆ ದೆಹಲಿ ಪುಟ್ಬಾಲ್ ಸಂಸ್ಥೆಯಿಂದ ಮೊದಲ ಬಾರಿಗೆ ಪುಟ್ಬಾಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಜವಹರ್ ಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ದೆಹಲಿ ಪುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಷಾಜಿ ಪ್ರಭಾಕರನ್ ಪ್ರಶಸ್ತಿ ಪ್ರದಾನ ಮಾಡಿದರು. ಸುನೀಲ್ ಚೆಟ್ರಿ ಪದ್ಮಶ್ರೀ ಪ್ರಶಸ್ತಿ ಪಡೆದ ಆರನೇ ಪುಟ್ಬಾಲ್ ಆಟಗಾರರಾಗಿದ್ದು, ಪುಟ್ಬಾಲ್ ರತ್ನ ಪ್ರಶಸ್ತಿ ಪಡೆದ ಪ್ರಥಮ ಆಟಗಾರರಾಗಿದ್ದಾರೆ. ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಸುನೀಲ್ ಚೆಟ್ರಿ, ರಾಷ್ಟ್ರ

ಪುಟ್ಬಾಲ್ ಆಟಗಾರ ಸುನೀಲ್ ಚೆಟ್ರಿಗೆ ‘ಪುಟ್ಬಾಲ್ ರತ್ನ’ ಪ್ರಶಸ್ತಿ ಪ್ರದಾನ Read More »

Scroll to Top