May 2019

Pratap Chandra Sarangi Takes Oath As Minister

ಗುಡಿಸಲಲ್ಲಿ ವಾಸ ಮಾಡುವ ಸನ್ಯಾಸಿ ಈಗ ಕೇಂದ್ರ ಸಚಿವ

ನವದೆಹಲಿ: ಒಡಿಶಾದಿಂದ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆ ಯಾದ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರು ಮೋದಿ ಸರ್ಕಾರ ದಲ್ಲಿ ಮಂತ್ರಿಯಾಗಿದ್ದಾರೆ. ತನ್ನ ಸರಳ ಜೀವನ ಶೈಲಿಯಿಂದಲೇ ಮನೆಮಾತಾದ ಪ್ರತಾಪ್‌ ಚಂದ್ರ ಸಾರಂಗಿ ಮೋದಿ ಸಚಿವ ಸಂಪುಟದಲ್ಲಿ ಸಹಾಯಕ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಶೇಷವೆಂದರೆ ಇವರು ತಮ್ಮ ಸರಳ ಜೀವನದಿಂದ ಎಲ್ಲರ ಗಮನ ಸೆಳೆದಿದ್ದಾರೆ. ಗುಡಿಸಲಿನಂತಹ ಸಣ್ಣ ಮನೆಯಲ್ಲಿ ವಾಸಿಸುವ ಇವರು ಸೈಕಲ್‌ನಲ್ಲಿ ಓಡಾಡುತ್ತಾರೆ. ಕೊಳವೆ ಬಾವಿಯ ನೀರಿನಲ್ಲೇ ಸ್ನಾನ ಮಾಡುತ್ತಾರೆ. ಸೈಕಲ್ ಮೂಲಕವೇ […]

ಗುಡಿಸಲಲ್ಲಿ ವಾಸ ಮಾಡುವ ಸನ್ಯಾಸಿ ಈಗ ಕೇಂದ್ರ ಸಚಿವ Read More »

2ನೇ ಅವಧಿಯ ಎನ್​ಡಿಎ ಸರ್ಕಾರದಲ್ಲಿ ರಾಜ್ಯದ ಯಾರಿಗೆಲ್ಲಾ ಮಂತ್ರಿ ಸ್ಥಾನ..? ಇಲ್ಲಿದೆ ಮಾಹಿತಿ..!

ಬೆಂಗಳೂರು: ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಎನ್​ಡಿಎ ಸರ್ಕಾರದಲ್ಲಿ ರಾಜ್ಯದ ಮೂವರು ಸಂಸದರಿಗೆ ಸಚಿವ ಸ್ಥಾನ ದೊರೆತಿದೆ. ಬೆಂ.ಉತ್ತರ ಸಂಸದ ಡಿ.ವಿ.ಸದಾನಂದಗೌಡ, ಬೆಳಗಾವಿ ಸಂಸದ ಸುರೇಶ್​​ ಅಂಗಡಿ ಹಾಗೂ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರು ಮೋದಿ ಸಂಪುಟದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನು ಕಳೆದ ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ಈ ಬಾರಿ ಕೂಡ ರಾಜ್ಯದಿಂದಲೇ ಮಂತ್ರಿ ಸ್ಥಾನ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇಂದು ಸಂಜೆ 5 ಗಂಟೆಗೆ ಮೋದಿ

2ನೇ ಅವಧಿಯ ಎನ್​ಡಿಎ ಸರ್ಕಾರದಲ್ಲಿ ರಾಜ್ಯದ ಯಾರಿಗೆಲ್ಲಾ ಮಂತ್ರಿ ಸ್ಥಾನ..? ಇಲ್ಲಿದೆ ಮಾಹಿತಿ..! Read More »

Maharashtra heat Mercury touches 48 degree Celsius

ದೇಶಾದ್ಯಂತ ಬೇಸಿಗೆಯ ರಣಬಿಸಿಲು: ಈ ರಾಜ್ಯದಲ್ಲಿ 48 ಡಿಗ್ರಿ ತಲುಪಿದ ತಾಪಮಾನ

ಬೆಂಗಳೂರು: ರಾಜ್ಯದ ಉತ್ತರ ಜಿಲ್ಲೆಗಳು ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ರಣಬಿಸಿಲು ಮುಂದುವರಿದಿದ್ದು, ತಾಪಮಾನ 43 ಡಿಗ್ರಿಗಿಂತ ಹೆಚ್ಚಾಗಿದೆ. ಮಹಾರಾಷ್ಟ್ರದ ಚಂದ್ರಪುರದಲ್ಲಿ ತಾಪಮಾನ 48 ಡಿಗ್ರಿ ಸೆಲ್ಸಿಯಸ್ ತಲುಪಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 43.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಇದು ಈ ತಿಂಗಳ ಅತ್ಯಧಿಕ ತಾಪಮಾನವಾಗಿತ್ತು. ಅದೇ ಸಮಯದಲ್ಲಿ, ಕನಿಷ್ಠ ತಾಪಮಾನವು 23.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಇದು ಸಾಮಾನ್ಯಕ್ಕಿಂತ ಎರಡು ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಾಗಿದೆ. ರಾಜಸ್ಥಾನದಲ್ಲಿ ತೀವ್ರ ಉಷ್ಣಾಂಶ ಜನಸಾಮಾನ್ಯರ ಜೀವನದ ಮೇಲೆ

ದೇಶಾದ್ಯಂತ ಬೇಸಿಗೆಯ ರಣಬಿಸಿಲು: ಈ ರಾಜ್ಯದಲ್ಲಿ 48 ಡಿಗ್ರಿ ತಲುಪಿದ ತಾಪಮಾನ Read More »

ಜೂ.7ರಿಂದ ಮೈಸೂರು-ಬೆಂಗಳೂರು ನಡುವೆ ವಿಮಾನ ಸೇವೆ

ಮೈಸೂರು: ಏರ್‌ ಇಂಡಿಯಾ ಸಂಸ್ಥೆಯು, ಮೈಸೂರು–ಬೆಂಗಳೂರು ನಡುವೆ ಜೂನ್‌ 7ರಿಂದ ವಿಮಾನಯಾನ ಸೇವೆ ಆರಂಭಿಸಲಿದೆ. ಕೇವಲ ಒಂದು ಗಂಟೆಯೊಳಗೇ ಬೆಂಗಳೂರಿನಿಂದ ಮೈಸೂರಿಗೆ ತೆರಳಲು ವಿಶೇಷ ವಿಮಾನ ಸೌಲಭ್ಯ ದೊರೆಯುತ್ತಿದೆ. ಮಂಗಳವಾರ ಹೊರತುಪಡಿಸಿ, ಉಳಿದೆಲ್ಲ ದಿನ ವಿಮಾನ ಹಾರಾಟ ನಡೆಸಲಿದೆ. ಪ್ರತಿ ನಿತ್ಯ ಮಧ್ಯಾಹ್ನ 12 ಗಂಟೆಗೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಹೊರಡುವ ಏರ್‌ ಇಂಡಿಯಾ ಎ1 9540 ಫ್ಲೈಟ್‌ 1 ಗಂಟೆಯಲ್ಲಿ ಅಂದರೆ ಮಧ್ಯಾಹ್ನ 1 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪುತ್ತದೆ. ಅದೇ ರೀತಿ ಬೆ.10.30ಕ್ಕೆ

ಜೂ.7ರಿಂದ ಮೈಸೂರು-ಬೆಂಗಳೂರು ನಡುವೆ ವಿಮಾನ ಸೇವೆ Read More »

ವಾಯುಸೇನೆಯ ಹೆಲಿಕಾಪ್ಟರ್​ನಲ್ಲಿ ವುಮೆನ್ ಪವರ್: ಐತಿಹಾಸಿಕ ಸಾಧನೆ ಮಾಡಿದ ಮಹಿಳಾ ಮಣಿಯರು

ಚಂಡಿಗಢ: ಭಾರತೀಯ ವಾಯುಪಡೆಯ ಮಹಿಳಾ ಯೋಧರಿಂದ ಕೂಡಿದ್ದ ತಂಡ ಎಂಐ-17 ಯುದ್ಧಹೆಲಿಕಾಪ್ಟರ್​ನಲ್ಲಿ ಯಶಸ್ವಿಯಾಗಿ ಹಾರಾಟ ಕೈಗೊಂಡು ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ವಾಯುಸೇನೆಯ ಹೆಲಿಕಾಪ್ಟರ್ ಒಂದು ಸಂಪುರ್ಣವಾಗಿ ಮಹಿಳೆಯರಿಂದಲೇ ನಿಯಂತ್ರಿಸಲ್ಪಟ್ಟು ಐತಿಹಾಸಿಕ ಸಾಧನೆ ಮಾಡಿದೆ. ಎಂಐ-17 ವಿ5 ಯುದ್ಧ ಹೆಲಿಕಾಪ್ಟರ್​ನಲ್ಲಿ ಮಹಿಳಾ ಪೈಲಟ್​ಗಳು ಸೇರಿ ಒಟ್ಟು ಮೂವರು ಮಹಿಳೆಯರು ಹಾರಾಟ ನಡೆಸಿದ್ದಾರೆ. ಕ್ಯಾಪ್ಟನ್,​ ಫ್ಲೈಟ್ ಲೆಫ್ಟಿನೆಂಟ್​ ಪರೂಲ್​ ಭಾರಧ್ವಜ್​, ಕೋ ಪೈಲಟ್​ ಅಮನ್ ನಿಧಿ ಹಾಗೂ ಫ್ಲೈಟ್ ಇಂಜಿನಿಯರ್​ ಆಗಿರುವ ಫ್ಲೈಟ್ ಲೆಫ್ಟಿನೆಂಟ್ ಹೀನಾ ಜೈಸ್ವಾಲ್​​

ವಾಯುಸೇನೆಯ ಹೆಲಿಕಾಪ್ಟರ್​ನಲ್ಲಿ ವುಮೆನ್ ಪವರ್: ಐತಿಹಾಸಿಕ ಸಾಧನೆ ಮಾಡಿದ ಮಹಿಳಾ ಮಣಿಯರು Read More »

ಸರ್ಕಾರಿ ಶಾಲಾ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಮೈಸೂರಿನ ಎಂಜಿನಿಯರಿಂಗ್ ಪದವೀಧರರು

ಮೈಸೂರು: ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ ಎಂಬಂತೆ ಸ್ತ್ರೀಯರ ಶಿಕ್ಷಣ ಮತ್ತು ಅಭಿವೃದ್ಧಿಯು ದೇಶದ ಅಭಿವೃದ್ಧಿಗೆ ನಾಂದಿ ಎಂಬ ಮಾತುಗಳನ್ನು ನಾವು ಕೇಳಿರುತ್ತೇವೆ. ಈ ಮಾತುಗಳನ್ನು ನಿಜವಾಗಿಸಲು ಮೈಸೂರಿನ ಸ್ಫೂರ್ತಿ ಫೌಂಡೇಶನ್ ಹಲವು ಯೋಜನೆಗಳ ಮೂಲಕ ಮಹಿಳೆಯರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ನೆರವಾಗಬೇಕು. ಅವರು ಗುಣಮಟ್ಟದ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರೆಬೇಕು ಎಂಬ ಪರಿಕಲ್ಪನೆಯಿಂದ ಎಂಜಿನಿಯರಿಂಗ್ ಪದವೀಧರರಿಂದ ಆರಂಭವಾದ ಸ್ಫೂರ್ತಿ ಫೌಂಡೇಷನ್‌ ಹಲವಾರು ಯೋಜನೆಗಳನ್ನು ಹಾಕಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ಅಂತಹ ಯೋಜನೆಯ

ಸರ್ಕಾರಿ ಶಾಲಾ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಮೈಸೂರಿನ ಎಂಜಿನಿಯರಿಂಗ್ ಪದವೀಧರರು Read More »

ವಿಶ್ವದ ಅತ್ಯುನ್ನತ ಶಿಖರ ಮೌಂಟ್‌ ಎವರೆಸ್ಟ್‌ ತುದಿಯಲ್ಲೂ ಟ್ರಾಫಿಕ್‌ ಜಾಮ್‌..! ಮೂವರು ಭಾರತೀಯರ ಸಾವು

ನೇಪಾಳ: ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದವರಿಗೇ ಗೊತ್ತು ಅದರ ಹಿಂಸೆ. ಅಂದಹಾಗೆ ಮೌಂಟ್‌ ಎವರೆಸ್ಟ್‌ನ ತುದಿಯಲ್ಲೂ ಟ್ರಾಫಿಕ್‌ ಜಾಮ್‌ ಆಗುತ್ತದೆ ಎಂದರೆ ಅಚ್ಚರಿಯಾಗುವುದು ಖಂಡಿತಾ. ಹೌದು. ವಿಶ್ವದ ಅತ್ಯುನ್ನತ ಶಿಖರ ಮೌಂಟ್ ಎವರೆಸ್ಟ್ ಜನಜಂಗುಳಿಯಿಂದ ಕೂಡಿದೆ. ಜನಜಂಗುಳಿಯಿಂದಾಗಿ ಆರೋಹಿಗಳ ಸುಗಮ ಚಲನವಲನಗಳಿಗೆ ತಡೆಯಾಗುತ್ತಿದ್ದು ಅವರು ಬಳಲಿಕೆಯಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಪರ್ವತಾರೋಹಣ ಮಾಡಿದ ಮೂವರು ಭಾರತೀಯ ಆರೋಹಿಗಳು ಮೃತರಾಗಿದ್ದು, ಒಂದೇ ವಾರದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೇರಿದೆ ಎಂದು ಆರೋಹಣ ಸಂಘಟಕರು ಮತ್ತು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ. ಇದರೊಂದಿಗೆ

ವಿಶ್ವದ ಅತ್ಯುನ್ನತ ಶಿಖರ ಮೌಂಟ್‌ ಎವರೆಸ್ಟ್‌ ತುದಿಯಲ್ಲೂ ಟ್ರಾಫಿಕ್‌ ಜಾಮ್‌..! ಮೂವರು ಭಾರತೀಯರ ಸಾವು Read More »

ಸೂರತ್​ನ ಕೋಚಿಂಗ್​ ಸೆಂಟರ್​ನಲ್ಲಿ ಬೆಂಕಿ: 19 ವಿದ್ಯಾರ್ಥಿಗಳ ದುರ್ಮರಣ;- ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಹಾರಿದ ಜನ

ಸೂರತ್: ಗುಜರಾತ್ ನ ಸೂರತ್ ನಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ವೊಂದರ ಕೋಚಿಂಗ್ ಸೆಂಟರ್ ನಲ್ಲಿ ಶುಕ್ರವಾರ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ 15 ವಿದ್ಯಾರ್ಥಿಗಳ ಮೃತಪಟ್ಟಿದ್ದಾರೆ. ಇಲ್ಲಿನ ಸಾರ್ಥನಾ ಬಡಾವಣೆಯಲ್ಲಿರುವ ಶಾಪಿಂಗ್​ ಕಾಂಪ್ಲೆಕ್ಸ್​ನ 2ನೇ ಮಹಡಿಯಲ್ಲಿ ಹೊತ್ತಿಕೊಂಡ ಬೆಂಕಿ, ನಾಲ್ಕನೇ ಮಹಡಿಯಲ್ಲಿದ್ದ ಕೋಚಿಂಗ್​ ಸೆಂಟರ್​ಗೆ ವ್ಯಾಪಿಸಿ 15 ಮಂದಿ ಸಾವನ್ನಪ್ಪಿದ್ದು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಕಿಯ ಕೆನ್ನಾಲಗೆಯಿಂದ ತಪ್ಪಿಸಿಕೊಳ್ಳಲು ಹಲವರು ಕಟ್ಟಡದ ಮೇಲ್ಛಾವಣಿಯಿಂದ ಹಾರಿದ್ದು, ಈ ದೃಶ್ಯಗಳು ಭೀತಿ ಹುಟ್ಟಿಸುವಂತಿದೆ. ಸ್ಥಳಕ್ಕೆ 16 ಅಗ್ನಿಶಾಮಕ ವಾಹನಗಳು

ಸೂರತ್​ನ ಕೋಚಿಂಗ್​ ಸೆಂಟರ್​ನಲ್ಲಿ ಬೆಂಕಿ: 19 ವಿದ್ಯಾರ್ಥಿಗಳ ದುರ್ಮರಣ;- ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಹಾರಿದ ಜನ Read More »

ಐಸಿಸಿ ವಿಶ್ವಕಪ್‌: ಭಾರತ ಆಡುವ ಪಂದ್ಯಗಳ ವೇಳಾಪಟ್ಟಿ ಇಂತಿದೆ

2019ರ ಏಕದಿನ ವಿಶ್ವಕಪ್​ಗೆ ದಿನಗಣನೆ ಆರಂಭವಾಗಿದೆ. ಮೆಗಾ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಎಲ್ಲಾ ತಂಡಗಳು, ಆಂಗ್ಲರ ನಾಡಲ್ಲಿ ಸಮರಭ್ಯಾಸದಲ್ಲಿ ನಿರತವಾಗಿವೆ. ಮೇ 30ರಂದು ವಿಶ್ವಕಪ್ ಪಂದ್ಯಾವಳಿ ಆರಂಭವಾಗಲಿದೆ. 46 ದಿನಗಳ ಕಾಲ ನಡೆಯುವ 2019 ಐಸಿಸಿ ಏಕದಿನ ವಿಶ್ವಕಪ್‌ಗೆ ಇಂಗ್ಲೆಂಡ್ ಹಾಗೂ ವೇಲ್ಸ್ ಆತಿಥ್ಯ ವಹಿಸುತ್ತಿದೆ. ಭಾರತ ತಂಡವು ತನ್ನ ಮೊದಲ ಕದನದಲ್ಲಿ ಜೂನ್ 5ರಂದು ದಕ್ಷಿಣ ಆಫ್ರಿಕಾ ಸವಾಲನ್ನು ಎದುರಿಸಲಿದೆ. ಅಂದ ಹಾಗೆ ವಿಶ್ವಕಪ್ ಮೇ 30ರಿಂದ ಜುಲೈ 14ರ ವರೆಗೆ ಸಾಗಲಿದೆ. ಭಾರತದ ವಿಶ್ವಕಪ್ ಪಂದ್ಯಗಳ

ಐಸಿಸಿ ವಿಶ್ವಕಪ್‌: ಭಾರತ ಆಡುವ ಪಂದ್ಯಗಳ ವೇಳಾಪಟ್ಟಿ ಇಂತಿದೆ Read More »

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಂಜಾನ್ ಆಚರಣೆಯ ರಂಗು: ಎಲ್ಲರನ್ನೂ ಕೈ ಬೀಸಿ ಕರೆಯುತ್ತಿದೆ ಮೀನಾ ಬಜಾರ್

ಮೈಸೂರು: ರಂಜಾನ್ ಆಚರಣೆಯ ರಂಗು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೂ ಕಳೆಗಟ್ಟಿದೆ. ಮಸೀದಿಗಳು ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಮೀನಾ ಬಜಾರ್ ನಲ್ಲಂತೂ ಕಾಲಿಡಲು ಜಾಗವೇ ಇಲ್ಲ. ಸಾಡೆ ರಸ್ತೆಯಲ್ಲಿ ಕಳೆದ ಕೆಲದಿನಗಳಿಂದ ವ್ಯಾಪಾರದ ಭರಾಟೆ ತುಸು ಜೋರಾಗಿಯೇ ಇದೆ. ಮುಸ್ಲಿಂಮರ ಪ್ರಮುಖ ಹಬ್ಬವಾದ ರಂಜಾನ್‌ ಹೊಸವರ್ಷದ ಪ್ರಾರಂಭ ಎನ್ನುವ ನಂಬಿಕೆ ಇದೆ. ಹೊಸ ಬಟ್ಟೆಗಳನ್ನು ಖರೀದಿಸಿ ಬಡವರಿಗೆ ದಾನ ಮಾಡುವಂತ ಆಚರಣೆ ರೂಢಿಯಲ್ಲಿದೆ. ಈ ಸಂದರ್ಭ ತಮ್ಮ ದುಡಿಮೆಯ ಶೇ.2 ರಷ್ಟು ದಾನ ಮಾಡುತ್ತಾರೆ. ಹಬ್ಬದಿಂದ ಹೆಚ್ಚು ಪ್ರಮಾಣದ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಂಜಾನ್ ಆಚರಣೆಯ ರಂಗು: ಎಲ್ಲರನ್ನೂ ಕೈ ಬೀಸಿ ಕರೆಯುತ್ತಿದೆ ಮೀನಾ ಬಜಾರ್ Read More »

Scroll to Top