May 2019

ದೇಶದ ಭದ್ರತೆಗೆ ಮತ್ತಷ್ಟು ಶಕ್ತಿ: ರಿಸ್ಯಾಟ್-2ಬಿ ರೇಡಾರ್ ಇಮೇಜಿಂಗ್ ಉಪಗ್ರಹ ಉಡಾವಣೆ ಯಶಸ್ವಿ!

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ನಭೋಮಂಡಲದಲ್ಲಿ ಮತ್ತೂಂದು ಮೈಲುಗಲ್ಲು ಸ್ಥಾಪಿಸಿದ್ದು, ಉಗ್ರರ ಕಾರ್ಯಾಚರಣೆ ಮತ್ತು ಭೂಮಿಯ ಮೇಲೆ ನಿಗಾ ಇಡುವ ರೇಡಾರ್ ಇಮೇಜಿಂಗ್ ಸೆಟಲೈಟ್-2ಬಿ (ರಿಸ್ಯಾಟ್-2ಬಿ) ಉಪಗ್ರಹ ವನ್ನು ಹೊತ್ತಿದ್ದ ಪಿಎಸ್​ಎಲ್​ವಿ -ಸಿ46 ರಾಕೆಟ್‌ನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇಂದು ಬೆಳಗ್ಗೆ 5:30ರ ಸುಮಾರಿಗೆ ಶ್ರಿಹರಿಕೋಟಾದಲ್ಲಿರೋ ಸತೀಶ್​ ಧವನ್​​ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್​ಎಲ್​ವಿ ಉಡಾವಣೆ ವಾಹನದ ಮೂಲಕ ಉಪಗ್ರಹವನ್ನ ಉಡವಾವಣೆ ಮಾಡಲಾಯಿತು. ಈ ಉಪಗ್ರಹದ ವಿಶೇಷತೆಗಳೇನು..? ರಿಸ್ಯಾಟ್‌-2ಬಿ’ ಉಪಗ್ರಹ 615 ಕೆಜಿ ತೂಕ […]

ದೇಶದ ಭದ್ರತೆಗೆ ಮತ್ತಷ್ಟು ಶಕ್ತಿ: ರಿಸ್ಯಾಟ್-2ಬಿ ರೇಡಾರ್ ಇಮೇಜಿಂಗ್ ಉಪಗ್ರಹ ಉಡಾವಣೆ ಯಶಸ್ವಿ! Read More »

ಧರ್ಮಸ್ಥಳ ಪ್ರವಾಸ ಮುಂದೂಡಲು ಯಾತ್ರಾರ್ಥಿಗಳಿಗೆ ಮನವಿ ಮಾಡಿದ ಡಾ. ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ: ಬೇಸಿಗೆಯ ಬಿಸಿಲಿನ ತೀವ್ರತೆಯಿಂದಾಗಿ ಧರ್ಮಸ್ಥಳ ಕ್ಷೇತ್ರದಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು, ಕ್ಷೇತ್ರಕ್ಕೆ ಬರುವವರು ಕೆಲವು ದಿನ ಬಿಟ್ಟು ಬರಲು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಮನವಿ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದ್ದು, ಬೇಸಿಗೆಯ ತೀವ್ರತೆಗೆ ದೇಶಾದ್ಯಂತ ನೀರಿನ ಅಭಾವವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ನೀರಿಗಾಗಿ ಜನರು ತುಂಬಾ ಕಷ್ಟಪಡುತ್ತಿದ್ದಾರೆ. ಒಂದೆಡೆ ಜಿಲ್ಲೆಯಲ್ಲಿ ರೇಶನ್ ಮೂಲಕ ಜಿಲ್ಲಾಡಳಿತವು ನೀರನ್ನು ಪೂರೈಸುತ್ತಿದ್ದು, ವಾರಕ್ಕೆ ಎರಡು – ಮೂರು ದಿನಕ್ಕೊಮ್ಮೆ‌

ಧರ್ಮಸ್ಥಳ ಪ್ರವಾಸ ಮುಂದೂಡಲು ಯಾತ್ರಾರ್ಥಿಗಳಿಗೆ ಮನವಿ ಮಾಡಿದ ಡಾ. ವೀರೇಂದ್ರ ಹೆಗ್ಗಡೆ Read More »

ಬೆಳ್ಳಂಬೆಳಿಗ್ಗೆ ಗ್ರಾಮಕ್ಕೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ: ವಿಡಿಯೋ ನೋಡಿ

ಮೈಸೂರು: ಜಿಲ್ಲೆಯ ಹೆಚ್.ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮಕ್ಕೆ ಬೆಳ್ಳಂಬೆಳಿಗ್ಗೆಯೇ ಕಾಡಾನೆ ನುಗ್ಗಿ ದಾಂಧಲೆ ನಡೆಸಿದೆ. ಬೀಚನಹಳ್ಳಿ ಗ್ರಾಮದೊಳಗೆ ಮುಜಾನೆಯೇ ಕಾಡಾನೆ ದಾಳಿ ನಡೆಸಿದ್ದು ಕಾಡಾನೆ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಕಾಡಾನೆ ದಾಳಿಗೆ ಎರಡು ಬೈಕ್, ಒಂದು ಸೈಕಲ್ ಜಖಂ ಆಗಿದ್ದು ಮನೆ ಮುಂಭಾಗ ಕುಳಿತಿದ್ದ ಲಕ್ಷ್ಮಮ್ಮ ಎಂಬ ಮಹಿಳೆ ಮೇಲೂ ಒಂಟಿಸಲಗ ದಾಳಿ ಮಾಡಿದೆ. ಇದರಿಂದ ಲಕ್ಷ್ಮಮ್ಮ ತಲೆಗೆ ಗಂಭೀರ ಗಾಯವಾಗಿದ್ದು ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಡಿಯೋ ನೋಡಿ: ಒಂಟಿ ಸಲಗ ದಾಳಿ

ಬೆಳ್ಳಂಬೆಳಿಗ್ಗೆ ಗ್ರಾಮಕ್ಕೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ: ವಿಡಿಯೋ ನೋಡಿ Read More »

ಬಂಡೀಪುರದಲ್ಲಿ ಸಫಾರಿ ಸ್ಥಳ ಬದಲಾವಣೆ: ಜೂನ್ 2ರಿಂದ ಈ ಸ್ಥಳದಲ್ಲಿ ಸಫಾರಿ ನಡೆಯಲಿದೆ..!

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆಯ ಬಂಡೀಪುರದಲ್ಲಿ ಜೂನ್ 2ರಿಂದ ಸಫಾರಿ ಸ್ಥಳ ಬದಲಾವಣೆಯಾಗಲಿದೆ. ಅದಕ್ಕಾಗಿ ಬಂಡಿಪುರದಲ್ಲಿ ಸದ್ಯ ನಡೆಸಲಾಗುತ್ತಿರುವ ಸಫಾರಿಗೆ ನಿರ್ಬಂಧ ಹೇರಲಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿ ಅನ್ವಯ, ಇನ್ಮುಂದೆ ಬಂಡೀಪುರದ ಸಫಾರಿ ಬದಲು ಮೇಲುಕಾಮನಹಳ್ಳಿಯಲ್ಲಿ ಸಫಾರಿ ನಡೆಯಲಿದೆ. ಮೇಲುಕಾಮನಹಳ್ಳಿ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಸಮೀಪವೇ ಇದ್ದು, ಜೂನ್ 2ರಿಂದ ಈ ಮಾರ್ಗದಲ್ಲಿ ಸಫಾರಿ ನಡೆಸಬಹುದಾಗಿದೆ. ಸಫಾರಿ ನಡೆಯಲಿರುವ ಸ್ಥಳ ವಿಶೇಷ ಹುಲಿ ಸಂರಕ್ಷಣಾದಳದ ಕ್ಯಾಂಪಸ್ ಆಗಿದೆ.

ಬಂಡೀಪುರದಲ್ಲಿ ಸಫಾರಿ ಸ್ಥಳ ಬದಲಾವಣೆ: ಜೂನ್ 2ರಿಂದ ಈ ಸ್ಥಳದಲ್ಲಿ ಸಫಾರಿ ನಡೆಯಲಿದೆ..! Read More »

ಕಾಲಲ್ಲಿ ರಕ್ತ ಸುರಿಯುತ್ತಿದ್ದರೂ ಬ್ಯಾಟ್ ಬೀಸಿ ಅಭಿಮಾನಿಗಳ ಹೃದಯ ಗೆದ್ದ ವಾಟ್ಸನ್

ಕ್ರಿಕೆಟ್: ಭಾನುವಾರ ನಡೆದ ಐಪಿಎಲ್​ ಫೈನಲ್​ನಲ್ಲಿ ರೋಹಿತ್​ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್​​ ಗೆದ್ದು ಬೀಗಿತ್ತು. ಗೆಲುವಿನ ಸಮೀಪದಲ್ಲಿದ್ದ ಚೆನ್ನೈ ಸೂಪರ್​ ಕಿಂಗ್ಸ್​​ ಕೊನೆಯ ಓವರ್​ನಲ್ಲಿ ಎಡವಿತ್ತು. ಈ ಪಂದ್ಯದಲ್ಲಿ ಆಟಗಾರ ಶೇನ್​ ವಾಟ್ಸನ್​ ಅಬ್ಬರದ ಆಟವಾಡಿ ಸಿಎಸ್​ಕೆಯನ್ನು ಗೆಲುವಿನ ಸಮೀಪ ಕರೆತಂದಿದ್ದರು. ಆದರೆ, ಕೊನೆಯ್​ ಓವರ್​ನಲ್ಲಿ ರನ್​ಔಟ್​ ಆಗಿದ್ದು, ಸಿಎಸ್​ಕೆ ಸೋಲಿಗೆ ಕಾರಣವಾಗಿತ್ತು. ಅಚ್ಚರಿ ಎಂದರೆ, ಅವರ ಕಾಲಲ್ಲಿ ರಕ್ತ ಸುರಿಯುತ್ತಿದ್ದರೂ ಯಾರಿಗೂ ಹೇಳದೇ ಬ್ಯಾಟ್ ಬೀಸಿದ್ದರಂತೆ ವಾಟ್ಸನ್​. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ

ಕಾಲಲ್ಲಿ ರಕ್ತ ಸುರಿಯುತ್ತಿದ್ದರೂ ಬ್ಯಾಟ್ ಬೀಸಿ ಅಭಿಮಾನಿಗಳ ಹೃದಯ ಗೆದ್ದ ವಾಟ್ಸನ್ Read More »

ಯೋಗ ಪ್ರದರ್ಶನದ ಮೂಲಕ ಮತ್ತೊಂದು ಗಿನ್ನಿಸ್​​​​ ದಾಖಲೆಗೆ ಅಣಿಯಾಗುತ್ತಿದೆ ಮೈಸೂರು

ಮೈಸೂರು: ಸಾಂಸ್ಕೃತಿಕ ನಗರಿ ಎಂದೇ ಕರೆಯುವ ಮೈಸೂರು ಮತ್ತೊಂದು ಗಿನ್ನಿಸ್​​ ದಾಖಲೆ ಮಾಡಲು ಸಜ್ಜಾಗಿದೆ. ಬೃಹತ್​​ ಜನರೊಂದಿಗೆ ಯೋಗ ಪ್ರದರ್ಶನ ಮಾಡುವ ಮೂಲಕ ದಾಖಲೆ ಬರೆಯಲು ನಗರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದೇ ಜೂನ್​​​​​​​ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ನಗರದ ಕುವೆಂಪುನಗರ ಸೌಗಂಧಿಕಾ ಉದ್ಯಾನವನದಲ್ಲಿ 1.5 ಲಕ್ಷ ಯೋಗ ಪಟುಗಳು ಭಾಗಿಯಾಗುವ ಮೂಲಕ ದಾಖಲೆ ನಿರ್ಮಿಸುವ ಸಾಧ್ಯತೆಯಿದೆ. ಈಗಾಗಲೇ ನೂರಾರು ಯೋಗ ಪಟುಗಳು ಉದ್ಯಾನವನದಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾರೆ. ಮುಂದಿನ ಐದು ಭಾನುವಾರಗಳು ನಗರದ ವಿವಿಧೆಡೆ

ಯೋಗ ಪ್ರದರ್ಶನದ ಮೂಲಕ ಮತ್ತೊಂದು ಗಿನ್ನಿಸ್​​​​ ದಾಖಲೆಗೆ ಅಣಿಯಾಗುತ್ತಿದೆ ಮೈಸೂರು Read More »

ಚೆನ್ನೈ – ಮೈಸೂರು ಶತಾಬ್ದಿ ಎಕ್ಸ್‌ಪ್ರೆಸ್‌­ ಗೆ 25ನೇ ವರ್ಷದ ಸಂಭ್ರಮ

ಚೆನ್ನೈ: ಬೆಂಗಳೂರು ಮೂಲಕ ಚೆನ್ನೈ ಮತ್ತು ಮೈಸೂರು ನಡುವೆ ಸಂಚರಿಸುವ ದಕ್ಷಿಣ ಭಾರತದ ಮೊತ್ತ ಮೊದಲ ಶತಾಬ್ದಿ ಎಕ್ಸ್‌ಪ್ರೆಸ್‌ ಇಂದಿಗೆ 25 ವರ್ಷಗಳನ್ನು ಪೂರೈಸಿದೆ. ತಮಿಳುನಾಡು ರಾಜಧಾನಿಯಿಂದ ಕರ್ನಾಟಕ ರಾಜಧಾನಿಗೆ ಬೆಳಗ್ಗೆ ಆಗಮಿಸಲು ಬಯಸುವ ಬಹುತೇಕ ಮಂದಿ ಇದೇ ರೈಲನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. 1994ರ ಮೇ 11ರಂದು ಈ ರೈಲಿನ ಸಂಚಾರವನ್ನು ಆರಂಭಿಸಲಾಗಿತ್ತು, ಈಗಲೂ ಇದು ಪ್ರಯಾಣಿಕರ ನೆಚ್ಚಿನ ರೈಲಾಗಿದೆ. ಅದರಲ್ಲೂ ಚೆನ್ನೈನಿಂದ ಬೆಂಗಳೂರಿಗೆ ಆಗಮಿಸಿ, ಅದೇ ದಿನ ರಾತ್ರಿ ಚೆನ್ನೈಗೆ ತೆರಳುವವರಿಗೆ ಈ ರೈಲು ಹೆಚ್ಚು

ಚೆನ್ನೈ – ಮೈಸೂರು ಶತಾಬ್ದಿ ಎಕ್ಸ್‌ಪ್ರೆಸ್‌­ ಗೆ 25ನೇ ವರ್ಷದ ಸಂಭ್ರಮ Read More »

ಹೈಡ್ರೋಜನ್ ಬಳಸಿ ಆಕ್ಸಿಜನ್ ಬಿಡುಗಡೆ ಮಾಡುವ ಇಂಜಿನ್ ಕಂಡುಹಿಡಿದ ಇಂಜಿನಿಯರ್..!

ನವದೆಹಲಿ: ತಮಿಳುನಾಡಿನ ಮೆಕ್ಯಾನಿಕಲ್ ಇಂಜಿನಿಯರ್ ಪರಿಸರ ಸ್ನೇಹಿ ಎಂಜಿನ್ನನ್ನು ಡಿಸ್ಟಿಲ್ಡ್ ವಾಟರ್ ಮೂಲಕ ನಡೆಸುತ್ತಿದ್ದಾರೆ. ಮೂಲತಃ ಕೊಯಮತ್ತೂರಿನವರಾಗಿರುವ ಸೌಂತಿರಾಜನ್ ಕುಮಾರಸ್ವಾಮಿ ವಿನ್ಯಾಸಗೊಳಿಸಿದ ಇಂಜಿನ್ ವಿಶಿಷ್ಟವಾಗಿದೆ. ಇದು ಜಲಜನಕವನ್ನು ಇಂಧನ ಮೂಲವಾಗಿ ಬಳಸಿ ನಂತರ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಈ ಕುರಿತಾಗಿ ಎಎನ್ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ಸೌಂತಿರಾಜನ್ ಕುಮಾರಸ್ವಾಮಿ “ಈ ಎಂಜಿನ್ ಅಭಿವೃದ್ಧಿಪಡಿಸಲು ಇದು ನನಗೆ 10 ವರ್ಷಗಳನ್ನು ತೆಗೆದುಕೊಂಡಿತು. ಇದು ವಿಶ್ವದ ಈ ರೀತಿಯ ಮೊದಲ ಆವಿಷ್ಕಾರವಾಗಿದೆ. ಇದು ಜಲಜನಕವನ್ನು ಇಂಧನ ಮೂಲವಾಗಿ ಬಳಸಿ ಆಮ್ಲಜನಕವನ್ನು ಬಿಡುಗಡೆ

ಹೈಡ್ರೋಜನ್ ಬಳಸಿ ಆಕ್ಸಿಜನ್ ಬಿಡುಗಡೆ ಮಾಡುವ ಇಂಜಿನ್ ಕಂಡುಹಿಡಿದ ಇಂಜಿನಿಯರ್..! Read More »

ಐತಿಹಾಸಿಕ ದೊಡ್ಡ ಗಡಿಯಾರ ದಲ್ಲಿ ಬಿರುಕು: ಸಾರ್ವಜನಿಕರಲ್ಲಿ ಆತಂಕ

ಮೈಸೂರು: ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ದೊಡ್ಡ ಗಡಿಯಾರ ದ ಗೋಪುರದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಆತಂಕ ಸೃಷ್ಟಿಸಿದೆ. ಗೋಪುರದ ಮೇಲಿನ ಒಳಭಾಗದಲ್ಲಿ ಬಿರುಕುಗಳು ಮೂಡಿವೆ. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಗೋಪುರ ಶಿಥಿಲವಾಗುವ ಸಾಧ್ಯತೆ ಇದೆ. ಈ ಗಡಿಯಾರಕ್ಕೆ ಅಳವಡಿಸಿದ್ದ 5.5 ಅಡಿ ಎತ್ತರದ ಬೃಹತ್ ಕಂಚಿನ ಘಂಟೆಯಿಂದ ಹೊರಹೊಮ್ಮುತ್ತಿದ್ದ ಶಬ್ದದಿಂದ ಬಿರುಕು ಕಾಣಿಸುತ್ತಿರಬಹುದೆಂದು 30 ವರ್ಷದ ಹಿಂದೆಯೇ ಗಂಟೆ ಶಬ್ದವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಇಂದು ಬಿರುಕುಗಳು ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ಜಿಲ್ಲಾಧಿಕಾರಿ

ಐತಿಹಾಸಿಕ ದೊಡ್ಡ ಗಡಿಯಾರ ದಲ್ಲಿ ಬಿರುಕು: ಸಾರ್ವಜನಿಕರಲ್ಲಿ ಆತಂಕ Read More »

Scroll to Top