June 2019

ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ

ಮೈಸೂರು: ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನವಾಗಿದ್ದು ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಸಿಂಗಪೂರ ಮೃಗಾಲಯದಿಂದ ಒಂದು ಹೆಣ್ಣು ಚಿಂಪಾಂಜಿ ಹಾಗೂ ಗುಜರಾತ್ ಮೃಗಾಲಯದಿಂದ ಭಾರತೀಯ ಸಿಂಹಗಳು ಆಗಮಿಸಿವೆ. ಮೃಗಾಲಯದಲ್ಲಿರುವ ಒಂಟಿ ಪ್ರಾಣಿಗಳ ಜೊತೆಗೂಡಿಸುವಿಕೆ ಹಾಗೂ ಅನುಮೋದಿತ ಪ್ರಾಣಿಸಂಗ್ರಹಣಾ ಯೋಜನೆಯನ್ನು ಉತ್ಕೃಷ್ಠಗೊಳಿಸುವ ನಿಟ್ಟಿನಲ್ಲಿ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಸಿಂಗಪೂರ ಮೃಗಾಲಯದಿಂದ ಒಂದು ಹೆಣ್ಣು ಚಿಂಪಾಂಜಿಯು ಮೈಸೂರು ಮೃಗಾಲಯಕ್ಕೆ ಆಗಮಿಸಿದೆ. ಸುಮಾರು 14 ವರ್ಷ ವಯಸ್ಸಿನ ರಾಹ್ ಎಂಬ ಹೆಸರಿನ ಹೆಣ್ಣು ಚಿಂಪಾಂಜಿಯು ಸುರಕ್ಷಿತವಾಗಿದ್ದು, ಪ್ರಸ್ತುತ ಅದನ್ನು ದಿಗ್ಬಂಧನ ಆವರಣದಲ್ಲಿರಿಸಿ […]

ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ Read More »

ಇಸ್ರೋ ಕಾರ್ಯಕ್ರಮಕ್ಕೆ ಮೈಸೂರಿನ ವಿದ್ಯಾರ್ಥಿ ಯುವ ವಿಜ್ಞಾನಿಯಾಗಿ ಆಯ್ಕೆ..!

ಮೈಸೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಯೋಜಿಸಿರುವ ಕಾರ್ಯಕ್ರಮಕ್ಕೆ ಮೈಸೂರಿನ ವಿದ್ಯಾರ್ಥಿಯೊಬ್ಬ ಯುವ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾನೆ. ದೇಶದಲ್ಲೇ ಮೊದಲ ಬಾರಿಗೆ ಇಸ್ರೋ ಆಯೋಜಿಸಿರುವ ‘ಯುವಿಕಾ'(ಯುವ ವಿಜ್ಞಾನಿ) ಕಾರ್ಯಕ್ರಮಕ್ಕೆ ಜವಾಹಾರ್ ಲಾಲ್ ನವೋದಯ ವಿದ್ಯಾಲಯದ ವಿದ್ಯಾರ್ಥಿ ಎಂ.ಭರತೇಶ್ವರ್ ಆಯ್ಕೆ ಆಗಿದ್ದಾನೆ. ದೇಶದ ವಿವಿಧೆಡೆಯಿಂದ ಸರಿ ಸುಮಾರು 108 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕದಿಂದ ಮೂವರು ಆಯ್ಕೆಯಾಗಿದ್ದಾರೆ. ಹೈಸ್ಕೂಲ್ ನಲ್ಲಿ ಮಕ್ಕಳ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಯ ಆಧಾರದ ಮೇಲೆ ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಇಸ್ರೋ ಕಾರ್ಯಕ್ರಮಕ್ಕೆ ಮೈಸೂರಿನ ವಿದ್ಯಾರ್ಥಿ ಯುವ ವಿಜ್ಞಾನಿಯಾಗಿ ಆಯ್ಕೆ..! Read More »

ಸುತ್ತೂರಿನಲ್ಲಿ ನಿರ್ಮಾಣವಾಗಲಿದೆ ದಕ್ಷಿಣ ಭಾರತದ ಮೊದಲ ಸೈನ್ಸ್‌ ಸಿಟಿ..!

ಮೈಸೂರು: ಕೇಂದ್ರ ಹಾಗೂ ರಾಜ್ಯ ಸರಕಾರದ ಜಂಟಿ ಸಹಭಾಗಿತ್ವದಲ್ಲಿ ಸುತ್ತೂರಿನಲ್ಲಿ ದಕ್ಷಿಣ ಭಾರತದ ಮೊದಲ ಸೈನ್ಸ್‌ ಸಿಟಿ ನಿರ್ಮಾಣವಾಗಲಿದೆ. ಈ ಸಿಟಿ ನಿರ್ಮಾಣಕ್ಕೆ 25 ಎಕರೆ ಭೂಮಿ ನೀಡಲು ಸುತ್ತೂರು ಮಠ ಮುಂದೆ ಬಂದಿದ್ದು, ಈ ಜಾಗದ ಒಪ್ಪಿಗೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಐಟಿ-ಬಿಟಿ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು. 200 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಸೈನ್ಸ್ ಸಿಟಿ ಇಡೀ ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ನಗರವಾಗಿ ಹೊರಹೊಮ್ಮಲಿದೆ. ಮಕ್ಕಳಲ್ಲಿ ವಿಜ್ಞಾನದ

ಸುತ್ತೂರಿನಲ್ಲಿ ನಿರ್ಮಾಣವಾಗಲಿದೆ ದಕ್ಷಿಣ ಭಾರತದ ಮೊದಲ ಸೈನ್ಸ್‌ ಸಿಟಿ..! Read More »

ಮೈಸೂರಿನಲ್ಲಿ ಅನುಮಾನಸ್ಪದವಾಗಿ ಮತ್ತೊಂದು ಹುಲಿ ಸಾವು

ಮೈಸೂರು: ಮೈಸೂರಿನಲ್ಲಿ ಅನುಮಾನಸ್ಪದವಾಗಿ ಮತ್ತೊಂದು ಹುಲಿ ಸಾವನ್ನಪ್ಪಿದೆ. ಹೆಚ್.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್‌ನಲ್ಲಿ ಹುಲಿ ಶವ ಪತ್ತೆಯಾಗಿದ್ದು ಹುಲಿಗೆ ವಿಷ ಹಾಕಿ ಕೊಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಕೊಳೆತ ಸ್ಥಿತಿಯಲ್ಲಿ ಹುಲಿಯ ಮೃತದೇಹ ಪತ್ತೆಯಾಗಿದ್ದು, ಕಳೆದ ವಾರವಷ್ಟೇ ಒಂದು ಹುಲಿ ಮೃತಪಟ್ಟಿತ್ತು. ಇದೀಗಾ ಮತ್ತೊಂದು ಹುಲಿ ಶವಪತ್ತೆಯಾಗಿ ಆತಂಕ ಸೃಷ್ಠಿಯಾಗಿದೆ. ಇನ್ನು ಹುಲಿಗಳ ಸಾವು ಅರಣ್ಯ ಇಲಾಖೆಗೆ ತಲೆ ಬಿಸಿಯಾಗಿದ್ದು ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮೈಸೂರಿನಲ್ಲಿ ಅನುಮಾನಸ್ಪದವಾಗಿ ಮತ್ತೊಂದು ಹುಲಿ ಸಾವು Read More »

ವಿಶ್ವಕ್ಕೆ ಯೋಗ ಗುರು ಬಿಕೆಎಸ್‌ ಅಯ್ಯಂಗಾರರಿಗೂ ಮೈಸೂರಿಗೂ ಇತ್ತು ಅವಿನಾಭವ ಸಂಬಂಧ..!

ಮೈಸೂರು: ಯೋಗಗುರು ಬೆಳ್ಳೂರು ಕೃಷ್ಣಮಾಚಾರ್‌ ಸುಂದರರಾಜ ಅಯ್ಯಂಗಾರ್‌, ಹೀಗೆಂದರೆ ಬಹುಷಃ ಬಹಳಷ್ಟು ಜನರಿಗೆ ತಿಳಿಯುವುದಿಲ್ಲ. ಅದೇ ಯೋಗದೀಕ್ಷಾ ದುರಂಧರ, ವಿಶ್ವ ಯೋಗಾಚಾರ್ಯ ಪ್ರೊ. ಬಿಕೆಎಸ್‌ ಅಯ್ಯಂಗಾರ್‌ ಎಂದರೆ ತಕ್ಷಣ ಅರ್ಥವಾಗುತ್ತದೆ. ಭಾರತ ಜಗತ್ತಿಗೆ ನೀಡಿದ ಬಹುದೊಡ್ಡ ಕೊಡುಗೆ ಯೋಗ. ಭಾರತೀಯ ಸಂಸ್ಕೃತಿಯ ಭಾಗವಾಗಿ ಬೆಳೆದು ಬಂದಿರುವ ಈ ಯೋಗ ಪರಂಪರೆಯನ್ನು ಈಗ ಅಂತರಾಷ್ಟ್ರೀಯ ಮಟ್ಟದಲ್ಲಿಮಾನ್ಯ ಮಾಡಲಾಗಿದೆ. ಹೀಗೆ ಯೋಗಕ್ಕೆ ಜಾಗತಿಕ ಮನ್ನಣೆ ದೊರಕಿಸಿಕೊಡುವಲ್ಲಿ ಯೋಗಾಚಾರ್ಯ ಬಿ. ಕೆ. ಎಸ್‌.ಅಯ್ಯಂಗಾರ್‌ ಅವರ ಕೊಡುಗೆ ಅಪಾರವಾದದ್ದು. ಶ್ರೇಷ್ಠ ಯೋಗ ಶಿಕ್ಷಕರಾಗಿದ್ದ

ವಿಶ್ವಕ್ಕೆ ಯೋಗ ಗುರು ಬಿಕೆಎಸ್‌ ಅಯ್ಯಂಗಾರರಿಗೂ ಮೈಸೂರಿಗೂ ಇತ್ತು ಅವಿನಾಭವ ಸಂಬಂಧ..! Read More »

ಜಯಚಾಮರಾಜ ಒಡೆಯರ್ ಜನ್ಮ ಶತಮಾನೋತ್ಸವ ಹಿನ್ನಲೆ: ರಾಷ್ಟ್ರಪತಿ ಆಹ್ವಾನಿಸಿದ ರಾಜಮಾತೆ

ಮೈಸೂರು: ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವದ ಹಿನ್ನಲೆ ಪೂರ್ವ ತಯಾರಿ ನಡೆಸುತ್ತಿರುವ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಜುಲೈ 18 ರಂದು ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಬೇಕೆಂದುಕೊಂಡಿರುವ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಕಳೆದ ಒಂದು ವರ್ಷದಿಂದ ಶ್ರಮ ಹಾಕುತ್ತಿದ್ದಾರೆ. ಜಗನ್ಮೋಹನ ಅರಮನೆಯಲ್ಲಿರುವ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿಯನ್ನು ರಿಪೇರಿ ಮಾಡಿಸಲಾಗಿದ್ದು, ಅವರ ಶತಮಾನೋತ್ಸವ ದಿನದಂದು ಉದ್ಘಾಟನೆಯಾಗಲಿದೆ. ಈ ಕಾರ್ಯಕ್ರಮಕ್ಕೆ

ಜಯಚಾಮರಾಜ ಒಡೆಯರ್ ಜನ್ಮ ಶತಮಾನೋತ್ಸವ ಹಿನ್ನಲೆ: ರಾಷ್ಟ್ರಪತಿ ಆಹ್ವಾನಿಸಿದ ರಾಜಮಾತೆ Read More »

ಜುಲೈ 5ರಂದು ಮೊದಲನೇ ಆಷಾಢ ಶುಕ್ರವಾರ: ಅಗತ್ಯ ಅಗತ್ಯ ಸಿದ್ಧತೆಗೆ ಅಪರ ಜಿಲ್ಲಾಧಿಕಾರಿ ಸೂಚನೆ

ಮೈಸೂರು: ಮೈಸೂರಿನ ಅಧಿದೇವತೆ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ 2019ನೇ ಸಾಲಿನ ಆಷಾಡ ಶುಕ್ರವಾರಗಳು ಹಾಗೂ ಅಮ್ಮನವರ ಜನ್ಮೋತ್ಸನ ಧಾರ್ಮಿಕ ಕಾರ್ಯಕ್ರಮಗಳಿಗೆ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ಅನಾನುಕೂಲ ಉಂಟಾಗದಂತೆ ಕ್ರಮ ವಹಿಸಲು ಅಪರ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ ಅವರು ಸೂಚನೆ ನೀಡಿದರು. ಈ ವರ್ಷ ಜುಲೈ 5 ರಂದು ಮೊದಲನೇ ಆಷಾಢ ಶುಕ್ರವಾರ, ಜುಲೈ 12 ರಂದು ಎರಡನೇ ಆಷಾಢ ಶುಕ್ರವಾರ, ಜುಲೈ 19 ರಂದು ಮೂರನೇ ಆಷಾಢ ಶುಕ್ರವಾರ, ಜುಲೈ 26 ಕೊನೆಯ ಆಷಾಢ ಶುಕ್ರವಾರಗಳಂದು

ಜುಲೈ 5ರಂದು ಮೊದಲನೇ ಆಷಾಢ ಶುಕ್ರವಾರ: ಅಗತ್ಯ ಅಗತ್ಯ ಸಿದ್ಧತೆಗೆ ಅಪರ ಜಿಲ್ಲಾಧಿಕಾರಿ ಸೂಚನೆ Read More »

ಹಿಮಾಲಯ ಏರಿ ಬಂದ ಮೈಸೂರಿನ ಹಾಡಿ ಮಕ್ಕಳು

ಮೈಸೂರು: ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಹಾಡಿ ಮಕ್ಕಳು ಯಶಸ್ವಿ ಹಿಮಾಲಯ ಚಾರಣ ಮುಗಿಸಿ ಬಂದಿದ್ದಾರೆ. ನಾಗರಹೊಳೆ ಹಾಗೂ ಬಂಡೀಪುರದ ಆದಿವಾಸಿ ಮಕ್ಕಳು, ಇದೀಗಾ ಹಿಮಾಲಯದ ಶಿಖರವನ್ನೇರಿ ತ್ರಿವರ್ಣ ಧ್ವಜ ಹಾರಿಸಿ ಸಾಧನೆ ಮಾಡಿದ್ದಾರೆ. ಮೈಸೂರಿನ ಟೈಗರ್ ಫೌಂಡೇಶನ್ ಹಾಗೂ ಲೇಡಿ ಸರ್ಕಲ್ ಆಫ್ ಇಂಡಿಯಾ ಸಹಯೋಗದೊಂದಿಗೆ ನಡೆದಿದ್ದ ಚಾರಣದಲ್ಲಿ 41 ಜನರ ತಂಡ ಭಾಗವಹಿಸಿತ್ತು. 15 ದಿನಗಳ ಕಾಲ ಪ್ರವಾಸದಲ್ಲಿ ಹಿಮಗಿರಿ ಶಿಖರ ಏರಿ ಯುವತಿಯರು ಸಂತಸಪಟ್ಟಿದ್ದಾರೆ. ಮೈಸೂರು ಜಿಲ್ಲೆಯ ಎಚ್‌.ಡಿ ಕೋಟೆ ತಾಲ್ಲೂಕಿನ ವಿವೇಕ

ಹಿಮಾಲಯ ಏರಿ ಬಂದ ಮೈಸೂರಿನ ಹಾಡಿ ಮಕ್ಕಳು Read More »

ಇನ್ನುಮುಂದೆ ಮೈಸೂರಿನಲ್ಲಿ ನಡೆಯುವ ಸಭೆ, ಸಮಾರಂಭ ಸ್ಥಳದಲ್ಲಿ ಹೈಟೆಕ್‌ ಮೊಬೈಲ್‌ ಶೌಚಾಲಯ

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಬಯಲು ಶೌಚಾಲಯ ತಡೆಯಲು ಹೊಸ ಚಿಂತನೆ ನಡೆಸಲಾಗಿದೆ. ಇನ್ನು ಮುಂದೆ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾವಿರಾರು ಜನರು ಸೇರುವ ಸಭೆ, ಸಮಾರಂಭ ನಡೆಯುವ ಸ್ಥಳದಲ್ಲಿ ಜನರು ಶೌಚಾಲಯವಿಲ್ಲದೆ ಪರಿತಪಿಸುವ ಸನ್ನಿವೇಶ ದೂರವಾಗಲಿದೆ. ಹೌದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ನವರು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಕಾರ್ಯಕ್ರಮದಡಿ ಮೊಬೈಲ್ ಶೌಚಾಲಯಗಳನ್ನು ನಗರಪಾಲಿಕೆಗೆ ಕೊಡುಗೆಯಾಗಿ ನೀಡಿದ್ದಾರೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್, ಎಲ್.ಪಿ.ಜಿ ಪೈಪ್ ಲೈನ್, ಮೈಸೂರು ವಿಭಾಗ ರವರು ಸಿ.ಎಸ್.ಆರ್ ಕಾರ್ಯಕ್ರಮದ

ಇನ್ನುಮುಂದೆ ಮೈಸೂರಿನಲ್ಲಿ ನಡೆಯುವ ಸಭೆ, ಸಮಾರಂಭ ಸ್ಥಳದಲ್ಲಿ ಹೈಟೆಕ್‌ ಮೊಬೈಲ್‌ ಶೌಚಾಲಯ Read More »

ದೇವರಾಜ ಮಾರುಕಟ್ಟೆಗೆ ಪತ್ನಿ ಸಮೇತ ಮಹಾರಾಜ ಯದುವೀರ್ ದಿಢೀರ್ ಭೇಟಿ: ಸಾಮಾನ್ಯರಂತೆ ಹಣ್ಣು-ಹಂಪಲು ಖರೀದಿ

ಮೈಸೂರು: ಭಾನುವಾರ ಬೆಳಿಗ್ಗೆ ನಗರದ ದೇವರಾಜ ಮಾರುಕಟ್ಟೆಗೆ ರಾಜವಂಶಸ್ಥ ಯದುವೀರ್, ಮಡದಿ ತ್ರಿಷಿಕಾ ಕುಮಾರಿ ಒಡೆಯರ್ ಸಮೇತ ಮಾರುಕಟ್ಟೆಗೆ ಭೇಟಿ ನೀಡಿ ಸಾಮಾನ್ಯರಂತೆ ಹಣ್ಣು-ಹಂಪಲು ಖರೀದಿ ಮಾಡಿದ್ದಾರೆ. ಮಹಾರಾಜ ದಂಪತಿ ಭೇಟಿ ವ್ಯಾಪಾರಿಗಳಿಗೆ ಒಂದು ಕ್ಷಣ ಅಚ್ಚರಿ ತಂದಿತು. ಕೆಲವರು ಮಹಾರಾಜರ ಆಶೀರ್ವಾದ ಪಡೆದುಕೊಂಡರು. ಮಾರುಕಟ್ಟೆಯನ್ನು ಒಂದು ಸುತ್ತು ಹಾಕಿ ವ್ಯಾಪಾರಿಗಳ ಜತೆ ಸಮಾಲೋಚನೆ ನಡೆಸಿದರು. ದಂಪತಿ ಮಾರುಕಟ್ಟೆಯಲ್ಲಿ ಸಾಗುತ್ತಿದ್ದರೆ ವ್ಯಾಪಾರಿಗಳು ಸ್ವಪ್ರೇರಣೆಯಿಂದ ಎದ್ದು ನಿಂತು ಗೌರವ ತೋರಿಸಿದ್ದು ವಿಶೇಷವಾಗಿತ್ತು. ಮಾರುಕಟ್ಟೆಯನ್ನು ಒಂದು ಸುತ್ತು ಹಾಕಿದ ಯದುವೀರ್

ದೇವರಾಜ ಮಾರುಕಟ್ಟೆಗೆ ಪತ್ನಿ ಸಮೇತ ಮಹಾರಾಜ ಯದುವೀರ್ ದಿಢೀರ್ ಭೇಟಿ: ಸಾಮಾನ್ಯರಂತೆ ಹಣ್ಣು-ಹಂಪಲು ಖರೀದಿ Read More »

Scroll to Top