June 2019

ರಂಗನತಿಟ್ಟಿನಲ್ಲಿ ಪಕ್ಷಿ ಗಣತಿ: 60 ತಳಿಯ ಸಾವಿರಾರು ಪಕ್ಷಿ ಪತ್ತೆ

ಮೈಸೂರು: ಶ್ರೀರಂಗಪಟ್ಟಣ ತಾಲ್ಲೂಕಿನ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ ಅರಣ್ಯ ಇಲಾಖೆ ನೇತೃತ್ವದಲ್ಲಿ ಭಾನುವಾರ ಈ ವರ್ಷದ ಮೊದಲ ಪಕ್ಷಿ ಗಣತಿ ಕಾರ‍್ಯ ನಡೆಯಿತು. ಗಣತಿಯಲ್ಲಿ 10 ಮಂದಿ ಪಕ್ಷಿ ತಜ್ಞರು ಹಾಗೂ 20 ನುರಿತ ಸಿಬ್ಬಂದಿ ಭಾಗವಹಿಸಿದ್ದರು. ಬೆಳಗ್ಗೆ 7ರಿಂದ 10ರವರೆಗೆ ಪಕ್ಷಿ ಗಣತಿ ನಡೆಯಿತು. ಕಳೆದ ವರ್ಷದಿಂದ ನಡೆಸಿದ್ದ ನಾಲ್ಕು ಗಣತಿ ಕಾರ‍್ಯದಲ್ಲಿ ಬೇರೆ ಬೇರೆ ಪ್ರಬೇಧಗಳಿಗೆ ಸೇರಿದ 110 ಪಕ್ಷಿಗಳನ್ನು ಗುರುತಿಸಲಾಗಿತ್ತು. ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಂಗನತಿಟ್ಟು ಗುರುತಿಸಿಕೊಳ್ಳಲು ಈ ಗಣತಿ ಕಾರ‍್ಯ ಹಾಗೂ […]

ರಂಗನತಿಟ್ಟಿನಲ್ಲಿ ಪಕ್ಷಿ ಗಣತಿ: 60 ತಳಿಯ ಸಾವಿರಾರು ಪಕ್ಷಿ ಪತ್ತೆ Read More »

ಈ ಬಾರಿ 10 ದಿನ ಮುಂಚಿತವಾಗಿ ಜಂಬೂ ಸವಾರಿ..!

ಮೈಸೂರು: 2019ರ ಸಾಲಿನಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 10 ದಿನಗಳು ಮುಂಚಿತವಾಗಿ ಆರಂಭವಾಗಲಿದೆ. ದಸರಾ ಮಹೋತ್ಸವಕ್ಕೆ ಸೆಪ್ಟೆಂಬರ್ 28ರಂದು ಚಾಲನೆ ದೊರೆಯಲಿದ್ದು, ವಿಶ್ವವಿಖ್ಯಾತ ಜಂಬೂ ಸವಾರಿ ಮೆರವಣಿಗೆ ಅಕ್ಟೋಬರ್ 8ರಂದು ಜರುಗಲಿದೆ. ಸಾಮಾನ್ಯವಾಗಿ ಅಕ್ಟೋಬರ್ 3 ಅಥವಾ 4ನೇ ವಾರ ದಸರಾ ಉತ್ಸವ ನಡೆಯುತ್ತಿತ್ತು. ಆದರೆ, ಈ ಬಾರಿ ಸೆಪ್ಟಂಬರ್ ಅಂತ್ಯದಲ್ಲೇ ನಾಡಹಬ್ಬ ಆರಂಭವಾಗಲಿದ್ದು, 10 ದಿನಗಳ ಮುಂಚಿತವಾಗಿ ದಸರಾ ಶುರುವಾಗಲಿದೆ. ಸೆ.28 ರಂದು ಅಧಿದೇವತೆ ಚಾಮುಂಡೇಶ್ವರಿಗೆ ಅಗ್ರಪೂಜೆ ಸಲ್ಲಿಸುವ ಮೂಲಕ 2019ರ ದಸರಾ ಮಹೋತ್ಸವವನ್ನು

ಈ ಬಾರಿ 10 ದಿನ ಮುಂಚಿತವಾಗಿ ಜಂಬೂ ಸವಾರಿ..! Read More »

ಮೈಸೂರು-ಬೆಂಗಳೂರು ನಡುವಿನ ವಿಮಾನ ಸೇವೆಗೆ ಚಾಲನೆ

ಮೈಸೂರು: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವತಿಯಿಂದ ಮೈಸೂರು ವಿಮಾನ ನಿಲ್ದಾಣದಿಂದ ಪ್ರಾದೇಶಿಕ ಸಂಪರ್ಕ ಯೋಜನೆ ನೀತಿ ಯಡಿಯಲ್ಲಿ ಎರಡನೇ ವಿಮಾನ ಸೇವೆ ಇಂದಿನಿಂದ ಆರಂಭವಾಗಿದೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಈ ಸೇವೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ 11:15ಕ್ಕೆ ಹಸಿರು ನಿಶಾನೆ ತೋರಿದರು. ಈ ಮೂಲಕ ಮೈಸೂರಿನಿಂದ ಬೆಂಗಳೂರಿಗೆ ಇಂದಿನಿಂದ ಪ್ರತಿನಿತ್ಯ ವಿಮಾನ ಹಾರಾಟ ಆರಂಭವಾಯಿತು. ಸಂಸದ ಪ್ರತಾಪ್ ಸಿಂಹ, ಸಚಿವ ಸಾ.ರಾ.ಮಹೇಶ್, ಮೇಯರ್ ಪುಷ್ಪಲತಾ ಜಗನ್ನಾಥ್ ಈ ಸಂದರ್ಭದಲ್ಲಿ ಹಾಜರಿದ್ದರು.

ಮೈಸೂರು-ಬೆಂಗಳೂರು ನಡುವಿನ ವಿಮಾನ ಸೇವೆಗೆ ಚಾಲನೆ Read More »

ಮೈಸೂರು ಅರಮನೆಯಲ್ಲಿ ಇಂಗ್ಲಿಷ್ ಅವತರಣಿಕೆಯ ಧ್ವನಿ, ಬೆಳಕು ಕಾರ್ಯಕ್ರಮ ಆರಂಭ

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆ ಆವರಣದಲ್ಲಿ ಕನ್ನಡ ಅವತರಣಿಕೆಯ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಪ್ರವಾಸಿಗರ ಅನುಕೂಲಕ್ಕಾಗಿ ಇಂಗ್ಲಿಷ್‌ನಲ್ಲೂ ಆರಂಭಿಸಲಾಗಿದೆ. ಸೋಮವಾರದಿಂದ ಬುಧವಾರದ ವರೆಗೆ ರಾತ್ರಿ 7 ರಿಂದ 8 ರವರೆಗೆ ಕನ್ನಡ ಅವತರಣಿಕೆಯ ಧ್ವನಿ ಮತ್ತು ಬೆಳಕು ಕಾರ್ಯಕ್ರಮ, ಗುರುವಾರ, ಶುಕ್ರವಾರ, ಶನಿವಾರ ರಾತ್ರಿ 7 ರಿಂದ 8 ರವರೆಗೆ ಇಂಗ್ಲಿಷ್‌ನಲ್ಲಿ, ಶನಿವಾರ ರಾತ್ರಿ 8.15 ರಿಂದ 9.15 ರವರೆಗೆ ಕನ್ನಡದಲ್ಲಿ ಕಾರ್ಯಕ್ರಮ ನಡೆಲಿದೆ. ಕನ್ನಡ ಅವತರಣಿಕೆಯ ಕಾರ್ಯಕ್ರಮಕ್ಕೆ ವಯಸ್ಕರಿಗೆ ₹ 70, ಮಕ್ಕಳಿಗೆ ₹

ಮೈಸೂರು ಅರಮನೆಯಲ್ಲಿ ಇಂಗ್ಲಿಷ್ ಅವತರಣಿಕೆಯ ಧ್ವನಿ, ಬೆಳಕು ಕಾರ್ಯಕ್ರಮ ಆರಂಭ Read More »

ಕೇರಳದಲ್ಲಿ ನಿಫಾ ವೈರಸ್: ಮೈಸೂರಿನಲ್ಲಿ ಕಟ್ಟೆಚ್ಚರ

ಮೈಸೂರು: ಕೇರಳದಲ್ಲಿ ‘ನಿಫಾ’ ಸೋಂಕು ಮರುಕಳಿಸಿದ ಬೆನ್ನಲ್ಲೇ ಮೈಸೂರಿನಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದ ಉತ್ತರ ಎರ್ನಾಕುಲಂನ ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ನಿಫಾ ಸಾಂಕ್ರಾಮಿಕ ರೋಗ ತಗುಲಿ ಕೊಚ್ಚಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯಲ್ಲಿ ವೈದ್ಯಕೀಯ ತಪಾಸಣೆ ಕಾರ್ಯ ಆರಂಭವಾಗಿದೆ. ಎಚ್‌.ಡಿ.ಕೋಟೆಯಲ್ಲಿ ಜ್ವರದ ಪ್ರಕರಣಗಳಲ್ಲಿ ನಿಫಾ ರೋಗದ ಲಕ್ಷಣಗಳು ಕಂಡು ಬಂದಿದೆಯೇ ಎಂಬ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ತಪಾಸಣೆ ಆರಂಭಿಸಿದ್ದಾರೆ. ಶಂಕಿತ ರೋಗಿಗಳ ರಕ್ತದ ಮಾದರಿಯನ್ನು ಸಂಗ್ರಹಿಸಲಾಗುತ್ತಿದೆ. ನಿಫಾ ರೋಗದ ಲಕ್ಷಣಗಳು ಕಂಡು ಬಂದರೆ ತಕ್ಷಣವೇ

ಕೇರಳದಲ್ಲಿ ನಿಫಾ ವೈರಸ್: ಮೈಸೂರಿನಲ್ಲಿ ಕಟ್ಟೆಚ್ಚರ Read More »

ರೆಪೋ ದರ ಕಡಿತಗೊಳಿಸಿದ ಆರ್​ಬಿಐ: ಕಡಿಮೆಯಾಗಲಿದೆ ಗೃಹ, ಕಾರು ಸಾಲದ ಹೊರೆ

ನವದೆಹಲಿ: ಆರ್​ಬಿಐ(ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) ತನ್ನ ದ್ವೈಮಾಸಿಕ ಹಣಕಾಸು ನೀತಿಯಲ್ಲಿ ಅಲ್ಪಾವಧಿ ಬಡ್ಡಿ ಸಾಲವನ್ನು (ರೆಪೋ ದರ) ಶೇ.0.25ರಷ್ಟು ಕಡಿತಗೊಳಿಸಿದೆ. ಇದರಿಂದ ಗೃಹ ಸಾಲದ ಇಎಂಐ ಮತ್ತು ಇತರ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗುವ ಸಾಧ್ಯತೆಯಿದೆ. ಇದರಿಂದ ರೆಪೋ ದರ ಈ ಮೊದಲಿದ್ದ ಶೇ.6.00 ರಿಂದ ಶೇ. 5.75 ಕ್ಕೆ ಇಳಿಕೆಯಾಗಿದ್ದು, ಮನೆ ಹಾಗೂ ಕಾರು ಖರೀದಿ ಮಾಡುವವರಿಗೆ ಸಹಾಯವಾಗಲಿದೆ. ರೆಪೋ ದರಇಳಿಕೆಯಿಂದ ಆರ್ಥಿಕ ಹೆಚ್ಚಿನ ವೇಗ ನೀಡಬಹುದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ

ರೆಪೋ ದರ ಕಡಿತಗೊಳಿಸಿದ ಆರ್​ಬಿಐ: ಕಡಿಮೆಯಾಗಲಿದೆ ಗೃಹ, ಕಾರು ಸಾಲದ ಹೊರೆ Read More »

ವಿಶ್ವಕಪ್‌ನಲ್ಲಿ ಭಾರತದ ಮೊದಲ ಪಂದ್ಯ ತಡವಾಗಿದ್ದೇಕೆ ಗೊತ್ತಾ..?

ಬೆಂಗಳೂರು: 2019ರ ವಿಶ್ವಕಪ್‌ನಲ್ಲಿ ಆಡುತ್ತಿರವ 10 ತಂಡಗಳ ಪೈಕಿ ಭಾರತ ಬಿಟ್ಟು ಉಳಿದ 9 ತಂಡಗಳು ಈಗಾಗಲೇ ಒಂದು – ಎರಡು ಪಂದ್ಯವನ್ನ ಆಡಿವೆ. ಆದರೆ ಭಾರತ ತಂಡ ಇಂದು ತನ್ನ ಮೊದಲ ಪಂದ್ಯವನ್ನಾಡಲಿದ್ದು, ಇಷ್ಟು ತಡವಾಗಿ ವಿಶ್ವಕಪ್ ಆಡಲು ಕಾರಣವಿದೆ. ವಿಶ್ವಕಪ್‌ ಆರಂಭಗೊಂಡು ಒಂದು ವಾರದ ಬಳಿಕ ಭಾರತ ತನ್ನ ಮೊದಲ ಪಂದ್ಯವನ್ನಾಡಲು ನ್ಯಾ.ಲೋಧಾ ಸಮಿತಿ ಶಿಫಾರಸು ಕಾರಣ. ಭಾರತ ತಂಡ ಆಡುವ ಎರಡು ಟೂರ್ನಿಗಳ ಮಧ್ಯೆ ಕನಿಷ್ಠ 15 ದಿನಗಳ ಅಂತರವಿರಬೇಕು ಎಂದು ಲೋಧಾ

ವಿಶ್ವಕಪ್‌ನಲ್ಲಿ ಭಾರತದ ಮೊದಲ ಪಂದ್ಯ ತಡವಾಗಿದ್ದೇಕೆ ಗೊತ್ತಾ..? Read More »

ಸವಾಲು ಹಾಕಿದ ಪೈಲ್ವಾನನಿಗೆ ಮಣ್ಣು ಮುಕ್ಕಿಸಿದ ಮೈಸೂರು ಮಹಾರಾಜ ಯಾರು ಗೊತ್ತಾ..?

ಮೈಸೂರು: ಕಂಠೀರವ ನರಸಿಂಹರಾಜ ಒಡೆಯರ್ ಕಾಲದ(1888-1940) ಆಡಳಿತಾವಧಿಯಲ್ಲಿ ಮೈಸೂರು ಎಲ್ಲ ರಂಗದಲ್ಲಿ ಹೆಸರು ಗಳಿಸಿ ಮರೆಯುತ್ತಿತ್ತು. ಅಂದಿನ ಕಾಲದಲ್ಲಿ ತಿರುಚನಪಳ್ಳಿಯ ಪೈಲ್ವಾನನೊಬ್ಬ ತುಂಬ ಪ್ರಖ್ಯಾತ ಕುಸ್ತಿಪಟು. ಈತನ ವಿರುದ್ಧ ಎಂತಹ ಘಟನುಘಟಿ ಪೈಲ್ವಾನವ್ರು ತರಗುಟ್ಟುತಿದ್ದರು. ಈತನ ವಿರುದ್ಧ ಯಾವ ಕುಸ್ತಿ ಪಟುವೂ ಗೆದ್ದು ಬೀಗಿರಲಿಲ್ಲ. ತನ್ನಂತ ಶಕ್ತಿಶಾಲಿ ಕುಸ್ತಿಪಟು ಯಾರು ಇಲ್ಲವೆಂದು ಭಾವಿಸಿದ ತಿರುಚನಪಳ್ಳಿಯ ಪೈಲ್ವಾನ್, ಓಮ್ಮೆ ಮೈಸೂರಿಗೆ ಭೇಟಿ ನೀಡಿ ಲಂಗೋಟಿ(ಕುಸ್ತಿ ಆಡಲು ಬಳಸುವ ಬಟ್ಟೆ)ಯನ್ನು ಊರು ಹೊರಾವರಣದಲ್ಲಿರುವ ಮರಕ್ಕೆ ನೇತು ಹಾಕಿ, ಯಾರದರೂ ಕುಸ್ತಿಪಟು

ಸವಾಲು ಹಾಕಿದ ಪೈಲ್ವಾನನಿಗೆ ಮಣ್ಣು ಮುಕ್ಕಿಸಿದ ಮೈಸೂರು ಮಹಾರಾಜ ಯಾರು ಗೊತ್ತಾ..? Read More »

ಅರ್ಧ ಶತಮಾನದಿಂದ ಲಿಂಗನಮಕ್ಕಿಯಲ್ಲಿ ಮುಳುಗಿದ್ದರೂ ಸುಸ್ಥಿರವಾಗಿದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿಸಿದ ಹಿರೇಭಾಸ್ಕರ ಆಣೆಕಟ್ಟು

ಅದು 1937-38ರ ಅವಧಿ. ಮಾದರಿ ಮೈಸೂರಿನ ನಿರ್ಮಾತೃ ನಾಲ್ವಡಿಯವರು ಮಹಾಮಾತ್ಯ ಮುತ್ಸದ್ದಿ ಮಿರ್ಜಾ ಇಸ್ಮಾಯಿಲ್ಲರ ದಿವಾನಗಿರಿಯಲ್ಲಿ ನಾಡು ಕಟ್ಟುವ ಕಾಯಕದಲ್ಲಿ ನಿರತರಾಗಿದ್ದ ಕಾಲ. ಶಿವನಸಮುದ್ರದ ವಿದ್ಯುತ್ ಸ್ಥಾವರದ ಎಲ್ಲ ವಿಸ್ತರಣೆ ಮುಗಿದು ಅದರ ಸಾಮರ್ಥ್ಯ 45 ಮೆಗಾವಾಟ್ಟಿಗೆ ಮುಟ್ಟುವ ಹಂತ. ಶಿಂಷಾದಲ್ಲಿ 17.2 ಮೆಗಾವಾಟ್ ಸಾಮರ್ಥ್ಯದ ಹೊಸ ವಿದ್ಯುದಾಗರ ಕಾರ್ಯಾರಂಭಕ್ಕೆ ಅಣಿಗೊಳ್ಳುತ್ತಿದ್ದ ಸಂದರ್ಭ. ಆದರೂ ಮೈಸೂರು ರಾಜ್ಯಕ್ಕೆ ವಿದ್ಯುತ್ ಕೊರತೆಯ ಭಯ. ಮಹಾರಾಜರು ನಿವೃತ್ತ ಮುಖ್ಯ ಇಂಜಿನಿಯರ್ ಎಸ್ ಕೆ ಶೇಷಾಚಾರ್ ನೇತೃತ್ವದಲ್ಲಿ ಪವರ್ ಕಮಿಟಿಯೊಂದನ್ನು ನೇಮಕ

ಅರ್ಧ ಶತಮಾನದಿಂದ ಲಿಂಗನಮಕ್ಕಿಯಲ್ಲಿ ಮುಳುಗಿದ್ದರೂ ಸುಸ್ಥಿರವಾಗಿದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿಸಿದ ಹಿರೇಭಾಸ್ಕರ ಆಣೆಕಟ್ಟು Read More »

ನಾಡು ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳು

ಮೈಸೂರು: ಜೂನ್ 4, 1884ರಲ್ಲಿ ಜನಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನ ವಿಶ್ವಮಾನ್ಯವಾಗಿ ಸರ್ವಾಂಗೀಣ ಪ್ರಗತಿ ಹೊಂದಲು ಕಾರಣೀಭೂತರಾದವರು. ನಾವು ಯಾವ ಯಾವುದನ್ನು ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅಂತಹ ಮಹನೀಯರ ಶ್ರೇಷ್ಠ ಸೇವೆ ಎಂದು ಕೊಂಡಾಡುತ್ತೇವೆಯೋ ಆ ಹಿರಿಮೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಾತ್ರ ಕೂಡಾ ಮಹತ್ತರವಾದುದು. ಸರ್ವ ಕಾಲದಲ್ಲೂ ಪ್ರಾಜ್ಞರು ನಿಷ್ಠರು ಇದ್ದಿರುತ್ತಾರೆ. ಆ ಪ್ರಾಜ್ಞರಿಗೆ ಕಾರ್ಯದಕ್ಷತೆ ತೋರುವ ಅವಕಾಶ, ಸ್ವಾತಂತ್ರ್ಯ ಅಧಿಕಾರಗಳನ್ನು ನೀಡುವ ಮನೋಬಲ ರಾಜ್ಯಭಾರದವರಿಗೆ ಇದ್ದಾಗ ಮಾತ್ರವೇ ಅದು

ನಾಡು ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳು Read More »

Scroll to Top