July 2019

ಹುಲಿ ಗಣತಿ: ಎರಡನೇ ಸ್ಥಾನಕ್ಕೆ ಕುಸಿದ ಕರ್ನಾಟಕ;- ಈ ರಾಜ್ಯಕ್ಕೆ ಮೊದಲ ಸ್ಥಾನ

ನವದೆಹಲಿ: ಇಂದು ವಿಶ್ವ ಹುಲಿ ದಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2018ರ ಅಖಿಲ ಭಾರತ ಹುಲಿ ಅಂದಾಜು ವರದಿಯನ್ನು ಬಿಡುಗಡೆಗೊಳಿಸಿದ್ದಾರೆ. ದೇಶದಲ್ಲಿ 2967 ಹುಲಿಗಳು ಇರುವುದಾಗಿ 2018ರ ಹುಲಿ ಗಣತಿ ವರದಿಯಿಂದ ತಿಳಿದು ಬಂದಿದೆ. ಈ ಮೂಲಕ ಜಗತ್ತಿನಲ್ಲಿ ಹುಲಿ ಸಂತತಿಗೆ ಅತ್ಯಂತ ಸುರಕ್ಷಿತ ಸ್ಥಳವಾಗಿ ಭಾರತ ಗುರುತಿಸಿಕೊಂಡಿದೆ. ದೇಶದ ಹುಲಿಗಳ ಸಂಖ್ಯೆ 2014ರಲ್ಲಿ 1,400 ಇದ್ದದ್ದು 2019 ರಲ್ಲಿ 2,977 ಕ್ಕೆ ಏರಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಎರಡನೇ ಸ್ಥಾನಕ್ಕೆ ಕುಸಿದ ಕರ್ನಾಟಕ: […]

ಹುಲಿ ಗಣತಿ: ಎರಡನೇ ಸ್ಥಾನಕ್ಕೆ ಕುಸಿದ ಕರ್ನಾಟಕ;- ಈ ರಾಜ್ಯಕ್ಕೆ ಮೊದಲ ಸ್ಥಾನ Read More »

ಚಾಮುಂಡಿ ಬೆಟ್ಟಕ್ಕೆ ಹೋಗುತ್ತಿದ್ದ ಬಸ್ ಬ್ರೆಕ್ ಫೇಲ್: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರಿ ಅನಾಹುತ

ಮೈಸೂರು: ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ಒಂದು ತಪ್ಪಿದ್ದು, ಚಾಮುಂಡಿ ಬೆಟ್ಟಕ್ಕೆ ಹೋಗುತ್ತಿದ್ದ ಬಸ್ಸೊಂದರ ಬ್ರೆಕ್ ಫೇಲ್ ಆಗಿ ತಡೆಗೋಡೆಗೆ ಗುದ್ದಿದೆ. ಹೌದು. ಇಂದು ಕೊನೆ ಆಶಾಡ ಶುಕ್ರವಾರವಾದ ಕಾರಣ ಸಾಕಷ್ಟು ಭಕ್ತರು ಚಾಮುಂಡಿ ಬೆಟ್ಟಕ್ಕೆ ಬಸ್ ಮೂಲಕ ತೆರಳುತ್ತಿದ್ದರು. ನಗರ ಸಾರಿಗೆ ಬಸ್ ಒಂದರ ಬ್ರೇಕ್ ಏರ್ ಪೈಪು ತುಂಡಾದ ಕಾರಣ ಬ್ರೆಕ್ ಫೇಲ್ ಆಗಿ ಬಸ್ ಕ್ಷಣಾರ್ಧದಲ್ಲಿ ಹಿಮ್ಮುಖವಾಗಿ ಚಲಿಸತೊಡಗಿದೆ. ಈ ವೇಳೆ ಚಾಲಕ ಸಮಯ ಪ್ರಜ್ಞೆ ಮೆರೆದ ಕಾರಣ ಬಸ್ ತಡೆಗೋಡೆಗೆ

ಚಾಮುಂಡಿ ಬೆಟ್ಟಕ್ಕೆ ಹೋಗುತ್ತಿದ್ದ ಬಸ್ ಬ್ರೆಕ್ ಫೇಲ್: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರಿ ಅನಾಹುತ Read More »

ವಿಶ್ವಾಸ ಮತ ಕಳೆದು ಕೊಂಡ ಮೈತ್ರಿ ಸರ್ಕಾರ: 14 ತಿಂಗಳ ಆಡಳಿತ ನೆಡೆಸಿದ ಸರ್ಕಾರ ಪತನ

ಬೆಂಗಳೂರು: 15 ದಿನಗಳಿಂದ ನಡೆಯುತ್ತಿದ್ದ ರಾಜಕೀಯ ನಾಟಕಕ್ಕೆ ತೆರೆ ಬಿದ್ದಿದ್ದು. ಕಾಂಗ್ರೆಸ್-ಜೆಡಿಎಸ್ ಮೈತ್ರಿಯ, ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ 14 ತಿಂಗಳ ಸರಕಾರ ಪತನಗೊಂಡಿದೆ. ಇಂದಿನ ವಿಶ್ವಾಸ ಮತಯಾಚನೆಯ ವೇಳೆ ಸರ್ಕಾರದ ಪರವಾಗಿ 99 ಮತಗಳು ಬಿದ್ದರೆ ವಿರುದ್ಧವಾಗಿ 105 ಮತಗಳು ಬಿದ್ದವು. ಈ ಮೂಲಕ ಸಿಎಂ ಸಲ್ಲಿಸಿದ್ದ ವಿಶ್ವಾಸ ಮತಯಾಚನೆ ಬಿದ್ದು ಹೋಗಿದೆ. ವಿಶ್ವಾಸ ಮತಯಾಚನೆಯ ವೇಳೆ ಒಟ್ಟು 20 ಶಾಸಕರು ಗೈರು ಹಾಜರಿ ಹಾಕಿದ್ದರು. ಕಾಂಗ್ರೆಸ್ಸಿನ 14, ಜೆಡಿಎಸ್‍ನ 3 ಶಾಸಕರು ಹಾಗೂ ಇಬ್ಬರು

ವಿಶ್ವಾಸ ಮತ ಕಳೆದು ಕೊಂಡ ಮೈತ್ರಿ ಸರ್ಕಾರ: 14 ತಿಂಗಳ ಆಡಳಿತ ನೆಡೆಸಿದ ಸರ್ಕಾರ ಪತನ Read More »

ಚಂದ್ರಯಾನ-2 ಯಶಸ್ವಿ ಉಡಾವಣೆ: ಕೋಟಿ ಕನಸುಗಳೊಂದಿಗೆ ನಭಕ್ಕೆ ಜಿಗಿದ ಬಾಹುಬಲಿ

ಶ್ರೀಹರಿಕೋಟ: ಭಾರತದ ಬಾಹ್ಯಾಕಾಶ ಲೋಕದ ಮಹಾತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಗಗನನೌಕೆ ಸೋಮವಾರ ಅಪರಾಹ್ನ 2.43ಕ್ಕೆ ನಭಕ್ಕೆ ಚಿಮ್ಮಿದೆ. ಬಾಹುಬಲಿ ಎಂದು ಅಡ್ಡ ಹೆಸರಿನಿಂದ ಕರೆಯಲ್ಪಡುವ ಚಂದ್ರಯಾನ-2 ಗಗನ ನೌಕೆಯನ್ನು ಜಿಎಸ್ಎಲ್ ವಿಎಂಕೆ 3-ಎಂ1 ರಾಕೆಟ್ ನಭಕ್ಕೆ ಕಳುಹಿಸಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್​ಎಲ್​ವಿ ಮಾರ್ಕ್​-111 ರಾಕೆಟ್​ ಮೂಲಕ ಚಂದ್ರಯಾನ-2 ಅನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ. ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಕಳೆದ ಸೋಮವಾರ ಕೊನೆ ಗಳಿಗೆಯಲ್ಲಿ ಮುಂದೂಡಲ್ಪಟ್ಟಿದ್ದ ಚಂದ್ರಯಾನ-2 ನೌಕೆಯನ್ನು ಇಂದು ಇಸ್ರೊ

ಚಂದ್ರಯಾನ-2 ಯಶಸ್ವಿ ಉಡಾವಣೆ: ಕೋಟಿ ಕನಸುಗಳೊಂದಿಗೆ ನಭಕ್ಕೆ ಜಿಗಿದ ಬಾಹುಬಲಿ Read More »

ಜು.24 ರಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವ

ಮೈಸೂರು: ಜು.24 ರಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ (ಜನ್ಮೋತ್ಸವ) ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ನಾಡದೇವಿ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವ ಜುಲೈ 24 ರಂದು ಮುಂಜಾನೆ 5:30 ರಿಂದ ವಿಜೃಂಭಣೆಯಿಂದ ನೆರವೇರಲಿದೆ. ದೇವಾಲಯದಲ್ಲಿ ದೇವಿಗೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯಗಳು ಪೂರ್ಣಗೊಂಡ ನಂತರ ಬೆಳಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಬೆಳಗ್ಗೆ 9:30ಕ್ಕೆ ಮಹಾಮಂಗಳಾರತಿ ಬೆಳಗಲಾಗುತ್ತದೆ. ಬೆಳಗ್ಗೆ 10:30ಕ್ಕೆ ಚಾಮುಂಡೇಶ್ವರಿ ಅಮ್ಮನವರ

ಜು.24 ರಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವ Read More »

ಭೂಗರ್ಭದಲ್ಲಿ ಸಿಕ್ಕ ಜೋಡಿ ನಂದಿ ವಿಗ್ರಹ ವೀಕ್ಷಿಸಿದ ಯದುವೀರ್

ಮೈಸೂರು: ಮೈಸೂರಿನಲ್ಲಿ ಬೃಹತ್ ಗಾತ್ರದ ಜೋಡಿ ನಂದಿ ವಿಗ್ರಹ ಭೂಮಿಯಾಳದಲ್ಲಿ ದೊರಕಿ ಕುತೂಹಲ ಉಂಟು ಮಾಡಿದ್ದ ಸ್ಥಳಕ್ಕೆ ರಾಜ ವಂಶಸ್ಥ ಯದುವೀರ್ ಒಡೆಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯ ಅರಸನ ಕೆರೆ ಗ್ರಾಮದ ವ್ಯಕ್ತಿಯೊಬ್ಬರಿಗೆ ಸೇರಿದ ಜಮೀನಿನಲ್ಲಿ ಬೃಹತ್ ನಂದಿ ವಿಗ್ರಹಗಳು ಪತ್ತೆಯಾಗಿತ್ತು. ಇದೀಗ ಆ ಗ್ರಾಮಕ್ಕೆ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖುದ್ದು ಭೇಟಿ ನೀಡಿ ನಂದಿ ವಿಗ್ರಹಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಬೆಳ್ಳಂಬೆಳಿಗ್ಗೆ ಅರಸನಕೆರೆ ಗ್ರಾಮಕ್ಕೆ ಪುರಾತತ್ವ ತಜ್ಞ ಡಾ.ರಂಗರಾಜು

ಭೂಗರ್ಭದಲ್ಲಿ ಸಿಕ್ಕ ಜೋಡಿ ನಂದಿ ವಿಗ್ರಹ ವೀಕ್ಷಿಸಿದ ಯದುವೀರ್ Read More »

ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ಅಂತರರಾಷ್ಟ್ರೀಯ ನ್ಯಾಯಾಲಯ ತಡೆ

ಹೇಗ್: ಮಾಜಿ ನೌಕಾಧಿಕಾರಿ ಕುಲಭೂಷಣ್‌ ಜಾಧವ್‌ ಅವರಿಗೆ ಪಾಕಿಸ್ತಾನ ವಿಧಿಸಿರುವ ಗಲ್ಲು ಶಿಕ್ಷೆಗೆ ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಬುಧವಾರ ಸಂಜೆ ತಡೆ ನೀಡಿದೆ. ಕುಲಭೂಷಣ್ ಜಾಧವ್ ಪ್ರಕರಣದ ವಿಚಾರಣೆ ನಡೆಸಿರುವ ಅಂತಾರಾಷ್ಟ್ರೀಯ ನ್ಯಾಯಾಲಯ ಜು.17 ರಂದು ಐಸಿಜೆ ಮಹತ್ವದ ಮಧ್ಯಂತರ ಆದೇಶ ನೀಡಿದ್ದು, ಪಾಕಿಸ್ತಾನದಲ್ಲಿರುವ ಕುಲಭೂಷಣ್ ಜಾಧವ್ ಗೆ ರಾಜತಾಂತ್ರಿಕ ನೆರವು ಪಡೆಯುವುದಕ್ಕೆ ಅನುಮತಿ ನೀಡಿದೆ. ಐಸಿಜೆಯ ಈ ತೀರ್ಪು ಪಾಕ್ ವಿರುದ್ಧ ಭಾರತಕ್ಕೆ ಮಹತ್ವದ ಗೆಲುವು ಎಂದು ವಿಶ್ಲೇಷಿಸಲಾಗುತ್ತಿದೆ. ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿಗೆ ಕುಲಭೂಷಣ್ ಜಾಧವ್

ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ಅಂತರರಾಷ್ಟ್ರೀಯ ನ್ಯಾಯಾಲಯ ತಡೆ Read More »

ಕೊಡಗಿನಲ್ಲಿ ನಾಳೆಯಿಂದ 22ರವರೆಗೆ ಭಾರೀ ಮಳೆ ಸಾಧ್ಯತೆ: ಎಚ್ಚರಿಕೆಯಿಂದಿರುವಂತೆ ಜಿಲ್ಲಾಡಳಿತ ಮನವಿ

ಕೊಡಗು: ಕೊಡಗಿನಲ್ಲಿ ನಾಳೆಯಿಂದ 22ರವರೆಗೆ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಜಿಲ್ಲೆಯಾದ್ಯಂತ 5 ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಈ ಅವಧಿಯಲ್ಲಿ 115.6 ರಿಂದ 204.4 ಮಿ.ಮೀ.ವರೆಗೂ ಮಳೆ ಬೀಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಜಿಲ್ಲೆಗೆ ಬರುವ ಪ್ರವಾಸಿಗರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದಿರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಆಪತ್ಕಾಲದಲ್ಲಿ ಸಂಪರ್ಕಿಸಲು ಜಿಲ್ಲಾಡಳಿತದ ಸಹಾಯ ವಾಣಿ ಸಂಖ್ಯೆಯನ್ನು ನೀಡಿದೆ.

ಕೊಡಗಿನಲ್ಲಿ ನಾಳೆಯಿಂದ 22ರವರೆಗೆ ಭಾರೀ ಮಳೆ ಸಾಧ್ಯತೆ: ಎಚ್ಚರಿಕೆಯಿಂದಿರುವಂತೆ ಜಿಲ್ಲಾಡಳಿತ ಮನವಿ Read More »

5 ವರ್ಷದಿಂದ ನರಕ ಯಾತನೆ: ನಮಗೆ ಅಂಡರ್ ಬ್ರಿಡ್ಜ್ ಬೇಡ ರೈಲ್ವೇಗೇಟ್ ನಿರ್ಮಿಸಲು ಆಗ್ರಹಿಸಿದ ಜನರು

ಮೈಸೂರು: ಕಳೆದ 5 ವರ್ಷದಿಂದ ನರಕ ಯಾತನೆ ಅನುಭವಿಸಿದ್ದೇವೆ. ನಮಗೆ ಅಂಡರ್ ಬ್ರಿಡ್ಜ್ ಬೇಡ ರೈಲ್ವೇಗೇಟ್ ನಿರ್ಮಿಸಿಕೊಡಿ ಎಂದು ರೈಲ್ವೆ ಇಲಾಖೆ ಮತ್ತು ಸರ್ಕಾರಕ್ಕೆ ಡೋರ್ನಹಳ್ಳಿ ಜನತೆ ಮನವಿ ಮಾಡಿದ್ದಾರೆ . ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನಲ್ಲಿರುವ ಡೋರ್ನಹಳ್ಳಿ ರೈಲ್ವೆ ನಿಲ್ದಾಣದ ಸಮೀಪ, ರೈಲ್ವೆ ಇಲಾಖೆಯವರು ಮೊದಲಿದ್ದ ರಸ್ತೆಯನ್ನು ಮುಚ್ಚಿ ನಿರ್ಮಿಸಿರುವ ಅಂಡರ್ ಬ್ರಿಡ್ಜ್ ನಿಂದ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ನಮಗೆ ಮೊದಲಿದ್ದ ರಸ್ತೆಗೆನೆ ಒಂದು ರೈಲ್ವೇಗೇಟ್ ನಿರ್ಮಿಸಿಕೊಡಬೇಕಾಗಿ ರೈಲ್ವೆ ಇಲಾಖೆ ಮತ್ತು ಸರ್ಕಾರಕ್ಕೆ

5 ವರ್ಷದಿಂದ ನರಕ ಯಾತನೆ: ನಮಗೆ ಅಂಡರ್ ಬ್ರಿಡ್ಜ್ ಬೇಡ ರೈಲ್ವೇಗೇಟ್ ನಿರ್ಮಿಸಲು ಆಗ್ರಹಿಸಿದ ಜನರು Read More »

ಮೈಸೂರಿನಲ್ಲಿ 150 ವರ್ಷಗಳ ಹಿಂದಿನ 2 ಬೃಹತ್ ನಂದಿ‌ ವಿಗ್ರಹಗಳು ಪತ್ತೆ..!

ಮೈಸೂರು: ಜಿಲ್ಲೆಯಲ್ಲಿ ಪೌರಾಣಿಕ ಹಿನ್ನೆಲೆಯುಳ್ಳ 2 ಬೃಹತ್ ನಂದಿ‌ ವಿಗ್ರಹಗಳು ಪತ್ತೆಯಾಗಿದ್ದು ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಮಣ್ಣಿನಲ್ಲಿ ಹುದುಗಿದ್ದ ನಂದಿ ವಿಗ್ರಹಗಳನ್ನು ಮೇಲಕ್ಕೆ ತಂದಿದ್ದಾರೆ. ಮೈಸೂರು ಜಿಲ್ಲೆಯ ಅರಸನಕೆರೆ ಗ್ರಾಮದಲ್ಲಿ ಬೃಹತ್ ನಂದಿ ವಿಗ್ರಹಗಳು ಸಿಕ್ಕಿವೆ. ಗ್ರಾಮದ ಜಮೀನಿನಲ್ಲಿ ಸುಮಾರು 12 ಅಡಿ ಮೀರಿದ ಎರಡು ನಂದಿ ವಿಗ್ರಹಗಳು ಪತ್ತೆಯಾಗಿವೆ. 15 ಅಡಿ ಮಣ್ಣಿನ ಆಳದಲ್ಲಿ ಮುಚ್ಚಿಹೋಗಿದ್ದ ಎರಡು ಬೃಹತ್ ನಂದಿ ವಿಗ್ರಹಗಳು ಸಿಕ್ಕಿವೆ. ಸುಮಾರು ನೂರೈವತ್ತು ವರ್ಷಗಳ ಐತಿಹಾಸಿಕ ಹಿನ್ನೆಲೆಯುಳ್ಳ ಅತ್ಯಂತ ದೊಡ್ಡದಾದ ನಂದಿ ವಿಗ್ರಹಗಳು

ಮೈಸೂರಿನಲ್ಲಿ 150 ವರ್ಷಗಳ ಹಿಂದಿನ 2 ಬೃಹತ್ ನಂದಿ‌ ವಿಗ್ರಹಗಳು ಪತ್ತೆ..! Read More »

Scroll to Top