August 2019

helicopter-ride-in-mysuru-4

ದಸರೆಗೂ ಮುನ್ನ ಮೈಸೂರಿಗರಿಗೆ ಗುಡ್ ನ್ಯೂಸ್..! ನಗರದ 18 ವಿಶೇಷತೆಗಳಿಗೆ ಜಿಯಾಗ್ರಫಿಕಲ್​ ಇಂಡಿಕೇಷನ್​ ಟ್ಯಾಗ್​​

ಮೈಸೂರು: ಸಾಂಸ್ಕೃತಿಕ ನಗರಿ, ಪಾರಂಪರಿಕ ನಗರಿ, ಅರಮನೆಗಳ ನಗರಿ, ಮಲ್ಲಿಗೆ ನಗರಿ ಎಂದೇ ಪ್ರಸಿದ್ಧಿ ಪಡೆದಿರುವ ಮೈಸೂರು ನಗರದ 18 ವಿಶೇಷತೆಗಳಿಗೆ ಭೌಗೋಳಿಕ ವಿಶೇಷತೆಗಳ ಹೆಗ್ಗುರುತು (ಜಿಐ- ಜಿಯಾಗ್ರಫಿಕಲ್​ ಇಂಡಿಕೇಷನ್​ ಟ್ಯಾಗ್) ನೀಡಲು ಚಿಂತನೆ ನಡೆಸಲಾಗಿದೆ. ರಾಜ್ಯದ ಒಟ್ಟು 42 ವಿಶೇಷತೆಗಳಿಗೆ ಜಿಯಾಗ್ರಫಿಕಲ್ ಇಂಡಿಕೇಷನ್ ಟ್ಯಾಗ್ ಸಿಗಲಿದೆ. ಈ ಪೈಕಿ ಮೈಸೂರಿನ 18 ವಿಶೇಷತೆಗಳಿಗೆ GI ಟ್ಯಾಗ್ ಸಿಗಲಿದೆ. ಮೈಸೂರು ಸೀರೆ, ಮೈಸೂರು ವೀಳ್ಯದೆಲೆ, ಮೈಸೂರು ಬಾಳೆ, ಮೈಸೂರು ಮಲ್ಲಿಗೆ, ಮೈಸೂರು ಸ್ಯಾಂಡಲ್ ಸೋಪು, ಮೈಸೂರಿನ ಚಿತ್ರಕಲೆ […]

ದಸರೆಗೂ ಮುನ್ನ ಮೈಸೂರಿಗರಿಗೆ ಗುಡ್ ನ್ಯೂಸ್..! ನಗರದ 18 ವಿಶೇಷತೆಗಳಿಗೆ ಜಿಯಾಗ್ರಫಿಕಲ್​ ಇಂಡಿಕೇಷನ್​ ಟ್ಯಾಗ್​​ Read More »

ದಸರೆಯ ರಂಗೇರಿಸಲು ಸೆ.15 ರಿಂದ ಆರಂಭವಾಗಲಿದೆ ‘ಯುವ ಸಂಭ್ರಮ’

ಮೈಸೂರು: ಮೈಸೂರು ದಸರಾ ಮಹೋತ್ಸವದಲ್ಲಿ ಯುವ ಮನಸ್ಸುಗಳನ್ನ ಕುಣಿಸಿ ತಣಿಸುವ ‘ಯುವ ಸಂಭ್ರಮ’ ಸೆಪ್ಟಂಬರ್ 15ರಿಂದ ಆರಂಭವಾಗಲಿದೆ. ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಯುವಸಂಭ್ರಮ ಕಾರ್ಯಕ್ರಮವನ್ನು ಸೆ.15 ರಿಂದ 8 ದಿನಗಳ ಕಾಲ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಜಿಲ್ಲಾಡಳಿತದಿಂದ ಸಿದ್ದತೆ ನಡೆಸಿದೆ. ಈ ಬಾರಿ ನೃತ್ಯ ಕಾರ್ಯಕ್ರಮದೊಂದಿಗೆ ಸ್ಕಿಟ್, ಏಕ ಪಾತ್ರಾಭಿನಯ ಹಾಗೂ ಬ್ಯಾಂಡ್ ಮ್ಯೂಸಿಕ್‌ಗೆ ಅವಕಾಶ ನೀಡಲಾಗಿದ್ದು, ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸಲು ಉದ್ದೇಶದಿಂದ ನೃತ್ಯದ ಜೊತೆಗೆ ಇತರೆ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ.

ದಸರೆಯ ರಂಗೇರಿಸಲು ಸೆ.15 ರಿಂದ ಆರಂಭವಾಗಲಿದೆ ‘ಯುವ ಸಂಭ್ರಮ’ Read More »

ಮೈಸೂರು ದಸರಾಗೆ ಸರ್ಕಾರದಿಂದ 18.50 ಕೋಟಿ ರೂ ಬಿಡುಗಡೆ

ಮೈಸೂರು: ಸೆಪ್ಟೆಂಬರ್ 29 ರಿಂದ ಆರಂಭವಾಗಲಿರುವ ನಾಡಹಬ್ಬ ಮೈಸೂರು ದಸರಾ ಉತ್ಸವ ಕಾರ್ಯಕ್ರಮಗಳ ವೆಚ್ಚಗಳಿಗಾಗಿ ರಾಜ್ಯ ಸರ್ಕಾರ 18.50 ಕೋಟಿ ರೂಪಾಯಿ ಹಣ ಬಿಡುಗಡೆಗೊಳಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬುಧವಾರ ಹಣ ಬಿಡುಗಡೆ ಸಂಬಂಧ ಸರ್ಕಾರಿ ಆದೇಶ ಹೊರಡಿಸಿದ್ದಾರೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ತಿಳಿಸಿದ್ದಾರೆ. ಮಂಡ್ಯ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಶ್ರೀರಂಗಪಟ್ಟಣ ಹಾಗೂ ಚಾಮರಾಜ ನಗರ ಜಿಲ್ಲೆಗಳಲ್ಲಿ ನಡೆಯುವ ದಸರಾ ಸಂಬಂಧಿತ ವೆಚ್ಚಗಳೂ ಇದರಲ್ಲಿ ಸೇರಿವೆ ಎಂದು ಅವರು

ಮೈಸೂರು ದಸರಾಗೆ ಸರ್ಕಾರದಿಂದ 18.50 ಕೋಟಿ ರೂ ಬಿಡುಗಡೆ Read More »

ಸೆ.29ರಿಂದ ಅ.13ರವರೆಗೆ ದಸರಾ ಫಲಪುಷ್ಪ ಪ್ರದರ್ಶನ

ಮೈಸೂರು: ದಸರಾ ಫಲಪುಷ್ಪ ಪ್ರದರ್ಶನವನ್ನು ಕರ್ಜನ್ ಪಾರ್ಕ್ ಆಶ್ರಯದಲ್ಲಿ ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ತೋಟಗಾರಿಕೆ ಸಂಘದ ವತಿಯಿಂದ ಸೆ.29ರಿಂದ ಅ.13ರವರೆಗೆ ಕುಪ್ಪಣ್ಣ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಸಾರ್ವಜನಿಕರು ಬೆಳೆಸಿರುವ ಆರ್ಕಿಡ್ಸ್, ಅಂಥೋರಿಯಂ, ಬೋನ್ಸಾಯಿ ಗಿಡಗಳನ್ನು ಉದ್ಯಾನವನದಲ್ಲಿ ಪ್ರದರ್ಶಿಸಲು ಅವಕಾಶವಿದ್ದು, ಸಂಘ ಸಂಸ್ಥೆಗಳು, ನಾಗರೀಕರು, ನರ್ಸರಿಯವರು ಸೆ.5ರೊಳಗೆ ತಮ್ಮ ಹೆಸರನ್ನು ಕರ್ಜನ್ ಪಾರ್ಕ್ ನಲ್ಲಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ.8970115883 ಸಂಪರ್ಕಿಸಬಹುದು.

ಸೆ.29ರಿಂದ ಅ.13ರವರೆಗೆ ದಸರಾ ಫಲಪುಷ್ಪ ಪ್ರದರ್ಶನ Read More »

ಸೆ.29ರಿಂದ ಅ.16ರವರೆಗೆ 2 ಕಡೆ ದಸರಾ ಆಹಾರ ಮೇಳ

ಮೈಸೂರು: ದಸರಾ ಮಹೋತ್ಸವ ಪ್ರಯುಕ್ತ ಜನಪ್ರಿಯ ಆಹಾರ ಮೇಳವನ್ನು ಸೆ.29ರಿಂದ ಅ.16ರವರೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ಮತ್ತು ಲಲಿತ್ ಮಹಲ್ ಹೋಟೆಲ್ ಪಕ್ಕದ ಮುಡಾ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ. ಆಹಾರ ಮೇಳದಲ್ಲಿ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ, ಟಿಬೇಟಿಯನ್, ಕಾಶ್ಮೀರಿ, ಪಂಜಾಬಿ, ರಾಜಸ್ಥಾನಿ, ಈಶಾನ್ಯ ಭಾರತ, ಆಂಧ್ರ, ಕೇರಳ, ತಮಿಳುನಾಡು, ಮರಾಠಿ ಶೈಲಿಯಲ್ಲಿನ ಸಸ್ಯಾಹಾರಿ ಮತ್ತು ಶಾಖಾಹಾರಿ ಆಹಾರ ಪದ್ಧತಿ ಇರಲಿದ್ದು ಚೈನೀಸ್, ಇಟಾಲಿಯನ್, ಫ್ರೆಂಚ್, ಆಫ್ರಿಕನ್, ಆಹಾರ ಪದ್ಧತಿಯಡಿಯಲ್ಲಿ ಆಹಾರ ತಯಾರಿಸುವ ಅಡುಗೆಗಳು, ಸಿರಿಧಾನ್ಯ, ಸಹಜ

ಸೆ.29ರಿಂದ ಅ.16ರವರೆಗೆ 2 ಕಡೆ ದಸರಾ ಆಹಾರ ಮೇಳ Read More »

ಅರ್ಜುನ ಅಂಡ್ ಟೀಂ ಗೆ ತೂಕ ಪರೀಕ್ಷೆ: ಈ ಬಾರಿಯು ನಾನೇ ಸ್ಟ್ರಾಂಗ್ ಎಂದ ಅರ್ಜುನ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2019 ಅಂಗವಾಗಿ ಇಂದು ಅರ್ಜುನ ನೇತೃತ್ವದ ಗಜಪಡೆಗೆ ತೂಕ ಪರೀಕ್ಷೆ ನಡೆಯಿತು. 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರುವ ಅರ್ಜುನ ಆನೆ ಈ ಬಾರಿಯು ತೂಕದಲ್ಲಿ ಮೊದಲ ಸ್ಥಾನ ಪಡೆದಿದ್ದು ಬರೋಬ್ಬರಿ 5800ಕೆಜಿ ಇದ್ದಾನೆ. ಕಳೆದ ವರ್ಷ 5650kg ತೂಕವಿದ್ದ ಕ್ಯಾಪ್ಟೆನ್ ಅರ್ಜುನ ಹೋದ ಬಾರಿಗಿಂತ 150 kg ತೂಕ ಹೆಚ್ಚಿಸಿಕೊಂಡಿದ್ದಾನೆ. ಪ್ರಸ್ತುತ ದಸರಾ ಆನೆಗಳ ತೂಕ. ಅರ್ಜುನ- 5,800 ವರಲಕ್ಷ್ಮಿ- 3,510 ಈಶ್ವರ- 3,995 ಧನಂಜಯ-

ಅರ್ಜುನ ಅಂಡ್ ಟೀಂ ಗೆ ತೂಕ ಪರೀಕ್ಷೆ: ಈ ಬಾರಿಯು ನಾನೇ ಸ್ಟ್ರಾಂಗ್ ಎಂದ ಅರ್ಜುನ Read More »

ಮೈಸೂರು ಅರಮನೆಯಲ್ಲಿ ಗಜಪಡೆಗೆ ಅದ್ದೂರಿ ಸ್ವಾಗತ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗಿಯಾಗಲು ಆಗಮಿಸಿದ ಗಜಪಡೆಯ ಮೊದಲ ತಂಡ ಅರಮನೆಯ ಜಯಮಾರ್ಥಾಂಡ ದ್ವಾರದಲ್ಲಿ ಸೋಮವಾರ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು. ಇದರೊಂದಿಗೆ ಮೈಸೂರು ನಗರದಲ್ಲಿ ದಸರಾ ಸಡಗರ, ಸಂಭ್ರಮ ಇಂದಿನಿಂದಲೇ ಗರಿಗೆದರಿದ್ದು, ದಸರಾ‌ ಮಹೋತ್ಸವಕ್ಕೆ ದಿನಗಣನೆಯೂ ಆರಂಭವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ, ಅನೆಗಳಿಗೆ ಪುಷ್ಪಾರ್ಚನೆ ಮಾಡಿ ಸ್ವಾಗತ ಕೋರಿದರು. ಆರ್ಜುನ ನೇತೃತ್ವದ ಆರು ಆನೆಗಳು ಇಂದು ಅರಮನೆಗೆ ಆಗಮಿಸಿವೆ. ಇದಕ್ಕು ಮೊದಲು ಅಶೋಕಪುರಂನ ಅರಣ್ಯ ಭವನದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಮಾಡಿ‌ ಆನೆಗಳನ್ನು ಬೀಳ್ಕೊಡಲಾಯಿತು. ಅರಣ್ಯ

ಮೈಸೂರು ಅರಮನೆಯಲ್ಲಿ ಗಜಪಡೆಗೆ ಅದ್ದೂರಿ ಸ್ವಾಗತ Read More »

ಅಮೆಜಾನ್‌ ಕಾಡಿನಲ್ಲಿ ಭಯಂಕರ ಕಾಡ್ಗಿಚ್ಚು

ನವದೆಹಲಿ: ವಿಶ್ವದ ಅತೀ ದೊಡ್ಡ ಮಳೆಕಾಡಾಗಿರುವ ಅಮೆಜಾನ್ ಅರಣ್ಯಪ್ರದೇಶದಲ್ಲಿ ಭೀಕರ ಕಾಡ್ಗಿಚ್ಚು ಹಬ್ಬಿದೆ. ಪ್ರಪಂಚದ 20% ಆಮ್ಲಜನಕವನ್ನು ಉತ್ಪಾದಿಸುವ ಅಮೆಜಾನ್ ಕಾಡುಗಳು ಕಳೆದ 18 ದಿನಗಳಿಂದ ಹೊತ್ತಿ ಉರಿಯುತ್ತಿದೆ. ಕಾಡ್ಗಿಚ್ಚಿನ ಬೆಂಕಿಯ ತೀವ್ರತೆ ಎಷ್ಟಿದೆ ಅಂದ್ರೆ, ಬಾಹ್ಯಾಕಾಶದಿಂದಲೂ ದಟ್ಟ ಹೊಗೆ ಕಾಣಿಸುತ್ತಿದೆ. ವಿಶ್ವದ ಅತೀ ದೊಡ್ಡ ಮಳೆಕಾಡಾಗಿರುವ ಅಮೆಜಾನ್, ಗ್ಲೋಬಲ್ ವಾರ್ಮಿಂಗನ್ನು ನಿಯಂತ್ರಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಸುಮಾರು ಮೂರು ಕೋಟಿ ಸಸ್ಯ-ಪ್ರಾಣಿ ಪ್ರಬೇಧಗಳನ್ನು ತನ್ನ ಒಡಳೊಳಗೆ ಬಚ್ಚಿಟ್ಟುಕೊಂಡಿರುವ ಅಮೆಜಾನ್ ಅರಣ್ಯ, ಒಂದು ಮಿಲಿಯನ್ ಬುಡಕಟ್ಟು ಜನರಿಗೆ

ಅಮೆಜಾನ್‌ ಕಾಡಿನಲ್ಲಿ ಭಯಂಕರ ಕಾಡ್ಗಿಚ್ಚು Read More »

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಗಜಪಯಣಕ್ಕೆ ಚಾಲನೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2019ರ ದಸರಾ ಗಜಪಯಣಕ್ಕೆ ಚಾಲನೆ ನಿಡಲಾಗಿದೆ. ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ವೀರನಹೊಸಹಳ್ಳಿ ಗ್ರಾಮದಲ್ಲಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಅರ್ಜುನ ನೇತೃತ್ವದ ಗಜಪಡೆಗೆ ಸಚಿವ ಆರ್.ಅಶೋಕ್ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಗಜಪಯಣಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಗಜಪಯಣದ ಮೊದಲ ತಂಡದಲ್ಲಿ ಕ್ಯಾಪ್ಟನ್ ಅರ್ಜುನ, ಅಭಿಮನ್ಯು, ವರಲಕ್ಷ್ಮಿ, ಧನಂಜಯ, ಈಶ್ವರ್ ಹಾಗೂ ವಿಜಯ ಆನೆಗಳು ಲಾರಿ ಮೂಲಕ ಮೈಸೂರಿನ ಅಶೋಕಪುರಂನ ಅರಣ್ಯ ಭವನಕ್ಕೆ ತೆರಳಿವೆ. ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಗಜಪಯಣಕ್ಕೆ ಚಾಲನೆ Read More »

ಎದೆಯ ಮೇಲೆ ಸುಧಾಮೂರ್ತಿ ಅವರ ಭಾವಚಿತ್ರವನ್ನ ಹಚ್ಚೆ ಹಾಕಿಸಿಕೊಂಡ ಮೈಸೂರಿನ ಯುವಕ

ಮೈಸೂರು: ಇತ್ತೀಚಿನ ದಿನಗಳಲ್ಲಿ ಹೆತ್ತವರನ್ನು ನಿರ್ಲಕ್ಷ್ಯ ತೋರುವ ಮಕ್ಕಳೇ ಹೆಚ್ಚು, ವಯಸ್ಸಾದ ಕೂಡಲೇ ತಾಯಿಯನ್ನ ನೋಡಿಕೊಳ್ಳಲು ಹಿಂಜರಿಯುವ ಮಕ್ಕಳು ಇದ್ದಾರೆ. ಆದರೇ ಮೈಸೂರಿನ ಯುವಕನೋರ್ವ ತನ್ನ ಹೆತ್ತ ತಾಯಿಗಿಂತ ಮಿಗಿಲಾಗಿ ಆ ತಾಯಿಯ ಭಾವಚಿತ್ರವನ್ನ ತನ್ನ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ. ಹೌದು ಆ ತಾಯಿ ಬೇರೆ ಯಾರು ಅಲ್ಲ ಇನ್ಫೋಸಿಸ್ ಸಂಸ್ಥಾಪಕಿ ಸುಧಾಮೂರ್ತಿ ಅವರು. ಸುಧಾಮೂರ್ತಿ ಅವರ ಹುಟ್ಟು ಹಬ್ಬದ ಅಂಗವಾಗಿ ತನ್ನ ತಾಯಿಯಂತಯೇ ಸುಧಾಮೂರ್ತಿಯರನ್ನ ಪ್ರೀತಿಸುವ ಮೈಸೂರಿನ ಜೆಸಿ ನಗರದ ನಿವಾಸಿ

ಎದೆಯ ಮೇಲೆ ಸುಧಾಮೂರ್ತಿ ಅವರ ಭಾವಚಿತ್ರವನ್ನ ಹಚ್ಚೆ ಹಾಕಿಸಿಕೊಂಡ ಮೈಸೂರಿನ ಯುವಕ Read More »

Scroll to Top