August 14, 2019

ಈ ಬಾರಿ ಸರಳವಾಗಿ ದಸರಾ ಹಬ್ಬ ಆಚರಿಸಲು ನಿರ್ಧಾರ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ, ಪ್ರವಾಹದಿಂದ ಅಪಾರ ಹಾನಿಯುಂಟಾದ ಕಾರಣ ಈ ಬಾರಿ ದಸರಾವನ್ನು ಸರಳ ದಸರವನ್ನಾಗಿ ಆಚರಿಸಿವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ದಸರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹ ಹಿನ್ನೆಲೆ ವಿಜೃಂಬಣೆಯ ದಸರಾ ಆಚರಣೆ ಬೇಡ. ಆದರೆ ದಸರಾದಲ್ಲಿ ವಸ್ತುಪ್ರದರ್ಶನ ಎಂದಿನಂತೆ ನಡೆಯಲಿವೆ. ಕಲಾವಿದರಿಗೆ ಯಾವುದೇ ತೊಂದರೆ ಇಲ್ಲ. ವಿದೇಶಿಯರಿಗೆ ವ್ಯವಸ್ಥೆಯಲ್ಲಿ ಲೋಪವಾಗಬಾರದು ಎಂದು ತಿಳಿಸಿದ್ದಾರೆ. ಹಾಗೆಯೇ ಸಾಂಪ್ರದಾಯಕ ದಸರಾ ಆಚರಣೆಗೆ ಯಾವುದೇ ತೊಂದರೆ ಇಲ್ಲ […]

ಈ ಬಾರಿ ಸರಳವಾಗಿ ದಸರಾ ಹಬ್ಬ ಆಚರಿಸಲು ನಿರ್ಧಾರ Read More »

ಜ್ವರದಿಂದ ಮೃತಪಟ್ಟ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆನೆ

ಉಡುಪಿ: ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಸೇರಿದ ಇಂದಿರಾ ಎಂಬ 62 ವರ್ಷದ ಆನೆ ಜ್ವರದಿಂದ ನಿನ್ನೆ ಮೃತಪಟ್ಟಿದೆ. ಕಳೆದ 20 ದಿನಗಳಿಂದ ಆನೆ ಜ್ವರದಿಂದ ಬಳಲುತ್ತಿತ್ತು ಎಂದು ತಿಳಿದುಬಂದಿದೆ. ಕಳೆದ 22 ವರ್ಷಗಳಿಂದ ದೇವಸ್ತಾನದ ಸೇವೆ ಸಲ್ಲಿಸುತ್ತಿದ್ದ ಇಂದಿರಾ ನಿಧನಕ್ಕೆ ಭಕ್ತರು ಕಂಬನಿ ಮೀಡಿದಿದ್ದಾರೆ. ಈ ಆನೆ ಕೊಲ್ಲೂರು ದೇವಸ್ತಾನಕ್ಕೆ ಕಟ್ಟಿಗೆ ಮಾರಾಟಗಾರನಿಂದ ಕೊಡುಗೆ ರೂಪದಲ್ಲಿ ಬಂದಿತ್ತು ಎನ್ನಲಾಗಿದೆ.

ಜ್ವರದಿಂದ ಮೃತಪಟ್ಟ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆನೆ Read More »

ನಾಳೆ ಅಭಿನಂದನ್ ವರ್ಧಮಾನ್ ಗೆ ‘ವೀರ ಚಕ್ರ’ ಪ್ರದಾನ

ನವದೆಹಲಿ: ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರಿಗೆ ಸ್ವಾತಂತ್ರ್ಯ ದಿನಾಚರಣೆಯಂದು ‘ವೀರ ಚಕ್ರ’ ಪುರಸ್ಕಾರ ನೀಡಿ ಗೌರವಿಸಲಾಗುವುದು. ಕಳೆದ ಫೆಬ್ರವರಿಯಲ್ಲಿ ಪುಲ್ವಾಮ ದಾಳಿ ಬಳಿಕ ಭಾರತದ ವಾಯುಗಡಿ ಉಲ್ಲಂಘಿಸಿ ನುಗ್ಗಲು ಯತ್ನಿಸಿದ್ದ ಪಾಕ್​ ಯುದ್ಧ ವಿಮಾನವನ್ನು ವಿಂಗ್​ ಕಮಾಂಡರ್​ ಅಭಿನಂದನ್​ ಹೊಡೆದುರುಳಿಸಿದ್ದರು. ಈ ವೇಳೆ ಪಾಕ್​ ವಿಮಾನ ಬೆನ್ನತ್ತಿ ಹೋದ ಅವರನ್ನು ಪಾಕಿಸ್ತಾನ ಸೇನೆ ಸೆರೆ ಹಿಡಿದಿತ್ತು. ಎರಡು ದಿನಗಳ ಬಳಿಕ ಅವರು ಬಿಡುಗಡೆಯಾಗಿದ್ದರು. ಇವರ ಸಾಹಸಕ್ಕೆ ಮೆಚ್ಚಿ ಕೇಂದ್ರ ಸರ್ಕಾರ ಸ್ವಾತಂತ್ರ್ಯ ದಿನಚಾರಣೆಯ

ನಾಳೆ ಅಭಿನಂದನ್ ವರ್ಧಮಾನ್ ಗೆ ‘ವೀರ ಚಕ್ರ’ ಪ್ರದಾನ Read More »

Scroll to Top