August 2019

ಇಸ್ರೋದಿಂದ ಹೊಸ ಮೈಲಿಗಲ್ಲು: ಚಂದ್ರನ ಕಕ್ಷೆ ಸೇರಿದ ಚಂದ್ರಯಾನ 2

ಬೆಂಗಳೂರು: ಚಂದ್ರನ ಅಧ್ಯಯನಕ್ಕೆ ಭಾರತ ಕಳುಹಿಸಿರುವ ಚಂದ್ರಯಾನ-2 ನೌಕೆ, ಯಶಸ್ವಿಯಾಗಿ ಚಂದ್ರನ ಕಕ್ಷೆ ತಲುಪಿದೆ ಎಂದು ಇಸ್ರೋ ಪ್ರಕಟಿಸಿದೆ. ಇಂದು ಭಾರತೀಯರ ಪಾಲಿಗೆ ವಿಶೇಷ ದಿನ. ತಿಂಗಳ ಹಿಂದೆ ಆಗಸಕ್ಕೆ ನೆಗೆದಿದ್ದ ಚಂದ್ರಯಾನ 2 ನೌಕೆ ಬೆಳಗ್ಗೆ 8.30-9.30ರ ಅವಧಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಚಂದ್ರಯಾನ 2 ಉಪಗ್ರಹವನ್ನು ಚಂದ್ರನ ಕಕ್ಷೆಗೆ ಸೇರಿಸುವ ಕೆಲಸ ಮಾಡಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್​ ತಿಳಿಸಿದ್ದರು. ಕಕ್ಷೆ ಬದಲಾವಣೆಯ ಮೊದಲ ಹಂತ ಇಂದು ನಡೆದಿದೆ. ಚಂದ್ರನ ಅಂಗಳಕ್ಕೆ […]

ಇಸ್ರೋದಿಂದ ಹೊಸ ಮೈಲಿಗಲ್ಲು: ಚಂದ್ರನ ಕಕ್ಷೆ ಸೇರಿದ ಚಂದ್ರಯಾನ 2 Read More »

ಮೈಸೂರು ದಸರಾ ಮಹೋತ್ಸವಕ್ಕೆ ಈ ವರ್ಷ 2 ಹೊಸ ಆನೆ

ಮೈಸೂರು: ಈ ವರ್ಷದ ದಸರಾ ಗಜಪಡೆ ತಂಡಕ್ಕೆ ಎರಡು ಹೊಸ ಆನೆಗಳು ಸೇರ್ಪಡೆಯಾಗಿವೆ. ಈಶ್ವರ ಮತ್ತು ಜಯಪ್ರಕಾಶ್‌ ಎಂಬ ಹೆಸರಿನ ಹೊಸ ಆನೆಗಳು ಜಂಬೂ ಸವಾರಿಯಲ್ಲಿ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕಲು ಸಜ್ಜಾಗಿವೆ. ಈಶ್ವರನಿಗೆ 49 ವರ್ಷವಾಗಿದ್ದು, ದುಬಾರೆ ಆನೆ ಶಿಬಿರದಲ್ಲಿ ಆಶ್ರಯ ಪಡೆದಿದ್ದಾನೆ. 57 ವರ್ಷದ ಜಯಪ್ರಕಾಶ್‌, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದಲ್ಲಿ (ಮೇಲುಕಾಮನ ಹಳ್ಳಿ)ದಿಂದ ಆಗಮಿಸಲಿದ್ದಾನೆ. ಇನ್ನು 12 ಆನೆಗಳ ಪೈಕಿ ಯಾವುದಕ್ಕಾದರೂ ಸಮಸ್ಯೆ ಉಂಟಾದರೆ ಹೆಚ್ಚುವರಿಯಾಗಿ ಆಯ್ಕೆಯಾಗಿರುವ ಲಕ್ಷ್ಮಿ

ಮೈಸೂರು ದಸರಾ ಮಹೋತ್ಸವಕ್ಕೆ ಈ ವರ್ಷ 2 ಹೊಸ ಆನೆ Read More »

ಚಾಮುಂಡಿ ಬೆಟ್ಟಕ್ಕೆ ರಾತ್ರಿ ವೇಳೆ ಪ್ರವೇಶ ನಿರ್ಬಂಧ

ಮೈಸೂರು: ಉಗ್ರರ ದಾಳಿ ಭೀತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹಲವು ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮೈಸೂರಿನ ಚಾಮುಂಡಿ ಬೆಟ್ಟವನ್ನೂ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದ್ದು ಬೆಟ್ಟಕ್ಕೆ ರಾತ್ರಿ ವೇಳೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ದಸರಾಗೆ ಕೇವಲ ಒಂದೂವರೆ ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಮೈಸೂರು ನಗರ ಹಾಗೂ ಚಾಮುಂಡಿ ಬೆಟ್ಟದಲ್ಲಿ ಈಗಿನಿಂದಲೇ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ನಾಡಹಬ್ಬ ದಸರಾ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ನಗರ ಹಾಗೂ ಚಾಮುಂಡಿ ಬೆಟ್ಟದಲ್ಲಿ ಅಗತ್ಯ ಕ್ರಮ

ಚಾಮುಂಡಿ ಬೆಟ್ಟಕ್ಕೆ ರಾತ್ರಿ ವೇಳೆ ಪ್ರವೇಶ ನಿರ್ಬಂಧ Read More »

ಮೈಸೂರು ದಸರಾ 2019: ದಸರಾ ಗಜಪಡೆಯ ಆಗಮನಕ್ಕೆ ದಿನಾಂಕ ನಿಗದಿ

ಮೈಸೂರು: ಮೈಸೂರಿನ ಪರಂಪರೆ ಹಾಗೂ ಇತಿಹಾಸವನ್ನು ಬಿಂಬಿಸುವ ವಿಶ್ವವಿಖ್ಯಾತ ದಸರಾ ಮಹೋತ್ಸವದ ಮುಖ್ಯ ಆಕರ್ಷಣೆ ಜಂಬೂಸವಾರಿ ಪಾಲ್ಗೊಳ್ಳಲಿರುವ ಗಜಪಡೆ ಆಗಮನಕ್ಕೆ ದಿನಾಂಕ ನಿಗದಿಯಾಗಿದೆ. ಗಜಪಡೆಯ ಮೊದಲ ತಂಡ ಆಗಸ್ಟ್ 22ಕ್ಕೆ ಕಾಡಿನಿಂದ ನಾಡಿನತ್ತ ಹೆಜ್ಜೆಯಿಡಲಿವೆ. ಹುಣಸೂರು ತಾಲ್ಲೂಕಿನ ವೀರನಹೊಸಳ್ಳಿಯಿಂದ ಮೊದಲ ತಂಡ ಮೈಸೂರು ಅರಮನೆಗೆ ಬರಲಿವೆ. ಈ ತಂಡದಲ್ಲಿ ಒಟ್ಟು ಆರು ಆನೆಗಳು ಬರಲಿದ್ದು ಕ್ಯಾಪ್ಟನ್ ಅರ್ಜುನನ ನೇತೃತ್ವದ ಆರು ಆನೆಗಳಿಗೆ ಗಣ್ಯರ ಸಮ್ಮುಖದಲ್ಲಿ ಪೂಜೆ ಸಲ್ಲಿಕೆ ಮಾಡಿ ಅರಣ್ಯ ಇಲಾಖೆ ಗಜಪಯಣಕ್ಕೆ ಚಾಲನೆ ನೀಡಲಿದ್ದಾರೆ.

ಮೈಸೂರು ದಸರಾ 2019: ದಸರಾ ಗಜಪಡೆಯ ಆಗಮನಕ್ಕೆ ದಿನಾಂಕ ನಿಗದಿ Read More »

ಈ ಬಾರಿ ಸರಳವಾಗಿ ದಸರಾ ಹಬ್ಬ ಆಚರಿಸಲು ನಿರ್ಧಾರ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ, ಪ್ರವಾಹದಿಂದ ಅಪಾರ ಹಾನಿಯುಂಟಾದ ಕಾರಣ ಈ ಬಾರಿ ದಸರಾವನ್ನು ಸರಳ ದಸರವನ್ನಾಗಿ ಆಚರಿಸಿವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ದಸರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹ ಹಿನ್ನೆಲೆ ವಿಜೃಂಬಣೆಯ ದಸರಾ ಆಚರಣೆ ಬೇಡ. ಆದರೆ ದಸರಾದಲ್ಲಿ ವಸ್ತುಪ್ರದರ್ಶನ ಎಂದಿನಂತೆ ನಡೆಯಲಿವೆ. ಕಲಾವಿದರಿಗೆ ಯಾವುದೇ ತೊಂದರೆ ಇಲ್ಲ. ವಿದೇಶಿಯರಿಗೆ ವ್ಯವಸ್ಥೆಯಲ್ಲಿ ಲೋಪವಾಗಬಾರದು ಎಂದು ತಿಳಿಸಿದ್ದಾರೆ. ಹಾಗೆಯೇ ಸಾಂಪ್ರದಾಯಕ ದಸರಾ ಆಚರಣೆಗೆ ಯಾವುದೇ ತೊಂದರೆ ಇಲ್ಲ

ಈ ಬಾರಿ ಸರಳವಾಗಿ ದಸರಾ ಹಬ್ಬ ಆಚರಿಸಲು ನಿರ್ಧಾರ Read More »

ಜ್ವರದಿಂದ ಮೃತಪಟ್ಟ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆನೆ

ಉಡುಪಿ: ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಸೇರಿದ ಇಂದಿರಾ ಎಂಬ 62 ವರ್ಷದ ಆನೆ ಜ್ವರದಿಂದ ನಿನ್ನೆ ಮೃತಪಟ್ಟಿದೆ. ಕಳೆದ 20 ದಿನಗಳಿಂದ ಆನೆ ಜ್ವರದಿಂದ ಬಳಲುತ್ತಿತ್ತು ಎಂದು ತಿಳಿದುಬಂದಿದೆ. ಕಳೆದ 22 ವರ್ಷಗಳಿಂದ ದೇವಸ್ತಾನದ ಸೇವೆ ಸಲ್ಲಿಸುತ್ತಿದ್ದ ಇಂದಿರಾ ನಿಧನಕ್ಕೆ ಭಕ್ತರು ಕಂಬನಿ ಮೀಡಿದಿದ್ದಾರೆ. ಈ ಆನೆ ಕೊಲ್ಲೂರು ದೇವಸ್ತಾನಕ್ಕೆ ಕಟ್ಟಿಗೆ ಮಾರಾಟಗಾರನಿಂದ ಕೊಡುಗೆ ರೂಪದಲ್ಲಿ ಬಂದಿತ್ತು ಎನ್ನಲಾಗಿದೆ.

ಜ್ವರದಿಂದ ಮೃತಪಟ್ಟ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆನೆ Read More »

ನಾಳೆ ಅಭಿನಂದನ್ ವರ್ಧಮಾನ್ ಗೆ ‘ವೀರ ಚಕ್ರ’ ಪ್ರದಾನ

ನವದೆಹಲಿ: ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರಿಗೆ ಸ್ವಾತಂತ್ರ್ಯ ದಿನಾಚರಣೆಯಂದು ‘ವೀರ ಚಕ್ರ’ ಪುರಸ್ಕಾರ ನೀಡಿ ಗೌರವಿಸಲಾಗುವುದು. ಕಳೆದ ಫೆಬ್ರವರಿಯಲ್ಲಿ ಪುಲ್ವಾಮ ದಾಳಿ ಬಳಿಕ ಭಾರತದ ವಾಯುಗಡಿ ಉಲ್ಲಂಘಿಸಿ ನುಗ್ಗಲು ಯತ್ನಿಸಿದ್ದ ಪಾಕ್​ ಯುದ್ಧ ವಿಮಾನವನ್ನು ವಿಂಗ್​ ಕಮಾಂಡರ್​ ಅಭಿನಂದನ್​ ಹೊಡೆದುರುಳಿಸಿದ್ದರು. ಈ ವೇಳೆ ಪಾಕ್​ ವಿಮಾನ ಬೆನ್ನತ್ತಿ ಹೋದ ಅವರನ್ನು ಪಾಕಿಸ್ತಾನ ಸೇನೆ ಸೆರೆ ಹಿಡಿದಿತ್ತು. ಎರಡು ದಿನಗಳ ಬಳಿಕ ಅವರು ಬಿಡುಗಡೆಯಾಗಿದ್ದರು. ಇವರ ಸಾಹಸಕ್ಕೆ ಮೆಚ್ಚಿ ಕೇಂದ್ರ ಸರ್ಕಾರ ಸ್ವಾತಂತ್ರ್ಯ ದಿನಚಾರಣೆಯ

ನಾಳೆ ಅಭಿನಂದನ್ ವರ್ಧಮಾನ್ ಗೆ ‘ವೀರ ಚಕ್ರ’ ಪ್ರದಾನ Read More »

ಕೆ.ಆರ್.ಎಸ್, ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ

ಮೈಸೂರು: ಮೈಸೂರು: ಕೆ.ಆರ್.ಎಸ್, ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ ಕಬಿನಿ ಜಲಾಶಯ (10-08-2019) ಗರಿಷ್ಠ ಮಟ್ಟ:-84 ಅಡಿ. ಇಂದಿನ ಮಟ್ಟ:-82.61 ಅಡಿ. ಕಳೆದ ವರ್ಷ ಇದೇ ದಿನ :-82.25 ಅಡಿ. ಒಳ ಹರಿವು – 112511 ಕ್ಯೂ. ಹೊರಹರಿವು:- 102083 ಕ್ಯೂ. ಕಳೆದ ವರ್ಷ ಇದೇ ದಿನ ಹೊರ ಹರಿವು 74871 ಕ್ಯೂ 2. ಕೆ.ಆರ್.ಎಸ್.ಜಲಾಶಯ (10-08-2019) ಗರಿಷ್ಠ ಮಟ್ಟ:-124 ಅಡಿ. ಇಂದಿನ ಮಟ್ಟ:-108 ಅಡಿ. ಕಳೆದ ವರ್ಷ ಇದೇ ದಿನ :-124.48 ಅಡಿ. ಒಳ

ಕೆ.ಆರ್.ಎಸ್, ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ Read More »

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕನ್ನಡಕ್ಕೆ 11 ರಾಷ್ಟ್ರ ಪ್ರಶಸ್ತಿ

ನವದೆಹಲಿ: 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿದ್ದು ಕನ್ನಡದ ನಾತಿಚರಾಮಿ ಚಿತ್ರ ಅತ್ಯುತ್ತಮ ಸೇರಿದಂತೆ 11 ವಿಭಾಗಗಳಲ್ಲಿ ರಾಷ್ಟ್ರ ಪ್ರಶಸ್ತಿ ಲಭಿಸಿದೆ ಪ್ರಶಸ್ತಿ ಬಾಚಿಕೊಂಡಿದೆ. ಈ ಬಾರಿ ಒಟ್ಟು ಒಟ್ಟು 31 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದೆ. ಕನ್ನಡಕ್ಕೆ ಈ ಸಲ ಹಲವಾರು ಪ್ರಶಸ್ತಿಗಳು ಸಿಕ್ಕಿವೆ. ಅತ್ಯುತ್ತಮ ಪ್ರಾದೇಶಿಕ ಸಿನಿಮಾ ಆಗಿ ಶ್ರುತಿ ಹರಿಹರನ್ ಅಭಿನಯದ ನಾಚಿಚರಾಮಿ ಹಾಗೂ ಅತ್ಯುತ್ತಮ ಆ್ಯಕ್ಷನ್ ಚಿತ್ರವಾಗಿ ಕೆಜಿಎಫ್ ಆಯ್ಕೆಯಾಗಿದೆ. ನಾತಿಚರಾಮಿಯ ಮಾಯಾವಿ ಮನವೆ ಗೀತೆಗೆ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿಗೆ ಪಾತ್ರವಾಗಿದೆ. ಪ್ರಶಸ್ತಿ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕನ್ನಡಕ್ಕೆ 11 ರಾಷ್ಟ್ರ ಪ್ರಶಸ್ತಿ Read More »

ಕೊಡಗಿನಲ್ಲಿ ಭೂಕುಸಿತ; ಮೂವರು ಸಾವು, ಇಬ್ಬರು ಮಣ್ಣಿನಡಿ ಸಿಲುಕಿರುವ ಶಂಕೆ

ಕೊಡಗು: ಕೊಡಗು ಜಿಲ್ಲೆಯಲ್ಲಿ ಮಹಾಮಳೆ ಮುಂದುವರೆದಿದ್ದು ಭೂ ಕುಸಿತಕ್ಕೆ ಮೂವರು ಬಲಿಯಾಗಿದ್ದಾರೆ. ಮಡಿಕೇರಿ ತಾಲೂಕಿನ ಭಾಗಮಂಡಲ ಸಮೀಪದ ಕೊರಂಗಾಲ ಬಳಿ ಈ ಘಟನೆ ನಡೆದಿದ್ದು ಭೂ ಕುಸಿತಕ್ಕೆ ಮೂವರು ಬಲಿಯಾಗಿದ್ದಾರೆ. ಇನ್ನು ಘಟನೆಯಲ್ಲಿ ಮತ್ತಿಬ್ಬರು ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು ಕೇಂದ್ರ ಸಚಿವ ಸದಾನಂದಗೌಡ ಮೃತರ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ. ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು ಹಲವೆಡೆ ಮುಳುಗಡೆ ಪ್ರದೇಶದಲ್ಲಿ ಸಿಲುಕಿದ ಜನರನ್ನು NDRF ತಂಡ, ಕೊಡಗು ಪೋಲಿಸರಿಂದ ರಕ್ಷಣೆ ಮಾಡುತಿದ್ದಾರೆ. ಈಗಾಗಲೆ 20ಕ್ಕೂ ಹೆಚ್ಚು

ಕೊಡಗಿನಲ್ಲಿ ಭೂಕುಸಿತ; ಮೂವರು ಸಾವು, ಇಬ್ಬರು ಮಣ್ಣಿನಡಿ ಸಿಲುಕಿರುವ ಶಂಕೆ Read More »

Scroll to Top