September 2019

ಅಕ್ಟೋಬರ್ 2 ರಂದು‌ ದಸರಾ ಏರ್ ಶೋ:ಭಾರತೀಯ ವಾಯುಪಡೆಯ ಸಾಹಸವನ್ನು ನೀವು ಕಣ್ತುಂಬಿಕೊಳ್ಳಿ

ಮೈಸೂರು: ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಇಂಡಿಯನ್ ಏರ್ ಫೋರ್ಸ್ ‌ಸಹಯೋಗದಲ್ಲಿ ಏರ್ ಶೋ ಆಯೋಜಿಸಲಾಗಿದ್ದು, ನಗರದ ಬನ್ನಿಮಂಟಪ ಮೈದಾನದಲ್ಲಿ ಅಕ್ಟೋಬರ್ 2 ರಂದು‌ ಬೆಳಿಗ್ಗೆ 11.30 ಕ್ಕೆ ಏರ್ ಶೋ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಮಾಹಿತಿ ನೀಡಿದ್ದಾರೆ. ಜಿಲ್ಲಾಧಿಕಾರಿಗಳ‌ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ‌ಮಾತನಾಡಿದ ಅವರು ನಗರದಲ್ಲಿ ‌ಏರ್ ಶೋ ನಡೆಸಲು ಸಕಲ ಸಿದ್ದತೆ ಮಾಡಿಕೊಂಡಿದ್ದು, ವೀಕ್ಷಕರು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಬರಬೇಕು ಎಂದು ತಿಳಿಸಿದರು. ಭಾರತೀಯ ವಾಯು ಪಡೆಯಿಂದ […]

ಅಕ್ಟೋಬರ್ 2 ರಂದು‌ ದಸರಾ ಏರ್ ಶೋ:ಭಾರತೀಯ ವಾಯುಪಡೆಯ ಸಾಹಸವನ್ನು ನೀವು ಕಣ್ತುಂಬಿಕೊಳ್ಳಿ Read More »

ಅ.1 ರಿಂದ ಪ್ರಾರಂಭವಾಗಲಿರುವ ಯುವ ದಸರಾ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ ನೋಡಿ

ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಅ.1ರಿಂದ 6 ರವರೆಗೆ 6ದಿನಗಳ ಕಾಲ ಯುವ ದಸರಾ ಕಾರ್ಯಕ್ರಮ ನಡೆಯಲಿದೆ. ಅ.1ರಂದು ಬಾಲಿವುಡ್ ಗಾಯಕ ಗುರು ರಾಂಧವ್ ಮತ್ತು ತಂಡ, ಅ.2ರಂದು ಬಾಲಿವುಡ್ ಗಾಯಕ ಮೋಹಿತ್ ಚೌಹಾಣ್ ಮತ್ತು ತಂಡ, ಅ.3ರಂದು ಬಾಲಿವುಡ್ ಖ್ಯಾತ ಗಾಯಕರಾದ ಮೊನಾಲಿ ಠಾಕೂರ್ ಮತ್ತು ತಂಡ, ಅ.4ರಂದು ಸ್ಯಾಂಡಲ್ ವುಡ್ ಗಾಯಕ ಸಂಜಿತ್ ಹೆಗಡೆ, ಚಂದನ್ ಶೆಟ್ಟಿ, ಮೀಡಿಯಾ ಸ್ಟೇಶನ್ ಅವರಿಂದ ಮನರಂಜನಾ ಕಾರ್ಯಕ್ರಮ, ಅ.5ರಂದು ಸ್ಯಾಂಡಲ್ ವುಡ್ ನೈಟ್ಸ್ ಕಾರ್ಯಕ್ರಮ, ಅ.6ರಂದು

ಅ.1 ರಿಂದ ಪ್ರಾರಂಭವಾಗಲಿರುವ ಯುವ ದಸರಾ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ ನೋಡಿ Read More »

ಯುವ ದಸರಾಗೆ ಬರಲಿದ್ದಾರೆ ‘ತೇರಿ ಮೇರಿ’ ಖ್ಯಾತಿಯ ರಾನು ಮೊಂಡಲ್‌

ಮೈಸೂರು: ‘ತೇರಿ ಮೇರಿ. ತೇರಿ ಮೇರಿ ಕಹಾನಿ’ ಎಂಬ ಗೀತೆಯನ್ನು ಹಾಡಿ ಬಾಲಿವುಡ್‌ನಲ್ಲಿಹೊಸ ಸೆನ್ಸೇಶನ್‌ ಹುಟ್ಟು ಹಾಕಿದ್ದ ರಾಣು ಮೊಂಡಲ್‌ ಈ ಬಾರಿಯ ಯುವ ದಸರಾದ ಪ್ರಮುಖ ಆಕರ್ಷಣೆ… ಮುಂಬಯಿನ ರೈಲ್ವೆ ನಿಲ್ದಾಣದಲ್ಲಿಭಿಕ್ಷೆ ಬೇಡುತ್ತಿದ್ದ ರಾಣು ಮೊಂಡಲ್‌ ಲತಾ ಮಂಗೇಶ್ಕರ್‌ ಅವರ ‘ಏಕ್‌ ಪ್ಯಾರ್‌ ಕಾ ನಗ್ಮಾ ಹೈ’ ಗೀತೆ ಹಾಡಿದ್ದನ್ನು ಯಾರೋ ಒಬ್ಬರು ರೆಕಾರ್ಡ್‌ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಯ ಬಿಟ್ಟಿದ್ದರು. ಮಧುರ ಧ್ವನಿಯಿದ್ದ ಆ ವಿಡಿಯೋ ವೈರಲ್‌ ಆಗುತ್ತಿದ್ದಂತೆ ರಾಣು ಮೊಂಡಲ್‌ ಅವರ ಬದುಕೇ

ಯುವ ದಸರಾಗೆ ಬರಲಿದ್ದಾರೆ ‘ತೇರಿ ಮೇರಿ’ ಖ್ಯಾತಿಯ ರಾನು ಮೊಂಡಲ್‌ Read More »

ಭಾರಿ ಮಳೆಗೆ ಅಂಬಾವಿಲಾಸ ಅರಮನೆಯ ಚಾವಣಿ ಕುಸಿತ

ಮೈಸೂರು: ನಗರದಾದ್ಯಂತ ಭಾನುವಾರ ರಾತ್ರಿಯಿಡೀ ಸುರಿದ ಮಳೆಗೆ ಇಲ್ಲಿನ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯ ಚಾವಣಿಯ ಒಂದು ಅಂಚು ಕುಸಿದಿದೆ. ನಾಡಹಬ್ಬಕ್ಕೆ ಕೆಲವೇ ದಿನಗಳಿದ್ದು ಬಿರುಸಿನ ಸಿದ್ಧತೆ ನಡೆಯುತ್ತಿರುವಾಗ ಹೀಗಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಸೋಮವಾರ ಬೆಳಿಗ್ಗೆ 9.30ರ ಅಂದಾಜಿಗೆ, ಸೆಸ್ಕ್‌ ಕಚೇರಿಯ ಹಿಂಬದಿ ಇರುವ ಶೌಚಾಲಯದ ಮೇಲಂತಸ್ತಿನ ಚಾವಣಿ ಕುಸಿದಿದ್ದು ಅರಮನೆಯ ಸಿಬ್ಬಂದಿ ಮಣ್ಣನ್ನು ತೆರವುಗೊಳಿಸಿದ್ದಾರೆ. ’ಅರಮನೆಯ ಚಾವಣಿ ಮತ್ತು ಗೋಡೆ ಕೆಲವೆಡೆ ಬಿರುಕು ಬಿಟ್ಟಿದ್ದು, ಅಲ್ಲೆಲ್ಲ ಪ್ಲಾಸ್ಟರ್‌ ಮಾಡಲಾಗಿದೆ. ಭಾನುವಾರ ಸುರಿದ ಮಳೆಯಿಂದಾಗಿ ಅರಮನೆಯ ಎಡಭಾಗದ ಚಾವಣಿಯಲ್ಲಿ

ಭಾರಿ ಮಳೆಗೆ ಅಂಬಾವಿಲಾಸ ಅರಮನೆಯ ಚಾವಣಿ ಕುಸಿತ Read More »

ನಿಮ್ಮ ಹೃದಯಕ್ಕೆ ಹತ್ತಿರವಾಗಿವಾಗುವ ‘ಲುಂಗಿ’ ಚಿತ್ರದ ಈ ಮುದ್ದಾದ ಹಾಡು ಕೇಳಿ

ಸಿನಿಮಾ: ಇತ್ತೀಚಿನ ದಿನಗಳಲ್ಲಿ ಮಂಗಳೂರು ಮೂಲದ ಹಲವಾರು ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿ ನೆಲೆಕಂಡುಕೊಳ್ಳಲು ಹವಣಿಸುತ್ತಿದ್ದಾರೆ. ಅಂಥಾ ಒಂದು ಹೊಸ ತಂಡ ಲುಂಗಿ ಎಂಬ ಚಿತ್ರ ತಂಡ. ಇಡೀ ಚಿತ್ರದಲ್ಲಿ ಮಂಗಳೂರು ಭಾಷೆ, ಸೊಗಡು ಮತ್ತು ಅಲ್ಲಿನ ಸಂಸ್ಕೃತಿ, ಆಚಾರ-ವಿಚಾರ ಇರುವಂತಹ ಚಿತ್ರವೊಂದು ಬಿಡುಗಡೆಗೆ ಸಜ್ಜಾಗಿದೆ. ಬಹುತೇಕ ಹೊಸಬರೇ ಸೇರಿ ಮಾಡಿರುವ “ಲುಂಗಿ’ ಎಲ್ಲವೂ ಅಂದುಕೊಂಡಂತೆ ನಡೆದರೆ ಸೆಪ್ಟೆಂಬರ್‌ನಲ್ಲಿ ತೆರೆಗೆ ಬರಲು ಅಣಿಯಾಗುತ್ತಿದೆ. ಇದೀಗ ಚಿತ್ರದ ಮುದ್ದಾದ ಹಾಡೊಂಡು ಬಿಡುಗಡೆಯಾಗಿದ್ದು ಅರ್ಮಾನ್ ಮಲ್ಲಿಕ್ ಕಂಠ ಸಿರಿಯಲ್ಲಿ ಮೂಡಿಬಂದಿರುವ ಹಾಡು

ನಿಮ್ಮ ಹೃದಯಕ್ಕೆ ಹತ್ತಿರವಾಗಿವಾಗುವ ‘ಲುಂಗಿ’ ಚಿತ್ರದ ಈ ಮುದ್ದಾದ ಹಾಡು ಕೇಳಿ Read More »

ತಾಲೀಮಿನ ವೇಳೆ ಕಾವೇರಿ ಆನೆಯ ಕಾಲಿಗೆ ಚುಚ್ಚಿದ ಮೊಳೆ

ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಕಾವೇರಿ ಆನೆಯ ಕಾಲಿಗೆ ಚೂಪಾದ ಮೊಳೆ ಯೊಂದು ಚುಚ್ಚಿದ ಘಟನೆ ನಿನ್ನೆ ನಡೆದಿದೆ. ದಸರಾ ಆನೆಗಳ ಉಸ್ತುವಾರಿ ಹೊತ್ತವರ ಅಜಾಗರೂಕತೆಯಿಂದಾಗಿ ಭಾನುವಾರ ಬೆಳಿಗ್ಗೆ ತಾಲೀಮಿಗೆ ಹೊರಡುವ ವೇಳೆ ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಬಳಿ ಕಾಲಿಗೆ ಮೊಳೆಯೊಂದು ಚುಚ್ಚಿದ್ದು, ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ಅದನ್ನು ತೆಗೆದು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ನಿತ್ಯವೂ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ದಸರಾ ಗಜಪಡೆಯ ಮೆರವಣಿಗೆ ತಾಲೀಮು ನಡೆಯುತ್ತಿದ್ದು, ನಿನ್ನೆ ಬೆಳಿಗ್ಗೆ ಬೆಳಿಗ್ಗೆ 7.25ರ ವೇಳೆಗೆ

ತಾಲೀಮಿನ ವೇಳೆ ಕಾವೇರಿ ಆನೆಯ ಕಾಲಿಗೆ ಚುಚ್ಚಿದ ಮೊಳೆ Read More »

ಸೆ. 21, 22ರಂದು ಚುಂಚನಕಟ್ಟೆಯಲ್ಲಿ ಕಾವೇರಿ ಜಲಪಾತೋತ್ಸವ

ಕೆ.ಆರ್‌.ನಗರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ತಾಲೂಕಿನ ಚುಂಚನಕಟ್ಟೆ ಹೋಬಳಿ ಕೇಂದ್ರದಲ್ಲಿ ಸೆ.21 ಮತ್ತು 22ರಂದು ಕಾವೇರಿ ಜಲಪಾತೋತ್ಸವ ನಡೆಯಲಿದೆ. ಕಾರ್ಯಕ್ರಮ ನಡೆಯುವ ಎರಡು ದಿನಗಳ ಕಾಲ ಅಂದಾಜು 25 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದ್ದು ಭರದ ಸಿದ್ಧತೆಗಳು ನಡೆಯುತ್ತಿವೆ. ಜಲಪಾತೋತ್ಸವ ವೀಕ್ಷಿಸಲು ಆಗಮಿಸುವ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾವೇರಿ ನದಿ ದಂಡೆಯಲ್ಲಿರುವ ಶ್ರೀರಾಮ ದೇವಾಲಯದ ಹಿಂಭಾಗ ಹೊಸದಾಗಿ ನಿರ್ಮಾಣ ಮಾಡಿರುವ ಕಾವೇರಿ ಜಲಪಾತೋತ್ಸವ ವೇದಿಕೆಗೆ ಬೃಹತ್‌ ಪೆಂಡಾಲ್‌ ನಿರ್ಮಾಣ ಮಾಡುತ್ತಿದ್ದು, ಇದರ ಜತೆಗೆ

ಸೆ. 21, 22ರಂದು ಚುಂಚನಕಟ್ಟೆಯಲ್ಲಿ ಕಾವೇರಿ ಜಲಪಾತೋತ್ಸವ Read More »

ಅಕ್ಟೋಬರ್ 2ರಂದು ದಸರಾ ಏರ್‌ ಶೋ

ಮೈಸೂರು: ಮೈಸೂರು ದಸರಾ ಉತ್ಸವದ ಅಂಗವಾಗಿ ಈ ಬಾರಿ ಬನ್ನಿಮಂಟಪದ ಮೈದಾನದಲ್ಲಿ ಅಕ್ಟೋಬರ್ 2ರಂದು ದಸರಾ ಏರ್‌ ಶೋ ನಡೆಯಲಿದೆ. ಈ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ಮಾಹಿತಿ ನೀಡಿದ್ದು, ಅಕ್ಟೋಬರ್ 2ಕ್ಕೆ ಏರ್ ಶೋ ಫಿಕ್ಸ್ ಆಗಿದೆ. ಈ ಬಗ್ಗೆ ಈಗಾಗಲೇ ರಕ್ಷಣಾ ಇಲಾಖೆಯೊಂದಿಗೆ ಮಾತುಕತೆ ಹಾಗೂ ಪತ್ರ ವ್ಯವಹಾರ ಮಾಡಲಾಗಿದೆ ಎಂದು ತಿಳಿಸಿದರು. ಅಕ್ಟೋಬರ್ 2ಕ್ಕೆ ಏರ್ ಶೋ ನಡೆಯಲಿದ್ದು, ಈ ಬಾರಿಯ ಏರ್ ಶೋ ನಲ್ಲಿ ನಡೆಯಲಿರುವ ಕಾರ್ಯಕ್ರಮಗಳನ್ನ ರಕ್ಷಣಾ

ಅಕ್ಟೋಬರ್ 2ರಂದು ದಸರಾ ಏರ್‌ ಶೋ Read More »

650ಕೆಜಿ ಭಾರದ ಮರದ ಅಂಬಾರಿ ಹೊರಿಸಿ ಅರ್ಜುನನಿಗೆ ತಾಲೀಮು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಹಿನ್ನಲೆ ಇಂದು (ಗುರುವಾರ) ಚಿನ್ನದ ಅಂಬಾರಿ ಹೊರುವ ಅರ್ಜುನ ಆನೆಗೆ ಮರದ ಅಂಬಾರಿ ಹೊರೆಸಿ ತಾಲೀಮು ನಡೆಲಾಗುತ್ತಿದೆ. ವಿಜಯದಶಮಿ ಜಂಬೂಸವಾರಿ ಮೆರವಣಿಗೆಯಲ್ಲಿ, ಸುಮಾರು 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಲಿರುವ ಅರ್ಜುನನಿಗೆ ಇಂದಿನಿಂದ ಸುಮಾರು 35O ಕೆ.ಜಿ. ತೂಕದ ಮರದ ಅಂಬಾರಿ, 3OO ಕೆಜಿ ತೂಕದಷ್ಟು ಮರಳಿನ ಮೂಟೆಗಳು ಸೇರಿದಂತೆ ಒಟ್ಟು 65O ಕೆಜಿ ತೂಕವನ್ನು ಕಟ್ಟಿ ತಾಲೀಮು ನಡೆಸಲಾಗಿದೆ. ಈ ಮೂಲಕ ಆನೆಗಳಿಗೆ ಅಂಬಾರಿ ಹೊರುವ

650ಕೆಜಿ ಭಾರದ ಮರದ ಅಂಬಾರಿ ಹೊರಿಸಿ ಅರ್ಜುನನಿಗೆ ತಾಲೀಮು Read More »

ಮೈಸೂರು ದಸರಾ ಪ್ರಯುಕ್ತ ಕೆಎಸ್‌ಆರ್‌ಟಿಸಿಯಿಂದ ವಿಶೇಷ ಟೂರ್ ಪ್ಯಾಕೇಜ್‌

ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ಮೈಸೂರು ದಸರಾ ಪ್ರಯುಕ್ತ ವಿಶೇಷ ಟೂರ್ ಪ್ಯಾಕೇಜ್‌ ಘೋಷಣೆ ಮಾಡಿದೆ. 2019ನೇ ಸಾಲಿನ ಮೈಸೂರು ದಸರಾ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 8ರ ಆಚರಣೆ ಮಾಡಲಾಗುತ್ತದೆ. ಇದರ ಬೆನ್ನಲೆ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 13ರ ತನಕ ಈ ಪ್ಯಾಕೇಜ್‌ನಲ್ಲಿ ಜನರು ಪ್ರವಾಸವನ್ನು ಕೈಗೊಳ್ಳಬಹುದಾಗಿದೆ. ಮೈಸೂರು ದಸರಾ ವೀಕ್ಷಣೆಗೆ ಬರುವ ಜನರು ಮೈಸೂರು ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಪ್ರವಾಸಿ ಪ್ಯಾಕೇಜ್‌ ಘೋಷಣೆ ಮಾಡಲಾಗಿದೆ. ಪ್ರಸ್ತುತ ಕಾರ್ಯಾಚರಣೆ

ಮೈಸೂರು ದಸರಾ ಪ್ರಯುಕ್ತ ಕೆಎಸ್‌ಆರ್‌ಟಿಸಿಯಿಂದ ವಿಶೇಷ ಟೂರ್ ಪ್ಯಾಕೇಜ್‌ Read More »

Scroll to Top