September 2019

ದಸರ ಪ್ರಯುಕ್ತ ಜಾಲಿ ಹೆಲಿಕಾಪ್ಟರ್ ರೈಡ್ ಆಯೋಜನೆ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನಲೆ ದಸರ ಪ್ರಯುಕ್ತ ಆಗಸದಲ್ಲಿ ಜಾಲಿ ರೈಡ್‍ ಆಯೋಜನೆ. ಹೆಲಿ ಟ್ಯೂರಿಸಂನ್ನು ಉತ್ತೇಜಿಸುವ ಹಾಗೂ ಎಲ್ಲರಗೂ ಹೆಲಿಕಾಪ್ಟರ್ ಪ್ರಯಾಣವನ್ನು ಪರಿಚಯಿಸುವ ನಿಟ್ಟಿನಲ್ಲಿ ದಸರಾ ಸಂದರ್ಭದಲ್ಲಿ ಈ ಜಾಲಿ ರೈಡ್ ಆಯೋಜನೆ ಮಾಡಲಾಗಿದೆ. ಚಾಮುಂಡಿ ಬೆಟ್ಟ, ಮೈಸೂರು ಅರಮನೆ, ಬಸ್ ನಿಲ್ದಾಣ, ಲಲಿತ ಮಹಲ್ ಪ್ಯಾಲೇಸ್, ಕುಕ್ಕರಹಳ್ಳಿ ಕೆರೆ, ರೈಲ್ವೆ ನಿಲ್ದಾಣ, ಜಗಮೋಹನ ಅರಮನೆ, ದಸರ ವಸ್ತು ಪ್ರದರ್ಶನ, ಕೆ.ಆರ್.ವೃತ್ತ ಸೇರಿದಂತೆ ಇನ್ನಿತರ ಸ್ಥಳಗಳನ್ನು ಆಗಸದಿಂದ ವೀಕ್ಷಸಬಹುದಾಗಿದೆ. ಸೆಪ್ಟಂಬರ್ 27 […]

ದಸರ ಪ್ರಯುಕ್ತ ಜಾಲಿ ಹೆಲಿಕಾಪ್ಟರ್ ರೈಡ್ ಆಯೋಜನೆ Read More »

ಮೈಸೂರು ದಸರಾ: ಇಂದಿನಿಂದ 10 ದಿನ ‘ಯುವ ಸಂಭ್ರಮ’

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರ-2019 ಮಹೋತ್ಸವದ ಅಂಗವಾಗಿ ಆಯೋಜಿಸಿರುವ ‘ ಯುವ ಸಂಭ್ರಮ ‘ ಕಾರ್ಯಕ್ರಮಕ್ಕೆ ಇಂದು ಚಾಲನೆ ಸಿಗಲಿದೆ. ಇಂದಿನಿಂದ ಸೆಪ್ಟೆಂಬರ್ 26ರ ವರೆಗೂ ಈ ಕಾರ್ಯಕ್ರಮ ನಡೆಯಲಿದೆ. ನಗರದ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ 10 ದಿನಗಳ ಕಾಲ ಯುವಸಂಭ್ರಮ ಕಾರ್ಯಕ್ರಮ ನಡೆಯಲಿದ್ದು, ಇಂದು ಸಂಜೆ 5:30ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಚಿತ್ರನಟ ಗೋಲ್ಡನ್ ಸ್ಟಾರ್ ಗಣೇಶ್ ನೆರವೇರಿಸುವರು. ಇದೇ ಮೊದಲ ಬಾರಿಗೆ ಹೆಚ್ಚು ಕಾಲೇಜುಗಳಿಗೆ ಭಾಗವಹಿಸಲು ಯುವಸಂಭ್ರಮ ಉಪ ಸಮಿತಿ ಅವಕಾಶ ನೀಡಿದ್ದು, ಈ

ಮೈಸೂರು ದಸರಾ: ಇಂದಿನಿಂದ 10 ದಿನ ‘ಯುವ ಸಂಭ್ರಮ’ Read More »

ಯುವ ದಸರಾ ಉದ್ಘಾಟಿಸಲು ಪಿ.ವಿ ಸಿಂಧು ಅವರಿಗೆ ಅಧಿಕೃತವಾಗಿ ಆಹ್ವಾನ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಭಾಗವಾಗಿ ನಡೆಯುವ ಯುವ ದಸರಾ ಮಹೋತ್ಸವಕ್ಕೆ ಬ್ಯಾಡ್ಮಿಂಟನ್​ ತಾರೆ ವಿಶ್ವಚಾಂಪಿಯನ್​ ಪಿ.ವಿ. ಸಿಂಧು ಚಾಲನೆ ನೀಡಲಿದ್ದಾರೆ. ಇದರ ಬೆನ್ನಲ್ಲೇ ಸಂಸದ ಪ್ರತಾಪ್​ ಸಿಂಹ ಅವರು ಕಾರ್ಯಕ್ರಮ ಉದ್ಘಾಟಿಸಲು ಆಗಮಿಸುವಂತೆ ಸಿಂಧು ಅವರನ್ನು ಅಧಿಕೃತವಾಗಿ ಆಹ್ವಾನಿಸಿದರು. ಅಕ್ಟೋಬರ್​ 1ರಂದು ಯುವ ದಸರಾ ಪ್ರಾರಂಭಗೊಳ್ಳಲಿದೆ. ಇದನ್ನು ಉದ್ಘಾಟಿಸಲು ಬರುವಂತೆ ಕೋರಿ ಸಿಎಂ ಬಿ.ಎಸ್​. ಯಡಿಯೂರಪ್ಪ ನಾಲ್ಕು ದಿನಗಳ ಹಿಂದೆ ಪತ್ರ ಬರೆದಿದ್ದರು. ಇದೀಗ ಮೈಸೂರು-ಕೊಡಗು ಸಂಸದ ಪ್ರತಾಪ್​ ಸಿಂಹ ಹಾಗೂ ಮೈಸೂರು ಜಿಲ್ಲಾ ಪೊಲೀಸ್​

ಯುವ ದಸರಾ ಉದ್ಘಾಟಿಸಲು ಪಿ.ವಿ ಸಿಂಧು ಅವರಿಗೆ ಅಧಿಕೃತವಾಗಿ ಆಹ್ವಾನ Read More »

ದಸರಾ ಆನೆಗಳಿಗೆ ಸಿಡಿಮದ್ದಿನ ತಾಲೀಮು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆ ಇಂದು ಆನೆ ಮತ್ತು ಕುದುರೆಗಳಿಗೆ ಸಿಡಿಮದ್ದಿನ ತಾಲೀಮು ನೀಡಲಾಯ್ತು. ಅರಮನೆ ಆವರಣದ ಪಾರ್ಕಿಂಗ್ ಸ್ಥಳದಲ್ಲಿ, ರಾಜ್ಯ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅವರ ನೇತೃತ್ವದಲ್ಲಿ ತಾಲೀಮನ್ನ ನಡೆಸಲಾಯಿತು. ಮೊದಲ ಹಂತದ ಸಿಡಿ ಮದ್ದು ತಾಲೀಮು ಇದಾಗಿದ್ದು, 6 ಪಿರಂಗಿ ಬಳಕೆ ಮಾಡಲಾಗಿತ್ತು. 11 ಆನೆ, 25 ಕುದುರೆಗಳು ಭಾಗುಯಾಗಿದ್ದವು. ಕ್ಯಾಪ್ಟನ್ ಅರ್ಜುನನ ನೇತೃತ್ವದಲ್ಲಿ ವಿಜಯಾ, ಧನಂಜಯ, ಗೋಪಿ, ದುರ್ಗಾಪರಮೇಶ್ವರಿ, ಜಯಪ್ರಕಾಶ್, ಲಕ್ಷ್ಮೀ, ಬಲರಾಮ, ಕಾವೇರಿ, ವಿಕ್ರಮ, ಈಶ್ವರ ಆನೆಗಳು ತಾಲೀಮಿನಲ್ಲಿ‌ಹಾಜರಿದ್ದವು. ಅಲ್ಲದೆ

ದಸರಾ ಆನೆಗಳಿಗೆ ಸಿಡಿಮದ್ದಿನ ತಾಲೀಮು Read More »

ಬೆಳ್ಳಂಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ಘರ್ಸಿಸಿದ ಜೆಸಿಬಿಗಳು: 250 ಅನಧಿಕೃತ ಅಂಗಡಿ ಮಳಿಗೆಗಳ ತೆರವು

ಮೈಸೂರು: ಇಂದು ಬೆಳ್ಳಂಬೆಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ ಜೆಸಿಬಿ ಘರ್ಜಿಸಿವೆ. ಚಾಮುಂಡಿ ಬೆಟ್ಟದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಅಂಗಡಿ ಮಳಿಗೆಗಳನ್ನು ತೆರವು ಮಾಡಲಾಗಿದೆ. ಬೆಟ್ಟದಲ್ಲಿ ಕಂದಾಯ ಇಲಾಖೆ, ಗ್ರಾಮ ಠಾಣಾ ಮತ್ತು ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ 100ಕ್ಕೂ ಅಧಿಕ ಅಂಗಡಿ ಮಳಿಗೆಗಳನ್ನು ಅಧಿಕಾರಿಗಳು ತೆರವುಗೊಳಿಸಿದರು. ದೇವಸ್ಥಾನ ಮುಂಭಾಗ ಸಾರ್ವಜನಿಕ ರಸ್ತೆ, ಸರ್ಕಾರಿ ಜಾಗದಲ್ಲಿದ್ದ ಅನಧಿಕೃತ ಅಂಗಡಿಗಳ ತೆರವುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಸೂಚನೆ ಮೇರೆಗೆ ತೆರವು ಕಾರ್ಯಾಚರಣೆ ಮಾಡಲಾಗಿದೆ. ಕಾರ್ಯಾಚರಣೆ ವೇಳೆ

ಬೆಳ್ಳಂಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ಘರ್ಸಿಸಿದ ಜೆಸಿಬಿಗಳು: 250 ಅನಧಿಕೃತ ಅಂಗಡಿ ಮಳಿಗೆಗಳ ತೆರವು Read More »

‘ಯುವ ಸಂಭ್ರಮ’ಕ್ಕೆ ದಿನಾಂಕ ನಿಗದಿ: ಗೊಲ್ಡನ್ ಸ್ಟಾರ್ ಗಣೇಶ್’ರಿಂದ ಉದ್ಘಾಟನೆ

ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನಲೆ ಯುವ ಸಮೂಹದ ಮನ ತಣಿಸುವ ‘ಯುವ ಸಂಭ್ರಮ’ ಕಾರ್ಯಕ್ರಮವು ಸೆ.17 ರಿಂದ 25 ರವರಗೆ ನಡೆಯಲಿದೆ. 9 ದಿನಗಳ ಕಾಲ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಗಂಗೋತ್ರಿ ಬಯಲು ರಂಗ ಮಂದಿರದಲ್ಲಿ ಕಾರ್ಯಕ್ರಮ ನಡೆಯುತ್ತದೆ. ಪ್ರತಿ ದಿನ ಸಂಜೆ 5:30 ರಿಂದ 10 :30 ರವರಗೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನಡೆಯಲಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ 278 ಕಾಲೇಜುಗಳು ಭಾಗಿಯಾಗುತ್ತಿವೆ. ಈ ಬಾರಿ ಉತ್ತರ ಕರ್ನಾಟಕ ಭಾಗದ

‘ಯುವ ಸಂಭ್ರಮ’ಕ್ಕೆ ದಿನಾಂಕ ನಿಗದಿ: ಗೊಲ್ಡನ್ ಸ್ಟಾರ್ ಗಣೇಶ್’ರಿಂದ ಉದ್ಘಾಟನೆ Read More »

ನಂಜನಗೂಡಿನಲ್ಲಿ 3 ಚಿರತೆ ಸಾವು: ವಿಷ ಹಾಕಿ ಕೊಂದಿರುವ ಶಂಕೆ

ಮೈಸೂರು: ಸತ್ತ ನಾಯಿಗಳನ್ನು ತಿಂದ ಮೂರು ಚಿರತೆಗಳು ಮೃತಪಟ್ಟ ಘಟನೆ ನಂಜನಗೂಡಿನಲ್ಲಿ ನಡೆದಿದೆ. ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದ ಸಾರ್ವಜನಿಕ ಆಸ್ಪತ್ರೆಯ ಹಿಂಬದಿಯಲ್ಲಿರುವ ಚೆನ್ನಬಸಪ್ಪ ಎಂಬವರ ಜಮೀನಿನಲ್ಲಿ ಈ ಘಟನೆ ನಡೆದಿದೆ. ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಓಂಕಾರ ಅರಣ್ಯ ವಲಯದಿಂದ ಹಲ್ಲರೆ ಗ್ರಾಮದತ್ತ ಆಗಮಿಸಿರುವ ಸುಮಾರು 10 ವರ್ಷದ ಹೆಣ್ಣು ಚಿರತೆಯ ಜೊತೆಗೆ 8 ತಿಂಗಳ, 2 ಹೆಣ್ಣು ಚಿರತೆ ಮರಿಗಳು ಸಾವನ್ನಪ್ಪಿವೆ. ಚಿರತೆ ಸತ್ತ ನಾಯಿಯನ್ನು ತಿಂದು ಸಾವನ್ನಪ್ಪಿದೆ. ನಾಯಿಗಳ ಹಾವಳಿ ತಪ್ಪಿಸಲು ಅವುಗಳಿಗೆ ವಿಷಾಹಾರ

ನಂಜನಗೂಡಿನಲ್ಲಿ 3 ಚಿರತೆ ಸಾವು: ವಿಷ ಹಾಕಿ ಕೊಂದಿರುವ ಶಂಕೆ Read More »

ಜಂಬೂಸವಾರಿಗೂ ಮೊದಲೇ ಕಾಡಿಗೆ ವಾಪಸ್ ತೆರಳಲಿದ್ದಾನೆ ಈಶ್ವರ

ಮೈಸೂರು: ದಸರಾ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸಿದ್ದ ಆನೆ ಈಶ್ವರನನ್ನು ಕಾಡಿನತ್ತ ವಾಪಸ್ ಕಳುಹಿಸುವ ಚಿಂತನೆ ನಡೆಸಲಾಗಿದೆ. ದುಬಾರೆ ಆನೆ ಶಿಬಿರದಿಂದ ಗಜಪಡೆಯ ಮೊದಲ ತಂಡದಲ್ಲಿ ದಸರೆಗೆಂದು ಈಶ್ವರ ಆಗಮಿಸಿದ್ದ. ಆತ ನಗರದ ವಾತವರಣಕ್ಕೆ ಹೊಂದಿಕೊಳ್ಳದ ಕಾರಣ ವಾಪಸ್ ಕಳುಹಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ದಸರೆಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮೈಸೂರು ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಆನೆಯ ಬಗ್ಗೆ ಆತಂಕ ಹೊರಹಾಕಿದ್ದರು. ಅಲ್ಲದೇ ಆನೆಯ ವರ್ತನೆ ಸಾರ್ವಜನಿಕರಿಂದಲೂ ದೂರುಗಳು ಬಂದ ಹಿನ್ನೆಲೆ ವಾಪಸ್ ಕಳಿಸಲು ನಿರ್ಧಾರ

ಜಂಬೂಸವಾರಿಗೂ ಮೊದಲೇ ಕಾಡಿಗೆ ವಾಪಸ್ ತೆರಳಲಿದ್ದಾನೆ ಈಶ್ವರ Read More »

ಇಂದು ಮೈಸೂರಿಗೆ ದಸರಾ ಗಜಪಡೆಯ 2ನೇ ತಂಡ ಆಗಮನ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಗಜಪಡೆಯ ಎರಡನೇ ತಂಡದ 8 ಆನೆ ಇಂದು ಸಂಜೆ ವಿವಿಧ ಕ್ಯಾಂಪ್ ಗಳಿಂದ ಮೈಸೂರು ಅರಮನೆ ಆವರಣಕ್ಕೆ ಆಗಮಿಸಲಿವೆ. ಇನ್ನು ಒಂದು ದಿನ ಮೊದಲೆ ಬಲರಾಮ ಆನೆ ಅರಮನೆ ಪ್ರವೇಶ ಮಾಡಿದ್ದು ನಿನ್ನೆ ತಿತಿಮತಿ ಶಿಬಿರದಿಂದ ಆಗಮಿಸಿದ್ದಾನೆ. ಉಳಿದಂತೆ 2ನೇ ತಂಡದಲ್ಲಿ ವಿಕ್ರಮ, ಗೋಪಿ, ಜಯಪ್ರಕಾಶ್‌, ಕಾವೇರಿ, ದುರ್ಗಾಪರಮೇಶ್ವರಿ ಮತ್ತು ಲಕ್ಷ್ಮಿ ಆನೆಗಳು ಆಗಮಿಸಲಿವೆ. ದುಬಾರೆ ಆನೆ ಶಿಬಿರದಿಂದ ಕಾವೇರಿ, ವಿಕ್ರಮ, ಗೋಪಿ, ಕೆ. ಗುಡಿ ಆನೆ ಶಿಬಿರದಿಂದ ದುರ್ಗಾಪರಮೇಶ್ವರಿ,

ಇಂದು ಮೈಸೂರಿಗೆ ದಸರಾ ಗಜಪಡೆಯ 2ನೇ ತಂಡ ಆಗಮನ Read More »

ಮೈಸೂರು ವಿಮಾನ ನಿಲ್ದಾಣಕ್ಕೆ ‘ಬೆಸ್ಟ್ ಡೆಕೊರೇಟೆಡ್ ಏರ್​ಪೋರ್ಟ್’ ಪ್ರಶಸ್ತಿ

ಮೈಸೂರು: ಅರಮನೆ ನಗರಿಯ ಅಂದಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಮೈಸೂರು ವಿಮಾನ ನಿಲ್ದಾಣಕ್ಕೆ ಬೆಸ್ಟ್ ಡೆಕೊರೇಟೆಡ್ ಏರ್​ಪೋರ್ಟ್ ಅವಾರ್ಡ್​ ದೊರೆತಿದೆ. ಭಾರತದ ಕ್ಯಾಟಗರಿ 3ಎ ವಿಮಾನ ನಿಲ್ದಾಣಗಳ ಪೈಕಿ ಮೈಸೂರಿಗೆ ಮೂರನೆಯ ಸ್ಥಾನ ದೊರೆತಿದೆ. ಸ್ವತಂತ್ರ್ಯೋತ್ಸವ ಸಂದರ್ಭದಲ್ಲಿ ವಿಮಾನ ನಿಲ್ದಾಣವನ್ನ ಸುಂದರವಾಗಿ ಅಲಂಕರಿಸಲಾಗಿತ್ತು. ಕೇಸರಿ, ಬಿಳಿ, ಹಸಿರುವ ಬಣ್ಣದ ವಿದ್ಯುತ್ ದೀಪಾಲಂಕಾರ ಹಾಗೂ ಬಣ್ಣದ ರಂಗೋಲಿಗಳಿಂದ ಸಿಂಗರಿಸಲಾಗಿತ್ತು. ಸದ್ಯ ಆಲ್ ಇಂಡಿಯಾ ಕಾಂಪಿಟೇಷನ್​ನಲ್ಲಿ ಮೈಸೂರಿನ ಏರ್ ಪೋರ್ಟ್​ಗೆ ಮೂರನೇ ಬಹುಮಾನ ದೊರೆತಿದೆ..

ಮೈಸೂರು ವಿಮಾನ ನಿಲ್ದಾಣಕ್ಕೆ ‘ಬೆಸ್ಟ್ ಡೆಕೊರೇಟೆಡ್ ಏರ್​ಪೋರ್ಟ್’ ಪ್ರಶಸ್ತಿ Read More »

Scroll to Top