October 2019

ಮೈಸೂರಿನ ನಾಲ್ವರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

ಮೈಸೂರು: 2019ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದ್ದು ಮೈಸೂರಿನ ನಾಲ್ವರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 64 ಮಂದಿ ಗಣ್ಯರು ಗೌರವಕ್ಕೆ ಭಾಜನರಾಗಿದ್ದಾರೆ. ಶಿಲ್ಪಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೈಸೂರಿನ ವಿ. ಎ ದೇಶಪಾಂಡೆ, ಯೋಗ ಕ್ಷೇತ್ರದಲ್ಲಿ ವಿಶ್ವದಾಖಲೆ ನಿರ್ಮಿಸಿದ ಕುಮಾರಿ ಖುಷಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಡಾ. ಕೆ ಚಿದಾನಂದಗೌಡರಿಗೆ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಎಚ್ ಕೆ ರಮಾನಾಥ್ ಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. ಈ ಸಾಲಿನ ರಾಜ್ಯೊತ್ಸವ ಪ್ರಶಸ್ತಿ ಪಟ್ಟಿಯನ್ನ ರಾಜ್ಯ […]

ಮೈಸೂರಿನ ನಾಲ್ವರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ Read More »

ಮೈಸೂರು-ಹೈದ್ರಾಬಾದ್‍ ನಡುವೆ ಮತ್ತೊಂದು ವಿಮಾನ ಸಂಚಾರ ಆರಂಭ

ಮೈಸೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಇಂಡಿಗೋ ವಿಮಾನ ಸಂಸ್ಥೆ ಮೈಸೂರು-ಹೈದ್ರಾಬಾದ್ ನಡುವೆ ವಿಮಾನ ಸಂಚಾರ ಆರಂಭಿಸಿದೆ. ಈ ವಿಮಾನ ಸಂಚಾರ ಮೈಸೂರು-ಮಂಡಕಳ್ಳಿ ವಿಮಾನ ನಿಲ್ದಾಣದಿಂದ ರಾತ್ರಿ ಆರಂಭಗೊಂಡಿದೆ. ಉಡಾನ್ ಯೋಜನೆಯಡಿ ಮೈಸೂರು ಮತ್ತು ಹೈದರಾಬಾದ್ ಅನ್ನು ಸಂಪರ್ಕಿಸುವ 2 ನೇ ವಿಮಾನ ಮೈಸೂರು -ಹೈದ್ರಾಬಾದ್ ಇಂಡಿಗೋ ವಿಮಾನಕ್ಕೆ ನಿನ್ನೆ ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿದರು. ಪ್ರತಿನಿತ್ಯ ಹೈದರಾಬಾದ್​ನಿಂದ ಸಂಜೆ 4.55ಕ್ಕೆ ಹೊರಟು 6.40ಕ್ಕೆ ಮೈಸೂರು ತಲುಪಲಿದೆ. ಹಾಗೇ ಮೈಸೂರಿನಿಂದ ಸಂಜೆ 7.40ಕ್ಕೆ ಹೊರಟು ರಾತ್ರಿ 9.15ಕ್ಕೆ

ಮೈಸೂರು-ಹೈದ್ರಾಬಾದ್‍ ನಡುವೆ ಮತ್ತೊಂದು ವಿಮಾನ ಸಂಚಾರ ಆರಂಭ Read More »

ಭಾರತೀಯ ಅಮೆರಿಕನ್ನರೊಂದಿಗೆ ಟ್ರಂಪ್ ದೀಪಾವಳಿ ಆಚರಣೆ

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಒವಲ್ ಕಚೇರಿಯಲ್ಲಿ ಭಾರತೀಯ ಅಮೆರಿಕನ್ನರೊಂದಿಗೆ ದೀಪಾವಳಿ ಆಚರಿಸಿ ಸಂಭ್ರಮಿಸಿದರು. ಒಂದು ದಿನ ಮುಂಚಿತವಾಗಿ, ಟ್ರಂಪ್ ಓವಲ್ ಕಚೇರಿಯಲ್ಲಿ ದೀಪಾವಳಿಯನ್ನು ಭಾರತೀಯ-ಅಮೆರಿಕನ್ನರ ಸಣ್ಣ ಗುಂಪಿನೊಂದಿಗೆ ಆಚರಿಸಿದರು. “ಅಮೆರಿಕಾದಾದ್ಯಂತ ದೀಪಾವಳಿಯನ್ನು ಆಚರಿಸುವುದು ನಮ್ಮ ರಾಷ್ಟ್ರದ ಪ್ರಮುಖ ಸಿದ್ಧಾಂತಗಳಲ್ಲಿ ಒಂದಾದ ಧಾರ್ಮಿಕ ಸ್ವಾತಂತ್ರ್ಯದ ಮಹತ್ವವನ್ನು ನೆನಪಿಸುತ್ತದೆ” ಎಂದು ಟ್ರಂಪ್ ಹೇಳಿದರು. “ದೀಪಾವಳಿ ಪ್ರಾರಂಭವಾಗುತ್ತಿದ್ದಂತೆ, ಮೆಲಾನಿಯಾ ಮತ್ತು ನಾನು ದೀಪಗಳ ಹಬ್ಬವನ್ನು ಆಚರಿಸುವವರಿಗೆ ಆಶೀರ್ವಾದ ಮತ್ತು ಸಂತೋಷದ ಆಚರಣೆಯನ್ನು ಬಯಸುತ್ತೇನೆ” ಎಂದು ಟ್ರಂಪ್ ಶ್ವೇತಭವನದ

ಭಾರತೀಯ ಅಮೆರಿಕನ್ನರೊಂದಿಗೆ ಟ್ರಂಪ್ ದೀಪಾವಳಿ ಆಚರಣೆ Read More »

4ನೇ ಬಾರಿಗೆ ವಿಜಯ್​ ಹಜಾರೆ ಟ್ರೋಫಿ ಮುಡಿಗೇರಿಸಿಕೊಂಡ ಕರ್ನಾಟಕ

ಬೆಂಗಳೂರು: ಇಂದು ಬೆಂಗಳೂರಿನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಗೆಲುವು ಸಾಧಿಸಿದ ಕರ್ನಾಟಕ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟ್ ಮಾಡಿದ ತಮಿಳುನಾಡು 49.5 ಓವರ್ ಗಳಲ್ಲಿ 252 ರನ್‍ಗಳಿಗೆ ಆಲೌಟ್ ಆಯ್ತು. ಈ ಮೊತ್ತವನ್ನು ಬೆನ್ನಟ್ಟುವ ಸಂದರ್ಭದಲ್ಲಿ 23 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 141 ರನ್‍ಗಳಿಸಿದಾಗ ಜೋರಾಗಿ ಮಳೆ ಸುರಿಯಲು ಆರಂಭವಾಯಿತು. ಮಳೆ ನಿಲ್ಲದ ಪರಿಣಾಮ ವಿ

4ನೇ ಬಾರಿಗೆ ವಿಜಯ್​ ಹಜಾರೆ ಟ್ರೋಫಿ ಮುಡಿಗೇರಿಸಿಕೊಂಡ ಕರ್ನಾಟಕ Read More »

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ರಾಜ್ಯದಲ್ಲಿ ಮತ್ತೆ ಭಾರಿ ಮಳೆ ಸಾಧ್ಯತೆ

ಬೆಂಗಳೂರು: ಅರಬ್ಬಿ ಸಮುದ್ರ ಮತ್ತು ಲಕ್ಷದ್ವೀಪದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾಯುಭಾರ ಕುಸಿತದಿಂದ ಕೇರಳ, ಕರ್ನಾಟಕ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರವು ಹೆಚ್ಚಿನ ಮಳೆ ಬೀಳುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಸೂಚನೆ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ರಾಜ್ಯದಲ್ಲಿ ಮತ್ತೆ ಭಾರಿ ಮಳೆ ಸಾಧ್ಯತೆ Read More »

ಅರಮನೆಯ ಸ್ಟ್ರಾಂಗ್‌ರೂಮ್‌ ಸೇರಿದ ರತ್ನ ಖಚಿತ ಸಿಂಹಾಸನ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆ ನೆಲಮಾಳಿಗೆಯಿಂದ ದರ್ಬಾರ್‌ ಹಾಲ್‌ಗೆ ತಂದು ಜೋಡಿಸಲಾಗಿದ್ದ ರತ್ನ ಖಚಿತ ಸಿಂಹಾಸನವನ್ನು ಸೂಕ್ತ ಪೊಲೀಸ್‌ ಬಂದೋಬಸ್ತ್ ನಲ್ಲಿ ಸ್ಟ್ರಾಂಗ್‌ ರೂಂಗೆ ಸಾಗಿಸಲಾಗಿದೆ. ಬುಧವಾರ ರತ್ನ ಖಚಿತ ಸಿಂಹಾಸನದ ಅವರೋಹಣ ಕಾರ್ಯಕ್ರಮ ನಡೆದಿದ್ದು, ಅರಮನೆ ಕನ್ನಡಿ ತೊಟ್ಟಿಯಲ್ಲಿ ಬೆಳಿಗ್ಗೆ ಗಣಪತಿ ಹೋಮ, ಚಾಮುಂಡಿ ಪೂಜೆ, ಶಾಂತಿ ಹೋಮ ನೆರವೇರಿಸಲಾಯಿತು. ಬಳಿಕ ದರ್ಬಾರ್‌ ಹಾಲ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿ ಕಂಗೊಳಿಸುತ್ತಿದ್ದ ಸಿಂಹಾಸನ ವನ್ನು ಮೊದಲಿಗೆ 14 ಬಿಡಿ

ಅರಮನೆಯ ಸ್ಟ್ರಾಂಗ್‌ರೂಮ್‌ ಸೇರಿದ ರತ್ನ ಖಚಿತ ಸಿಂಹಾಸನ Read More »

ಇತಿಹಾಸದ ಪುಟ ಸೇರಿತು ಮಹಾತ್ಮ ಗಾಂಧೀಜಿ ಉದ್ಘಾಟಿಸಿದ್ದ ಮೈಸೂರಿನ ಕೆ.ಆರ್ ಮಿಲ್ ಕಾರ್ಖಾನೆ

ಮೈಸೂರು: ಇತಿಹಾಸದ ಪುಟಗಳಲ್ಲಿ ತನ್ನದೇ ಆತ ವಿಶೇಷ ಚಾಪು ಮೂಡಿಸಿದ್ದ ಮೈಸೂರಿನ ಹೆಮ್ಮೆಯ ಕೆ.ಆರ್.ಮಿಲ್ ಕಾರ್ಖಾನೆ (ಕೃಷ್ಣರಾಜೇಂದ್ರ ಬಟ್ಟೆ ಗಿರಣಿ) ಇನ್ನು ಕೇವಲ ನೆನಪು ಮಾತ್ರ. ಹೌದು. ಅಭಿವೃದ್ದಿ ಹೆಸರಲ್ಲಿ ಮೈಸೂರಿನ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯಬೇಕಿದ್ದ ಕೆ.ಆರ್.ಮಿಲ್ ಕಾರ್ಖಾನೆಯನ್ನು ನೆಲಸಮ ಮಾಡಲಾಗಿದೆ. ಬೆಂಗಳೂರು ಮತ್ತು ಮೈಸೂರು ನಡುವೆ ವಾಹನ ಸಂಚಾರ ದಟ್ಟಣೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 275ನ್ನು 10 ಲೇನ್‌ಗಳಿಗೆ ವಿಸ್ತರಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಇದಕ್ಕಾಗಿ ಭೂ ಸ್ವಾದೀನ ಮಾಡಕೊಂಡು ರಸ್ತೆ

ಇತಿಹಾಸದ ಪುಟ ಸೇರಿತು ಮಹಾತ್ಮ ಗಾಂಧೀಜಿ ಉದ್ಘಾಟಿಸಿದ್ದ ಮೈಸೂರಿನ ಕೆ.ಆರ್ ಮಿಲ್ ಕಾರ್ಖಾನೆ Read More »

ಮೈಸೂರಿನ ತಾಯಿ-ಮಗನ ಪ್ರೀತಿಗೆ ಮೆಚ್ಚಿ ಭರ್ಜರಿ ಗಿಫ್ಟ್ ನೀಡಿದ ಆನಂದ್ ಮಹೀಂದ್ರಾ..!

ಮೈಸೂರು: ಉದ್ಯಮದ ಜೊತೆ ಜೊತೆಯಲ್ಲೇ ಸದಾ ಒಂದಿಲ್ಲೊಂದು ಮಾನವೀಯ ಕಾರ್ಯಗಳಿಂದ ಗುರುತಿಸಿಕೊಳ್ಳುವ ಮಹೀಂದ್ರಾ ಕಂಪನಿಯ ಮುಖ್ಯಸ್ಥ, ಉದ್ಯಮಿ ಆನಂದ್ ಮಹೀಂದ್ರಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ತನ್ನ ವೃದ್ಧ ತಾಯಿಯನ್ನು ಹಳೆ ಸ್ಕೂಟರಿನಲ್ಲಿ ಕುಳ್ಳರಿಸಿಕೊಂಡು ದೇಶದ ಪವಿತ್ರ ಸ್ಥಳಗಳಿಗೆ ತೀರ್ಥಯಾತ್ರೆ ಮಾಡಿಸುತ್ತಿರುವ ಮೈಸೂರಿನ ನಿವಾಸಿಗೆ ಆನಂದ್ ಮಹೀಂದ್ರಾ ಅವರು ಭರ್ಜರಿ ಉಡುಗೊರೆಯನ್ನು ನೀಡಿದ್ದಾರೆ. ಕೃಷ್ಣ ಕುಮಾರ್ ಹಾಗೂ ಅವರ ತಾಯಿ ರತ್ನಮ್ಮ ಅವರ ತೀರ್ಥಯಾತ್ರೆಯ ಕಥೆಯನ್ನು ಕೇಳಿದ ಆನಂದ್ ಮಹೀಂದ್ರಾ ಅವರು, ಅಮ್ಮ-ಮಗನಿಗೆ ಕೆಯುವಿ 100 ಎನ್‍ಎಕ್ಸ್ಟಿ ಕಾರನ್ನು

ಮೈಸೂರಿನ ತಾಯಿ-ಮಗನ ಪ್ರೀತಿಗೆ ಮೆಚ್ಚಿ ಭರ್ಜರಿ ಗಿಫ್ಟ್ ನೀಡಿದ ಆನಂದ್ ಮಹೀಂದ್ರಾ..! Read More »

ಮಾಜಿ ಸಚಿವ ಡಿಕೆಶಿಗೆ ಷರತ್ತುಬದ್ದ ಜಾಮೀನು ಮಂಜೂರು

ನವದೆಹಲಿ: ಅಕ್ರಮ ಆಸ್ತಿ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿ ಕೆ ಶಿವಕುಮಾರ್​ಗೆ ದೆಹಲಿ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದೆ. ಜಾಮೀನು ಅರ್ಜಿಗೆ ಸಂಬಂಧಪಟ್ಟಂತೆ ದೆಹಲಿ ಹೈಕೋರ್ಟ್ ನ್ಯಾಯಾಧೀಶ ಸುರೇಶ್ ಕುಮಾರ್ ಕೈಟಾ ಅವರು ತೀರ್ಪನ್ನು ಪ್ರಕಟಿಸಿದ್ದಾರೆ. ಅನಾರೋಗ್ಯದ ಕಾರಣಗಳಿಂದ ಜಾಮೀನು ಮಂಜೂರು ಮಾಡಲಾಗಿದ್ದು, 25 ಲಕ್ಷ ಬಾಂಡ್, ಪಾಸ್ ಪೋರ್ಟ್ ಒಪ್ಪಿಸಬೇಕು, ದೇಶ ಬಿಟ್ಟು ಹೋಗುವಂತಿಲ್ಲ ಹಾಗೂ ತನಿಖೆಗೆ ಸಹಕರಿಸಬೇಕು ಎಂದು ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ. ಡಿ.ಕೆ. ಶಿವಕುಮಾರ್​ ಪರ ಹಿರಿಯ ವಕೀಲ

ಮಾಜಿ ಸಚಿವ ಡಿಕೆಶಿಗೆ ಷರತ್ತುಬದ್ದ ಜಾಮೀನು ಮಂಜೂರು Read More »

Scroll to Top