October 2019

ಮೈಸೂರಿನಲ್ಲಿ ಮುಂದಿನ ಐದು ದಿನ ಭಾರೀ ಮಳೆ ಸಾಧ್ಯತೆ!

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಮುಂದಿನ ಐದು ದಿನಗಳಲ್ಲಿ ಭಾರೀ ಮಳೆ ಸಾಧ್ಯತೆ ಇದೆ ಎಂದು ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗ ತಿಳಿಸಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಈ ವಾರದ ಮುನ್ಸೂಚನೆಯಂತೆ ಮೈಸೂರು ಜಿಲ್ಲೆಯಲ್ಲಿ 23-10- 2019 ರಿಂದ 27-10-2019 ವರೆಗೆ ಮೋಡ ಕವಿದ ವಾತಾವರಣವಿದ್ದು, ಭಾರೀ ಮಳೆ ಬರುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 28-29ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ಉಷ್ಣಾಂಶ 19ಡಿಗ್ರಿ ಸೆಲ್ಶಿಯಸ್ ವರೆಗೆ ದಾಖಲಾಗುವ ಸಾಧ್ಯತೆಯಿದೆ. ಬೆಳಗಿನ ಗಾಳಿಯ ತೇವಾಂಶ ಶೇಕಡ 86-87ರವರೆಗೆ […]

ಮೈಸೂರಿನಲ್ಲಿ ಮುಂದಿನ ಐದು ದಿನ ಭಾರೀ ಮಳೆ ಸಾಧ್ಯತೆ! Read More »

ಮಳೆಯಿಂದಾಗಿ ಕುಸಿದ ಚಾಮುಂಡಿ ಬೆಟ್ಟದ ರಸ್ತೆ

ಮೈಸೂರು: ಕಳೆದರೆಡು ದಿನಗಳಿಂದ ಸಾಂಸ್ಕೃತಿಕ ನಗರಿಯಲ್ಲಿ ಸುರಿಯುತ್ತಿರುವ ಮಳೆಗೆ ಚಾಮುಂಡಿ ಬೆಟ್ಟದಲ್ಲಿನ ರಸ್ತೆ ಕುಸಿದಿದೆ. ಚಾಮುಂಡಿ ಬೆಟ್ಟದಿಂದ ನಂದಿ ವಿಗ್ರಹದ ಬಳಿ ಹೋಗುವ ಮಾರ್ಗದ ತಡೆಗೋಡೆ ಕುಸಿದಿದೆ ಚಾಮುಂಡಿ ಬೆಟ್ಟದಿಂದ ನಂದಿ ವಿಗ್ರಹದ ಬಳಿ ಹೋಗುವ ಮಾರ್ಗ ಮಧ್ಯೆ ಕೆಲವೆಡೆ ತಡೆಗೋಡೆ ನಿರ್ಮಿಸಲಾಗಿದ್ದು, ಅದರಲ್ಲಿ ಒಂದು ಕಡೆ ತಡೆಗೋಡೆ ಕುಸಿದಿದೆ. ತಡೆಗೋಡೆ ಕುಸಿದ ಪರಿಣಾಮ ವಾಹನ ಸವಾರರಿಗೆ, ವಾಹನ ಚಾಲಕರಿಗೆ ನಿಧಾನ ಗತಿಯಲ್ಲಿ ವಾಹನ ಚಲಾಯಿಸುವಂತೆ ಪೊಲೀಸರು ತಿಳಿಸಿದ್ದಾರೆ. ತಡೆಗೋಡೆ ಕುಸಿತಗೊಂಡ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕೆ.ಆರ್.ಠಾಣೆಯ

ಮಳೆಯಿಂದಾಗಿ ಕುಸಿದ ಚಾಮುಂಡಿ ಬೆಟ್ಟದ ರಸ್ತೆ Read More »

SSLC ಅಂತಿಮ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಪ್ರಸಕ್ತ ವರ್ಷದ SSLC (10ನೇ ತರಗತಿ) ಪರೀಕ್ಷಾ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ. 2020 ಮಾರ್ಚ್ 20 ರಿಂದ ಏಪ್ರಿಲ್ 3 ವರೆಗೆ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 9ರಿಂದ ಮಧ್ಯಾಹ್ನ 12.45 ವರಗೆ ಪರೀಕ್ಷೆಗಳು ನಡೆಯಲಿವೆ. ಪ್ರೌಢ ಶಿಕ್ಷಣಾ ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿರುವ ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ನವೆಂಬರ್ 19ರ ವರೆಗೆ ಅವಕಾಶ ನೀಡಲಾಗಿದೆ. ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಬೇಕಾದರೆ, ನೇರವಾಗಿ ಕರ್ನಾಟಕ ಶಿಕ್ಷಣಾ ಮಂಡಳಿ ಇಲಾಖೆಗೆ

SSLC ಅಂತಿಮ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ Read More »

ದುಬೈ ಕನ್ನಡಿಗರಿಂದ ಇನ್ಫೋಸಿಸ್ ಸುಧಾಮೂರ್ತಿಗೆ ‘ಕನ್ನಡ ರತ್ನ’ ಪ್ರಶಸ್ತಿ

ಬೆಂಗಳೂರು: ದುಬೈನಲ್ಲಿ ವಾಸವಾಗಿರು ಅನಿವಾಸಿ ಕನ್ನಡಿಗರು ನೀಡುವ ಕನ್ನಡ ರತ್ನ ಪ್ರಶಸ್ತಿಗೆ ಈ ವರ್ಷ ಇನ್ಪೊಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಭಾಜನರಾಗಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದುಬೈ ಕನ್ನಡಿಗರ ಮುಖ್ಯ ಸಂಚಾಲಕ ಮಲ್ಲಿಕಾರ್ಜುನ ಗೌಡ ಕರ್ನಾಟಕದ ನಾಡ ಹಬ್ಬ ೬೪ ನೇ ‘ಕನ್ನಡ ರಾಜ್ಯೋತ್ಸವ’ ವನ್ನು ದುಬೈನಲ್ಲಿರುವ ಕನ್ನಡಿಗರು ಈ ಬಾರಿ ನವೆಂಬರ್ 08 ರಂದು ಆಚರಿಸುತ್ತಿದ್ದು, ಇದು 16ನೇ ದುಬೈ ಕನ್ನಡ ರಾಜ್ಯೋತ್ಸವವಾಗಿದ್ದು ಈ ಬಾರಿ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಅವರನ್ನು ಕನ್ನಡ

ದುಬೈ ಕನ್ನಡಿಗರಿಂದ ಇನ್ಫೋಸಿಸ್ ಸುಧಾಮೂರ್ತಿಗೆ ‘ಕನ್ನಡ ರತ್ನ’ ಪ್ರಶಸ್ತಿ Read More »

ತಲಕಾವೇರಿಯಲ್ಲಿ ಇಂದು ಮಧ್ಯರಾತ್ರಿ ತೀರ್ಥೋದ್ಭವ

ಕೊಡಗು: ಕನ್ನಡ ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ತಲಕಾವೇರಿಯ ಪವಿತ್ರ ಬ್ರಹ್ಮ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಪ್ರತ್ಯಕ್ಷವಾಗುತ್ತಾಳೆ. ಇಂದು ತಡರಾತ್ರಿ(ಅ.18) 12:59ಕ್ಕೆ ತೀರ್ಥೋದ್ಭವ ಆಗಲಿದ್ದು, ಬ್ರಹ್ಮಕುಂಡಿಕೆಯಿಂದ ಪವಿತ್ರ ತೀರ್ಥ ಉಕ್ಕಿ ಹರಿಯಲಿದೆ. ಪವಿತ್ರ ತೀರ್ಥೋದ್ಭವ ಕ್ಷೇತ್ರ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದೆ. ಈ ವಿಸ್ಮಯ ನೋಡಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ಇಂದು ಸಂಜೆ ಮಹಾಮಂಗಳಾರತಿ ನಂತರ ಭಕ್ತರಿಗೆ ಕ್ಷೇತ್ರಕ್ಕೆ ಪ್ರವೇಶ ಸಿಗಲಿದೆ. ನಾನಾ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಅರ್ಚಕರ ತಂಡ ಕೂಡ

ತಲಕಾವೇರಿಯಲ್ಲಿ ಇಂದು ಮಧ್ಯರಾತ್ರಿ ತೀರ್ಥೋದ್ಭವ Read More »

ಚಕ್ರವ್ಯೂಹದಲ್ಲಿ ನರಹಂತಕ ಹುಲಿ ಹೆಡೆಮುರಿ ಕಟ್ಟಿದ ಅಭಿಮನ್ಯು!

ಮೈಸೂರು: ಬಂಡೀಪುರ ಸುತ್ತಮುತ್ತಲಿನಲ್ಲಿ ಭಯದ ವಾತಾವರಣ ಮೂಡಿಸಿ ಇಬ್ಬರನ್ನು ಬಲಿ ಪಡೆದ ನರಹಂತಕ ವ್ಯಾಘ್ರನನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆಯ ಹೆಮ್ಮೆಯ ಹೀರೋ ‘ಅಭಿಮನ್ಯು’ ಮತ್ತೊಮ್ಮೆ ಮಿಂಚಿದ್ದು, ಥೇಟ್‌ ಚಕ್ರವ್ಯೂಹದ ರೀತಿಯಲ್ಲೇ ಕಾರ್ಯಾಚರಣೆ ನಡೆದಿರುವುದು ವಿಶೇಷ. ಐದು ದಿನಗಳ ಕಾರ್ಯಾಚರಣೆಯ ನಿರ್ಣಾಯಕ ಘಟ್ಟ ಅತ್ಯಂತ ಅಪಾಯಕಾರಿ ಹಾಗೂ ರೋಚಕವಾಗಿತ್ತು. ಇಲ್ಲೂಅಭಿಮನ್ಯು ತನ್ನ ಪ್ರತಾಪ ತೋರಿದ್ದು, ಕುರುಕ್ಷೇತ್ರದ ಅಭಿಮನ್ಯುವಿನ ಸಾಹಸದಂತೆಯೇ ಅಚ್ಚರಿ ಮೂಡಿಸಿದ್ದಾನೆ. ಅಭಿಮನ್ಯು ಆನೆಯ ಚಾಣಾಕ್ಷ್ಯತನ, ವೀರಗಾಥೆ ಹಾಗೂ ನೂರಾರು ಸಿಬ್ಬಂದಿಯ ಶ್ರಮದಿಂದಾಗಿ ನರಹಂತಕನನ್ನು ಜೀವಂತವಾಗಿ ಸೆರೆ ಹಿಡಿಯಲಾಯಿತು

ಚಕ್ರವ್ಯೂಹದಲ್ಲಿ ನರಹಂತಕ ಹುಲಿ ಹೆಡೆಮುರಿ ಕಟ್ಟಿದ ಅಭಿಮನ್ಯು! Read More »

ಭಾರತೀಯ ಮೂಲದ ಅಭಿಜಿತ್‌ ಬ್ಯಾನರ್ಜಿ ಸೇರಿ ಮೂವರಿಗೆ ಅರ್ಥಶಾಸ್ತ್ರ ನೊಬೆಲ್‌

ಸ್ಟಾಕ್​​ಹೋಮ್: ಭಾರತೀಯ ಮೂಲದ ಅಮೆರಿಕಾ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅವರಿಗೆ 2019ನೇ ಸಾಲಿನ ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿದೆ. ಅಭಿಜಿತ್ ಬ್ಯಾನರ್ಜಿ ಅವರು ಫ್ರೆಂಚ್ ಮೂಲದ ಎಸ್ತಾರ್ ಡ್ಯೂಪ್ಲೋ ಹಾಗೂ ಅಮೆರಿಕಾದ ಮೈಕಲ್ ಕ್ರೆಮರ್ ಜೊತೆ ಪ್ರಶಸ್ತಿ ಹಂಚಿಕೊಂಡಿದ್ದಾರೆ. “ಜಾಗತಿಕ ಬಡತನವನ್ನು ನಿವಾರಿಸುವ ಪ್ರಾಯೋಗಿಕ ವಿಧಾನ” ಎಂಬ ಗ್ರಂಥಕ್ಕೆ ನೊಬೆಲ್ ಪ್ರಶಸ್ತಿ ಪ್ರತಿಷ್ಟಿತ ನೊಬಲ್ ಪ್ರಶಸ್ತಿ ನೀಡಿಲಾಗಿದೆ. ಅಭಿಜಿತ್ ಅವರು ಭಾರತಲ್ಲಿ ಜನಿಸಿದ್ದು, ಸದ್ಯ ಅಮೆರಿಕಾದ ನಾಗರಿಕರಾಗಿದ್ದಾರೆ. ಅಮರ್ಥ್ಯ ಸೇನ್ ಅವರು 1998ರಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ

ಭಾರತೀಯ ಮೂಲದ ಅಭಿಜಿತ್‌ ಬ್ಯಾನರ್ಜಿ ಸೇರಿ ಮೂವರಿಗೆ ಅರ್ಥಶಾಸ್ತ್ರ ನೊಬೆಲ್‌ Read More »

ಹೊಸ ಪ್ರತಿಭೆಗಳ ‘ಲುಂಗಿ’ ಚಿತ್ರವನ್ನ ನೀವು ಒಮ್ಮೆ ನೋಡಲೇಬೇಕು..!

ಸಿನಿಮಾ: ಬಹುತೇಕ ಹೊಸ ಪ್ರತಿಭೆಗಳಿಂದ ಮೂಡಿಬಂದಿರುವ “ಲುಂಗಿ’ ಚಿತ್ರ ಈ ವಾರ ತೆರೆಗೆ ಬಂದಿದ್ದು ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ನಿರ್ದೇಶಕರಾದ ಅರ್ಜುನ್‌ ಲೂವಿಸ್ ಮತ್ತು ಅಕ್ಷಿತ್ ಶೆಟ್ಟಿ ಚೊಚ್ಚಲ ಪ್ರಯತ್ನದಲ್ಲೇ ತುಂಬ ಸರಳವಾದ ಕಥೆಯನ್ನು ಆಯ್ದುಕೊಂಡಿದ್ದಾರೆ. ಅದನ್ನು ಅಷ್ಟೇ ಸರಳ, ಸುಂದರವಾಗಿ ತೆರೆಗೆ ತಂದಿದ್ದಾರೆ. ಚಿತ್ರಕಥೆಯಲ್ಲಿ ಗಮನಾರ್ಹವಾದ ತಿರುವುಗಳಿಲ್ಲ. ಆದರೆ, ನೋಡಿಸಿಕೊಂಡು ಹೋಗುವ ಗುಣ ಸಿನಿಮಾಕ್ಕಿದೆ. ಸಂಪೂರ್ಣ ಮಂಗಳೂರು ಕನ್ನಡವನ್ನೇ ಪ್ರಧಾನವಾಗಿರಿಸಿಕೊಂಡು ಬರೆದಿರುವ ಸಂಭಾಷಣೆ ‘ಲುಂಗಿ’ ಚಿತ್ರದ ಮತ್ತೊಂದು ಹೈಲೈಟ್‌. ಕಾಡು, ಮರಗಳ ನಡುವೆ ಅಲ್ಲಲ್ಲಿ

ಹೊಸ ಪ್ರತಿಭೆಗಳ ‘ಲುಂಗಿ’ ಚಿತ್ರವನ್ನ ನೀವು ಒಮ್ಮೆ ನೋಡಲೇಬೇಕು..! Read More »

ಖ್ಯಾತ ಸ್ಯಾಕ್ಸೊಫೋನ್ ವಾದಕ ಕದ್ರಿ ಗೋಪಾಲನಾಥ್ ನಿಧನ

ಬೆಂಗಳೂರು: ವಿಶ್ವವಿಖ್ಯಾತ ಸ್ಯಾಕ್ಸೊಫೋನ್ ವಾದಕರಾದ ಕದ್ರಿ ಗೋಪಾಲನಾಥ್ ರವರು ನಿಧನರಾಗಿದ್ದಾರೆ. ಗೋಪಾಲನಾಥ್ ಅವರಿಗೆ 69 ವರ್ಷ ವಯಸ್ಸಾಗಿತ್ತು. ಸ್ಯಾಕ್ಸೊಪೋನ್ ವಾದನದಲ್ಲಿ ಕರ್ನಾಟಕ ಸಂಗೀತ ಅಳವಡಿಸಿಕೊಂಡು ವಿಶ್ವಪ್ರಸಿದ್ದಿ ಪಡೆದವರಾಗಿದ್ದರು. ಡಿಸೆಂಬರ್ 11, 1949ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಜಿಪಮೂಡದಲ್ಲಿ ಜನಿಸಿದ ಗೋಪಾಲನಾಥ್ ಜಗತ್ತಿನಾದ್ಯಂತ ಸಾವಿರಾರು ಸಂಗೀತ ಕಚೇರಿ ನೀಡಿದ್ದಾರೆ. ಪದ್ಮಶ್ರೀ, ಸ್ಯಾಕ್ಸೊಫೋನ್ ಚಕ್ರವರ್ತಿ ಸೇರಿ ನೂರಾರು ಗೌರವ, ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಅವರ ತಂದೆ ತನಿಯಪ್ಪ ಅವರೂ ಪ್ರಸಿದ್ಧ ನಾದಸ್ವರ ವಾದಕರಾಗಿದ್ದರು. ಮೈಸೂರು ಅರಮನೆಯ ಬ್ಯಾಂಡ್‌ ಸೆಟ್‌ನಲ್ಲಿ ಸ್ಯಾಕ್ಸೊಫೋನ್ ನೋಡಿ

ಖ್ಯಾತ ಸ್ಯಾಕ್ಸೊಫೋನ್ ವಾದಕ ಕದ್ರಿ ಗೋಪಾಲನಾಥ್ ನಿಧನ Read More »

Scroll to Top