November 2019

ಮತ್ತೊಂದು ಗೌರವಕ್ಕೆ ಪಾತ್ರರಾದ ರಾಕಿಂಗ್ ಸ್ಟಾರ್ ಯಶ್

ನವದೆಹಲಿ: ‘ಕೆ.ಜಿ.ಎಫ್’ ಚಿತ್ರದ ಮೂಲಕ ನ್ಯಾಶನಲ್ ಸ್ಟಾರ್ ಆಗಿ ಹೊರ ಹೊಮ್ಮಿರುವ ರಾಕಿಂಗ್ ಸ್ಟಾರ್ ಯಶ್ ಅವರು ಇದೀಗ ಮತ್ತೊಂದು ಗೌರವಕ್ಕೆ ಪಾತ್ರರಾಗಿದ್ದಾರೆ. ‘ಜಿ ಕ್ಯೂ ಇಂಡಿಯಾ’ ಭಾರತದ 50 ಪ್ರಭಾವ ಬೀರುವ ವ್ಯಕ್ತಿಗಳ ಪಟ್ಟಿಯಲ್ಲಿ ಯಶ್ ಸ್ಥಾನ ಪಡೆದಿದ್ದು, ಮುಂಬೈನಲ್ಲಿ ‘ಜಿ ಕ್ಯೂ ಇಂಡಿಯಾ’ ಯಶ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ವಿವಿಧ ರಂಗದಲ್ಲಿ ಸಾಧನೆ ಮಾಡಿ, ಇತರರ ಮೇಲೆ ಪ್ರಭಾವ ಬೀರುವ ಭಾರತದ 50 ಮಂದಿಯನ್ನು ‘GQ ಇಂಡಿಯಾ’ ಗುರುತಿಸುತ್ತದೆ. ಈ ವರ್ಷ ಈ […]

ಮತ್ತೊಂದು ಗೌರವಕ್ಕೆ ಪಾತ್ರರಾದ ರಾಕಿಂಗ್ ಸ್ಟಾರ್ ಯಶ್ Read More »

State of Emergency Declared as fire tears Through Eastern Australia

Sydney: Greater Sydney is suffering ‘catastrophic’ fire conditions with 37C temperatures, 90kmh winds and low levels of humidity during what may be ‘the most dangerous bushfire week this nation has ever seen’. About 100,000 homes in the Sydney area are said to be at risk, including 31,500 in the city’s North Shore. New South Wales

State of Emergency Declared as fire tears Through Eastern Australia Read More »

ಮೈಸೂರು-ಬೆಂಗಳೂರು ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ: 11 ರೈಲುಗಳ ವೇಗ ಹೆಚ್ಚಳ

ಮೈಸೂರು: ಮೈಸೂರು-ಬೆಂಗಳೂರು ನಡುವೆ ಪ್ರಯಾಣಿಸುವ ಜನರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಪ್ರಯಾಣಿಕರ ಒತ್ತಾಯದ ಮೇಲೆ 11 ರೈಲುಗಳ ವೇಗವನ್ನು ನ. 13ರಿಂದ ಹೆಚ್ಚಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ. ಈವರೆಗೂ ಮೈಸೂರು-ಬೆಂಗಳೂರು ನಡುವಿನ ಪ್ರಯಾಣದ ಅವಧಿ ಎರಡೂವರೆ ಗಂಟೆಯಿಂದ ಮೂರು ಗಂಟೆ ಇಪ್ಪತ್ತು ನಿಮಿಷ ಇತ್ತು. ಆದರೆ ಇದೀಗ ರೈಲುಗಳ ಪ್ರಯಾಣದ ಅವಧಿಯು ಕನಿಷ್ಠ ಎರಡೂಕಾಲು ಗಂಟೆಗೆ ಇಳಿದಿದೆ. ರೈಲಿನ ವೇಗವನ್ನು ತುಸು ಹೆಚ್ಚಿಸಲಾಗಿದ್ದು, ಗಂಟೆಗೆ 100 ಕಿ.ಮೀ. ವೇಗ ತಡೆದುಕೊಳ್ಳುವ ಸಾಮರ್ಥ್ಯ ಹೊಸ ಹಳಿಗಳಿಗಿದೆ.

ಮೈಸೂರು-ಬೆಂಗಳೂರು ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ: 11 ರೈಲುಗಳ ವೇಗ ಹೆಚ್ಚಳ Read More »

ಇಂದು ರಾಜ್ಯಾದ್ಯಂತ ಶಾಲಾ-ಕಾಲೇಜಿಗೆ ರಜೆ: ಮೈಸೂರು ವಿವಿ ಪದವಿ ಪರೀಕ್ಷೆ ಮುಂದೂಡಿಕೆ

ಮೈಸೂರು: ಅಯೋಧ್ಯೆ ತೀರ್ಪು ಹಿನ್ನೆಲೆ, ಇಂದು ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ರಾಜ್ಯ ಸರ್ಕಾರ ರಜೆ ಘೋಷಿಸಿದೆ. ಹಲವು ದಶಕಗಳಿಂದ ಕೋರ್ಟ್​ನಲ್ಲಿ ಉಳಿದಿದ್ದ ಅಯೋಧ್ಯೆ ಭೂ ವಿವಾದದ ಕುರಿತಂತೆ ಇಂದು ತೀರ್ಪು ಹೊರಬೀಳಲಿದ್ದು ಈಗಾಗಲೇ ಉತ್ತರ ಪ್ರದೇಶದಲ್ಲಿ ಎಲ್ಲಾ ಶಾಲಾ ಕಾಲೇಜು ವಿದ್ಯಾಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಇದೀಗ ಕರ್ನಾಟಕ ಸರ್ಕಾರವೂ ಕೂಡ ನಾಳೆ ರಜೆ ಘೋಷಿಸಿ ಆದೇಶ ಹೊರಡಿಸಿದೆ. ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್​ ಕುಮಾರ್ ಕೂಡ ಟ್ವೀಟ್ ಮಾಡಿ ತಿಳಿಸಿದ್ದಾರೆ. ಪದವಿ

ಇಂದು ರಾಜ್ಯಾದ್ಯಂತ ಶಾಲಾ-ಕಾಲೇಜಿಗೆ ರಜೆ: ಮೈಸೂರು ವಿವಿ ಪದವಿ ಪರೀಕ್ಷೆ ಮುಂದೂಡಿಕೆ Read More »

ನಿರ್ಮಾಣವಾಗಲಿದೆ 111 ಅಡಿ ಎತ್ತರದ ಸಿದ್ದಗಂಗಾ ಶ್ರೀಗಳ ಪ್ರತಿಮೆ

ರಾಮನಗರ: ನಡೆದಾಡುವ ದೇವರು ಎಂದೇ ನಾಡಿನ ಜನಮಾಸನ ದಲ್ಲಿ ಸ್ಥಾನ ಪಡೆದು ಅಭಿನವ ಬಸವಣ್ಣರೆಂದೇ ಖ್ಯಾತರಾದ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ 111 ಅಡಿ ಎತ್ತರ ಪ್ರತಿಮೆ ಜಿಲ್ಲೆಯಲ್ಲಿ ಸ್ಥಾಪನೆಗೊಳ್ಳಲಿದೆ. ಸಿದ್ದಗಂಗಾ ಶ್ರೀಗಳ ಹುಟ್ಟೂರಾದ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ವೀರಾಪುರದಲ್ಲಿ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶುಕ್ರವಾರ (ನ.8) ಚಾಲನೆ ನೀಡಲಿದ್ದಾರೆ. ವೀರಾಪುರದ ಗ್ರಾಮವನ್ನು ಪಾರಂಪರಿಕ ಹಾಗೂ ವಿಶ್ವ ದರ್ಜೆಯ ಸಾಂಸ್ಕೃತಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಈಗಾಗಲೇ ₹25

ನಿರ್ಮಾಣವಾಗಲಿದೆ 111 ಅಡಿ ಎತ್ತರದ ಸಿದ್ದಗಂಗಾ ಶ್ರೀಗಳ ಪ್ರತಿಮೆ Read More »

ಭಿಕ್ಷೆ ಬೇಡಿ ಬಾಲಕಿಯರನ್ನ ಬಾಕ್ಸರ್ ಮಾಡಿದ ಮಂಗಳಮುಖಿ..! ಬಾಲಕಿಯರ ಬಾಳು ಬೆಳಗಿದ ಮಾತೃ ಹೃದಯಿ

ಮೈಸೂರು: ಮಂಗಳಮುಖಿಯರನ್ನು ಕೀಳಾಗಿ ನೋಡೋರೇ ಹೆಚ್ಚು. ಅವರು ಹತ್ತಿರ ಬರುತ್ತಿದ್ದಂತೆಯೇ ಪುಡಿಗಾಸು ನೀಡಿ ಕೆಲವರು ಸುಮ್ಮನಾಗ್ತಾರೆ. ಮತ್ತೆ ಕೆಲವರು ಚೀ ಥೂ ಎನ್ನುತ್ತಾ ಅಸಹ್ಯವಾಗಿ ಕಾಣುತ್ತಾರೆ. ಆದರೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲೊಬ್ಬ ಮಂಗಳಮುಖಿ ಇದ್ದಾರೆ. ಅವರು ಎಲ್ಲರಿಗಿಂತಾ ಭಿನ್ನ! ತಂದೆ ಇಲ್ಲದ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಸಾಕುತ್ತಿದ್ದಾರೆ ಈ ಮಾತೃ ಸ್ವರೂಪಿ ಮಂಗಳಮುಖಿ. ಇವರ ಹೆಸರು ಎಂ. ಡಿ. ಅಕ್ರಂ. ಭಿಕ್ಷೆ ಬೇಡಿ ಬಂದ ಹಣದಿಂದ ಇಬ್ಬರು ಬಾಲಕಿಯರನ್ನು ಸಾಕುತ್ತಿದ್ದಾರೆ. ಬಾಲಕಿಯರು ಬಾಕ್ಸಿಂಗ್ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ

ಭಿಕ್ಷೆ ಬೇಡಿ ಬಾಲಕಿಯರನ್ನ ಬಾಕ್ಸರ್ ಮಾಡಿದ ಮಂಗಳಮುಖಿ..! ಬಾಲಕಿಯರ ಬಾಳು ಬೆಳಗಿದ ಮಾತೃ ಹೃದಯಿ Read More »

ಇಸ್ರೋ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಭಾಗಿಯಾದ ಮಹಾರಾಜ ಯದುವೀರ್

ಬೆಂಗಳೂರು: ಕನ್ನಡ ರಾಜ್ಯೋತ್ಸವ ಹಿನ್ನಲೆ ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಸ್ಥೆಯಲ್ಲಿ (ಇಸ್ರೋ) ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮೈಸೂರಿನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಯದುವೀರ್ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಇಸ್ರೋದ ಅಧ್ಯಕ್ಷ ಕೆ. ಶಿವನ್ ಹಾಗು ಮತ್ತಿತರರು ಭಾಗವಹಿಸಿದ್ದರು.

ಇಸ್ರೋ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಭಾಗಿಯಾದ ಮಹಾರಾಜ ಯದುವೀರ್ Read More »

ಚಾಮುಂಡಿ ಬೆಟ್ಟದಲ್ಲಿ 150 ವಾಣಿಜ್ಯ ಮಳಿಗೆಗಳ ನಿರ್ಮಾಣ

ಮೈಸೂರು: ಚಾಮುಂಡಿಬೆಟ್ಟದಲ್ಲಿ ಎರಡನೇ ಹಂತದ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ನ.15ರಂದು ಭೂಮಿಪೂಜೆ ನೆರವೇರಿಸಲಾಗುವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ತಿಳಿಸಿದ್ದಾರೆ. ನಿನ್ನೆ ಚಾಮುಂಡಿ ಬೆಟ್ಟದಲ್ಲಿ ಸ್ಥಳ ಪರಿಶೀಲನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈಗಾಗಲೇ ಮೊದಲ ಹಂತದಲ್ಲಿ 100 ಮಳಿಗೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗಿದೆ. ಉಳಿದ ನೂರು ಜನಕ್ಕೆ ಎರಡನೇ ಹಂತದಲ್ಲಿ ಮಳಿಗೆ ನಿರ್ಮಿಸಿಕೊಡಲಾಗುವುದು. ಬೆಟ್ಟದಲ್ಲಿ ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡುವುದಿಲ್ಲ. ಹಾಗಾಗಿ ಮಳಿಗೆಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದರು.

ಚಾಮುಂಡಿ ಬೆಟ್ಟದಲ್ಲಿ 150 ವಾಣಿಜ್ಯ ಮಳಿಗೆಗಳ ನಿರ್ಮಾಣ Read More »

Scroll to Top