December 23, 2019

ಮೈಸೂರಿನಲ್ಲಿ ಇಂದಿನಿಂದ ಮಾಗಿ ಉತ್ಸವ: 10 ದಿನಗಳ ಕಾಲ ಮನರಂಜನೆ ನೀಡಲು ಅರಮನೆ ಅಂಗಳ ಸಜ್ಜು

ಮೈಸೂರು: ದಸರಾ ನಂತರ ವರ್ಷಾಂತ್ಯ-2020ರ ಹೊಸ ವರ್ಷಾರಂಭದಲ್ಲಿ ವಿಶಿಷ್ಟವಾಗಿ ಪ್ರವಾಸಿಗರನ್ನು ಆಕರ್ಷಿಸಲು ಮೈಸೂರು ಜಿಲ್ಲಾಡಳಿತ ಸಜ್ಜಾಗಿದೆ. ಹೊಸ ವರ್ಷಾಚರಣೆಯ ಸಂಭ್ರಮ ಇಮ್ಮಡಿಗೊಳಿಸುವ ‘ಮೈಸೂರು ಮಾಗಿ ಉತ್ಸವ’ ಮತ್ತೆ ರಸದೌತಣ ಉಣಬಡಿಸಲು ಬಂದಿದೆ. ಅರಮನೆ ಅಂಗಳದಲ್ಲಿ ಡಿ.24ರಂದು ಸಂಜೆ 4ಕ್ಕೆ ಚಾಲನೆ ದೊರೆಯಲಿದ್ದು, 10 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳ ಮೂಲಕ ಮನರಂಜನೆ ನೀಡಲು ಸಜ್ಜಾಗಿದೆ. ಫ‌ಲಪುಷ್ಪ ಪ್ರದರ್ಶನ: ಮಾಗಿ ಉತ್ಸವ ಅಂಗವಾಗಿ ಅರಮನೆ ಆವರಣದಲ್ಲಿ ಫ‌ಲಪುಷ್ಪ ಪ್ರದರ್ಶನ ಏರ್ಪಡಿಸಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಫ‌ಲಪುಷ್ಪ ಪ್ರದರ್ಶನಕ್ಕೆ […]

ಮೈಸೂರಿನಲ್ಲಿ ಇಂದಿನಿಂದ ಮಾಗಿ ಉತ್ಸವ: 10 ದಿನಗಳ ಕಾಲ ಮನರಂಜನೆ ನೀಡಲು ಅರಮನೆ ಅಂಗಳ ಸಜ್ಜು Read More »

66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ; ಸ್ಯಾಂಡಲ್ ವುಡ್ ಗೆ 11 ರಾಷ್ಟ್ರ ಪ್ರಶಸ್ತಿ

ನವದೆಹಲಿ: ಇಂದು ದೆಹಲಿಯಲ್ಲಿ 66ನೇಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ ನಡೆದಿದ್ದು, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪ್ರಶಸ್ತಿಯನ್ನು ಪ್ರಧಾನ ಮಾಡಿದ್ದಾರೆ. 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕನ್ನಡ ಸಿನಿಮಾರಂಗ ಹನ್ನೊಂದು ಪ್ರಶಸ್ತಿಯನ್ನು ಗೆದ್ದುಗೊಂಡಿದೆ. ಸ್ಯಾಂಡಲ್ ವುಡ್ ನ ನಾತಿ ಚರಾಮಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ಸಂಪ್ರದಾಯದ ಪ್ರಕಾರ ರಾಷ್ಟ್ರ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಪ್ರದಾನ ಮಾಡಬೇಕಿತ್ತು. ಆದರೆ ಈ ಬಾರಿ ಕೋವಿಂದ್ ಅವರ ಅನುಪಸ್ಥಿತಿಯಲ್ಲಿ ಉಪರಾಷ್ಟ್ರಪತಿ ನಾಯ್ಡು ಪ್ರಶಸ್ತಿ ನೀಡಿದ್ದಾರೆ.

66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ; ಸ್ಯಾಂಡಲ್ ವುಡ್ ಗೆ 11 ರಾಷ್ಟ್ರ ಪ್ರಶಸ್ತಿ Read More »

ಮೈಸೂರಿನಲ್ಲೊಂದು ಡಿಜಿಟಲ್‌ ಸರ್ಕಾರಿ ಶಾಲೆ: ಇಲ್ಲಿ ಹಳಿ ಇಲ್ಲದೇ ಓಡುತ್ತೆ ರೈಲು..!

ಮೈಸೂರು: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಅವನತಿ ಆದಿ ಇಡಿದಿದ್ದರೆ ಮೈಸೂರಿನಲ್ಲೊಂದು ಸರ್ಕಾರಿ ಶಾಲೆ ಖಾಸಗಿ ಶಾಲೆಗಳಿಗೆ ಸೆಡ್ಡುಹೊಡೆದು ರಾಜ್ಯದ ಇತರ ಸರ್ಕಾರಿ ಶಾಲೆಗಳಿಗೆ ಮಾದರಿಯಾಗಿದೆ. ಸರ್ಕಾರಿ ಶಾಲೆಯೆಂದರೇ ಸಾಕು ಮೂಗು ಮುರಿಯುವವರೇ ಹೆಚ್ಚು. ಆ ಶಾಲೆ ಅಭಿವೃದ್ಧಿ ಆಗಿಲ್ಲ, ಶಿಕ್ಷಕರಿಲ್ಲ. ಅಲ್ಲಿ ಮಕ್ಕಳಿಗೆ ಬೇಕಾದ ಮೂಲಸೌಕರ್ಯಗಳು, ಶುಚಿತ್ವ, ಉತ್ತಮ ಪರಿಸರ ಮತ್ತು ಶಿಸ್ತು ಇರುವುದಿಲ್ಲ ಎಂಬುದು ಪೋಷಕರ ಮನೋಭಾವ. ಈ ಕಾರಣಕ್ಕೆ ಮಕ್ಕಳಿಗೆ ಕಾನ್ವೆಂಟ್‌ ಅಥವಾ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸುತ್ತಾರೆ. ಅಂತಹ ಸರ್ಕಾರಿ ಶಾಲೆಗಳ

ಮೈಸೂರಿನಲ್ಲೊಂದು ಡಿಜಿಟಲ್‌ ಸರ್ಕಾರಿ ಶಾಲೆ: ಇಲ್ಲಿ ಹಳಿ ಇಲ್ಲದೇ ಓಡುತ್ತೆ ರೈಲು..! Read More »

Scroll to Top