ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಿದ ನಾಸಾ: ಪತ್ತೆ ಮಾಡಲು ನಾಸಾಗೆ ಸಹಾಯ ಮಾಡಿದ್ದು ಚೆನ್ನೈ ಇಂಜಿನಿಯರ್!
ಚೆನ್ನೈ: ಚಂದ್ರನಲ್ಲಿ ಇಳಿಯುವ ಕೊನೆ ಕ್ಷಣದಲ್ಲಿ ಇಸ್ರೋ ಸಂಪರ್ಕ ಕಳೆದುಕೊಂಡಿದ್ದ ಚಂದ್ರಯಾನ2 ವಿಕ್ರಮ್ ಲ್ಯಾಂಡರ್ ಅವಶೇಷಗಳನ್ನು ಅಮೆರಿಕ ಬಾಹ್ಯಾಕಾಶ ಸಂಸ್ಥೆ ಪತ್ತೆಹಚ್ಚಿದ್ದು, ಅದರ ಕೀರ್ತಿಯನ್ನು ಚೆನ್ನೈ ಮೂಲದ ಇಂಜಿನಿಯರ್ಗೆ ನೀಡಿದೆ. ಚಂದ್ರನ ಮೇಲೆ ಅಪ್ಪಳಿಸಿದ ಚಿತ್ರವನ್ನು ನಾಸಾ ಚಂದ್ರ ಅಧ್ಯಯನದ ಎಲ್ಆರ್ಒ ಕ್ಯಾಮೆರಾ ಸೆರೆ ಹಿಡಿದಿದ್ದು, ಅದನ್ನು ಭಾರತೀಯ ಎಂಜಿನಿಯರ್ ಷಣ್ಮುಗ ಸುಬ್ರಮಣಿಯನ್ ಎಂಬುವರು ಗುರುತಿಸಿದ್ದಾರೆ. ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆಗಬೇಕಿದ್ದ ಸ್ಥಳದ ಮೊದಲಿನ ಹಾಗೂ ನಂತರದ ಚಿತ್ರಗಳನ್ನು ಹೋಲಿಕೆ ಮಾಡಿ ನೋಡಿ ಪತನದ ಅವಶೇಷಗಳನ್ನು ಗುರುತಿಸಿದ್ದಕ್ಕೆ […]