January 2020

ಬಂಡೀಪುರದಲ್ಲಿ ರಜಿನಿಕಾಂತ್ ಜೊತೆಯಾದ ಮ್ಯಾನ್​ ವರ್ಸರ್ಸ್​ ವೈಲ್ಡ್ ಖ್ಯಾತಿಯ ಬೇರ್​ ​ಗ್ರಿಲ್ಸ್..​​​!

ಚಾಮರಾಜನಗರ: ಡಿಸ್ಕವರಿ ಚಾನೆಲ್​ನ ಜನಪ್ರಿಯ ಟಿವಿ ಶೋ ಮ್ಯಾನ್​ ವರ್ಸರ್ಸ್​ ವೈಲ್ಡ್​ನಲ್ಲಿ ತಮಿಳು ಸೂಪರ್ ಸ್ಟಾರ್ ರಜಿನಿಕಾಂತ್ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ತಲೈವಾ ರಜಿನಿಕಾಂತ್ ಬಂಡೀಪುರದ ಖಾಸಗಿ ರೆಸಾರ್ಟ್​ನಲ್ಲಿ ತಂಗಿದ್ದು, ಬೇರ್ ಗ್ರಿಲ್ಸ್​​ ಕೂಡಾ ರೆಸಾರ್ಟ್​ಗೆ ತೆರಳಿದ್ದಾರೆ‌‌‌. ಇನ್ನು ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗೆ ಬಾಲಿವುಡ್’ನ ಆಕ್ಷನ್ ಹೀರೋ ಅಕ್ಷಯ್ ಕುಮಾರ್ ಕೂಡ ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿಹರಿಸಲಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಆಕ್ಷಯ್ ಕುಮಾರ್ ಆಗಮಿಸಬೇಕಾಗಿದೆ. ಇತ್ತೀಚಿಗೆ ಮಾನವ ಅಭಿವೃದ್ದಿಯಿಂದಾಗಿ ಕಾಡು ಪ್ರಾಣಿಗಳ ಸಂತತಿ […]

ಬಂಡೀಪುರದಲ್ಲಿ ರಜಿನಿಕಾಂತ್ ಜೊತೆಯಾದ ಮ್ಯಾನ್​ ವರ್ಸರ್ಸ್​ ವೈಲ್ಡ್ ಖ್ಯಾತಿಯ ಬೇರ್​ ​ಗ್ರಿಲ್ಸ್..​​​! Read More »

ಹೆಲಿಕಾಪ್ಟರ್ ಅವಘಡದಲ್ಲಿ ಬಾಸ್ಕೆಟ್‌ಬಾಲ್ ದಿಗ್ಗಜ ನಿಧನ

ಕ್ಯಾಲಿಫೋರ್ನಿಯಾ: ಅಮೆರಿಕ ಬಾಸ್ಕೆಟ್‌ಬಾಲ್ ದಂತಕಥೆ ಕೋಬ್ ಬ್ರೆಯಾಂಟ್(41) ಹೆಲಿಕ್ಯಾಪ್ಟರ್ ಅಪಘಾತದಲ್ಲಿ ಅಸುನೀಗಿದ್ದಾರೆ. ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತವೊಂದರಲ್ಲಿ 41ರ ಹರೆಯದ ಕೋಬ್ ಬ್ರ್ಯಾಂಡ್ ಸಾವನ್ನಪ್ಪಿದ್ದಾರೆ. ಕ್ಯಾಲಿಫೋರ್ನಿಯಾದ ಕಾಲಬಾಸಾಸ್ ಬೆಟ್ಟಕ್ಕೆ ಹೆಲಿಕಾಪ್ಟರ್ ಅಪ್ಪಳಿಸಿದ ಪರಿಣಾಮ ಅವಘಡ ಸಂಭವಿಸಿದೆ ಎಂಬುದು ತಿಳಿದು ಬಂದಿದೆ. ಇದೇ ದುರಂತದಲ್ಲಿ ಕೋಬ್ ಬ್ರ್ಯಾಂಟ್ ಮಗಳು 13ರ ಹರೆಯದ ಜಿಯನ್ನಾ ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ. ಮಂಜಿನಿಂದ ಆವೃತ್ತವಾದ ಕೆಟ್ಟ ಹವಾಮಾನವೇ ದುರಂತಕ್ಕೆ ಕಾರಣವಾಗಿದೆ ಎಂಬುದು ತಿಳಿದು ಬಂದಿದೆ. ಕೋಬ್ ಬ್ರ್ಯಾಂಟ್ ನಿಧನಕ್ಕೆ ಕ್ರೀಡಾ

ಹೆಲಿಕಾಪ್ಟರ್ ಅವಘಡದಲ್ಲಿ ಬಾಸ್ಕೆಟ್‌ಬಾಲ್ ದಿಗ್ಗಜ ನಿಧನ Read More »

ಮೈಸೂರಿನ ದಂಪತಿಗೆ ಪದ್ಮಶ್ರೀ ಪ್ರಶಸ್ತಿ

ಮೈಸೂರು: ಮೈಸೂರಿನಿಂದ ಪ್ರಕಟವಾಗುವ ದೇಶದ ಏಕೈಕ ಸಂಸ್ಕೃತ ಪತ್ರಿಕೆ ‘ಸುಧರ್ಮ’ ದಿನಪತ್ರಿಕೆಯ ಸಂಪಾದಕ ಕೆ.ವಿ. ಸಂಪತ್ ಕುಮಾರ್ ಹಾಗೂ ಅವರ ಪತ್ನಿ ವಿದುಷಿ ವಿಜಯಲಕ್ಷ್ಮಿ ಕೆ.ಎಸ್. ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಸುಧರ್ಮ ಪತ್ರಿಕೆ ಭಾರತದ ಏಕೈಕ ಸಂಸ್ಕೃತ ಪತ್ರಿಕೆ ಎಂಬ ಹೆಗ್ಗಳಿಕೆ ಹೊಂದಿದ್ದು, ಕಳೆದ ಕೆಲ ವರ್ಷಗಳಿಂದ ನಿರಂತರ ಮುದ್ರಣ ಕಾಣುತ್ತಿದೆ. ಪತ್ರಿಕೆಯ ಈ ಸಾಧನೆ ಗುರುತಿಸಿ ಸಂಪಾದಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕರ್ನಾಟಕದ ಸಾಧಕರು: ಪದ್ಮವಿಭೂಷಣ: ಜಾರ್ಜ್ ಫರ್ನಾಂಡೀಸ್, ಪೇಜಾವರ ಮಠದ ವಿಶ್ವೇಶತೀರ್ಥ

ಮೈಸೂರಿನ ದಂಪತಿಗೆ ಪದ್ಮಶ್ರೀ ಪ್ರಶಸ್ತಿ Read More »

ಮೊಬೈಲ್‌ಗೆ ಭಾರತದ್ದೇ ಜಿಪಿಎಸ್‌: ಅಮೆರಿಕದ ಜಿಪಿಎಸ್‌ ಮೀರಿಸುತ್ತೆ ನಮ್ಮ ‘ನಾವಿಕ್‌’..!

ನವದೆಹಲಿ: ಅಮೆರಿಕದ ಜಿಪಿಎಸ್‌ಗೆ ಗುಡ್‌ಬೈ ಹೇಳಿ ನಮ್ಮದೇ ಸ್ವದೇಶಿ ಜಿಪಿಎಸ್‌ ಬಳಸುವ ಕಾಲ ಹತ್ತಿರವಾಗಿದೆ. ಸ್ವದೀಶಿ ಜಿಪಿಎಸ್‌ ‘ನಾವಿಕ್‌’ ಅನ್ನು ಇಸ್ರೊ ಅಭಿವೃದ್ಧಿಪಡಿಸಿದ್ದು ಇದನ್ನು ಕ್ವಾಲ್‌ಕಾಮ್‌ ಕಂಪನಿ ತನ್ನ ಸ್ನ್ಯಾಪ್‌ಡ್ರ್ಯಾಗನ್‌ ಚಿಪ್‌ಗಳಲ್ಲಿ ಅಳವಡಿಸಿ ಬಿಡುಗಡೆ ಮಾಡಿದೆ. ಶೀಘ್ರದಲ್ಲಿ ಎಲ್ಲಾ ಮೊಬೈಲ್‌ಗಳಲ್ಲಿ ಲಭ್ಯವಾಗಲಿದೆ. ಜಿಪಿಎಸ್ ಮತ್ತು ನಾವಿಕ್‌ ಎರಡೂ ಕೂಡ ಉಪಗ್ರಹ ಆಧಾರಿತ ನೇವಿಗೇಷನ್‌ ಸಿಸ್ಟಮ್‌ಗಳು. ಈ ಮೂಲಕ ಜಗತ್ತಿನ ಬಹುಪಾಲು ಭೂಭಾಗವನ್ನ ಆಕಾಶದಿಂದ ನೋಡಲು ಸಾಧ್ಯವಾಗ್ತಾ ಇದೆ. ಇದುವರೆಗೂ ಅಮೆರಿಕಾ ಅಭಿವೃದ್ಧಿ ಪಡಿಸಿರೋ ಜಿಪಿಎಸ್‌ ಅನ್ನೋ ಜಾಗತಿಕವಾಗಿ

ಮೊಬೈಲ್‌ಗೆ ಭಾರತದ್ದೇ ಜಿಪಿಎಸ್‌: ಅಮೆರಿಕದ ಜಿಪಿಎಸ್‌ ಮೀರಿಸುತ್ತೆ ನಮ್ಮ ‘ನಾವಿಕ್‌’..! Read More »

ಜ. 21-26ರವರೆಗೆ ಸುತ್ತೂರು ಜಾತ್ರಾ ಮಹೋತ್ಸವ: ನೋಡ ಬನ್ನಿ ಸುತ್ತೂರು ಜಾತ್ರೆಯ..!

ಸುತ್ತೂರು: ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವವು ಜನವರಿ 21 ರಿಂದ 26ರವರೆಗೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದೆ. “ಆರು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರೆ ಅಂಗವಾಗಿ ವಸ್ತು ಪ್ರದರ್ಶನ, ಕೃಷಿ ಮೇಳ, ಸಾಂಸ್ಕೃತಿಕ ಮೇಳ, ದೋಣಿ ವಿಹಾರ, ಸೋಬಾನೆ ಪದ ಸ್ಪರ್ಧೆ, ಕ್ಯಾನ್ಸರ್ ತಪಸಾಣೆ ಶಿಬಿರ, ಸಾಮೂಹಿಕ ವಿವಾಹ, ರಾಜ್ಯಮಟ್ಟದ ಭಜನಾ ಮೇಳ, ಜನಗಳ ಜಾತ್ರೆ, ಗಾಳಿ ಪಟ ಸ್ಪರ್ಧೆ, ಕುಸ್ತಿ ಪಂದ್ಯಾವಳಿ ಸೇರಿದಂತೆ ವೈವಿಧ್ಯಮಯ

ಜ. 21-26ರವರೆಗೆ ಸುತ್ತೂರು ಜಾತ್ರಾ ಮಹೋತ್ಸವ: ನೋಡ ಬನ್ನಿ ಸುತ್ತೂರು ಜಾತ್ರೆಯ..! Read More »

ಮೈಸೂರು-ಬೆಳಗಾವಿ ನಡುವೆ ವಿಮಾನ ಹಾರಾಟ ಆರಂಭ

ಮೈಸೂರು: ಮೈಸೂರು-ಬೆಳಗಾವಿ ನಡುವೆ ವಿಮಾನ ಹಾರಾಟಕ್ಕೆ ಇಂದು ಚಾಲನೆ ದೊರೆತಿದೆ. ಇಂದು ಬೆಳಿಗ್ಗೆ 10.30ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬೆಳಗಾವಿಗೆ ಪ್ರಯಾಣ ಆರಂಭಿಸುವ ಟ್ರೂಜೆಟ್ ವಿಮಾನಕ್ಕೆ ಹಸಿರು ನಿಶಾನೆ ತೋರಿಸಲಾಯಿತು. ಬೆಳಗಾವಿಯಿಂದ ಮೈಸೂರು ವಿಮಾನಕ್ಕೂ ಉತ್ತಮ ಪ್ರತಿಕ್ರಿಯೆ ಬರಲಾರಂಭಿಸಿದೆ ಎಂದು ನಿರ್ದೇಶಕ ಮಂಜುನಾಥ್ ತಿಳಿಸಿದ್ದಾರೆ.

ಮೈಸೂರು-ಬೆಳಗಾವಿ ನಡುವೆ ವಿಮಾನ ಹಾರಾಟ ಆರಂಭ Read More »

ವರ್ಷದ ಮೊದಲ ಇಸ್ರೋ ಉಪಗ್ರಹ ಯಶಸ್ವಿ ಉಡಾವಣೆ: ಜಿ-ಸ್ಯಾಟ್ ಸಂಪರ್ಕ ಉಪಗ್ರಹ ಯಶಸ್ವಿ ಉಡಾವಣೆ..!

ಫ್ರೆಂಚ್ ಗಯಾನಾ: ಭಾರತದ ಈ ವರ್ಷದ ಮೊಟ್ಟ ಮೊದಲ ಉಪಗ್ರಹವನ್ನು ಫ್ರಾನ್ಸ್‍ನ ಫ್ರೆಂಚ್ ಗಯಾನದಿಂದ ಇಂದು ನಸುಕಿನಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ನಿಗದಿ ಕಕ್ಷೆ ಸೇರುವಲ್ಲಿ ಸಫಲವಾಗಿದೆ. ಭಾರತದ ಸಂಪರ್ಕ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಫ್ರೆಂಚ್​ ಗಯಾನಾದಲ್ಲಿರುವ ಕೌರೊಯುದಲ್ಲಿನ ಏರಿಯಾನ್ ಉಡಾವಣಾ ಕೇಂದ್ರದಿಂದ ನಿನ್ನೆ ತಡರಾತ್ರಿ 2.35 ರ ವೇಳೆಗೆ ಇಸ್ರೋ ಉಪಗ್ರಹವನ್ನು ಉಡಾಯಿಸಲಾಯ್ತು. ಏರಿಯಾನ್ 5 ವಿಎ-251 ರಾಕೆಟ್,​ ಕೌರೂಯು ಉಡಾವಣಾ ಕೇಂದ್ರದಿಂದ 3,357 ಕೆ.ಜಿ. ತೂಕದ ಉಪಗ್ರಹವನ್ನು ಆಗಸಕ್ಕೆ ಹೊತ್ತೊಯ್ಯಿತು. 38 ನಿಮಿಷ

ವರ್ಷದ ಮೊದಲ ಇಸ್ರೋ ಉಪಗ್ರಹ ಯಶಸ್ವಿ ಉಡಾವಣೆ: ಜಿ-ಸ್ಯಾಟ್ ಸಂಪರ್ಕ ಉಪಗ್ರಹ ಯಶಸ್ವಿ ಉಡಾವಣೆ..! Read More »

ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ನಿವೃತ್ತ ಸಿಜೆಐ ರಂಜನ್ ಗೊಗೋಯ್

ಮೈಸೂರು: ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ಪ್ರವಾಸದಲ್ಲಿದ್ದು ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಕುಟುಂಬ ಸದಸ್ಯರೊಂದಿಗೆ ಆಗಮಿಸಿದ ಗೊಗೊಯ್ ಅವರನ್ನ ದೇವಾಲಯದ ಅಧಿಕಾರಿಗಳು ಸಾಂಪ್ರದಾಯಿಕ ರೀತಿಯಲ್ಲಿ ಬರಮಾಡಿಕೊಂಡರು. ನಂತರ ಗೊಗೋಯಿರವರು ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ದೇವಾಲಯದ ಮುಖ್ಯ ಅರ್ಚಕ ಶಶಿಶೇಖರ್ ದೀಕ್ಷಿತ್ ಉಪಸ್ಥಿತರಿದ್ದರು.

ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ನಿವೃತ್ತ ಸಿಜೆಐ ರಂಜನ್ ಗೊಗೋಯ್ Read More »

ಶಾಲೆಯಾಗಿ ಪರಿವರ್ತನೆಗೊಂಡ ರೈಲ್ವೆ ಬೋಗಿಗಳು: ಈ ನೂತನ ಕಾರ್ಯಕ್ಕೆ ನೀವು ಹ್ಯಾಟ್ಸ್ ಅಪ್ ಹೇಳಲೇಬೇಕು

ಮೈಸೂರು: ನಗರದ ರೈಲ್ವೆ ಇಲಾಖೆಯ ಜಾಗದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿಭಿನ್ನ ಕಟ್ಟಡದ ಕಥೆಯಿದು. ಸಾಮಾನ್ಯವಾಗಿ ಸರ್ಕಾರಿ ಶಾಲೆಯನ್ನು ರೈಲ್ವೆ ಬೋಗಿಯನ್ನಾಗಿ ಪರಿವರ್ತಿಸಿ ಪಾಠ ಮಾಡುವುದನ್ನು ಕೇಳಿದ್ದೇವೆ ಹಾಗೂ ನೋಡಿರುತ್ತೇವೆ. ಆದರೆ ಈ ಶಾಲೆಯಲ್ಲಿ ನಿಜವಾದ ರೈಲ್ವೆ ಬೋಗಿಯನ್ನೇ ಶಾಲೆಯನ್ನಾಗಿ ಪರಿವರ್ತಿಸಿ ಪಾಠ ಮಾಡುವ ವಿಭಿನ್ನ ಪರಿಪಾಠ ನಡೆಯುತ್ತಿದೆ. ಇದಕ್ಕೊಂದು ರೋಚಕ ಕಥೆಯೂ ಇದೆ. ರೈಲ್ವೆ ಕಾರ್ಯಾಗಾರದ ಸುಪರ್ದಿಯಲ್ಲಿರುವ ಈ ಶಾಲೆಯು ಸ್ಥಾಪನೆಯಾಗಿದ್ದು ಮಹಾರಾಜರ ಕಾಲದಲ್ಲಿ. ಅಂದರೆ ಈ ಶಾಲೆಗೆ ಶತಮಾನಗಳ ಇತಿಹಾಸವಿದೆ. ಅದಕ್ಕೆ ತಕ್ಕಂತೆ

ಶಾಲೆಯಾಗಿ ಪರಿವರ್ತನೆಗೊಂಡ ರೈಲ್ವೆ ಬೋಗಿಗಳು: ಈ ನೂತನ ಕಾರ್ಯಕ್ಕೆ ನೀವು ಹ್ಯಾಟ್ಸ್ ಅಪ್ ಹೇಳಲೇಬೇಕು Read More »

ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ ಡೌನ್‌ ಕಟ್ಟಡ ಒಡೆದು ಕಟ್ಟಿ: ತಜ್ಞರ ವರದಿ

ಮೈಸೂರು: ಮೈಸೂರಿನ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲಾನ್ಸ್‌ ಡೌನ್‌ ಬಿಲ್ಡಿಂಗ್‌ ನೆಲಸಮಗೊಳಿಸಿ ಹೊಸದಾಗಿ ಕಟ್ಟುವಂತೆ ತಜ್ಞರ ಸಮಿತಿ ವರದಿ ನೀಡಿದೆ. ಈ ಸಂಬಂಧ ತಜ್ಞರ ವರದಿಯನ್ನು ಕೋರ್ಟ್‌ಗೆ ಸಲ್ಲಿಸಲು ಪಾಲಿಕೆ ಸಿದ್ಧತೆ ನಡೆಸಿಕೊಂಡಿದೆ. ದೇವರಾಜ ಮಾರುಕಟ್ಟೆ ಕೆಡವಬೇಕು ಎಂಬ ಅಭಿಪ್ರಾಯ ವ್ಯಕ್ತವಾದಾಗ ಮಾರುಕಟ್ಟೆ ವ್ಯಾಪಾರಸ್ಥರು ಕೋರ್ಟ್‌ ಮೊರೆ ಹೋಗಿದ್ದರು. ಆದರೆ, ಕೋರ್ಟ್‌ ಈ ಸಂಬಂಧ ತಜ್ಞರ ಸಮಿತಿ ರಚಿಸಿ ಅಭಿಪ್ರಾಯ ಪಡೆದುಕೊಂಡು 6 ತಿಂಗಳೊಳಗೆ ಸಮಸ್ಯೆ ಇತ್ಯರ್ಥ ಪಡಿಸುವಂತೆ ಪಾಲಿಕೆಗೆ ಸೂಚಿಸಿತ್ತು. ಈ ಸಂಬಂಧ

ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ ಡೌನ್‌ ಕಟ್ಟಡ ಒಡೆದು ಕಟ್ಟಿ: ತಜ್ಞರ ವರದಿ Read More »

Scroll to Top