February 2020

ಮ್ಯಾನ್‌ ವರ್ಸಸ್‌ ವೈಲ್ಡ್‌ನ ಹೊಸ ಟೀಸರ್ ಬಿಡುಗಡೆ: ಈ ದಿನದಂದು ಕಾರ್ಯಕ್ರಮ ಪ್ರಸಾರ

ಮೈಸೂರು: ಡಿಸ್ಕವರಿ ಚಾನೆಲ್‌ನ ಜನಪ್ರಿಯ ಕಾರ್ಯಕ್ರಮ ಮ್ಯಾನ್‌ ವರ್ಸಸ್‌ ವೈಲ್ಡ್‌ನ ಹೊಸ ಟೀಸರ್ ಬಿಡುಗಡೆಯಾಗಿದೆ. ಬಿಡುಗಡೆಯಾದ ವಿಡಿಯೋದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅವರನ್ನು ಒಳಗೊಂಡ ಈ ವಿಶೇಷ ಸಂಚಿಕೆಯು ಮಾರ್ಚ್ 23 ರಂದು ರಾತ್ರಿ 8 ಗಂಟೆಗೆ ಡಿಸ್ಕವರಿಯಲ್ಲಿ ಪ್ರಸಾರವಾಗಲಿದೆ ಎಂದು ಟೀಸರ್’ನಲ್ಲಿ ಮಾಹಿತಿ ನೀಡಲಾಗಿದೆ. ಇನ್ನು ಕರ್ನಾಟಕದ ಬಂಡೀಪುರ ಸಂರಕ್ಷಿತ ಅರಣ್ಯದಲ್ಲಿ ಮ್ಯಾನ್ vs ವೈಲ್ಡ್ ಕಾರ್ಯಕ್ರಮದ ಶೂಟಿಂಗ್ ನಡೆದಿತ್ತು. ನಿರೂಪಕ ಬೇರ್ ಗ್ರಿಲ್ಸ್ ಜೊತೆ ಸೂಪರ್ ಸ್ಟಾರ್ ರಜಿನಿಕಾಂತ್ ಪಾಲ್ಗೊಂಡಿದ್ದರು. ಈ ಮೊದಲು ಮ್ಯಾನ್​ ವರ್ಸಸ್​​ […]

ಮ್ಯಾನ್‌ ವರ್ಸಸ್‌ ವೈಲ್ಡ್‌ನ ಹೊಸ ಟೀಸರ್ ಬಿಡುಗಡೆ: ಈ ದಿನದಂದು ಕಾರ್ಯಕ್ರಮ ಪ್ರಸಾರ Read More »

ಮೈಸೂರು: ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಹೃದಯಾಘಾತ..!

ಮೈಸೂರು: ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಅವರಿಗೆ ಹೃದಯಾಘಾತವಾಗಿದೆ. ಮೈಸೂರಿನಲ್ಲಿರುವ ಅವರ ನಿವಾಸದಲ್ಲಿಯೇ ಘಟನೆ ಸಂಭವಿಸಿದ್ದು ಸದ್ಯ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರಿನ ಬೋಗಾದಿ ರಸ್ತೆಯ ಬಳಿ ಅರ್ಜುನ್​ ಜನ್ಯ ಐಷಾರಾಮಿ ವಿಲ್ಲಾ ಒಂದನ್ನು ಖರೀದಿಸಿದ್ದರು. ಸಮಯ ಸಿಕ್ಕಾಗಲೆಲ್ಲ ಮೈಸೂರಿಗೆ ಬರುತ್ತಿದ್ದ ಜನ್ಯ ಅದೇ ವಿಲ್ಲಾದಲ್ಲಿ ಉಳಿದುಕೊಳ್ಳುತ್ತಿದ್ದರು. ನಿನ್ನೆ ಸಹ ಇದೇ ವಿಲ್ಲಾಕ್ಕೆ ಬಂದಿದ್ದು ತಡರಾತ್ರಿಯಲ್ಲಿ ಹೃದಯಾಘಾತವಾಗಿದೆ. ಅರ್ಜುನ್ ಅವರ ಆರೋಗ್ಯದ ಬಗ್ಗೆ ಅಪೋಲೋ ಹೃದ್ರೋಗ ತಜ್ಞ ಆದಿತ್ಯ ಉಡುಪ ಪ್ರತಿಕ್ರಿಯಿಸಿ,

ಮೈಸೂರು: ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಹೃದಯಾಘಾತ..! Read More »

ಮೈಸೂರಿಗರಿಗೆ ಖುಷಿಯ ವಿಚಾರ. ರಸ್ತೆಗಿಳಿಯಲು ಸಿದ್ಧವಾಗಿದೆ ಡಬಲ್ ಡೆಕ್ಕರ್ ಬಸ್!

ಮೈಸೂರು: ಮೈಸೂರು ಪ್ರವಾಸಿಗರಿಗೆ ಖುಷಿಯ ವಿಚಾರ. ಮೈಸೂರು ಪ್ರವಾಸಿತಾಣಗಳನ್ನು ಇನ್ಮುಂದೆ ಡಬಲ್‌ ಡೆಕ್ಕರ್‌ ಬಸ್‌ ನಲ್ಲಿ ಕುಳಿತು ವೀಕ್ಷಣೆ ಮಾಡಬಹುದು. ಹೌದು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ ಪ್ರವಾಸಿ ತಾಣಗಳನ್ನು ಡಬಲ್‌ ಡೆಕ್ಕರ್‌ ಬಸ್‌ನಲ್ಲಿ ಕುಳಿತು ವೀಕ್ಷಿಸುವ ಮೈಸೂರಿಗರ ಬಹುದಿನಗಳ ಕನಸು ಮಾರ್ಚ್‌ ಅಂತ್ಯದ ವೇಳೆಗೆ ಈಡೇರಲಿದೆ. ವಿಶ್ವ ಪ್ರಸಿದ್ಧ ಪ್ರವಾಸಿತಾಣಗಳಾದ ಮೈಸೂರು ಹಾಗೂ ಹಂಪಿಯ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು, ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಡಬಲ್‌ ಡೆಕ್ಕರ್‌ ಬಸ್‌ಗಳನ್ನು ಪರಿಚುಸಲು ಯೋಜನೆ ರೂಪಿಸಿತ್ತು.

ಮೈಸೂರಿಗರಿಗೆ ಖುಷಿಯ ವಿಚಾರ. ರಸ್ತೆಗಿಳಿಯಲು ಸಿದ್ಧವಾಗಿದೆ ಡಬಲ್ ಡೆಕ್ಕರ್ ಬಸ್! Read More »

ಕಂಬಳ ಗದ್ದೆಯಲ್ಲಿ ಮತ್ತೊಬ್ಬ ‘ಬೋಲ್ಟ್‌’: ಶ್ರೀನಿವಾಸರ ದಾಖಲೆ ಮುರಿದ ನಿಶಾಂತ್ ಶೆಟ್ಟಿ!

ದಕ್ಷಿಣ ಕನ್ನಡ: ಕಂಬಳ ಕ್ರೀಡೆಯಲ್ಲಿ ಈಗ ದಾಖಲೆಗಳ ಮೇಲೆ ದಾಖಲೆಗಳ ಸುದ್ದಿ. ಕಂಬಳಗದ್ದೆಯ ಉಸೇನ್ ಬೋಲ್ಟ್ ಎಂದು ಕರೆಯಲ್ಪಡುತ್ತಿರುವ ಶ್ರೀನಿವಾಸ ಗೌಡರು ಕೇವಲ 13.62 ಸೆಕೆಂಡ್‌ಗಳಲ್ಲಿ 142.5 ಮೀ. ಓಡಿ ಸುದ್ದಿಯಾದ ಬೆನ್ನಲ್ಲೇ, ಶ್ರೀನಿವಾಸಗೌಡರ ಮಿತ್ರರೂ ಆಗಿರುವ ಮತ್ತೊಬ್ಬ ಕಂಬಳವೀರ ನಿಶಾಂತ್ ಶೆಟ್ಟಿ ಆ ದಾಖಲೆಯನ್ನು ಮುರಿದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ವೇಣೂರಿನಲ್ಲಿ ಭಾನುವಾರ ನಡೆದ ಕಂಬಳದಲ್ಲಿ 28 ವರ್ಷದ ನಿಶಾಂತ್, ಶ್ರೀನಿವಾಸ ಗೌಡರಿಗಿಂತ 0.07 ಸೆಕೆಂಡ್ ವೇಗವಾಗಿ ಓಡಿ ಹೊಸ ದಾಖಲೆ ಬರೆದಿದ್ದಾರೆ. ಉಡುಪಿ ಜಿಲ್ಲೆ

ಕಂಬಳ ಗದ್ದೆಯಲ್ಲಿ ಮತ್ತೊಬ್ಬ ‘ಬೋಲ್ಟ್‌’: ಶ್ರೀನಿವಾಸರ ದಾಖಲೆ ಮುರಿದ ನಿಶಾಂತ್ ಶೆಟ್ಟಿ! Read More »

ಕನ್ನಡದ ಹಿರಿಯ ನಟಿ ಕಿಶೋರಿ ಬಲ್ಲಾಳ್ ಇನ್ನಿಲ್ಲ

ಬೆಂಗಳೂರು: ಹಿರಿಯ ನಟಿ ಕಿಶೋರಿ ಬಲ್ಲಾಳ್ ಇಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಕಿಶೋರಿ ಬಲ್ಲಾಳ್ ಚಿಕಿತ್ಸೆ ಫಲಕಾರಿಯಾಗದೇ ನಗರದ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ‘ಇವಳೆಂತ ಹೆಂಡ್ತಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಕಿಶೋರಿ ಬಲ್ಲಾಳ್ ಅವರು ಸುಮಾರು 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕಹಿ, ಹನಿ ಹನಿ, ಸೂರ್ಯಕಾಂತಿ, ಅಕ್ಕತಂಗಿ, ನಮ್ಮಣ್ಣ, ಕೆಂಪೇಗೌಡ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಅಜ್ಜಿ, ತಾಯಿ ಪಾತ್ರದಲ್ಲಿ ನಟಿಸುತ್ತಿದ್ದು ಕಿಶೋರಿ ಬಲ್ಲಾಳ್ ಅವರು ಎಲ್ಲರ ಮನೆ ಮಾತಾಗಿದ್ದರು. ಕನ್ನಡದ ಬಹುತೇಕ ಸ್ಟಾರ್

ಕನ್ನಡದ ಹಿರಿಯ ನಟಿ ಕಿಶೋರಿ ಬಲ್ಲಾಳ್ ಇನ್ನಿಲ್ಲ Read More »

ಉಸೇನ್ ಬೋಲ್ಟ್​ಗಿಂತ ಸ್ಪೀಡಾಗಿ ಓಡುತ್ತಾರೆ ತುಳುನಾಡಿನ ಈ ಕಂಬಳವೀರ

ಮಂಗಳೂರು: ವಿಶ್ವಖ್ಯಾತ ಉಸೇನ್ ಬೋಲ್ಟ್​ಗಿಂತ ಸ್ಪೀಡಾಗಿ ಓಡುವ ತುಳುನಾಡಿನ ಕಂಬಳವೀರನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಫೆಬ್ರವರಿ 1ರಂದು ಮಂಗಳೂರಿನ ಮೂಡಬಿದ್ರೆ ಸಮೀಪದ ಐಕಳ ಎಂಬಲ್ಲಿ ನಡೆದ ಕಂಬಳ ಕ್ರೀಡೆಯಲ್ಲಿ ಕೋಣ ಓಡಿಸೋ ಶ್ರೀನಿವಾಸಗೌಡ ಎಂಬುವರು ದಾಖಲೆ ಬರೆದಿದ್ದಾರೆ. ಕೇವಲ ಕೇವಲ 13.62 ಸೆಕೆಂಡ್​ಗಳಲ್ಲಿ 142.50 ಮೀಟರ್ ದೂರ ಕೋಣದ ಹಿಂದೆ ಓಡಿ ದಾಖಲೆ ಬರೆದಿದ್ದಾರೆ. ಇದು ಕಂಬಳ ಕ್ರೀಡೆಯಲ್ಲಿ ಇದುವರೆಗಿನ ಅತ್ಯಂತ ವೇಗದ ದಾಖಲೆಯಾಗಿದ್ದು, ಎಲ್ಲರೂ ನಿಬ್ಬೆರಗಾಗಿದ್ದಾರೆ. ಶ್ರೀನಿವಾಸ ಗೌಡ ಗುರಿ ತಲುಪಲು

ಉಸೇನ್ ಬೋಲ್ಟ್​ಗಿಂತ ಸ್ಪೀಡಾಗಿ ಓಡುತ್ತಾರೆ ತುಳುನಾಡಿನ ಈ ಕಂಬಳವೀರ Read More »

Faster Than Usain Bolt? Karnataka Man Running With Buffaloes Covers 100 Metres in Just 9.55 Seconds

MANGALURU: The nation is closely watching Kambala jockey Shrinivas Gowda, 28, from Mijar Ashwathpur in Mangaluru, after being compared to international sprinter Usain Bolt. “Faster Than Usain Bolt? Karnataka Man Running With Buffaloes Covers 100 Metres in Just 9.55 Seconds. I urge the Athletics Association of India to take this man under their wing &

Faster Than Usain Bolt? Karnataka Man Running With Buffaloes Covers 100 Metres in Just 9.55 Seconds Read More »

ಬ್ರಿಟನ್‌ ನೂತನ ಹಣಕಾಸು ಸಚಿವರಾಗಿ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ನೇಮಕ

ಲಂಡನ್: ಬ್ರಿಟನ್ ನೂತನ ಹಣಕಾಸು ಸಚಿವರಾಗಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್‍ರನ್ನು ನೇಮಕ ಮಾಡಲಾಗಿದೆ. 39 ವರ್ಷದ ರಿಷಿ ಅವರು ಬ್ರಿಟನ್‌ ಸರ್ಕಾರದಲ್ಲಿನ ಎರಡನೇ ಅತ್ಯಂತ ಮಹತ್ವದ ಹುದ್ದೆಯನ್ನು ಅಲಂಕರಿಸಲಿದ್ದಾರೆ. ಹಾಲಿ ವಿತ್ತ ಸಚಿವ ಸಾಜಿದ್ ಜಾವಿದ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ರಿಷಿ ಸುನಕ್‍ರನ್ನು ಪ್ರಧಾನಿ ಬೋರಿಸ್ ಜಾನ್ಸನ್ ಜಾನ್ಸನ್ ನೇಮಕ ಮಾಡಿದ್ದಾರೆ. ಬ್ರಿಟನ್ ಸಂಸತ್ತಿಗೆ 2015ರಲ್ಲಿ ಆಯ್ಕೆಯಾಗಿದ್ದ ರಿಷಿ ಸುನಕ್, ಹಿಂದೆ ಖಜಾನೆ ಇಲಾಖೆ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಹಣಕಾಸು ಸಚಿವರಾಗಿ

ಬ್ರಿಟನ್‌ ನೂತನ ಹಣಕಾಸು ಸಚಿವರಾಗಿ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ನೇಮಕ Read More »

ಮೈಸೂರಿನ ರೈತನ ಮಗ ಇದೀಗಾ ಸ್ಟಾರ್ ಮಾಡೆಲ್..!

ಮೈಸೂರು: ಒಬ್ಬ ಸಾಮಾನ್ಯ ರೈತನ ಮಗ ಏನೆಲ್ಲ ಮಾಡಬಹುದು ಅನ್ನೋದಕ್ಕೆ ಮೈಸೂರಿನ ನಾಗೇಶ್ ಸಾಕ್ಷಿಯಾಗಿದ್ದು, ಇವತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾನೆ. ಮಾತ್ರವಲ್ಲ ‘ಮಂಜರಿ ನೇಪಾಳ ಪ್ರೈವೆಟ್ ಲಿಮಿಟೆಡ್ ಆಯೋಜಿಸಿದ್ದ ಮಿಸ್ಟರ್ ಏಷ್ಯಾ 2020ರಲ್ಲಿ ಮೂರು ವಿಭಾಗದಲ್ಲಿ ನಾಗೇಶ್ ವಿಜೇತರಾಗಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರು ಗ್ರಾಮದ ರೈತರ ಮಗನಾದ ಇಂಟರ್ ನ್ಯಾಷನಲ್ ಮಾಡೆಲ್ ನಾಗೇಶ್ ಡಿ.ಸಿ.ಅವರು ಮಂಜರಿ ನೇಪಾಳ್ ಪ್ರೈ.ಲಿಮಿಟೆಡ್ ನವರು ಆಯೋಜಿಸಿದ್ದ ಮಿಸ್ಟರ್ ಏಷ್ಯಾ 2020ರಲ್ಲಿ ಮಿಸ್ಟರ್ ಏಷ್ಯಾ ಅಡ್ವಂಚರ್ 2020,

ಮೈಸೂರಿನ ರೈತನ ಮಗ ಇದೀಗಾ ಸ್ಟಾರ್ ಮಾಡೆಲ್..! Read More »

ಮೈಸೂರಿನಿಂದ ಮತ್ತೊಂದು ಜೀವಂತ ಹೃದಯ ರವಾನೆ

ಮೈಸೂರು: ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಜೀವಂತ ಹೃದಯ ರವಾನೆ ಮಾಡಲಾಗಿದೆ. ಫೆ. 9ರಂದು ಪಿರಿಯಾಪಟ್ಟಣದ ಕೊಪ್ಪ ಬಳಿ ರಸ್ತೆ ಅಪಘಾತವಾಗಿತ್ತು. ಅಪಘಾತದ ಬಳಿಕ ಮದನ ರಾಜ್(22) ಎಂಬ ಯುವಕನ ಮಿದುಳು ನಿಷ್ಕ್ರಿಯಗೊಂಡಿತ್ತು. ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಹೃದಯ ಸೇರಿ ಅಂಗಾಂಗಗಳ ದಾನ ಮಾಡಲಾಗಿದೆ. ಇನ್ನು ಗ್ರೀನ್ ಕಾರಿಡಾರ್ ಮೂಲಕ ಈ ಜೀವಂತ ಹೃದಯವನ್ನು ರವಾನೆ ಮಾಡಲಾಯಿತು. ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ ಭದ್ರತೆಯೊಂದಿಗೆ ಝೀರೋ ಟ್ರಾಫಿಕ್ ಮೂಲಕ ಹೃದಯ ರವಾನೆ.

ಮೈಸೂರಿನಿಂದ ಮತ್ತೊಂದು ಜೀವಂತ ಹೃದಯ ರವಾನೆ Read More »

Scroll to Top