March 2020

ನಿರ್ಭಯಾಗೆ ಕೊನೆಗೂ ಸಿಕ್ಕಿತು ನ್ಯಾಯ, ಹತ್ಯಾಚಾರಿಗಳಿಗೆ ಗಲ್ಲು..!

ನವದೆಹಲಿ: ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ವಿಕೃತಿ ಮೆರದಿದ್ದ ನಾಲ್ಕು ಕಾಮುಕರಿಗೆ ಇಂದು[ಶುಕ್ರವಾರ] ಬೆಳಗ್ಗೆ 5:30ಕ್ಕೆ ಸರಿಯಾಗಿ ನವದೆಹಲಿಯಲ್ಲಿರುವ ತಿಹಾರ್‌ ಜೈಲಿನಲ್ಲಿ ಗಲ್ಲಿಗೇರಿಸಲಾಯಿಗಿದೆ. ಈ ಮೂಲಕ 2012ರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಇಂದು ನ್ಯಾಯ ದೊರಕಿದೆ. ಇಂದು ಬೆಳಗಿನ ಜಾವ ಮೂರು ಗಂಟೆವರೆಗೂ ದೋಷಿಗಳು ಡೆತ್ ವಾರೆಂಟ್ ಮುಂದೂಡಲು ಪ್ರಯತ್ನಿಸಿದ್ದರು. ಪಟಿಯಾಲಾ ಹೌಸ್ ಕೋರ್ಟ್ ನೀಡಿರುವ ಡೆತ್ ವಾರೆಂಟ್ ಗೆ ತಡೆ ನೀಡುವಂತೆ ಗುರುವಾರ ರಾತ್ರಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್’ನಲ್ಲಿ ಅರ್ಜಿ […]

ನಿರ್ಭಯಾಗೆ ಕೊನೆಗೂ ಸಿಕ್ಕಿತು ನ್ಯಾಯ, ಹತ್ಯಾಚಾರಿಗಳಿಗೆ ಗಲ್ಲು..! Read More »

ಮಾರ್ಚ್‌–22 ರಂದು ಜನತಾ ಕರ್ಫ್ಯೂ ಘೋಷಿಸಿದ ಪ್ರಧಾನಿ ಮೋದಿ

ನವದೆಹಲಿ: ದೇಶದಲ್ಲಿ ಕೊರೊನಾವೈರಸ್ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 22ರಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ‘ಜನತಾ ಕರ್ಫ್ಯೂ’ ನಡೆಸಲು ಪ್ರಧಾನಿ ಮೋದಿ ದೇಶದ ಜನರಿಗೆ ಕರೆ ನೀಡಿದ್ದಾರೆ. ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಅವರು, “ನಿಮ್ಮ ಕೆಲ ವಾರಗಳು ನನಗೆ ಬೇಕಾಗಿದೆ. ಕೊರೊನಾವೈರಸ್ ಗೆ ಇನ್ನೂ ಸರಿಯಾದ ಲಸಿಕೆ ಸಿಕ್ಕಿಲ್ಲ. ಜಗತ್ತು ಸಮಸ್ಯೆಯನ್ನು ಎದುರಿಸುತ್ತಿದೆ. ದೊಡ್ಡ ದೇಶಗಳಲ್ಲೂ ಈ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದೆ. ಭಾರತದಲ್ಲಿ ಈ ಮಹಾಮಾರಿ ಹರಡುವುದಿಲ್ಲ ಎಂದು ನಾವು ಆಲೋಚಿಸುವುದು ತಪ್ಪು

ಮಾರ್ಚ್‌–22 ರಂದು ಜನತಾ ಕರ್ಫ್ಯೂ ಘೋಷಿಸಿದ ಪ್ರಧಾನಿ ಮೋದಿ Read More »

ಯುಗಾದಿ ಪುಣ್ಯಸ್ನಾನ ರದ್ದುಗೊಳಿಸಿ ಜಿಲ್ಲಾಧಿಕಾರಿ ಆದೇಶ

ಮೈಸೂರು: ಕೊರೋನಾ ಸೋಂಕು ಭೀತಿ ಹಿನ್ನಲೆ ಮೈಸೂರು ಜಿಲ್ಲೆಯಾದ್ಯಂತ ಯುಗಾದಿ ಪುಣ್ಯಸ್ನಾನ ರದ್ದುಗೊಳಿಸಿ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶ ಹೊರಡಿಸಿದ್ದಾರೆ. 25ರಂದು ಯುಗಾದಿ ದಿನ ನಡೆಯಬೇಕಿದ್ದ ಪುಣ್ಯಸ್ನಾನ ನಡೆಸುವಂತಿಲ್ಲ. ಮೈಸೂರಿನ ನಂಜನಗೂಡು ಕಪಿಲಾ‌ನ‌‌ದಿ, ಟಿ.ನರಸೀಪುರದ ಕಾವೇರಿ ನದಿ ಸಮೀಪ ಸೇರಿದಂತೆ ಎಲ್ಲಿಯೂ ಸಾಮೂಹಿಕ ಪುಣ್ಯ ಸ್ನಾನ ಮಾಡುವಂತಿಲ್ಲ. ಯುಗಾದಿ ದಿನದಂದು ದೇವಾಲಯಗಳಿಗೆ ಜನರು ತೆರಳಬಾರದು. ಎಲ್ಲರು ತಮ್ಮ ತಮ್ಮ‌ ಮನೆಯಲ್ಲಿ ಇದ್ದು ಹಬ್ಬ ಆಚರಿಸಿ. ಜನಸಂದಣಿ ಸೃಷ್ಠಿಯಾಗದಂತೆ ನೋಡಿಕೊಳ್ಳೋದು ಸಾರ್ವಜನಿಕರ ಜವಬ್ದಾರಿ ಎಂದು ಜಿಲ್ಲಾಧಿಕಾರಿ ಅಭಿರಾಮ್

ಯುಗಾದಿ ಪುಣ್ಯಸ್ನಾನ ರದ್ದುಗೊಳಿಸಿ ಜಿಲ್ಲಾಧಿಕಾರಿ ಆದೇಶ Read More »

ಕೊರೊನಾ ಭೀತಿ: ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ ಬಂದ್

ಮೈಸೂರು: ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನವನ್ನು ಬಂದ್ ಮಾಡಲಾಗಿದೆ. ಕೊರೊನಾದಿಂದಾಗಿ ನಂಜನಗೂಡು ದೇವಾಲಯವನ್ನು ಬಂದ್ ಆಗಿದೆ. ದೇವಾಲಯಕ್ಕೆ ಇಂದಿನಿಂದ ಭಕ್ತಾದಿಗಳ ಪ್ರವೇಶ ನಿಷೇಧವಿದ್ದು ದೇವಾಲಯದ ಮುಂಬಾಗಿಲು ಮುಚ್ಚಲಾಗಿದೆ. ಮಾರ್ಚ್ 31ರವರೆಗೆ ದೇವಾಲಯ ಭಕ್ತರು ಹಾಗೂ ಸಾರ್ವಜನಿಕರ ಪ್ರವೇಶ ಇಲ್ಲ ಎಂದು ನೋಟಿಸ್ ಆಂಟಿಸಲಾಗಿದೆ. ದೇವಾಲಯದಲ್ಲಿ ಎಂದಿನಂತೆ ಪೂಜಾ ಕೈಂಕರ್ಯ ನಡೆದಿವೆ.

ಕೊರೊನಾ ಭೀತಿ: ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ ಬಂದ್ Read More »

helicopter-ride-in-mysuru-3

ಮತ್ತಷ್ಟು ಹೆಚ್ಚಾದ ಕೊರೊನಾ ಆತಂಕ, ಮೈಸೂರು ಜಿಲ್ಲೆಯಾದ್ಯಂತ 144 ಜಾರಿ

ಮೈಸೂರು: ದೇಶಾದ್ಯಂತ ಕೊರೋನಾ ಶಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದರಲ್ಲೂ ನೆರೆಯ ಮಹಾರಾಷ್ಟ್ರದಲ್ಲಿ ಕೊರೋನಾ ಶಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಮೈಸೂರು ಜಿಲ್ಲೆಯಾದ್ಯಂತ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿ ಮಾಡಲಾಗಿದೆ. ಮೈಸೂರು ಜಿಲ್ಲೆಯಾದ್ಯಂತ ಸಭೆ, ಸಮಾರಂಭ, ಸಾಮೂಹಿಕ ವಿವಾಹ, ಜಾತ್ರಾಮಹೋತ್ಸವ, ದೇವರ ಉತ್ಸವಗಳನ್ನು ನಡೆಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ದೇಗುಲಗಳಲ್ಲಿ ಪ್ರಸಾದ ವಿತರಣೆಗೂ ನಿರ್ಬಂಧ ವಿಧಿಸಲಾಗಿದೆ. ದೇಗುಲಗಳಲ್ಲಿ ಪ್ರತಿನಿತ್ಯ ನಡೆಯುವ ಪೂಜಾವಿಧಿಗಳಿಗೆ

ಮತ್ತಷ್ಟು ಹೆಚ್ಚಾದ ಕೊರೊನಾ ಆತಂಕ, ಮೈಸೂರು ಜಿಲ್ಲೆಯಾದ್ಯಂತ 144 ಜಾರಿ Read More »

ಮೈಸೂರಿನಲ್ಲಿ ರಸ್ತೆಗಿಳಿಯಲು ಸಜ್ಜಾದ ಡಬ್ಬಲ್ ಡೆಕ್ಕರ್ ಬಸ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೈಸೂರಿನಲ್ಲಿ ರಸ್ತೆಗಿಳಿಯಲು ಡಬ್ಬಲ್ ಡೆಕ್ಕರ್ ಬಸ್ ಗಳು ತಯಾರಾಗಿದ್ದು ಕೆಲ ದಿನಗಳಲ್ಲೇ ದಿನದಲ್ಲಿ ಡಬಲ್‌ ಡೆಕ್ಕರ್‌ ಬಸ್‌ ನಲ್ಲಿ ಕುಳಿತು ಮೈಸೂರಿನ ಸಂಪೂರ್ಣ ಪ್ರವಾಸಿತಾಣಗಳ ಸವಿಯನ್ನು ಸವಿಯಬಹುದಾಗಿದೆ. ಮೈಸೂರಿಗರ ಬಹುದಿನಗಳ ಬೇಡಿಕೆಗೆ ಸರ್ಕಾರ ಅಸ್ತು ಎಂದಿದ್ದು, ವಿಶ್ವ ಪ್ರಸಿದ್ಧ ಪ್ರವಾಸಿತಾಣಗಳಾದ ಮೈಸೂರು ಹಾಗೂ ಹಂಪಿಯ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಡಬಲ್ ಡೆಕ್ಕರ್ ಬಸ್ ಸೇವೆ ಆರಂಭಸಲಾಗುತ್ತಿದೆ. ಮೈಸೂರಿನಲ್ಲಿ ಕೇವಲ ದಸರಾ ಸಂದರ್ಭಗಳಲ್ಲಿ ಮಾತ್ರ ಡಬಲ್ ಡೆಕ್ಕರ್ ಬಸ್ ಸಂಚರಿಸುತ್ತಿತ್ತು ಇದೀಗ ವರ್ಷವಿಡೀ ಡಬಲ್

ಮೈಸೂರಿನಲ್ಲಿ ರಸ್ತೆಗಿಳಿಯಲು ಸಜ್ಜಾದ ಡಬ್ಬಲ್ ಡೆಕ್ಕರ್ ಬಸ್ Read More »

ಮತ್ತೆ ಮಿಡಿದ ಸುಧಾಮೂರ್ತಿ ಮಾತೃಹೃದಯ

ಬೆಂಗಳೂರು: ಕೊರೊನಾ ವೈರಸ್ ಬಗ್ಗೆ ಸಾಮಾಜಿಕ ಕಾಳಜಿಯನ್ನು ಹೊಂದಿರುವ ಸುಧಾಮೂರ್ತಿಯವರು ಮತ್ತೇ ತಮ್ಮ ಕೈಲಾದ ಸಹಾಯವನ್ನು ಮಾಡಲು ಮುಂದೆ ಬಂದಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್ ಅವರಿಗೆ ಇನ್ಫೋಸಿಸ್ ಫೌಂಡೇಶನ್ ನಿಂದ ಕರೆ ಮಾಡಿದ ಸುಧಾಮೂರ್ತಿಯವರು, ದೇಶ-ವಿದೇಶಗಳಲ್ಲಿ ಆತಂಕ ತಂದಿರುವ ಕರೋನಾವೈರಸ್ ವ್ಯಾಪಕವಾಗಿ ಹರಡದಂತೆ ಕರ್ನಾಟಕದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದ್ದಾರೆ. ಕರ್ನಾಟಕದಲ್ಲಿ ಒಂದು ಆಸ್ಪತ್ರೆಯನ್ನು ತಮಗೆ ವಹಿಸಿದರೆ, ಅದನ್ನು ಕೊರೋನಾವೈರಸ್ ಚಿಕಿತ್ಸೆಗಾಗಿ ಇನ್ಫೋಸಿಸ್ ಫೌಂಡೇಶನ್ ನಿಂದ ಸಂಸ್ಥೆಯ ವೆಚ್ಚದಲ್ಲಿ ಪೂರ್ಣ

ಮತ್ತೆ ಮಿಡಿದ ಸುಧಾಮೂರ್ತಿ ಮಾತೃಹೃದಯ Read More »

ವಿಶ್ವಸಂಸ್ಥೆಯಲ್ಲಿ ಪ್ರದರ್ಶನಗೊಳ್ಳುವ ಮೂಲಕ ದಾಖಲೆ ನಿರ್ಮಿಸಿದ ಕರ್ನಾಟಕದ ಸಾಕ್ಷ್ಯಚಿತ್ರ…!

ಬೆಂಗಳೂರು: ಅಮೋಘವರ್ಷ ಜೆ.ಎಸ್, ಕಲ್ಯಾಣ್ ವರ್ಮಾ, ಶರತ್ ಚಂಪತಿ, ವಿಜಯ್ ಮೋಹನ್ ರಾಜ್ ನಿರ್ದೇಶನದ ‘ವೈಲ್ಡ್ ಕರ್ನಾಟಕ’ ಸಾಕ್ಷ್ಯಚಿತ್ರ ಈಗ ವಿಶ್ವಸಂಸ್ಥೆಯಲ್ಲಿಯೂ ಗಮನ ಸೆಳೆದಿದೆ. ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಮಾರ್ಚ್ 4 ರಂದು ಈ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಆ ಮೂಲಕ ವಿಶ್ವಸಂಸ್ಥೆಯಲ್ಲಿ ಪ್ರದರ್ಶಿತಗೊಂಡ ಮೊದಲ ವೈಲ್ಡ್ ಲೈಫ್ ಸಾಕ್ಷ್ಯಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದ ಮೊದಲ ನೈಸರ್ಗಿಕ ಸಾಕ್ಷ್ಯಚಿತ್ರವಾಗಿರುವ ‘ವೈಲ್ಡ್ ಕರ್ನಾಟಕ’ ಕ್ಕೆ ಪ್ರಸಿದ್ಧ ಸಂಗೀತ-ನಿರ್ಮಾಪಕ ರಿಕಿ ಕೆಜ್ ಥೀಮ್ ಸಂಗೀತವನ್ನು ಸಂಯೋಜಿಸಿದದ್ದರೆ. ಡೇವಿಡ್

ವಿಶ್ವಸಂಸ್ಥೆಯಲ್ಲಿ ಪ್ರದರ್ಶನಗೊಳ್ಳುವ ಮೂಲಕ ದಾಖಲೆ ನಿರ್ಮಿಸಿದ ಕರ್ನಾಟಕದ ಸಾಕ್ಷ್ಯಚಿತ್ರ…! Read More »

ಮೈಸೂರು – ಬೆಂಗಳೂರು : ‘ಟಿಪ್ಪು ಎಕ್ಸ್‌ಪ್ರೆಸ್‌’ನಲ್ಲಿ ಇಂದು ಮಹಿಳಾ ಸಿಬ್ಬಂದಿಗಳದ್ದೆ ಕಾರುಬಾರು..!

ಮೈಸೂರು: ಮೈಸೂರು-ಬೆಂಗಳೂರು ಟಿಪ್ಪು ಎಕ್ಸ್‌ಪ್ರೆಸ್‌ನಲ್ಲಿ ಇಂದು ಸಂಪೂರ್ಣ ಮಹಿಳಾ ಸಿಬ್ಬಂದಿಗಳೇ ಕರ್ತವ್ಯದಲ್ಲಿದ್ದದ್ದು ಎಲ್ಲರ ಗಮನ ಸೆಳೆಯಿತು. ಮಾರ್ಚ್ 1 ರಿಂದ ಮಾರ್ಚ್ 10 ರವರೆಗೆ 10 ದಿನಗಳ ಕಾಲ ಭಾರತೀಯ ಮಹಿಳಾ ದಿನಾಚರಣೆಯ ಅಭಿಯಾನವನ್ನು ಭಾರತೀಯ ರೈಲ್ವೆಯಾದ್ಯಂತ ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಮೈಸೂರು ವಿಭಾಗದ ವತಿಯಿಂದ ಇಂದು ಈ ವಿನೂತನ ಪ್ರಯತ್ನ ನಡೆಸಲಾಯಿತು. ಈಗಾಗಲೇ ಮೈಸೂರು ವಿಭಾಗವು ಆರೋಗ್ಯ ತಪಾಸಣೆ, ಯೋಗ ಶಿಬಿರಗಳು, ಚಾರಣ, ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಂತಹ ವಿವಿಧ ಚಟುವಟಿಕೆಗಳನ್ನು ಆಯೋಜಿಸಿದೆ, ಲಿಂಗ ಸಮಾನ

ಮೈಸೂರು – ಬೆಂಗಳೂರು : ‘ಟಿಪ್ಪು ಎಕ್ಸ್‌ಪ್ರೆಸ್‌’ನಲ್ಲಿ ಇಂದು ಮಹಿಳಾ ಸಿಬ್ಬಂದಿಗಳದ್ದೆ ಕಾರುಬಾರು..! Read More »

ಮಹಿಳಾ ಟಿ-20 ವಿಶ್ವಕಪ್: ಸೆಮಿ ಫೈನಲ್ ‘ಆಡದೇ’ ಫೈನಲ್’ಗೆ ಲಗ್ಗೆಯಿಟ್ಟ ಟೀಂ ಇಂಡಿಯಾ..!

ಕ್ರಿಕೆಟ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರೋ ವನಿತೆಯರ ಅಂತಾರಾಷ್ಟ್ರೀಯ ಟಿ20 ವಿಶ್ವಕಪ್ ನ ಸೆಮಿಫೈನಲ್ ಪಂದ್ಯ ಮಳೆಯಿಂದಾಗಿ ರದ್ದಾದ ಹಿನ್ನೆಲೆಯಲ್ಲಿ ಭಾರತ ಮಹಿಳೆಯರ ತಂಡ ಫೈನಲ್ ತಲುಪಿದೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧ ನಡೆಯಬೇಕಿದ್ದ ಸೆಮಿಫೈನಲ್ ಪಂದ್ಯ ಸಂಪೂರ್ಣ ಮಳೆಗೆ ಅಹುತಿಯಾಯಿತು. ಟಾಸ್ ಕೂಡ ನಡೆಯದೇ ಪಂದ್ಯ ರದ್ದಾಯಿತು. ನಿಗದಿತ 9.30 ಕ್ಕೆ ನಡೆಯಬೇಕಿದ್ದ ಪಂದ್ಯ ಕಟ್ ಆಫ್ ಸಮಯವಾದ 11 ಗಂಟೆಯವರೆಗೂ ಮಳೆಯ ಕಾರಣ ನಡೆಯಲಿಲ್ಲ. ಆದ್ದರಿಂದ ಪಂದ್ಯವನ್ನ ರದ್ದುಪಡಿಸಲಾಯಿತು. ಸೆಮಿಫೈನಲ್ ಪಂದ್ಯಕ್ಕೆ ಯವುದೇ ಕಾಯ್ದಿರಿಸಿದ

ಮಹಿಳಾ ಟಿ-20 ವಿಶ್ವಕಪ್: ಸೆಮಿ ಫೈನಲ್ ‘ಆಡದೇ’ ಫೈನಲ್’ಗೆ ಲಗ್ಗೆಯಿಟ್ಟ ಟೀಂ ಇಂಡಿಯಾ..! Read More »

Scroll to Top