April 3, 2020

ಸಚಿನ್, ಗಂಗೂಲಿ, ಕೊಹ್ಲಿ ಸೇರಿದಂತೆ 40 ಕ್ರೀಡಾಪಟುಗಳೊಂದಿಗೆ ಮೋದಿ ಮಹತ್ವದ ಸಭೆ..!

ನವದೆಹಲಿ: ಭಾರತ ದಿಗ್ಗಜ ಹಾಗೂ ಪ್ರಮುಖ ಕ್ರೀಡಾಪಟುಗಳ ಜೊತೆ ಪ್ರಧಾನಿ ಮೋದಿ ಅವರು ಇಂದು ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೇರಿದಂತೆ ಸುಮಾರು 40 ಜನ ಕ್ರೀಡಾಪುಟಗಳ ಜೊತೆ ಕೋರೊನಾ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡ ಮೋದಿ, ಕೋವಿಡ್​-19 ವಿರುದ್ಧದ ಹೋರಾಟದಲ್ಲಿ ನೀವೆಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಕ್ರೀಡಾಪಟುಗಳು ವಾಸವಾಗಿರುವ ನಗರಗಳಲ್ಲಿ ಕೊರೊನಾ […]

ಸಚಿನ್, ಗಂಗೂಲಿ, ಕೊಹ್ಲಿ ಸೇರಿದಂತೆ 40 ಕ್ರೀಡಾಪಟುಗಳೊಂದಿಗೆ ಮೋದಿ ಮಹತ್ವದ ಸಭೆ..! Read More »

ಮೈಸೂರಿನ ಕೆ.ಆರ್.ನಗರ ತಾಲ್ಲೂಕಿನ ಹಲವೆಡೆ ಲಘು ಭೂಕಂಪ: ಆತಂಕಗೊಂಡ ಜನ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭೂಕಂಪನದ ಅನುಭವವಾಗಿದೆ. ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಶುಕ್ರವಾರ ಭೂಮಿ ಕಂಪಿಸಿದ ಅನುಭವವಾಗಿದೆ. ಸಂಜೆ 5:15 ರ ಸುಮಾರಿಗೆ ಶಬ್ದದ ಜತೆ 2 ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದೆ. ಇದರಿಂದ ಭಯಭೀತರಾದ ಜನರು ಮನೆಯಿಂದ ಹೊರಗೋಡಿ ಬಂದು ರಸ್ತೆಯಲ್ಲಿ ಗುಂಪು ಗುಂಪಾಗಿ ನಿಂತರು ಎಂದು ತಿಳಿದುಬಂದಿದೆ‌. ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮ, ಚುಂಚನಕಟ್ಟೆ, ಅಂಕನಹಳ್ಳಿ, ತಂದ್ರೆ, ಕರ್ಪೂರವಳ್ಳಿ, ದಿಡ್ಡಹಳ್ಳಿ, ಕಾಟ್ನಾಳು, ಹಳಿಯೂರು, ರಾವಂದೂರು, ಹೊಸೂರು ಸೇರಿ ಸುತ್ತಲಿನ ಹಲವು ಗ್ರಾಮಗಳಲ್ಲಿ ಭೂಮಿ

ಮೈಸೂರಿನ ಕೆ.ಆರ್.ನಗರ ತಾಲ್ಲೂಕಿನ ಹಲವೆಡೆ ಲಘು ಭೂಕಂಪ: ಆತಂಕಗೊಂಡ ಜನ Read More »

ಮನೆ ಬಾಗಿಲಿಗೆ ಬರುತ್ತೆ ಪಡಿತರ: ಮೈಸೂರಿನಲ್ಲಿ ವಿನೂತನ ವ್ಯವಸ್ಥೆಗೆ ಚಾಲನೆ

ಮೈಸೂರು: ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಸಂಬಂಧ ಇಡೀ ರಾಜ್ಯವೇ ಲಾಕ್ ಡೌನ್ ಆಗಿದ್ದು ಜನರು ಓಡಾಡುವುದನ್ನು ನಿಯಂತ್ರಿಸಲು ಎರಡು ದಿನಗಳಿಂದೀಚೆಗೆ ತರಕಾರಿ, ದಿನಸಿಯನ್ನು ಮನೆ ಬಾಗಿಲಿಗೇ ತಂದು ಕೊಡುವ ವ್ಯವಸ್ಥೆ ಮಾಡಲಾಗಿತ್ತು. ಇದೀಗ ತರಕಾರಿ, ದಿನಸಿ ಜೊತೆಗೆ ಪಡಿತರವನ್ನೂ ಮನೆ ಬಾಗಿಲಿಗೇ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ರಾಜ್ಯ ಸರ್ಕಾರದ ಅಡಿಯಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು, ಇಂದು ಚಾಲನೆ ನೀಡಲಾಗಿದೆ. ಪಡಿತರವನ್ನು ಪಡೆಯಲು ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಯ ಮುಂದೆ ಗುಂಪುಗೂಡುವುದರ ಮೂಲಕ

ಮನೆ ಬಾಗಿಲಿಗೆ ಬರುತ್ತೆ ಪಡಿತರ: ಮೈಸೂರಿನಲ್ಲಿ ವಿನೂತನ ವ್ಯವಸ್ಥೆಗೆ ಚಾಲನೆ Read More »

ಮೈಸೂರಿನಲ್ಲಿ ಸ್ಯಾನಿಟೈಸರ್ ಸಿಂಪಡಣೆಗೆ ಹೊಸ ಐಡಿಯಾ

ಮೈಸೂರು: ಮೈಸೂರಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾದ ನಂತರ ಜಾಗೃತಿ ಮೂಡಿಸುವ ಕಾರ್ಯಗಳು ಹೆಚ್ಚಾಗಿದೆ. ನಗರದ ಎಂಜಿ ರಸ್ತೆಯ ತರಕಾರಿ ಮಾರುಕಟ್ಟೆಯಲ್ಲಿ ಇಂದಿನಿಂದ ಸ್ಯಾನಿಟೈಸರ್ ಎಂಟ್ರಿ ಪಾಥ್ ಮಾಡಲಾಗಿದ್ದು ಮಾರುಕಟ್ಟೆಗೆ ಆಗಮಿಸುವವರಿಗೆಲ್ಲಾ ದೇಹದ ಮೇಲೆ ಸ್ಯಾನಿಟೈಸರ್ ಮಾಡಲಾಗುತ್ತಿದೆ. ಇದು ಪ್ರಾಯೋಗಿಕ ಪ್ರಯತ್ನವಾಗಿದ್ದು ಜನರಿಗೆ ಪ್ರತ್ಯೇಕವಾಗಿ ಸ್ಯಾನಿಟೈಸರ್ ನೀಡಲು ಸಾಧ್ಯವಿಲ್ಲ. ಹೀಗಾಗಿ ತರಕಾರಿ ಮಾರುಕಟ್ಟೆಗೆ ಎಂಟ್ರಿ ಕೊಡುವ ಗ್ರಾಹಕರು, ವ್ಯಾಪಾರಸ್ಥರು ಇಡೀ ದೇಹದ ಮೇಲೆ 6 ಸೆಕೆಂಡ್ ಸ್ಯಾನಿಟೈಸರ್ ಮಾಡಲಾಗುತ್ತದೆ. ಸೋಡಿಯಂ ಹೈಪೋ ಕ್ಲೋರೈಡ್ ಔಷಧಿ ಮಿಶ್ರಿತ ಸ್ಯಾನಿಟೈಸರ್

ಮೈಸೂರಿನಲ್ಲಿ ಸ್ಯಾನಿಟೈಸರ್ ಸಿಂಪಡಣೆಗೆ ಹೊಸ ಐಡಿಯಾ Read More »

ನಾಳೆ ನಂಜನಗೂಡು ಪಂಚ‌ ಮಹಾರಥೋತ್ಸವ ನಡೆಯಲ್ಲ

ಮೈಸೂರು: ದಕ್ಷಿಣ ಕಾಶಿ ಎಂದು ಪ್ರಸಿದ್ಧಗೊಂಡ ನಂಜನಗೂಡಿನಲ್ಲಿ ನಾಳೆ(ಏಪ್ರಿಲ್ 4) ಶ್ರೀಕಂಠೇಶ್ವರ ಸ್ವಾಮಿಯ ‘ಪಂಚಮಹಾ ರಥೋತ್ಸವ’ ನಡೆಯಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಇಂದು ಮಾಹಿತಿ ನೀಡಿದ ಅವರು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲು ಸೂಚನೆ ನೀಡಲಾಗಿದೆ. ದೇವಾಲಯದ ಒಳಗೆ ಯಾವುದೇ ಪೂಜೆ ಇದ್ದರೂ ಅರ್ಚಕರ ಸಾಮಾಜಿಕ ಅಂತರದಲ್ಲಿ ನೆರವೇರಲಿದೆ. ರಥ ಎಳೆಯುವುದು ಅಥವಾ ರಥಕ್ಕೆ ಉತ್ಸವ ಮೂರ್ತಿ ಪ್ರತಿಷ್ಠಾಪಿಸುವಂತಿಲ್ಲ. ಎಲ್ಲರೂ ಮನೆಯಿಂದಲೇ ದೇವರನ್ನು ಪ್ರಾರ್ಥಿಸಿ. ಯಾರೂ ದೇವಾಲಯದ ಬಳಿ ಬರದೆ ಹೊರಗೆ

ನಾಳೆ ನಂಜನಗೂಡು ಪಂಚ‌ ಮಹಾರಥೋತ್ಸವ ನಡೆಯಲ್ಲ Read More »

ಆತಂಕಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ ಮೈಸೂರು ಜಿಲ್ಲಾಧಿಕಾರಿ

ಮೈಸೂರು: ನಂಜನಗೂಡು ಜ್ಯುಬಿಲಿಯೆಂಟ್ ಕಾರ್ಖಾನೆ ಕಾರ್ಮಿಕರ ಕೊರೋನಾ ವೈರಸ್ ಸೋಂಕು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆತಂಕಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಮೈಸೂರಿನಲ್ಲಿ ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು ಸೋಂಕಿತರ ಸಂಪರ್ಕ ವ್ಯಕ್ತಿಗಳ ಸ್ಯಾಂಪಲ್ ಪರೀಕ್ಷೆ ಮಾಡಲೇಬೇಕು. ಸದ್ಯ ಪ್ರೈಮರಿ ಸಂಪರ್ಕ ಹೊಂದಿದ 223 ಜನರ ಸ್ಯಾಂಪಲ್ ಪರೀಕ್ಷೆ ನಡೆಯಬೇಕಿದೆ. ನಂಜನಗೂಡಿನ 19 ಕೇಸ್ ಪ್ರೈಮರಿ ಸಂಪರ್ಕದ ಹುಡುಕಾಟವು ಮುಂದುವರೆದಿದೆ. ಸಂಪರ್ಕಿತರ ಸಂಖ್ಯೆ ನೂರೂ ಆಗಬಹುದು, ಸಾವಿರವೂ ಆಗಬಹುದು ಎಂದು ತಿಳಿಸಿದರು. ಎಲ್ಲ ಸ್ಯಾಂಪಲ್ ಪರೀಕ್ಷೆಗೆ

ಆತಂಕಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ ಮೈಸೂರು ಜಿಲ್ಲಾಧಿಕಾರಿ Read More »

Scroll to Top