April 2020

ರಸ್ತೆಯಲ್ಲಿ ಬಿದ್ದಿದ್ದ ನೋಟಿಗೆ ಸ್ಯಾನಿಟೈಸರ್ ಹಾಕಿ, ಬೆಂಕಿ ಹಚ್ಚಿದ ವ್ಯಕ್ತಿ

ಮೈಸೂರು: ಕೊರೋನಾ ಭೀತಿ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಬಿದ್ದಿದ್ದ ದುಡ್ಡಿಗೆ ಜನರು ಬೆಂಕಿ‌ ಹಚ್ಚಿದ ಘಟನೆ ಮೈಸೂರಿನಲ್ಲಿ ನಡೆದಿದೆ. ನಜರ್‌ಬಾದ್‌ನ ಮೆಡಿಕಲ್ ಸ್ಟೋರ್‌ವೊಂದರ ಮುಂಭಾಗ ಬಿದ್ದಿದ್ದ 100ರ ಹೊಸ ನೋಟು ನೋಡಿ ಆತಂಕಗೊಂಡ ಜನ, ತಕ್ಷಣ ಅದಕ್ಕೆ ಸ್ಯಾನಿಟೈಸರ್ ಹಾಕಿ ಬೆಂಕಿ ಹಚ್ಚಿದ್ದಾರೆ. ಮುಂಭಾಗ 100 ರೂ. ಮುಖಬೆಲೆಯ ನೋಟು ಬಿದ್ದಿತ್ತು. ನೋಟಿನಲ್ಲಿ ಕೊರೋನಾ ವೈರಸ್ ಅಂಟಿರಬಹುದೆಂಬ ಶಂಕೆಯಿಂದ ನೋಟಿಗೆ ವ್ಯಕ್ತಿಯೋರ್ವರು ಮೊದಲು ಸ್ಯಾನಿಟೈಸರ್ ಹಾಕಿ‌ ನಂತರ ಬೆಂಕಿ ಇಟ್ಟಿದ್ದಾರೆ. ನೋಟಿಗೆ ಬೆಂಕಿ‌ ಇಟ್ಟ ವಿಡಿಯೋ ವೈರಲ್ ಆಗಿದ್ದು, […]

ರಸ್ತೆಯಲ್ಲಿ ಬಿದ್ದಿದ್ದ ನೋಟಿಗೆ ಸ್ಯಾನಿಟೈಸರ್ ಹಾಕಿ, ಬೆಂಕಿ ಹಚ್ಚಿದ ವ್ಯಕ್ತಿ Read More »

ಮೇ 3ರ ವರೆಗೆ ಲಾಕ್‌ಡೌನ್ ಮುಂದುವರಿಕೆ: ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಕೊರೋನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ದೇಶದಾದ್ಯಂತ ಮೇ 3ರವರೆಗೂ ದೇಶದಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕೊರೋನಾ ವೈರಸ್ ವಿರುದ್ಧದ ಭಾರತದ ಹೋರಾಟ ಅದ್ಬುತವಾಗಿ ನಡೆಯುತ್ತಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ತೊಡಗಿಕೊಂಡಿರುವ ಎಲ್ಲರ ತ್ಯಾಗದಿಂದ ಇಂದು ಭಾರತ ಸುರಕ್ಷಿತವಾಗಿದೆ. ನಿಮ್ಮ ತ್ಯಾಗದಿಂದ ಹಾನಿ ಕಡಿಮೆಯಾಗಿದೆ. ಎಲ್ಲರೂ ಶಿಸ್ತಿನ ಸಿಪಾಯಿಗಳಂತೆ ಕರ್ತವ್ಯ ನಿರ್ವಹಿಸಿದ್ದೀರಿ. ನಿಮ್ಮ ಪರಿಶ್ರಮದಿಂದಲೇ ಪರಿಣಾಮ ಕಡಿಮೆಯಾಗಿದ್ದು, ಇದರಿಂದ ಪಾರಾಗಬಹುದು. ಪ್ರಮುಖವಾಗಿ ಯಾರಿಗೂ

ಮೇ 3ರ ವರೆಗೆ ಲಾಕ್‌ಡೌನ್ ಮುಂದುವರಿಕೆ: ಪ್ರಧಾನಿ ಮೋದಿ ಘೋಷಣೆ Read More »

ಕರ್ನಾಟಕದಲ್ಲಿ ಏ.30ರವರೆಗೆ ಲಾಕ್‍ಡೌನ್ ವಿಸ್ತರಣೆ

ಮೈಸೂರು: ಕರ್ನಾಟಕದಲ್ಲಿ ಏಪ್ರಿಲ್ 30ರವರೆಗೆ ಕೊರೊನಾ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ದೇಶಾದ್ಯಂತ ಹೇರಲಾಗಿರುವ 21 ದಿನಗಳ ಲಾಕ್‍ಡೌನ್ ಏ.14ಕ್ಕೆ ಅಂತ್ಯವಾಗಲಿರುವ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಸತತ ಮೂರ್ನಾಲ್ಕು ಗಂಟೆಗಳ ಕಾಲ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. ನಮ್ಮ ನಿರ್ಧಾರವೂ ಇದೇ ಆಗಿತ್ತು ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ದೇಶಾದ್ಯಂತ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ

ಕರ್ನಾಟಕದಲ್ಲಿ ಏ.30ರವರೆಗೆ ಲಾಕ್‍ಡೌನ್ ವಿಸ್ತರಣೆ Read More »

ಮೈಸೂರಿನಲ್ಲಿಯೂ ಕೊರೋನಾ ವಿರುದ್ಧದ ಹೋರಾಟಕ್ಕೆ ಬಳಕೆಯಾಗಲಿದೆ 150 ರೈಲ್ವೆ ಬೋಗಿಗಳು..!

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ನೈರುತ್ಯ ರೈಲ್ವೆ ಮೈಸೂರು ವಿಭಾಗ ಈಗಾಗಲೇ ರೈಲು ಗಾಡಿಗಳ ಸೇವೆಯನ್ನು ಸ್ಥಗಿತಗೊಳಿಸಿದ್ದು, ಅದೇ ರೈಲು ಹಳಿಗಳು, ಕೊರೋನಾ ವಿರುದ್ಧದ ಹೋರಾಟಕ್ಕೆ ಬಳಕೆಯಾಗಲಿವೆ ಎಂದು ತಿಳಿದು ಬಂದಿದೆ. ಮುಂದಿನ 10 ದಿನಗಳಲ್ಲಿ ಮೈಸೂರಿನಲ್ಲಿ 150 ರೈಲ್ವೆ ಬೋಗಿಗಳು ಐಸೋಲೇಶನ್ ವಾರ್ಡ್‌ಗಳಾಗಿ ರೂಪುಗೊಳ್ಳಲಿವೆ. ರೈಲ್ವೆ ಮಂಡಳಿಯ ತೀರ್ಮಾನದಂತೆ ಕ್ವಾರೆಂಟೈನ್‌ನಲ್ಲಿ ಇರಬೇಕಾದ ವ್ಯಕ್ತಿಗಳ ವಾಸ್ತವ್ಯಕ್ಕಾಗಿ ಮೈಸೂರಿನಲ್ಲಿ 138 ಕೋಚ್‌ಗಳನ್ನು ಕೋವಿಡ್‌ -19 ಕ್ವಾರೆಂಟೈನ್ ಕೋಚ್

ಮೈಸೂರಿನಲ್ಲಿಯೂ ಕೊರೋನಾ ವಿರುದ್ಧದ ಹೋರಾಟಕ್ಕೆ ಬಳಕೆಯಾಗಲಿದೆ 150 ರೈಲ್ವೆ ಬೋಗಿಗಳು..! Read More »

ಮೈಸೂರಿನಲ್ಲಿ ಕೊರೋನಾ ನರ್ತನ… ಒಂದೇ ದಿನ 7 ಪ್ರಕರಣ ಪತ್ತೆ

ಮೈಸೂರು: ಮೈಸೂರಿನಲ್ಲ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಿದ್ದು ಇಂದು ಒಂದೇ ದಿನ 7 ಪ್ರಕರಣ ಪತ್ತೆಯಾಗಿದೆ. ಇಂದು 7 ಪ್ರಕರಣ ಪತ್ತೆಯಾದ ಹಿನ್ನಲೆ ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 28ಕ್ಕೇರಿದೆ. ಈ 7 ಜನರಲ್ಲಿ 5 ಮಂದಿ ದೆಹಲಿಯವರು. 134, 135, 136, 137 & 138ನೇ ಪ್ರಕರಣದವರು ಕ್ರಮವಾಗಿ 38, 19, 39, 39 ಮತ್ತು 54 ವರ್ಷದ ಪುರುಷರಾಗಿದ್ದಾರೆ. ಇವರೆಲ್ಲರಿಗೂ ದಿಲ್ಲಿ ಪ್ರಯಾಣ ಬೆಳೆಸಿದ ಇತಿಹಾಸವಿದ್ದು ನಗರದ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೈಸೂರಿನಲ್ಲಿ ಕೊರೋನಾ ನರ್ತನ… ಒಂದೇ ದಿನ 7 ಪ್ರಕರಣ ಪತ್ತೆ Read More »

ಅನವಶ್ಯಕವಾಗಿ ನಗರದಲ್ಲಿ ಓಡಾಡಿದ 388 ವಾಹನಗಳು ಸೀಜ್

ಮೈಸೂರು: ಕೊರೋನಾ ದಿನೇ ದಿನೇ ಹೆಚ್ಚಾಗುತ್ತಿದ್ದು ನಿಮ್ಮ ಸೇಫ್ಟೀಯಲ್ಲಿ ನೀವೀರಿ ಅಂತ ಪೋಲಿಸ್ ಇಲಾಖೆ 144 ಸೆಕ್ಸನ್ ಜಾರಿ ಮಾಡಿದ್ರೂ ಸಹ ಜನರು ಮಾತ್ರ ಅನವಶ್ಯಕವಾಗಿ ಓಡಾಡುವುದನ್ನ ಮಾತ್ರ ಬಿಟ್ಟಿಲ್ಲ.ಏ 3 ರಂದು ಅನವಶ್ಯಕವಾಗಿ ಓಡಾಡಿದ 388 ವಾಹನ ಸೀಜ್ ಮಾಡಿದ್ದಾರೆ. ಎನ್.ಆರ್, ಮಂಡಿ, ವಿವಿ.ಪುರಂ, ಮೇಟಗಳ್ಳಿ, ವಿಜಯನಗರ, ಹೆಬ್ಬಾಳ್, ದೇವರಾಜ, ಲಷ್ಕರ್, ನಜರ್ ಬಾದ್, ಉದಯಗಿರಿ, ಆಲನಹಳ್ಳಿ, ಕೆ.ಆರ್, ಲಕ್ಷ್ಮೀಪುರಂ, ಅಶೋಕ ಪುರಂ, ವಿದ್ಯಾರಣ್ಯಪುರಂ, ಸರಸ್ವತಿಪುರಂ, ಕುವೆಂಪು ನಗರ ವ್ಯಪ್ತಿಯಲ್ಲಿ ಪೊಲೀಸರು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಅನವಶ್ಯಕವಾಗಿ ನಗರದಲ್ಲಿ ಓಡಾಡಿದ 388 ವಾಹನಗಳು ಸೀಜ್ Read More »

ಭಾರತಕ್ಕೆ ವಿಶ್ವಬ್ಯಾಂಕ್’ನಿಂದ 7600 ಕೋಟಿ ನೆರವು ಘೋಷಣೆ..!

ವಾಷಿಂಗ್ಟನ್: ಕೊರೊನಾ ವಿರುದ್ಧ ದಿಟ್ಟ ಹೋರಾಟ ನಡೆಸುತ್ತಿರು ಭಾರತಕ್ಕೆ ಒಂದು ಬಿಲಿಯನ್‌ ಅಮೆರಿಕನ್‌ ಡಾಲರ್‌ (ಸುಮಾರು 7600 ಕೋಟಿ ರೂಪಾಯಿ) ಗಳಷ್ಟು ತುರ್ತು ಆರ್ಥಿಕ ನೆರವು ನೀಡಲು ವಿಶ್ವಬ್ಯಾಂಕ್ (WB) ಸಮ್ಮತಿಸಿದೆ. ದೇಶದಲ್ಲಿ ಕೊರೋನಾ ವೈರಸ್ ರೌದ್ರನರ್ತನ ಜೋರಾಗಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3000 ರ ಗಡಿ ದಾಟಿದ್ದು ಒಟ್ಟು 80ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಮಹಾಮಾರಿಯ ಹೊಡೆತಕ್ಕೆ ಭಾರತ ತತ್ತರಿಸಿ ಹೋಗುತ್ತಿದ್ದು, ಭಾರತದ ನೆರವಿಗೆ ವಿಶ್ವಬ್ಯಾಂಕ್ ಮುಂದಾಗಿದೆ. ವಿಶ್ವಬ್ಯಾಂಕ್ ನೀಡಿರುವ ನೆರವಿನಿಂದ ಭಾರತದಲ್ಲಿ ಉತ್ತಮ

ಭಾರತಕ್ಕೆ ವಿಶ್ವಬ್ಯಾಂಕ್’ನಿಂದ 7600 ಕೋಟಿ ನೆರವು ಘೋಷಣೆ..! Read More »

ನಿಲ್ಲದ ನಂಜುಂಡನ ರಥೋತ್ಸವ: ಸಣ್ಣದಾಗಿಯಾದರೂ ನೆರೆವೇರಿತು ಭಕ್ತರ ಆಸೆ

ಮೈಸೂರು: ಕೊರೋನಾ ಮಹಾಮಾರಿಯಿಂದ ಲಕ್ಷಾಂತರ ಮಂದಿ ಸೇರಿ ಆಚರಿಸುತ್ತಿದ್ದ ನಂಜನಗೂಡಿನ ಪಂಚ ರಥೋತ್ಸವ ನೆನೆಗುದಿಗೆ ಬೀಳುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ದೇವಸ್ಥಾನದ ಆವರಣದಲ್ಲಿ ಸಾಮಾಜಿಕ ಅಂತರದಲ್ಲೇ ನಂಜನಗೂಡು ‌ನಂಜುಡೇಶ್ವರನ‌ ರಥೋತ್ಸವ ಜರುಗಿದೆ. ಗೌತಮ ರಥದ ತದ್ರೂಪಿ ಪುಟ್ಟ ರಥವನ್ನು ಮಾಡಿ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಿಗ್ಗೆ 5:35ಕ್ಕೆ ಆರಂಭವಾಗಿ ಸದ್ದು ಗದ್ದಲವಿಲ್ಲದೆ ಸಾಂಪ್ರದಾಯಿಕವಾಗಿ ವೇದ ಮಂತ್ರಗಳೊಂದಿಗೆ ರಥದ ಬೀದಿಯಲ್ಲಿ ಸಾಗಿ ನಂಜುಂಡೇಶ್ವರ ರಥೋತ್ಸವ ಮುಕ್ತಾಯವಾಯ್ತು. ವಿಡಿಯೋ ನೋಡಿ:

ನಿಲ್ಲದ ನಂಜುಂಡನ ರಥೋತ್ಸವ: ಸಣ್ಣದಾಗಿಯಾದರೂ ನೆರೆವೇರಿತು ಭಕ್ತರ ಆಸೆ Read More »

ಸಚಿನ್, ಗಂಗೂಲಿ, ಕೊಹ್ಲಿ ಸೇರಿದಂತೆ 40 ಕ್ರೀಡಾಪಟುಗಳೊಂದಿಗೆ ಮೋದಿ ಮಹತ್ವದ ಸಭೆ..!

ನವದೆಹಲಿ: ಭಾರತ ದಿಗ್ಗಜ ಹಾಗೂ ಪ್ರಮುಖ ಕ್ರೀಡಾಪಟುಗಳ ಜೊತೆ ಪ್ರಧಾನಿ ಮೋದಿ ಅವರು ಇಂದು ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೇರಿದಂತೆ ಸುಮಾರು 40 ಜನ ಕ್ರೀಡಾಪುಟಗಳ ಜೊತೆ ಕೋರೊನಾ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡ ಮೋದಿ, ಕೋವಿಡ್​-19 ವಿರುದ್ಧದ ಹೋರಾಟದಲ್ಲಿ ನೀವೆಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಕ್ರೀಡಾಪಟುಗಳು ವಾಸವಾಗಿರುವ ನಗರಗಳಲ್ಲಿ ಕೊರೊನಾ

ಸಚಿನ್, ಗಂಗೂಲಿ, ಕೊಹ್ಲಿ ಸೇರಿದಂತೆ 40 ಕ್ರೀಡಾಪಟುಗಳೊಂದಿಗೆ ಮೋದಿ ಮಹತ್ವದ ಸಭೆ..! Read More »

Scroll to Top