May 2020

ರಾಜ್ಯದಲ್ಲಿ ಇಂದು 135 ಕೊರೋನಾ ಪಾಸಿಟೀವ್ ಕೇಸ್ ಪತ್ತೆ: ಮೂವರು ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 135 ಕೊರೋನಾ ಪಾಸಿಟೀವ್ ಕೇಸ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 2418ಕ್ಕೆ ಏರಿಕೆ ಆಗಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡುಬಂದಿದೆ. ಇನ್ನು ರಾಜ್ಯದಲ್ಲಿ ಇಂದು ಕೊರೊನಾಗೆ ಮೂವರು ಮೃತಪಟ್ಟಿದ್ದಾರೆ. ವಿಜಯಪುರದಲ್ಲಿ ಸಕ್ಕರೆ ಖಾಯಿಲೆ, ಶ್ವಾಸಕೋಶ ಸಮಸ್ಯೆ ಹಾಗೂ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ P-1011, ಯಾದಗಿರಿಯಲ್ಲಿ 69 ವರ್ಷದ ಮಹಿಳೆ P-2301, ಬೀದರ್​ನಲ್ಲಿ ಉಸಿರಾಟದ ಸಮಸ್ಯೆ ಹಾಗೂ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದ P-1712 ಸಾವನ್ನಪ್ಪಿದ್ದಾರೆ. ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್..? ಕಲಬುರ್ಗಿ 28, […]

ರಾಜ್ಯದಲ್ಲಿ ಇಂದು 135 ಕೊರೋನಾ ಪಾಸಿಟೀವ್ ಕೇಸ್ ಪತ್ತೆ: ಮೂವರು ಸಾವು Read More »

ಹೊರ ರಾಜ್ಯದಿಂದ ಬಂದವರಿಗೆ ಹೋಂ ಕ್ವಾರಂಟೈನ್ ಇಲ್ಲ: ಹಾಸ್ಟೆಲ್, ಲಾಡ್ಜ್’ನಲ್ಲಿ ಕ್ವಾರಂಟೈನ್

ಮೈಸೂರು: ಹೊರ ರಾಜ್ಯದಿಂದ ಜಿಲ್ಲೆಗೆ ಆಗಮಿಸಿದವರಿಗೆ ಹೋಂ ಕ್ವಾರಂಟೈನ್’ಗೆ ಅವಕಾಶವಿಲ್ಲ. ಬದಲಿಗೆ ಹಾಸ್ಟೆಲ್ (ಉಚಿತ) ಅಥವಾ ಲಾಡ್ಜ್ (ಹಣ ಪಾವತಿಸಬೇಕು)ನಲ್ಲಿ ಕ್ವಾರಂಟೈನ್’ಗೆ ಒಳಗಾಗಬೇಕು ಎಂದು ಮೈಸೂರು ಜಿಲ್ಲಾಡಳಿತ ತಿಳಿಸಿದೆ. ಮೈಸೂರಿನಲ್ಲಿ ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಗೆ ಆಗಮಿಸುವ ಎಲ್ಲಾ ಅಂತರ ರಾಜ್ಯ ಪ್ರಯಾಣಿಕರನ್ನು 14 ದಿನಗಳವರೆಗೆ ಫೆಸಿಲಿಟಿ ಕ್ಯಾರೆಂಟೈನ್‌ಗೆ ಒಳಪಡಿಸಲಾಗುತ್ತದೆ. ನೀವು ಹಾಸ್ಟೆಲ್ ನಲ್ಲಿ (ಉಚಿತವಾಗಿ) ಅಥವಾ ಹೋಟೆಲ್ ನಲ್ಲಿ (ಪಾವತಿ ಆಧಾರದ ಮೇಲೆ) ಆಯ್ಕೆ ಮಾಡಿಕೊಳ್ಳಬಹುದು. ಸಾರ್ವಜನಿಕ ಹಿತಾಸಕ್ತಿಯ ಮೇಲೆ ಕ್ವಾರೆಂಟೈನ್ ಗೆ ಒಳಪಡಿಸಲಾಗುತ್ತಿದ್ದು, ಆಗಮನದ

ಹೊರ ರಾಜ್ಯದಿಂದ ಬಂದವರಿಗೆ ಹೋಂ ಕ್ವಾರಂಟೈನ್ ಇಲ್ಲ: ಹಾಸ್ಟೆಲ್, ಲಾಡ್ಜ್’ನಲ್ಲಿ ಕ್ವಾರಂಟೈನ್ Read More »

helicopter-ride-in-mysuru-4

ಶೀಘ್ರದಲ್ಲೇ ಮೈಸೂರು ಆರೆಂಜ್ ಝೋನ್ ಆಗಲಿದೆ

ಮೈಸೂರು: ಮೈಸೂರಿನಲ್ಲಿ ಕೊರೋನಾ ತೀವ್ರತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಹಿನ್ನಲೆ ಶೀಘ್ರದಲ್ಲೇ ಮೈಸೂರು ಆರೆಂಜ್ ಝೋನ್ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಎಸ್.ಟಿ.ಸೋಮಶೇಖರ್ ಅವರು ಭರವಸೆ ನೀಡಿದ್ದಾರೆ ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿಂದು ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಮೈಸೂರನ್ನು ಆರೇಂಜ್ ವಲಯವನ್ನಾಗಿ ಮಾಡಿ ಎಂದು ಒತ್ತಾಯ ಮಾಡಿದ್ದೇವೆ. ಸದ್ಯಕ್ಕೆ ಆರೇಂಜ್ ವಲಯವಾಗಲಿದ್ದು, ವಾರದಲ್ಲೇ ಮೈಸೂರು ಕೊರೋನಾ ಮುಕ್ತವಾಗುವ ಸಾಧ್ಯತೆ ಇದೆ. ಈಗಾಗಲೇ ಕೊರೋನಾ 90 ಪಾಸಿಟಿವ್ ಪ್ರಕರಣದಿಂದ 7ಕ್ಕೆ ಬಂದಿದೆ. ಆದ್ದರಿಂದ ಆದಷ್ಟು ಬೇಗ ಶೂನ್ಯಕ್ಕೆ ಇಳಿಯಲಿದೆ.

ಶೀಘ್ರದಲ್ಲೇ ಮೈಸೂರು ಆರೆಂಜ್ ಝೋನ್ ಆಗಲಿದೆ Read More »

ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಜನಕ ಪಾಂಡಂಡ ಕುಟ್ಟಣಿ ಕುಟ್ಟಪ್ಪ(86) ಇನ್ನಿಲ್ಲ

ಬೆಂಗಳೂರು: ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಜನಕ ಪಾಂಡಂಡ ಕುಟ್ಟಣಿ ಕುಟ್ಟಪ್ಪ(86) ಅವರು ಬೆಂಗಳೂರಿನ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಕೊಡಗಿನಲ್ಲಿ ಹಾಕಿ ಪಂದ್ಯಾಟಕ್ಕೆ ಕಾಯಕಲ್ಪ ನೀಡಲು ಕೊಡವ ಕುಟುಂಬಗಳ ನಡುವೆ ಹಾಕಿ ಪಂದ್ಯಾಟ ಆಯೋಜಿಸಿದ್ದ ಕುಟ್ಟಪ್ಪ ಅವರು 1997 ಕರಡದಲ್ಲಿ ಮೊದಲ ಪಂದ್ಯಾಟ ನಡೆಸಿದ್ದರು. ಪ್ರತೀ ವರ್ಷ ಕೊಡಗಿನಲ್ಲಿ 1 ತಿಂಗಳ ಕಾಲ ನಡೆಯುವ ಈ ಕೊಡವ ಹಾಕಿ ಹಬ್ಬ. ಒಲಿಂಪಿಕ್ಸ್ ಮಾದರಿಯಲ್ಲಿ ವಿಶ್ವಾದ್ಯಂತ ಗಮನಸೆಳೆದಿತ್ತು. ಲಿಮ್ಕಾ ಬುಕ್‌ ರೆಕಾರ್ಡ್‌ ಪಾಂಡಂಡ ಕುಟ್ಟಣಿ ಕುಟ್ಟಪ್ಪ ಅವರು 1997ರಲ್ಲಿ ಕಡಂಗ

ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಜನಕ ಪಾಂಡಂಡ ಕುಟ್ಟಣಿ ಕುಟ್ಟಪ್ಪ(86) ಇನ್ನಿಲ್ಲ Read More »

ಜುಬಿಲಿಯೆಂಟ್ ಕಾರ್ಖಾನೆಯಲ್ಲಿ ಸೋಂಕು ಹರಡಿದ ಕುರಿತು 3 ಅಂಶ ಗುರುತು

ಮೈಸೂರು: ಇಡೀ ಜಿಲ್ಲೆಗೆ ಆತಂಕಕ್ಕೆ ಕಾರಣವಾಗಿದ್ದ ನಂಜನಗೂಡು ತಾಲ್ಲೂಕಿನ ಜ್ಯುಬಿಲಿಯೆಂಟ್ ಕಾರ್ಖಾನೆಯಲ್ಲಿ ಕೊರೊನಾ ವೈರಸ್ ಸೋಂಕು ಹರಡಿದ್ದು ಹೇಗೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಉಸ್ತುವಾರಿ ಎಸ್.ಟಿ.ಸೋಮಶೇಖರ್ ಅವರು ಮೂರು ಅಂಶಗಳನ್ನು ಗುರುತಿಸಿದ್ದೇವೆ ಎಂದು ತಿಳಿಸಿದ್ದಾರೆ. ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿಂದು ಮಾದ್ಯಮಗಳೊಂದಿಗೆ ಮಾತನಾಡಿದ ಅವರು ನಂಜನಗೂಡಿನ ಜ್ಯುಬಿಲಿಯೆಂಟ್ ಪ್ರಕರಣದಲ್ಲಿ ಮೂರು ಅಂಶಗಳನ್ನು ಗುರುತಿಸಿದ್ದೇವೆ. ಬೆಂಗಳೂರಿನಲ್ಲಿ ತಬ್ಲಿಘಿ ಮಾದರಿಯ ಸಭೆ ನಡೆದಿತ್ತು. ಆ ಸಭೆಗೆ ಜ್ಯುಬಿಲಿಯೆಂಟ್ ಕಾರ್ಖಾನೆಯ ಕಾರ್ಮಿಕ ಹೋಗಿ ಬಂದಿದ್ದ ಎಂಬುದು ಮೊದಲ ಅಂಶ.

ಜುಬಿಲಿಯೆಂಟ್ ಕಾರ್ಖಾನೆಯಲ್ಲಿ ಸೋಂಕು ಹರಡಿದ ಕುರಿತು 3 ಅಂಶ ಗುರುತು Read More »

ಅಂತರ್ ಜಿಲ್ಲಾ ಪ್ರಯಾಣಕ್ಕೆ ಒನ್ ವೇ ಬದಲಿಗೆ ಟೂವೇ ಪಾಸ್

ಬೆಂಗಳೂರು: ಲಾಕ್ ಡೌನ್ ಜಾರಿಯಾದ ನಂತರ ಊರಿಗೆ ಹೋಗಲು ಸಾಧ್ಯವಾಗದೆ ಇರುವವರಿಗೆ ಒಮ್ಮೆ ಊರಿಗೆ ಹೋಗಿ ಬರಲು ಅವಕಾಶ ಕಲ್ಪಿಸಲಾಗಿದೆ. ಒನ್ ವೇ ಪಾಸ್ ಅನ್ನು ಟು ವೇ ಪಾಸ್ ಆಗಿ ಪರಿಷ್ಕರಿಸಿದ್ದು, ಒಂದು ಸಲ ಜಿಲ್ಲೆಯಿಂದ ಜಿಲ್ಲೆಗೆ ಹೋಗಿ ಬರಲು ಅನುಕೂಲ ಕಲ್ಪಿಸಲಾಗಿದೆ ಕೊರೋನಾ ವೈರಸ್ ಲಾಕ್‌ಡೌನ್ ಸಡಿಲಿಕೆ ಮಾಡಿದ ಬೆನ್ನಲ್ಲೆ ಕೆಲ ನಿಯಮಗಳು ಬದಲಾವಣೆಯಾಗಿದೆ. ಆರಂಭದಲ್ಲಿ ಎರಡು ಜಿಲ್ಲೆಗಳ ನಡುವೆ ಸಂಚರಿಸಲು ಒನ್ ವೇ ಪಾಸ್ ನೀಡಲಾಗಿತ್ತು. ಇದೀಗ ಟೋವೇ ಪಾಸ್ ಜಾರಿ ಮಾಡಲಾಗಿದೆ.

ಅಂತರ್ ಜಿಲ್ಲಾ ಪ್ರಯಾಣಕ್ಕೆ ಒನ್ ವೇ ಬದಲಿಗೆ ಟೂವೇ ಪಾಸ್ Read More »

ಮೈಸೂರಿನ ಸಾವಿರ ಬಡಕುಟುಂಬಗಳಿಗೆ ನೆರವಾದ ಇನ್ಫೋಸಿಸ್

ಮೈಸೂರು: ಕೋವಿಡ್-19 ನಿಂದ ಲಾಕ್‍ಡೌನ್ ಆಗಿರುವ ಹಿನ್ನೆಲೆ ಇನ್ಫೋಸಿಸ್ ಫೌಂಡೇಶ್‍ನ್ ವತಿಯಿಂದ ಬಡ ಹಾಗೂ ನಿರ್ಗತಿಕ ಕುಟುಂಬಳಿಗೆ, ವಲಸೆ ಕಾರ್ಮಿಕರು ಮತ್ತು ಅಸಂಘಟಿತ ವಲಯ ಕಾರ್ಮಿಕರೊಳಗೊಂಡ ಒಟ್ಟು ಒಂದು ಸಾವಿರ ಕುಟುಂಬಗಳಿಕೆ ಅಕ್ಕಿ, ಎಣ್ಣೆ, ಹಿಟ್ಟುಗಳು ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳನ್ನು ಹೊಂದಿರುವ 1000 ಕಿಟ್‍ಗಳನ್ನು ವಿತರಿಸಲಾಯಿತು. ಮೈಸೂರು ಜಿಲ್ಲಾಡಳಿತದ ಪರವಾಗಿ ಮಹಾನಗರ ಪಾಲಿಕೆ ಆಯುಕ್ತರಾದ ಗುರುದತ್ ಹೆಗಡೆ ಅವರು ನಿರ್ಗತಿಕರಿಗೆ ನೆರವಾಗುವಂತೆ ಕೋವಿಡ್-19 ಸಹಾಯ ಟಾಸ್ಕ್ ಫೋರ್ಸ್‍ನ ಸದಸ್ಯರಾಗಿರುವ ಇನ್ಫೋಸಿಸ್‍ನ ಫಾಥಾಹೀನ್ ಮಿಸ್ಬಾ ಮೂಲಕ ವಿನಂತಿಸಲಾಗಿದ್ದು,

ಮೈಸೂರಿನ ಸಾವಿರ ಬಡಕುಟುಂಬಗಳಿಗೆ ನೆರವಾದ ಇನ್ಫೋಸಿಸ್ Read More »

helicopter-ride-in-mysuru-3

ಕೊರೋನಾ ಮುಕ್ತ ಜಿಲ್ಲೆಯತ್ತ ಮೈಸೂರು ದಾಪುಗಾಲು..!

ಮೈಸೂರು: ಅರಮನೆ ನಗರಿ ಮೈಸೂರು ಕರೋನಾ ಮುಕ್ತ ಜಿಲ್ಲೆಯತ್ತ ದಾಪುಗಾಲು ಹಾಕುತ್ತಿದೆ. ಕಳೆದ 6 ದಿನಗಳಿಂದ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ. ಈ‌ ನಡುವೆ ನಿನ್ನೆ ಮತ್ತಿಬ್ಬರು ಕೊರೋನಾ ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 90 ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದ ವೈದ್ಯರುಗಳು ಈವರಗೆ 79 ಮಂದಿಯನ್ನ ಗುಣಮುಖರನ್ನಾಗಿಸಿ ಡಿಸ್ಚಾರ್ಜ್ ಮಾಡಿದ್ದಾರೆ. ಸದ್ಯ 11 ಮಂದಿಗೆ ಮಾತ್ರ ಐಸೋಲೇಟೆಡ್ ವಾರ್ಡ್ ನಲ್ಲಿ ಚಿಕಿತ್ಸೆ ಮುಂದುವರಿದಿದ್ದು ಜಿಲ್ಲೆಯ ಜನರು ನೆಮ್ಮದಿಯ ನಿಟ್ಟುಸಿರುಬಿಡುತ್ತಿದ್ದಾರೆ. ಇದರ ನಡುವೆ ಲಾಕ್ಡೌನ್ ಸಡಿಲಿಕೆಯಿಂದ

ಕೊರೋನಾ ಮುಕ್ತ ಜಿಲ್ಲೆಯತ್ತ ಮೈಸೂರು ದಾಪುಗಾಲು..! Read More »

ಪಾಸ್ ಬಳಸಿ ಮೈಸೂರಿಗೆ ಬಂದ 334 ಮಂದಿಗೆ ಕ್ವರಂಟೈನ್

ಮೈಸೂರು: ಅಂತರ್ ಜಿಲ್ಲಾ ಪ್ರಯಾಣಕ್ಕೆ ಅವಕಾಶ ನಿಡಿದ ಬೆನ್ನಲ್ಲೆ ಮೊದಲ ದಿನವೇ ಪಾಸ್ ಬಳಸಿ ಬೆಂಗಳೂರಿನಿಂದ ಮೈಸೂರಿಗೆ ಸೋಮವಾರ ಒಟ್ಟು 334 ಮಂದಿ ಆಗಮಿಸಿದ್ದು, ಇವರನ್ನು ಹೋಂ ಕ್ವರಂಟೈನ್ ಮಾಡಲಾಗಿದೆ. ಲಾಕ್ ಡೌನ್ ಸಡಿಲವಾಗುತ್ತಿದ್ದಂತೆ ಬೆಂಗಳೂರು ಬಿಟ್ಟು ಬರುತ್ತಿರುವ ಜನರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಸೋಮವಾರ 18 ಕೆಎಸ್.ಆರ್.ಟಿಸಿ ಬಸ್’ಗಳಲ್ಲಿ ಬಂದ 272 ಜನರ ಆರೋಗ್ಯವನ್ನು ಸಾತಗಳ್ಳಿಯ ಬಸ್ ನಿಲ್ದಾಣದಲ್ಲಿ ತಪಾಸಣೆ ಮಾಡಿ ಅವರ ವಿಳಾಸ ಪಡೆದು ಹ್ಯಾಂಡ್ ಸೀಲ್ ಹಾಕಿ ಹೋಂ ಕ್ವಾರಂಟೈನ್ ಮಾಡಲಾಗಿದೆ. ಇನ್ನು 334

ಪಾಸ್ ಬಳಸಿ ಮೈಸೂರಿಗೆ ಬಂದ 334 ಮಂದಿಗೆ ಕ್ವರಂಟೈನ್ Read More »

ಮೈಸೂರು ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತ, ಜಿಲ್ಲಾ ಪೊಲಿಸ್ ಅಧೀಕ್ಷಕ, ಪಾಲಿಕೆ ಆಯುಕ್ತರು ಲೈವ್’ನಲ್ಲಿ ನೀಡಿದ ಮುಖ್ಯ ಮಾಹಿತಿಗಳು

ಮೈಸೂರು: ಕೋವಿಡ್-19 ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಲಾಕ್‍ಡೌನ್ ಮುಂದುವರಿದಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿಗಳಾದ ಅಭಿರಾಮ್ ಜಿ.ಶಂಕರ್, ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ಪ, ಜಿಲ್ಲಾ ಪೊಲಿಸ್ ಅಧೀಕ್ಷಕರಾದ ಸಿ.ಬಿ.ರಿಷ್ಯಂತ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಗುರುದತ್ ಹೆಗಡೆ ಅವರು ದಿನಾಂಕ: 3-5-2020 ರಂದು ಜಂಟಿಯಾಗಿ ವಾರ್ತಾ ಇಲಾಖೆಯ ಎಫ್.ಬಿ. ಪೇಜ್‍ನಲ್ಲಿ ನೀಡಿದ ಲೈವ್ ಸಂದೇಶದ ಮುಖ್ಯಾಂಶಗಳು: ಮೈಸೂರು ಜಿಲ್ಲೆ ಇನ್ನೂ ರೆಡ್ ಜೋನ್‍ನಲ್ಲಿ ಇದ್ದು, ಇಡೀ ಜಿಲ್ಲೆಯನ್ನು ರೆಡ್ ಜೋನ್ ಎಂದೇ ಪರಿಗಣಿಸಬೇಕು. ಕೆಲವೊಂದು ಪ್ರದೇಶಗಳಿಗೆ ಮಾತ್ರ ರೆಡ್ ಜೋನ್ ಅನ್ವಯಿಸುತ್ತದೆ

ಮೈಸೂರು ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತ, ಜಿಲ್ಲಾ ಪೊಲಿಸ್ ಅಧೀಕ್ಷಕ, ಪಾಲಿಕೆ ಆಯುಕ್ತರು ಲೈವ್’ನಲ್ಲಿ ನೀಡಿದ ಮುಖ್ಯ ಮಾಹಿತಿಗಳು Read More »

Scroll to Top