June 2020

ಆಷಾಡದ ಪ್ರತಿ ಶುಕ್ರವಾರದಂದು ಸಾರ್ವಜನಿಕರಿಗಿಲ್ಲ ಚಾಮುಂಡೇಶ್ವರಿ ದರ್ಶನ

ಮೈಸೂರು: ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರತಿ ವರ್ಷ ಅದ್ದೂರಿಯಾಗಿ ನಡೆಯುತ್ತಿದ್ದ ಆಷಾಡ ಮಾಸ ಆಚರಣೆಗೆ ಈ ಬಾರಿ ಸಾರ್ವಜನಿಕ ಪ್ರವೇಶ ಇಲ್ಲ. ಈ ಮಾಸದಲ್ಲಿ ಬರುವ ಪ್ರತಿ ಶುಕ್ರವಾರದಿಂದ ಭಾನುವಾರ ವರೆಗೆ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು. ಚಾಮುಂಡಿ ಬೆಟ್ಟದಲ್ಲಿ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸರ್ವಾನುಮತದಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಜೂನ್ 26 ರಿಂದ ಆಷಾಡ ಶುಕ್ರವಾರ […]

ಆಷಾಡದ ಪ್ರತಿ ಶುಕ್ರವಾರದಂದು ಸಾರ್ವಜನಿಕರಿಗಿಲ್ಲ ಚಾಮುಂಡೇಶ್ವರಿ ದರ್ಶನ Read More »

ಮೈಸೂರು ವಿಶ್ವವಿದ್ಯಾಲಯಕ್ಕೆ ಮತ್ತೊಂದು ಗರಿ: NIRF ರ‍್ಯಾಂಕಿಂಗ್ ಪಟ್ಟಿಯಲ್ಲಿ 27ನೇ ಸ್ಥಾನ

ಮೈಸೂರು: ಶತಮಾನೋತ್ಸವ ಕಂಡಿರುವ ರಾಜ್ಯದ ಪ್ರತಿಷ್ಠಿತ ವಿಶ್ವ ವಿದ್ಯಾನಿಲಯಗಳಲ್ಲಿ ಒಂದಾಗಿರುವ ಮೈಸುರು ವಿಶ್ವವಿದ್ಯಾಲಯವು ‘ರಾಷ್ಟೀಯ ಶಿಕ್ಷಣ ಸಂಸ್ಥೆಗಳ ರ್ಯಾಂಕಿಂಗ್ ವ್ಯವಸ್ಥೆ’ಯ (NIRF)ಪಟ್ಟಿಯಲ್ಲಿ ನೇ ಸ್ಥಾನ ಪಡೆದಿದೆ. ಈ ಪ್ರಶಸ್ತಿಯನ್ನು ಕೇಂದ್ರ ಸರ್ಕಾರದ ಎಂಎಚ್ ಆರ್ ಡಿ ಅಡಿಯಲ್ಲಿ ಕೊಡಮಾಡಲಾಗುತ್ತದೆ. ಭಾರತದಲ್ಲಿರುವ ಎಲ್ಲ ವಿವಿಧ ವಿಶ್ವವಿದ್ಯಾಲಯಗಳ ಸಾಧನೆಗಳನ್ನು ಮಾನದಂಡಗಳನ್ನು ಇಟ್ಟುಕೊಂಡು ರ‍್ಯಾಂಕಿಂಗ್ ಕೊಡಲಾಗುತ್ತದೆ. ಈಗ ಹೆಮ್ಮೆಯ ವಿಚಾರವೆಂದರೆ ಪ್ರಸಕ್ತ ಸಾಲಿನಲ್ಲಿ ಮೈಸೂರು ವಿಶ್ವವಿದ್ಯಾಲಯವು 27ನೇ ರಾಂಕ್ ಗೆ ಭಾಜನವಾಗಿರುವುದು. ಎನ್ಐಆರ್ ಎಫ್ ರ‍್ಯಾಂಕಿಂಗ್ ನಿಂದ ಹಲವು ಉಪಯೋಗಗಳಿವೆ. ಕೆಲವೊಂದು

ಮೈಸೂರು ವಿಶ್ವವಿದ್ಯಾಲಯಕ್ಕೆ ಮತ್ತೊಂದು ಗರಿ: NIRF ರ‍್ಯಾಂಕಿಂಗ್ ಪಟ್ಟಿಯಲ್ಲಿ 27ನೇ ಸ್ಥಾನ Read More »

ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಸಮಯ ನಿಗದಿ: ಈ ದಿನಗಳಲ್ಲಿ ಬೆಟ್ಟಕ್ಕೆ ನೋ ಎಂಟ್ರಿ

ಮೈಸೂರು: ನಾಡದೇವಿ ‘ಚಾಮುಂಡಿ’ ದರ್ಶನಕ್ಕೆ ಸಮಯ ನಿಗದಿ ಮಾಡಲಾಗಿದ್ದು ಈ ದಿನಗಳಲ್ಲಿ ದರ್ಶನ ಭಾಗ್ಯ ಇರುವುದಿಲ್ಲ. ನಗರದ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದರ್ಶನಕ್ಕೆ‌ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಸಮಯ ನಿಗದಿ ಪಡಿಸಿದ್ದು, ಬೆಳಿಗ್ಗೆ 7.30ರಿಂದ ಮಧ್ಯಾಹ್ನ 1 ಗಂಟೆ, ಮಧ್ಯಾಹ್ನ 3.30ರಿಂದ ಸಂಜೆ 5.30ರವರೆಗೆ ಭಕ್ತರು ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಇನ್ನು ಶನಿವಾರ ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ದೇವಾಲಯಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೂ ಚಾಮುಂಡಿಬೆಟ್ಟಕ್ಕೆ ಪ್ರವೇಶಕ್ಕೆ

ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಸಮಯ ನಿಗದಿ: ಈ ದಿನಗಳಲ್ಲಿ ಬೆಟ್ಟಕ್ಕೆ ನೋ ಎಂಟ್ರಿ Read More »

ನಾಳೆಯಿಂದ ವಿಶ್ವವಿಖ್ಯಾತ ಮೈಸೂರು ಅರಮನೆ ವೀಕ್ಷಣೆಗೆ ಲಭ್ಯ

ಮೈಸೂರು: ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ವಿಶ್ವವಿಖ್ಯಾತ ಮೈಸೂರು ಅರಮನೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಜೂನ್. 8ರ ಸೋಮವಾರ ಬೆಳಗ್ಗೆ 10 ಗಂಟೆಯಿಂದ ಅರಮನೆಗೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು ಸಾಮಾಜಿಕ ಅಂತರ, ಮಾಸ್ಕ್ ಧರಿಸೋದು ಕಡ್ಡಾಯವಾಗಿದೆ. 10 ವರ್ಷದೋಳಗಿನ ಮಕ್ಕಳು ಹಾಗೂ 65 ವರ್ಷದ ವೃದ್ದರಿಗೆ ಅರಮನೆ ಪ್ರವೇಶ ಇಲ್ಲ. ಇನ್ನು ಈ ಬಗ್ಗೆ ಅರಮನೆ ಮಂಡಳಿ ಉಪನಿರ್ದೇಶಕರು ಸುಬ್ರಹ್ಮಣ್ಯ ಅವರು ಪ್ರವಾಸಿಗರು ಲಗೆಜ್‌ಗಳನ್ನು ವಾಹನಲ್ಲಿಟ್ಟು ಬರಬೇಕು. ಒಂದು ವೇಳೆ ತಂದಲ್ಲಿ ಡಿಸ್ ಇನ್ಫೆಕ್ಟೆಂಟ್ ಸ್ಪ್ರೇ

ನಾಳೆಯಿಂದ ವಿಶ್ವವಿಖ್ಯಾತ ಮೈಸೂರು ಅರಮನೆ ವೀಕ್ಷಣೆಗೆ ಲಭ್ಯ Read More »

ನಾಳೆಯಿಂದ ದೇವಾಲಯಗಳ ಪುನರಾರಂಭ: ಚಾಮುಂಡಿಬೆಟ್ಟ, ನಂಜನಗೂಡಿನಲ್ಲಿ ಸಕಲ ಸಿದ್ಧತೆ

ಮೈಸೂರು: ಕೊರೊನಾ ವೈರಸ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ರಾಜ್ಯದ ಎಲ್ಲಾ ದೇವಸ್ಥಾನಗಳು ಜೂನ್8 ಸೋಮವಾರದಿಂದ ಬಾಗಿಲು ತೆರೆಯಲಿವೆ. ಈಗಾಗಿ ಮೈಸೂರಿನ ಚಾಮುಂಡಿಬೆಟ್ಟ ಹಾಗೂ ನಂಜನಗೂಡು ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿ ಸಕಲ ಸಿದ್ಧತೆ ನಡೆದಿದೆ. ನಾಳೆ ದೇವಾಲಯಗಳು ಪುನರಾರಂಭ ಹಿನ್ನಲೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯ ಹಾಗು ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡಲಾಗುತ್ತಿದೆ. ಜೊತೆಗೆ ದೇವರ ದರ್ಶನಕ್ಕೆ ಆಗಮಿಸುವ ಭಕ್ತಾಧಿಗಳು ಸಾಮಾಜಿಕ ಅಂತರ ಪಾಲಿಸುವಂತೆ ಮಾರ್ಕ್ ಮಾಡಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಸಕಲ ತಯಾರಿಯನ್ನು ಮಾಡಿಕೊಳ್ಳಲಾಗುತ್ತಿದೆ. ಚಾಮುಂಡಿ ಬೆಟ್ಟಕ್ಕೆ

ನಾಳೆಯಿಂದ ದೇವಾಲಯಗಳ ಪುನರಾರಂಭ: ಚಾಮುಂಡಿಬೆಟ್ಟ, ನಂಜನಗೂಡಿನಲ್ಲಿ ಸಕಲ ಸಿದ್ಧತೆ Read More »

ನಾಳೆಯಿಂದ ಪ್ರವಾಸಿಗರಿಗೆ ಸಿಗಲಿದೆ ವನ್ಯಜೀವಿಗಳ ದರ್ಶನ ಭಾಗ್ಯ: ನಾಗರಹೊಳೆಯಲ್ಲಿ ಮಧ್ಯಾಹ್ನದಿಂದ ಸಫಾರಿ ಆರಂಭ

ಮೈಸೂರು: ಲಾಕ್ ಡೌನ್ ಸಡಿಲಿಕೆ ಹಿನ್ನಲೆಯಲ್ಲಿ ವನ್ಯಜೀವಿ ಪ್ರಿಯರಿಗೂ ಒಂದು ಸಿಹಿ ಸುದ್ದಿ ಇದೆ. ಕಳೆದ 85 ದಿನಗಳಿಂದ ಬಂದ್ ಆಗಿರುವ ನಾಗರಹೊಳೆ ಸಫಾರಿಯು ಸಹ ಜೂನ್ 8 ರಿಂದ ಆರಂಭಗೊಳ್ಳಲಿದೆ. ಸಪಾರಿ ಆರಂಭಿಸುವ ಬಗ್ಗೆ ಈಗಾಗಲೇ ರಾಷ್ಟ್ರೀಯ ಹುಲಿ ಪ್ರಾಧಿಕಾರ ಹಾಗೂ ಕರ್ನಾಟಕ ಸರ್ಕಾರದಿಂದ ಮಾರ್ಗಸೂಚಿ ಪ್ರಕಟಿಸಲಾಗಿದ್ದು ಇದರ ಅನ್ವಯ ಸಫಾರಿಗೆ ಅಗತ್ಯ ಸಿದ್ದತೆ ಕೈಗೊಳ್ಳಲಾಗಿದೆ. ಇನ್ನು ನಾಗರಹೊಳೆಯಲ್ಲಿ ನಾಳೆ ಒಂದು ದಿನ ಮಾತ್ರ ಬೆಳಗಿನ ಸಫಾರಿ ಇರುವುದಿಲ್ಲ. ಮಧ್ಯಾಹ್ನದಿಂದ(3.30pm) ಸಫಾರಿ ಶುರುವಾಗುವುದು. ನಂತರ ದಿನದಲ್ಲಿ

ನಾಳೆಯಿಂದ ಪ್ರವಾಸಿಗರಿಗೆ ಸಿಗಲಿದೆ ವನ್ಯಜೀವಿಗಳ ದರ್ಶನ ಭಾಗ್ಯ: ನಾಗರಹೊಳೆಯಲ್ಲಿ ಮಧ್ಯಾಹ್ನದಿಂದ ಸಫಾರಿ ಆರಂಭ Read More »

ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಲ್ಲಿ ಪ್ರಶಸ್ತಿ: ಪ್ರತಿವರ್ಷ 10 ಗಣ್ಯರಿಗೆ ಗೌರವ

ಮೈಸೂರು: ಈ ವರ್ಷದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನಾಚರಣೆ ಪ್ರಯುಕ್ತ ಮೈಸೂರಿನ ಕೆ.ಆರ್ ವೃತ್ತದಲ್ಲಿರುವ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೈಸೂರು ಹಾಗೂ ರಾಜ್ಯಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರ. ಅವರಿಗೆ ಗೌರವ ಸಲ್ಲಿಸುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಪ್ರತಿ ವರ್ಷ ಅವರ

ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಲ್ಲಿ ಪ್ರಶಸ್ತಿ: ಪ್ರತಿವರ್ಷ 10 ಗಣ್ಯರಿಗೆ ಗೌರವ Read More »

ಕಳೆದ 50 ದಿನಗಳಿಂದ ಚಾಮುಂಡಿ ಬೆಟ್ಟದಲ್ಲಿನ ಪ್ರಾಣಿಗಳಿಗೆ ಆಹಾರ ನೀಡುತ್ತಿದ್ದಾನೆ ಈ ಯುವಕ

ಮೈಸೂರು: ಕೊರೋನಾ ಲಾಕ್’ಡೌನ್ ಹಿನ್ನಲೆ ಆಹಾರ ಸಿಗದೆ ಸಂಕಷ್ಟದಲ್ಲಿದ್ದ ಚಾಮುಂಡಿ ಬೆಟ್ಟದಲ್ಲಿನ ಪ್ರಾಣಿ-ಪಕ್ಷಿಗಳಿಗೆ ಮೈಸೂರಿನ ಯುವಕನೋರ್ವ ಕಳೆದ 50 ದಿನಗಳಿಂದ ಆಹಾರ ನೀಡಿ ಮಾನವೀಯತೆ ಮೆರೆದಿದ್ದಾನೆ. ಚಾಮುಂಡಿ ಬೆಟ್ಟದಲ್ಲಿನ ನೂರಾರು ಕೋತಿಗಳು, ಹಸು, ನಾಯಿಗಳು ದೇವಸ್ಥಾನಕ್ಕೆ ಆಗಮಿಸವವರು ನೀಡುತ್ತಿದ್ದ ಆಹಾರವನ್ನೆ ನೆಚ್ಚಿಕೊಂಡಿದ್ದವು. ಆದರೆ ಲಾಕ್’ಡೌನ್ ಕಾರಣ ಇವುಗಳಿಗೆ ಆಹಾರವೇ ಸಿಗದಂತಾಗಿತ್ತು. ಈಗಾಗಿ ನಗರದ ಅಕ್ಷಯ ಭಂಡಾರ್ ನಿವಾಸಿ ಎಂಜಿನಿಯರಿಂಗ್ ಪದವೀದರ ಹಾಗೂ ಚೆಸ್ ಬಾಕ್ಸಿಂಗ್ ಪಟು ಸಂಜಯ್ ಕುಮಾರ್ ಎಂ.ಕೆ ಎಂಬಾತ ಚಾಮುಂಡಿಬೆಟ್ಟದಲ್ಲಿನ ಪ್ರಾಣಿ-ಪಕ್ಷಿಗಳಿಗೆ ಕಳೆದ 50

ಕಳೆದ 50 ದಿನಗಳಿಂದ ಚಾಮುಂಡಿ ಬೆಟ್ಟದಲ್ಲಿನ ಪ್ರಾಣಿಗಳಿಗೆ ಆಹಾರ ನೀಡುತ್ತಿದ್ದಾನೆ ಈ ಯುವಕ Read More »

ಹಣ್ಣಿನೊಳಗೆ ಸ್ಪೋಟಕ ಇಟ್ಟು ಗರ್ಭಿಣಿ ಹೆಣ್ಣಾನೆಯ ಹತ್ಯೆ: ನಿಂತ ಸ್ಥಿತಿಯಲ್ಲೇ ಜೀವ ಬಿಟ್ಟ ಮುಗ್ಧ ಪ್ರಾಣಿ

ಮಲಪ್ಪುರಂ: ಕೇರಳದ ಮಲಪ್ಪುರ ಜಿಲ್ಲೆಯಲ್ಲಿ ಪಟಾಕಿ ತುಂಬಿದ ಅನಾನಸ್ ತಿಂದು ಗರ್ಭಿಣಿ ಆನೆಯೊಂದು ಸಾವನ್ನಪ್ಪಿದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 15 ವರ್ಷದ ಗರ್ಭಿಣಿ ಆನೆಯು ಸಿಡಿ ಮದ್ದುಗಳನ್ನು ತಿಂದು ಮೇ 27 ರಂದು ಮಲಪ್ಪುರಂನ ವೆಲ್ಲಿಯಾರ್ ನದಿಯಲ್ಲಿ ಮೃತಪಟ್ಟಿದೆ. ಕೆಲವು ಸ್ಥಳೀಯರು ಆನೆಗೆ ಪಟಾಕಿ ತುಂಬಿದ ಅನಾನಸ್ ನೀಡಿದ್ದು ಸ್ಫೋಟಕವಿದ್ದ ಕಾರಣ ಆನೆಯ ದವಡೆಯಲ್ಲೇ ಪೈನಾಪಲ್ ಸ್ಫೋಟಗೊಂಡಿದೆ. ಸ್ಫೋಟಕದ ತೀವ್ರತೆಗೆ ಆನೆಯ ದವಡೆ, ಬಾಯಿ ಸಂಪೂರ್ಣ ಪುಡಿ ಪುಡಿಯಾಗಿ, ನೋವಿನಿಂದ ಚಿತ್ರಹಿಂಸೆ ಅನುಭವಿಸಿದ ಆಸೆ

ಹಣ್ಣಿನೊಳಗೆ ಸ್ಪೋಟಕ ಇಟ್ಟು ಗರ್ಭಿಣಿ ಹೆಣ್ಣಾನೆಯ ಹತ್ಯೆ: ನಿಂತ ಸ್ಥಿತಿಯಲ್ಲೇ ಜೀವ ಬಿಟ್ಟ ಮುಗ್ಧ ಪ್ರಾಣಿ Read More »

ರಾಜ್ಯದಲ್ಲಿ ಇಂದು ಬರೋಬ್ಬರಿ 388 ಕೊರೋನಾ ಪಾಸಿಟೀವ್ ಕೇಸ್ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಇಂದು 388 ಕೊರೋನಾ ಪಾಸಿಟೀವ್ ಕೇಸ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 3796ಕ್ಕೆ ಏರಿಕೆ ಆಗಿದೆ. 150 ಪ್ರಕರಣಗಳೊಂದಿಗೆ ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿದೆ. ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್..? ಉಡುಪಿ 150 ಕಲಬುರ್ಗಿ 100 ಬೆಳಗಾವಿ 51 ರಾಯಚುರು 16 ಬೆಂಗಳೂರು ನಗರ 12 ಬೀದರ್ 10 ಬಾಗಲಕೊಟೆ 9 ದಾವಣಗೆರೆ 7 ಹಾಸನ 9 ಯಾದಗಿರಿ 5 ಮಂಡ್ಯ 4 ಚಿಕ್ಕಬಳ್ಳಾಪುರ 2 ವಿಜಯಪುರ 4 ಧಾರವಾಡ 2 ತುಮಕುರು

ರಾಜ್ಯದಲ್ಲಿ ಇಂದು ಬರೋಬ್ಬರಿ 388 ಕೊರೋನಾ ಪಾಸಿಟೀವ್ ಕೇಸ್ ಪತ್ತೆ Read More »

Scroll to Top