July 2020

ಹುಲಿ ದಾರಿಗೆ ಅಡ್ಡ ಬಂದ ಹೆಬ್ಬಾವು ವಿಡಿಯೋ ವೈರಲ್: ಪೂರ್ತಿ ವಿಡಿಯೋ ಇಲ್ಲಿದೆ ನೋಡಿ..!

ಮೈಸೂರು: ಹೆಬ್ಬಾವೊಂದು ತನ್ನ ದಾರಿಗೆ ಅಡ್ಡ ಬಂದಾಗ, ಹುಲಿ ಅದನ್ನು ಎದುರಿಸಿದ ಪರಿಯನ್ನು ತೋರುವ ವಿಡಿಯೋ ಒಂದನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಅವರು ಇತ್ತೀಚೆಗೆ ಶೇರ್‌ ಮಾಡಿದ್ದರು. ಅದು ಬಹಳ ವೈರಲ್ ಕೂಡ ಆಗಿತ್ತು. ಹೆಬ್ಬಾವಿನ ಹತ್ತಿರ ಹೋದಾಗ ಅದು ಬುಸ್ಸೆಂದ ಕೂಡಲೇ ಹಿಂದಡಿ ಇಡುವ ಹುಲಿ, ಯಾಕೋ ಅದರ ಸಹವಾಸಕ್ಕೆ ಹೋದರೆ ಸರಿಯಲ್ಲ ಎಂದುಕೊಂಡು, ಅದು ಮಲಗಿದ್ದ ಜಾಗವನ್ನು ಬಿಟ್ಟು ಬೇರೆ ದಾರಿಯನ್ನು ಬಳಸಿಕೊಂಡು ಮುಂದೆ ಹೋಗುತ್ತದೆ. ಈ ವಿಡಿಯೋ ಸಾಮಾಜಿಕ […]

ಹುಲಿ ದಾರಿಗೆ ಅಡ್ಡ ಬಂದ ಹೆಬ್ಬಾವು ವಿಡಿಯೋ ವೈರಲ್: ಪೂರ್ತಿ ವಿಡಿಯೋ ಇಲ್ಲಿದೆ ನೋಡಿ..! Read More »

ಕೊರೊನಾ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ: ರೋಗಿಗಳಿಗೆ ವರವಾಯ್ತು ‘ಮೆಡ್‌ ಆ್ಯಪ್’

ಮೈಸೂರು: ಕಳೆದ ಮೂರ್ನಾಲ್ಕು ವರ್ಷಗಳಿಂದ ಮೊಬೈಲ್‌ ಕ್ಲಿನಿಕ್‌ ಮೂಲಕ ರೋಗಿಗಳ ಮನೆ ಬಾಗಿಲಿಗೆ ವೈದ್ಯಕೀಯ ಸೇವೆ ನೀಡುತ್ತಿರುವ ಮೈಸೂರು ನಗರದ ಹೆಲ್ತ್ ‌ಕೇರ್‌ ಸಂಸ್ಥೆಯೊಂದು ಕೊರೊನಾ ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲು ಆರಂಭಿಸಿದೆ. ನುರಿತ ವೈದ್ಯರು ಮತ್ತು ಸಿಬ್ಬಂದಿಯ ಮೂಲಕ ಸೋಂಕಿತರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ನೀಡುವ ಮೂಲಕ ಗುಣಮುಖರನ್ನಾಗಿಸುವ ಪ್ರಯತ್ನ ಮಾಡಿ ಯಶಸ್ವಿಯಾಗಿದೆ. ಕಳೆದ ಎರಡು ವಾರಗಳ ಹಿಂದೆ ಮೈಸೂರು ನಗರದ ಮೆಡ್‌ ಆ್ಯಪ್‌ ಹೆಲ್ತ್‌ ಕೇರ್‌ ಸರ್ವೀಸ್‌ ಸಂಸ್ಥೆ ಆರಂಭಿಸಿದ ಕೋವಿಡ್‌ ಚಿಕಿತ್ಸೆಯನ್ನು 150ಕ್ಕೂ

ಕೊರೊನಾ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ: ರೋಗಿಗಳಿಗೆ ವರವಾಯ್ತು ‘ಮೆಡ್‌ ಆ್ಯಪ್’ Read More »

ಮತ್ತೆ 47 ಚೀನಿ ಆ್ಯಪ್​ಗಳನ್ನ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ಭಾರತ ಸರ್ಕಾರ ಮತ್ತೆ 47 ಚೀನಿ ಆ್ಯಪ್​ಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಈ ಅಪ್ಲಿಕೇಶನ್‌ಗಳು ಭಾರತೀಯ ಪ್ರಜೆಗಳ ಖಾಸಗಿತನವನ್ನು ದುರ್ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ ಎಂದು ವರದಿಯಾಗಿದೆ. ಈ ಹಿಂದೆ 59 ಅಪ್ಲಿಕೇಶನ್​ಗಳನ್ನು ಬ್ಯಾನ್ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೆ 47 ಆ್ಯಪ್​​ಗಳನ್ನು ಬ್ಯಾನ್​ ಮಾಡಿ ಆದೇಶ ಹೊರಡಿಸಿದ್ದು, ಇದುವರೆಗೆ ಒಟ್ಟು 106 ಆ್ಯಪ್​ಗಳನ್ನು ಬ್ಯಾನ್ ಮಾಡಿದಂತಾಗಿದೆ. ಇಷ್ಟೆ ಅಲ್ಲದೆ ಇನ್ನೂ ಸುಮಾರು 250 ಆ್ಯಪ್​ಗಳ ಪರಿಶೀಲನೆ ನಡೆಸುತ್ತಿದ್ದು,

ಮತ್ತೆ 47 ಚೀನಿ ಆ್ಯಪ್​ಗಳನ್ನ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ Read More »

ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್ ಐಪಿಎಲ್ ಪಂದ್ಯಾವಳಿಗೆ ದಿನಾಂಕ ನಿಗದಿ

ನವದೆಹಲಿ: ಬಹುನಿರೀಕ್ಷಿತ ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ ಆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 2020ರ 13ನೇ ಆವೃತ್ತಿಯು ಯುಇಎನಲ್ಲಿ ಸೆಪ್ಟೆಂಬರ್‌ 19 ರಂದು ಆರಂಭಗೊಂಡು ನವೆಂಬರ್‌ 8ರಂದು ಪೈನಲ್‌ ಪಂದ್ಯದ ಮೂಲಕ ಅಂತ್ಯಗೊಳ್ಳಲಿದೆ ಎಂದು ಐಪಿಎಲ್‌ ಮುಖ್ಯಸ್ಥ ಬ್ರಿಜೇಶ್‌ ಪಟೇಲ್ ತಿಳಿಸಿದ್ದಾರೆ. ಕೊರೊನಾದಿಂದಾಗಿ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುತ್ತೋ ಇಲ್ವೋ ಎಂಬ ಬಗ್ಗೆ ಕ್ರಿಕೆಟ್​ ಪ್ರಿಯರಿಗೆ ಭಾರೀ ನಿರಾಸೆ ಮೂಡಿಸಿತ್ತು. ಒಂದು ಹಂತದಲ್ಲಿ ರದ್ದಾಗುವ ಹಂತದಲ್ಲಿದ್ದ ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​ ಮತ್ತೆ ನಡೆಯುವ

ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್ ಐಪಿಎಲ್ ಪಂದ್ಯಾವಳಿಗೆ ದಿನಾಂಕ ನಿಗದಿ Read More »

ಸತತ 3 ದಿನಗಳ ಕಾರ್ಯಾಚರಣೆ ಬಳಿಕ 100 ಅಡಿ ಬಾವಿಯೊಳಗೆ ಬಿದ್ದ ಚಿರತೆ ರಕ್ಷಣೆ

ಮೈಸೂರು: ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕಾರಾಪುರ ಗ್ರಾಮದ ಬಾವಿಯೊಂದರಲ್ಲಿ ಬಿದ್ದಿದ್ದ ಚಿರತೆಯನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖಾ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಕಾರಾಪುರ ಗ್ರಾಮದಲ್ಲಿ ಸುಮಾರು ನೂರು ಅಡಿ ಆಳದ ಪಾಳು ಬಾವಿಯಲ್ಲಿ ಆಕಸ್ಮಿಕವಾಗಿ ಬಿದ್ದ 3 ವರ್ಷದ ಚಿರತೆಯನ್ನು ಅರಣ್ಯಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅರವಳಿಕೆ ಮದ್ದು ನೀಡಿ ಸಂರಕ್ಷಣೆ ಮಾಡಿದರು. ಈ ಮೂಲಕ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಚಿರತೆ ರಕ್ಷಣೆ ಕಾರ್ಯಾಚರಣೆ ಸೋಮವಾರ ಕೊನೆಗೊಂಡಿದೆ. ಶನಿವಾರ ಸಂಜೆ ಚಿರತೆಯೊಂದು ಸುಮಾರು ನೂರು ಅಡಿ ಆಳದ ಬಾವಿಗೆ

ಸತತ 3 ದಿನಗಳ ಕಾರ್ಯಾಚರಣೆ ಬಳಿಕ 100 ಅಡಿ ಬಾವಿಯೊಳಗೆ ಬಿದ್ದ ಚಿರತೆ ರಕ್ಷಣೆ Read More »

ಮೈಸೂರಿನಲ್ಲಿ 600ಕ್ಕೂ ಹೆಚ್ಚು ಬೆಡ್’ಗಳ ಕೋವಿಡ್ ಕೇರ್ ಸೆಂಟರ್ ಸಿದ್ಧ

ಮೈಸೂರು: ಮೈಸೂರಿನಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು ಈ ಹಿನ್ನೆಲೆ ನಗರದ ಹೊರವಲಯದ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ನೂತನ ಕಟ್ಟಡ ಅಕಾಡೆಮಿಕ್ ಭವನದಲ್ಲಿ 600ಕ್ಕೂ ಹೆಚ್ಚು ಬೆಡ್’ಗಳ ಕೋವಿಡ್ ಕೇರ್ ಸೆಂಟರ್‌ ಸ್ಥಾಪಿಸಲಾಗಿದೆ. ಕೆಎಸ್ಒಯು ಅಕಾಡೆಮಿಕ್ ಭವನದಲ್ಲಿಯ ನೂತನ ಕೋವಿಡ್ ಕೇರ್ ಸೆಂಟರ್’ಗೆ ಮೈಸೂರು‌ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ.‌ ಸೋಮಶೇಖರ್ & ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಅವರು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಮೈಸೂರಿನಲ್ಲಿ 600ಕ್ಕೂ ಹೆಚ್ಚು ಬೆಡ್’ಗಳ ಕೋವಿಡ್ ಕೇರ್ ಸೆಂಟರ್ ಸಿದ್ಧ Read More »

ನಾಗರಹೊಳೆ, ಬಂಡಿಪುರ ಸಫಾರಿ ಮತ್ತೆ ಬಂದ್: ಹೆಚ್.ಡಿ.ಕೋಟೆ ತಾಲೂಕಿಗೆ ಪ್ರವಾಸಿಗರಿಗಿಲ್ಲ ಪ್ರವೇಶ..!

ಮೈಸೂರು: ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ನಾಗರಹೊಳೆ, ಬಂಡಿಪುರ ಸಫಾರಿ ಮತ್ತೆ ಬಂದ್ ಮಾಡಲಾಗಿದೆ. ಜುಲೈ 10ರಿಂದ ಮುಂದಿನ ಆದೇಶದವರೆಗೆ ಹೊರ ಜಿಲ್ಲೆ/ರಾಜ್ಯ/ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಹೆಚ್.ಡಿ.ಕೋಟೆ ತಾಲೂಕಿನ ಎಲ್ಲ ಹೋಟೆಲ್, ರೆಸಾರ್ಟ್, ಲಾಡ್ಜ್, ಹೋಂ ಸ್ಟೇಗಳಲ್ಲಿ ವಸತಿ ಸೌಕರ್ಯ ನೀಡಕೂಡದು. ಮುಂದಿನ ಹೊರಭಾಗದ ಪ್ರವಾಸಿಗರ ಆನ್‍ಲೈನ್ ಅಥವಾ ಆಫ್‍ಲೈನ್ ಮುಂತಾದ ರೂಪದ ಬುಕ್ಕಿಂಗ್ ಮಾಡಿಕೊಳ್ಳಬಾರದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶ ಹೊರಡಿಸಿದ್ದಾರೆ. ಇಂದು ಮಾಧ್ಯಮ ಹೇಳಿಕೆ ನೀಡಿರುವ ಅವರು ಚಾಮರಾಜನಗರ,

ನಾಗರಹೊಳೆ, ಬಂಡಿಪುರ ಸಫಾರಿ ಮತ್ತೆ ಬಂದ್: ಹೆಚ್.ಡಿ.ಕೋಟೆ ತಾಲೂಕಿಗೆ ಪ್ರವಾಸಿಗರಿಗಿಲ್ಲ ಪ್ರವೇಶ..! Read More »

100 ಅಡಿಗೆ ತಲುಪಲಿದ KRS ಜಲಾಶಯದ ನೀರಿನ ಮಟ್ಟ

ಮೈಸೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್ ಎಸ್ ಅಣೆಕಟ್ಟೆಯ ನೀರಿನ ಮಟ್ಟ ಏರಿಕೆಯಾಗಿದೆ. ಸದ್ಯ ಜಲಾಶಯದ ನೀರಿನ ಮಟ್ಟ 100 ಅಡಿಗೆ ತಲುಪಲಿದೆ. ಜಲಾಶಯದ ಒಳ ಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಪ್ರಮಾಣದ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದರೆ ಈ ಬಾರಿ 18 ಅಡಿ ನೀರು ಹೆಚ್ಚಾಗಿದೆ. ಮಂಗಳವಾರ ಬೆಳಗ್ಗೆ 6,324 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಇಂದು

100 ಅಡಿಗೆ ತಲುಪಲಿದ KRS ಜಲಾಶಯದ ನೀರಿನ ಮಟ್ಟ Read More »

ಸಂಸದೆ ಸುಮಲತಾ ಅಂಬರೀಷ್‌ಗೆ ಕೊರೊನಾ ಪಾಸಿಟಿವ್

ಮಂಡ್ಯ: ಮಂಡ್ಯದ ಸಂಸದೆ ಸುಮಲತಾ ಅಂಬರೀಷ್ ಅವರಿಗೆ ಕೊರೋನಾ ಸೋಂಕು ತಗುಲಿದೆ. ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸ್ವತಃ ಸುಮಲತಾ ಅವರೇ ಖಚಿತಪಡಿಸಿದ್ದಾರೆ. ಶನಿವಾರ, ಜುಲೈ 4ರಂದು, ನನಗೆ ಸ್ವಲ್ಪ ತಲೆನೋವು ಮತ್ತು ಗಂಟಲು ನೋವು ಕಾಣಿಸಿಕೊಂಡಿತ್ತು. ನಿರಂತರವಾಗಿ ನನ್ನ ಕ್ಷೇತ್ರದ ಕಾರ್ಯಗಳಲ್ಲಿ ತೊಡಗಿದ್ದರಿಂದ ಮತ್ತು ಕೊರೊನಾ ಪೀಡಿತ ಪ್ರದೇಶಗಳಿಗೂ ಭೇಟಿ ಕೊಟ್ಟಿದ್ದರಿಂದ, ಕೋವಿಡ್ 19 ಪರೀಕ್ಷೆಗೆ ಒಳಗಾದೆ. ಇವತ್ತು ಪಾಸಿಟಿವ್ ಎಂದು ಫಲಿತಾಂಶ ಬಂದಿದೆ. ಹಾಗಾಗಿ ವೈದ್ಯರ ಸಲಹೆ

ಸಂಸದೆ ಸುಮಲತಾ ಅಂಬರೀಷ್‌ಗೆ ಕೊರೊನಾ ಪಾಸಿಟಿವ್ Read More »

ಮೈಸೂರು ಜಿಲ್ಲೆಯಲ್ಲಿ ಪೊಲೀಸ್ ಠಾಣೆಗಳಿಗೆ ಸಾರ್ವಜನಿಕರ ಪ್ರವೇಶ ತಾತ್ಕಾಲಿಕ ನಿರ್ಬಂಧ

ಮೈಸೂರು: ಮೈಸೂರಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಪೊಲೀಸ್ ಠಾಣೆಗಳಿಗೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಪ್ರತಿ ಪೊಲೀಸ್ ಠಾಣೆಯ ಹೊರ ಭಾಗದಲ್ಲಿ ಹೆಲ್ಪ್​ ಡೆಸ್ಕ್ ತೆರೆಯಲಾಗಿದೆ ಎಂದು ಮೈಸೂರು ಎಸ್ಪಿ ಸಿ.ಬಿ.ರಿಷ್ಯಂತ್ ಅವರು ತಿಳಿಸಿದ್ದಾರೆ. ಮತ್ತಷ್ಟು ಮಾಹಿತಿಗಾಗಿ ಈ ವಿಡಿಯೋ ನೋಡಿ: In wake of spike in COVID19 cases in Mysuru, Public will not be allowed inside police stations across the district. Mysuru SP

ಮೈಸೂರು ಜಿಲ್ಲೆಯಲ್ಲಿ ಪೊಲೀಸ್ ಠಾಣೆಗಳಿಗೆ ಸಾರ್ವಜನಿಕರ ಪ್ರವೇಶ ತಾತ್ಕಾಲಿಕ ನಿರ್ಬಂಧ Read More »

Scroll to Top