August 2020

ದೇಶದಲ್ಲೇ ಮೊದಲು: ಮೈಸೂರಲ್ಲಿ ತಯಾರಾದ ಹೈಸ್ಪೀಡ್ ರೈಲು ಚಕ್ರ

ಮೈಸೂರು: ನೈಋತ್ಯ ರೈಲ್ವೆಯ ಮೈಸೂರಿನ ವ್ಹೀಲ್ ಶಾಪ್(ರೈಲ್ವೆ ಕಾರ್ಯಾಗಾರ) ದೇಶದಲ್ಲೇ ಮೊದಲ ಬಾರಿಗೆ ಹೈಸ್ಪೀಡ್ ಮೆಮು ಮೋಟಾರ್ ಕೋಚ್ ವ್ಹೀಲ್‌ ಅನ್ನು ಯಶಸ್ವಿಯಾಗಿ ತಯಾರಿಸಿದೆ. ಹೀಗಾಗಿ ಈ ಕಾರ್ಯ ಯಶಸ್ವಿಗೊಳಿಸಿದ ಮೊದಲ ಭಾರತೀಯ ರೈಲ್ವೆ ವಿಭಾಗ ಎಂಬ ಕೀರ್ತಿಗೆ ಪಾತ್ರವಾಗಿದೆ.‌ ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುವ ಮೆಮು ರೈಲಿಗೆ ಮೂರು ಫೇಸ್‌ನ ಈ ಕೋಚ್ ವ್ಹೀಲ್ ಸೆಟ್ ಬಳಕೆಯಾಗಲಿದೆ. ಮೊದಲ ಹಂತದಲ್ಲಿ 6 ವ್ಹೀಲ್ ಸೆಟ್‌ಗಳನ್ನು ಬಿಇಎಂಎಲ್‌ಗೆ ರವಾನಿಸಲು ಸಿದ್ಧವಾಗಿದೆ. ಇವುಗಳ ವೆಚ್ಚ […]

ದೇಶದಲ್ಲೇ ಮೊದಲು: ಮೈಸೂರಲ್ಲಿ ತಯಾರಾದ ಹೈಸ್ಪೀಡ್ ರೈಲು ಚಕ್ರ Read More »

ಭಾರತದ ಮೊದಲ ಮಹಿಳಾ ಹೃದ್ರೋಗ ತಜ್ಞೆ ಡಾ. ಎಸ್ ಪದ್ಮಾವತಿ ಕೊರೊನಾಗೆ ಬಲಿ

ನವದೆಹಲಿ: ಭಾರತದ ಮೊದಲ ಮಹಿಳಾ ಹೃದ್ರೋಗ ತಜ್ಞೆ ಡಾ. ಎಸ್. ಪದ್ಮಾವತಿ ಕೋವೀಡ್ -19 ಕಾರಣದಿಂದಾಗಿ ನಿಧನರಾಗಿದ್ದಾರೆ. “ಗಾಡ್ ಮದರ್ ಆಫ್ ಕಾರ್ಡಿಯಾಲಜಿ” ಎಂದು ಪ್ರಸಿದ್ಧವಾಗಿದ್ದ 103 ವರ್ಷದ ಪದ್ಮಾವತಿ ಅವರು 11 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆಗಸ್ಟ್ 29 ರಂದು ಕೋವಿಡ್-19 ಸೋಂಕಿನಿಂದ ನಿಧನರಾಗಿದ್ದಾರೆ ಎಂದು ನ್ಯಾಷನಲ್‌ ಹಾರ್ಟ್‌ ಇನ್‌ಸ್ಟಿಟ್ಯೂಟ್‌ (ಎನ್‌ಎಚ್‌ಐ) ಭಾನುವಾರ ತಿಳಿಸಿದೆ. ಕೋವಿಡ್ ಸೋಂಕು ತಗುಲಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಉಸಿರಾಟದ ತೊಂದರೆ ಮತ್ತು ಜ್ವರ ಕಾಣಿಸಿಕೊಂಡಿತ್ತು. ನ್ಯುಮೋನಿಯಾದಿಂದ

ಭಾರತದ ಮೊದಲ ಮಹಿಳಾ ಹೃದ್ರೋಗ ತಜ್ಞೆ ಡಾ. ಎಸ್ ಪದ್ಮಾವತಿ ಕೊರೊನಾಗೆ ಬಲಿ Read More »

Govt of India announces guidelines for ‘Unlock 4’ to be in force till September 30

The Ministry of Home Affairs (MHA) has issued new guidelines today for opening up of more activities in areas outside the Containment Zones. In Unlock 4, which will come into effect from September 1, 2020, the process of phased re-opening of activities has been extended further. The new guidelines, issued today, are based on feedback

Govt of India announces guidelines for ‘Unlock 4’ to be in force till September 30 Read More »

ಐಪಿಎಲ್​​​ನಿಂದ ಸುರೇಶ್ ರೈನಾ ಔಟ್: ಸಿಎಸ್‌ಕೆ ತಂಡಕ್ಕೆ​ ಬಿಗ್ ಶಾಕ್!

ನವದೆಹಲಿ: ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದ್ದು ತಂಡದ ಸ್ಟಾರ್ ಆಟಗಾರ ಸುರೇಶ್ ರೈನಾ 13ನೇ ಆವೃತ್ತಿಯ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಸುರೇಶ್ ರೈನಾ ವೈಯುಕ್ತಿಕ ಕಾರಣದಿಂದಾಗಿ ಭಾರತಕ್ಕೆ ಮರಳಿದ್ದು ಈ ವಿಚಾರವನ್ನು ಚೆನ್ನೈ ಸೂಪರ್ ಕಿಂಗ್ಸ್‌ನ ಫ್ರಾಂಚೈಸಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಖಚಿತ ಪಡಿಸಿದೆ. ರೈನಾ ಅವರ ಸೋದರತ್ತೆ ಕುಟುಂಬ ಮೇಲೆ ದಾಳಿ ನಡೆದ ಬೆನ್ನಲ್ಲೆ ರೈನಾ ಅವರು ಭಾರತಕ್ಕೆ ವಾಪಸ್ಸ್ ಆಗಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು

ಐಪಿಎಲ್​​​ನಿಂದ ಸುರೇಶ್ ರೈನಾ ಔಟ್: ಸಿಎಸ್‌ಕೆ ತಂಡಕ್ಕೆ​ ಬಿಗ್ ಶಾಕ್! Read More »

ಹಾಲಿವುಡ್ ನಟ – ಬ್ಲಾಕ್‌ ಪ್ಯಾಂಥರ್ ಖ್ಯಾತಿಯ ಚ್ಯಾಡ್ವಿಕ್​ ಬೋಸ್​ಮನ್​ ಇನ್ನಿಲ್ಲ

ಹಾಲಿವುಡ್​ನ ಬ್ಲಾಕ್​ ಪ್ಯಾಂಥರ್ ಸಿನಿಮಾದ ಖ್ಯಾತ ನಟ ಚ್ಯಾಡ್ವಿಕ್​ ಬೋಸ್​ಮನ್ ಕ್ಯಾನ್ಸರ್​ ನಿಂದ ಇಂದು ಕೊನೆಯುಸಿರೆಳೆದಿದ್ದಾರೆ. 43 ವರ್ಷದ ಬೋಸ್​ಮನ್ ಕಳೆದ ಕೆಲವು ವರ್ಷಗಳಿಂದ ದೊಡ್ಡ ಕರುಳಿನ ಕ್ಯಾನ್ಸರ್​ ನಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಸಾವಿನ ಬಗ್ಗೆ ಕುಟುಂಬಸ್ಥರು ಮಾಹಿತಿಯನ್ನು ಚ್ಯಾಡ್ವಿಕ್​ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಲವಾರು ಆಪರೇಷನ್ ಹಾಗೂ ಕೀಮೋಥೆರಪಿ ನಡುವೆಯೇ ದೊಡ್ಡ ದೊಡ್ಡ ಹಾಲಿವುಡ್​ ಸಿನಿಮಾಗಳಲ್ಲಿ ಬೋಸ್​ಮನ್ ನಟಿಸಿದ್ದರು. 2016ರಲ್ಲಿ ಬೋಸ್​ಮನ್ ಅವರಿಗೆ ಸ್ಟೇಜ್​ 3 ಕ್ಯಾನ್ಸರ್​ ಇರೋದು ಪತ್ತೆಯಾಗಿತ್ತು. 4 ವರ್ಷದ ಅವರ

ಹಾಲಿವುಡ್ ನಟ – ಬ್ಲಾಕ್‌ ಪ್ಯಾಂಥರ್ ಖ್ಯಾತಿಯ ಚ್ಯಾಡ್ವಿಕ್​ ಬೋಸ್​ಮನ್​ ಇನ್ನಿಲ್ಲ Read More »

ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಬಿ.ಶರತ್ ಅಧಿಕಾರ ಸ್ವೀಕಾರ

ಮೈಸೂರು: ಮೈಸೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಬಿ.ಶರತ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಬಿ.ಶರತ್ ಅವರು ನಿನ್ನೆ ರಾತ್ರಿಯೇ ಮೈಸೂರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಶರತ್ ಅವರು ಈ ಹಿಂದೆ ಕಲಬುರ್ಗಿಯಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಇವರು 2011ರ ಬ್ಯಾಚ್’ನ ಐಎಎಸ್ ಅಧಿಕಾರಿಯಾಗಿದ್ದಾರೆ. ಶರತ್ ಚಿತ್ರದುರ್ಗ ಜಿಲ್ಲೆಯವರಾಗಿದ್ದು ಈ ಹಿಂದೆ ರಾಯಚೂರು ಜಿಲ್ಲಾಧಿಕಾರಿಯಾಗಿ ಬೀದರ್ ಮತ್ತು ಮಂಡ್ಯ ಜಿಲ್ಲಾ ಪಂಚಾಯತ್ ಗಳಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಬಿ.ಶರತ್ ಅಧಿಕಾರ ಸ್ವೀಕಾರ Read More »

ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್‌ ವರ್ಗಾವಣೆ

ಮೈಸೂರು: ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್‌ ಅವರನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಭಿರಾಂ ಜಿ ಶಂಕರ್‌ ಅವರನ್ನು ಆಡಳಿತ ತರಬೇತಿ ಸಂಸ್ಥೆಯ (ಎಟಿಐ) ಜಂಟಿ ನಿರ್ದೇಶಕರಾಗಿ ರಾಜ್ಯ ಸರ್ಕಾರ ವರ್ಗಾಯಿಸಿದೆ. ಅವರ ಜಾಗಕ್ಕೆ ಕಲಬುರ್ಗಿ ಜಿಲ್ಲಾಧಿಕಾರಿ ಬಿ.ಶರತ್‌ ಅವರನ್ನು ಮೈಸೂರು ಡಿಸಿ ಆಗಿ ನಿಯೋಜಿಸಲಾಗಿದೆ. Mysuru DC Abhiram G Sankar transferred, posted until further orders as Joint Director, Administrative Training Institute. Sharat B, Kalaburgi DC

ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್‌ ವರ್ಗಾವಣೆ Read More »

ವಿಶ್ವವಿದ್ಯಾಲಯದ ಅಂತಿಮ ವರ್ಷದ ಪದವಿ ಪರೀಕ್ಷೆಗಳನ್ನ ನಡೆಸಲೇಬೇಕು: ಸುಪ್ರೀಂ ಕೋರ್ಟ್

ದೆಹಲಿ: ವಿಶ್ವವಿದ್ಯಾಲಯದ ಅಂತಿಮ ವರ್ಷದ ಪದವಿ ಪರೀಕ್ಷೆಗಳನ್ನು ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪರೀಕ್ಷೆಗಳನ್ನು ನಡೆಸದೆ ಇರುವುದಕ್ಕೆ ಸಾಧ್ಯವಿಲ್ಲ. ಬೇಕಾದರೆ ಪರೀಕ್ಷಗಳನ್ನು ಮುಂದೂಡಬಹುದು. ಪರೀಕ್ಷೆಗಳಿಲ್ಲದೆ ಪ್ರಮೋಟ್ ಮಾಡುವುದು ಅಸಾಧ್ಯ. ಹಾಗಾಗಿ ಅಂತಿಮ ವರ್ಷದ ಪದವಿ ಪರೀಕ್ಷೆಗಳು ನಡೆಯಲೇಬೇಕು ಎಂದು ಕೋರ್ಟ್ ಹೇಳಿದೆ. ವಿಶ್ವವಿದ್ಯಾಲಯದ ಅಂತಿಮ ವರ್ಷದ ಪರೀಕ್ಷೆಗಳನ್ನು ಜುಲೈ 6ರಂದು ನಡೆಸಬೇಕೆಂಬ ಯುಜಿಸಿಯ (ವಿಶ್ವವಿದ್ಯಾಲಯ ಅನುದಾನ ಆಯೋಗ) ಅಧಿಸೂಚನೆಯನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್‌, ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ ಸೆಪ್ಟೆಂಬರ್ 30

ವಿಶ್ವವಿದ್ಯಾಲಯದ ಅಂತಿಮ ವರ್ಷದ ಪದವಿ ಪರೀಕ್ಷೆಗಳನ್ನ ನಡೆಸಲೇಬೇಕು: ಸುಪ್ರೀಂ ಕೋರ್ಟ್ Read More »

ಆತ್ಮನಿರ್ಭರ ಭಾರತ: ಟಾಟಾ ಕಂಪೆಯಿಂದ 600 ಮಿಲಿಟರಿ ಟ್ರಕ್ ಖರೀದಿಗೆ ಮುಂದಾದ ಥೈಲ್ಯಾಂಡ್

ನವದೆಹಲಿ: ಥೈಲ್ಯಾಂಡ್ ದೇಶ ಭಾರತೀಯ ಕಂಪನಿ ಟಾಟಾ ನಿರ್ಮಿಸಿದ 600 ಯುದ್ಧ ಟ್ರಕ್ ಗಳನ್ನು ತನ್ನ ಸೇನೆಗೆ ಸೇರಿಸಿಕೊಳ್ಳಲಿದೆ. ಗೋ ಲೋಕಲ್ ಹೆಸರಿಗೆ ಅನ್ವರ್ಥವಾಗಿ 600 TATA LPTA ಖರೀದಿ ಮಾಡಲು ನಿರ್ಧರಿಸಿದ್ದನ್ನು ಥೈಲ್ಯಾಂಡ್ ರಾಯಭಾರಿ ಮಾಹಿತಿ ಹಂಚಿಕೊಂಡಿದ್ದಾರೆ. ಟಾಟಾ ಕಂಪನಿಯ ಆರು ನೂರು ಟ್ರಕ್ ಖರೀದಿಗೆ ಮುಂದಾಗಿದೆ ಎಂದು ಚುಟಿನ್ ಟೊರ್ನ್ ಸಾಮ್ ಗೋಕ್ಸಾಡಿ ಟ್ವಿಟ್ ಮಾಡಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ ಭಾರತ ಎಂದು ಅಭಿಯಾನ ಆರಂಭಿಸಿದ್ದು ದೇಶದ ನಾಗರಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ

ಆತ್ಮನಿರ್ಭರ ಭಾರತ: ಟಾಟಾ ಕಂಪೆಯಿಂದ 600 ಮಿಲಿಟರಿ ಟ್ರಕ್ ಖರೀದಿಗೆ ಮುಂದಾದ ಥೈಲ್ಯಾಂಡ್ Read More »

ಎಸ್‌.ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಚೇತರಿಕೆ: ಗುಣಮುಖರಾಗುವತ್ತ ಮೊದಲ ಹೆಜ್ಜೆ

ಚೆನ್ನೈ: ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಈಗ ಸ್ಥಿರವಾಗಿದೆ ಎಂದು ಎಂಜಿಎಂ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಜಿಎಂ ಆಸ್ಪತ್ರೆಯ ಆಸ್ಪತ್ರೆಯ ಹೆಲ್ತ್ ಬುಲೆಟಿನ್​ನಲ್ಲಿ ಇದನ್ನು ಸ್ಪಷ್ಟಪಡಿಸಲಾಗಿದೆ. ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ವೆಂಟಿಲೇಟರ್ ಸಪೋರ್ಟ್​ನಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಅವರ ಈಗಿನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು ನಮ್ಮ ಕ್ಲಿನಿಕಲ್ ಟೀಮ್​ನಿಂದ ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ ಎಂದು ಆಸ್ಪತ್ರೆ ಮಾಹಿತಿ ನೀಡಿದೆ. ಈ ಬಗ್ಗೆ ಎಸ್‌.ಪಿ.ಬಿ

ಎಸ್‌.ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಚೇತರಿಕೆ: ಗುಣಮುಖರಾಗುವತ್ತ ಮೊದಲ ಹೆಜ್ಜೆ Read More »

Scroll to Top