August 21, 2020

ಈ ಬಾರಿ ಸರಳ ದಸರಾ ಆಚರಣೆ: ಸಿಎಂ ಬಿ.ಎಸ್ ಯಡಿಯೂರಪ್ಪ

ಮೈಸೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಈ ಬಾರಿಯ ನಾಡಹಬ್ಬ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲಾಗುವುದು ಎಮದು ಸಿಎಂ ಬಿ.ಎಸ್ ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ. ಇಂದು ಕಬಿನಿ ಜಲಾಶಯಕ್ಕೆ ಬಾಗೀನ ಅರ್ಪಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮೈಸೂರು ದಸರಾ ಮಹೋತ್ಸವ ಈ ಭಾರಿಯೂ ನಡೆಯಲಿದೆ. ಆದರೆ ಸರಳವಾಗಿ ಯಾವ ರೀತಿ ಆಚರಿಸಬೇಕೆಂದು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಇದರ ರೂಪುರೇಷೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡುತ್ತೇವೆ. ದಸರಾ ಉನ್ನತ ಮಟ್ಟದ ಸಮಿತಿ […]

ಈ ಬಾರಿ ಸರಳ ದಸರಾ ಆಚರಣೆ: ಸಿಎಂ ಬಿ.ಎಸ್ ಯಡಿಯೂರಪ್ಪ Read More »

ಮೈಸೂರು ಮೃಗಾಲಯದ ಆನೆ ದತ್ತು ಪಡೆದ ಶಿವರಾಜ್‍ಕುಮಾರ್

ಮೈಸೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ಮೈಸೂರು ಮೃಗಾಲಯದ ಆನೆಯೊಂದನ್ನು ದತ್ತು ಪಡೆದಿದ್ದಾರೆ. ಮೈಸೂರು ಮೃಗಾಲಯದ ಭಾರತದ ಆನೆ ‘ಪಾರ್ವತಿ’ಯನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದುಕೊಂಡಿದ್ದಾರೆ. ದಿನಾಂಕ 20-08-2020 ರಿಂದ 19-08-2021 ರ ಅವಧಿಗೆ ದತ್ತು ಪಡೆದುಕೊಳ್ಳುವ ಮೂಲಕ ಪ್ರಾಣಿ ಮೇಲಿನ ಪ್ರೀತಿ ತೋರಿಸಿದ್ದಾರೆ.

ಮೈಸೂರು ಮೃಗಾಲಯದ ಆನೆ ದತ್ತು ಪಡೆದ ಶಿವರಾಜ್‍ಕುಮಾರ್ Read More »

Scroll to Top