ಸವಾಲು ಹಾಕಿದ ಪೈಲ್ವಾನನಿಗೆ ಮಣ್ಣು ಮುಕ್ಕಿಸಿದ ಮೈಸೂರು ಮಹಾರಾಜ ಯಾರು ಗೊತ್ತಾ..?

ಮೈಸೂರು: ಕಂಠೀರವ ನರಸಿಂಹರಾಜ ಒಡೆಯರ್ ಕಾಲದ(1888-1940) ಆಡಳಿತಾವಧಿಯಲ್ಲಿ ಮೈಸೂರು ಎಲ್ಲ ರಂಗದಲ್ಲಿ ಹೆಸರು ಗಳಿಸಿ ಮರೆಯುತ್ತಿತ್ತು. ಅಂದಿನ ಕಾಲದಲ್ಲಿ ತಿರುಚನಪಳ್ಳಿಯ ಪೈಲ್ವಾನನೊಬ್ಬ ತುಂಬ ಪ್ರಖ್ಯಾತ ಕುಸ್ತಿಪಟು. ಈತನ ವಿರುದ್ಧ ಎಂತಹ ಘಟನುಘಟಿ ಪೈಲ್ವಾನವ್ರು ತರಗುಟ್ಟುತಿದ್ದರು. ಈತನ ವಿರುದ್ಧ ಯಾವ ಕುಸ್ತಿ ಪಟುವೂ ಗೆದ್ದು ಬೀಗಿರಲಿಲ್ಲ.

ತನ್ನಂತ ಶಕ್ತಿಶಾಲಿ ಕುಸ್ತಿಪಟು ಯಾರು ಇಲ್ಲವೆಂದು ಭಾವಿಸಿದ ತಿರುಚನಪಳ್ಳಿಯ ಪೈಲ್ವಾನ್, ಓಮ್ಮೆ ಮೈಸೂರಿಗೆ ಭೇಟಿ ನೀಡಿ ಲಂಗೋಟಿ(ಕುಸ್ತಿ ಆಡಲು ಬಳಸುವ ಬಟ್ಟೆ)ಯನ್ನು ಊರು ಹೊರಾವರಣದಲ್ಲಿರುವ ಮರಕ್ಕೆ ನೇತು ಹಾಕಿ, ಯಾರದರೂ ಕುಸ್ತಿಪಟು ನನ್ನ ವಿರುದ್ಧ ಜಯಶಾಲಿಯಾದರೆ ಈ ಲಂಗೋಟಿಯನ್ನು ತೆಗೆಯುತ್ತೇನೆ. ಇಲ್ಲವಾದರೆ ನಾನು ಬದುಕಿರುವವರೆಗೂ ಈ ನೇತುಹಾಕಿರುವ ಲಂಗೋಟಿ ಕೆಳಗೆ ತಲೆ ತಗ್ಗಿಸಿ ನಡೆಯಬೇಕು ಎಂದು ಜನತೆಯನ್ನು ಅವಮಾನಿಸಿ ತೆರಳಿದ್ದ ಈ ಪೈಲ್ವಾನ್.

ಇದರಿಂದ ಕೆರಳಿದ ಅನೇಕ ಮೈಸೂರಿನ ಕುಸ್ತಿಪಟುಗಳು, ತಿರುಚನಪಳ್ಳಿಗೆ ತೆರಳಿ, ಪೈಲ್ವಾನ್‍ನೊಡನೆ ಕಾದಾಡಿ ಸೋತು ಸುಣ್ಣವಾಗಿ ಬರುತ್ತಿದ್ದರು. ಸೋಲಿನ ಮಾತುಗಳನ್ನು ಕೇಳಿದ ಮಹಾರಾಜ ಕಂಠೀರವ ನರಸಿಂಹರಾಜ ಒಡೆಯರ್ ತಾವೇ ಮಾರುವೇಷದಲ್ಲಿ ತಿರುಚನಪಳ್ಳಿಗೆ ತೆರಳಿದ್ರು.

ತಿರುಚನಪಳ್ಳಿಯಲ್ಲಿ ಮಾರುವೇಷ ತೆಗೆದು ಅಖಾಡಕ್ಕಿಳಿದು ಹೋರಾಟ ಮಾಡಿದ ಮಹಾರಾಜ, ಆ ಪೈಲ್ವಾನನ್ನು ಸೆದೆಬಡಿದು, ಮಣ್ಣು ಮುಕ್ಕಿಸಿದರು. ನಂತರ ಅಲ್ಲಿಂದ ಪೈಲ್ವಾನನ್ನು ಕರೆದುಕೊಂಡು ಬಂದು, ಮರಕ್ಕೆ ನೇತು ಹಾಕಿದ ಲಂಗೋಟಿಯನ್ನು ತೆಗೆಸಿದರು.

ಇದರಿಂದ ಸಂತೋಷಗೊಂಡ ಜನತೆ ಕಂಠೀರವ ನರಸಿಂಹರಾಜ ಒಡೆಯರ್‍ವರರಿಗೆ ಜಯಘೋಷಣೆಗಳನ್ನು ಕೂಗಿದರು. ಅಲ್ಲಿಂದ ‘ರಣಧೀರ’ ಕಂಠೀರವ ನರಸಿಂಹರಾಜ ಒಡೆಯರ್ ಎಂಬ ಹೆಸರು ಖ್ಯಾತಿಗೆ ಬಂತು.

ಈ ಮಹಾರಾಜರು ಸ್ವತಃ ಉತ್ತಮ ಕುಸ್ತಿಪಟುಗಳು ಕೂಡ ಆಗಿದ್ದು, ಪ್ರತಿನಿತ್ಯ ಚಾಮುಂಡಿಬೆಟ್ಟದಲ್ಲಿರುವ ಸಾವಿರ ಮೆಟ್ಟಲುಗಳನ್ನು ಹತ್ತುವಾಗ, ತಮ್ಮ ಹೆಗಲ ಮೇಲೆ ಬಲಿಷ್ಠ ಕರುವೊಂದನ್ನು ಹೆಗಲಮೇಲೆ ಇಟ್ಟುಕೊಂಡು ನಡೆಯುತ್ತಿದ್ದರು ಎಂಬ ಇತಿಹಾಸವು ಕೂಡ ಇದೆ.

ರಾಜಮಹಾರಾಜರು ಅರಮನೆಯೊಳಗೆ ಕುಸ್ತಿ ಅಭ್ಯಾಸ ಮಾಡಿ, ದೇಹಸಿರಿಯನ್ನು ಕಾಪಾಡಿಕೊಳ್ಳುತ್ತಿದ್ದರು. ಆದರೆ, ಕಂಠೀರವ ನರಸಿಂಹರಾಜ ಒಡೆಯರ್‍ರೊಬ್ಬರು ತಮ್ಮ ಸಂಸ್ಥಾನದ ಸ್ಥಾನಮಾನಕ್ಕಾಗಿ ಸಾರ್ವಜನಿಕವಾಗಿ ಕುಸ್ತಿ ಮಾಡಿದ ಕುಸ್ತಿ ಪಟು. ಇಂದಿಗೂ ಮೈಸೂರು ಕುಸ್ತಿಯ ತವರೂರಾಗಿದೆ.

Source: ಬಸವರಾಜು

Scroll to Top