Entertainment

100ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಟಾರ್ ಡೈರೆಕ್ಟರ್ ನಿಧನ

ಹೈದರಾಬಾದ್: ತೆಲುಗಿನ ಅರುಂಧತಿ ಚಿತ್ರದ ಪ್ರಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ(64) ಇಂದು ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದಾಗಿ ನಿನ್ನೆ ಮುಂಜಾನೆ ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಂದು ನಿಧನರಾಗಿದ್ದಾರೆ. ಅರುಂಧತಿ, ನಾಗರಹಾವು(2016), ಅಂಜಿ, ಅವತಾರಂ ರೀತಿಯ ಅದ್ಭುತ ಸಿನಿಮಾಗಳನ್ನ ಕೋಡಿ ರಾಮಕೃಷ್ಣ ಅವರು ನಿರ್ದೇಶಿಸಿದ್ದರು. ಸುಮಾರು 100ಕ್ಕೂ ಅಧಿಕ ಚಿತ್ರಗಳನ್ನು ನಿರ್ದೇಶಿಸಿದ್ದ ಖ್ಯಾತಿ ಗಳಿಸಿರುವ ಕೋಡಿ ರಾಮಕೃಷ್ಣ ಅವರು ಕನ್ನಡದಲ್ಲಿ 2016ರಲ್ಲಿ ತೆರೆಕಂಡ ಡಾ.ವಿಷ್ಣುವರ್ಧನ್ […]

100ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಟಾರ್ ಡೈರೆಕ್ಟರ್ ನಿಧನ Read More »

ನುಡಿದಂತೆ ನಡೆದು ಮಾದರಿಯಾದ ಬಿಗ್ ಬಾಸ್ ವಿಜೇತ ಶಶಿಕುಮಾರ್

ಬೆಂಗಳೂರು: ಇತ್ತೀಚೆಗೆ ಮುಕ್ತಾಯವಾಗಿದ್ದ ಬಿಗ್ ಬಾಸ್ ಸೀಜನ್ 6 ವಿಜೇತ ಶಶಿಕುಮಾರ್ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಅವರು ತಮ್ಮ ಕುಟುಂಬ ಸಮೇತರಾಗಿ ರಕ್ತದಾನ ಮಾಡಿದ್ದಲ್ಲದೆ ಅಂಗಾಂಗ ದಾನ ಮಾಡುವ ಕುರಿತು ಕಾಗದ ಪತ್ರಗಳಿಗೆ ಸಹಿ ಹಾಕಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿದ್ದಾಗಲೇ ತಾವು ಕುಟುಂಬ ಸಮೇತವಾಗಿ ರಕ್ತದಾನ ಮಾಡುವುದಾಗಿಯೂ, ಅಂಗಾಂಗಗಳ ದಾನ ಮಾಡುವುದಾಗಿಯೂ ಹೇಳಿಕೆ ನೀಡಿದ್ದರು. ಅದೇ ರೀತಿ ಶಶಿ ಕುಮಾರ್ ಕುಟುಂಬ, ಸ್ನೇಹಿತರೊಡನೆ ಎಂಎಸ್ ರಾಮಯ್ಯ ಆಸ್ಪತ್ರೆಗೆ ಆಗಮಿಸಿ ರಕ್ತದಾನ ಮಾಡಿದ್ದಾರೆ. ಅಂಗಾಗ ದಾನ ಮಾಡುವ ಅನುಮತಿ

ನುಡಿದಂತೆ ನಡೆದು ಮಾದರಿಯಾದ ಬಿಗ್ ಬಾಸ್ ವಿಜೇತ ಶಶಿಕುಮಾರ್ Read More »

ಫೆ.21ರಿಂದ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ

ಬೆಂಗಳೂರು: 11 ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇದೇ ಫೆಬ್ರವರಿ 21ರಿಂದ ಚಾಲನೆ ಸಿಗಲಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಂಜೆ 6ಕ್ಕೆ ಸಿಎಂ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಫೆಬ್ರವರಿ 22ರಿಂದ 28ರ ವರೆಗೆ ಚಿತ್ರ ಪ್ರದರ್ಶನ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸುಮಾರು 60 ರಾಷ್ಟ್ರಗಳ 125 ಚಲನಚಿತ್ರಗಳು ಪ್ರದರ್ಶನವಾಗಲಿವೆ. ಈ ಬಾರಿಯ ಪ್ರಕೃತಿ ವಿಕೋಪ ಕೇಂದ್ರಿ‌ಕರಿಸಿದ ಸಾಕ್ಷ್ಯಚಿತ್ರಗಳು ಪ್ರದರ್ಶನ‌ ಕಾಣಲಿದೆ. ವಿಶೇಷ ಅಂದ್ರೆ, ರೆಬಲ್​ ಸ್ಟಾರ್ ಅಂಬರೀಶ್ ನಟನೆಯ ಏಳು ಸುತ್ತಿನ ಕೋಟೆ, ಅಂತ, ಪಡುವಾರಳ್ಳಿ ಪಾಂಡವರು,

ಫೆ.21ರಿಂದ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ Read More »

ಒಂದು ಕಥೆ ಹೇಳ್ಲಾ

ಬಿಡುಗಡೆಯಾಯ್ತು ಐದು ಹಾರರ್ ಕಥೆಗಳ ಟ್ರೈಲರ್..!

ಬೆಂಗಳೂರು: ಜೋಡಿಹಕ್ಕಿ ಸೀರಿಯಲ್ ಮೂಲಕ ರಾಮಣ್ಣ ಎಂದೇ ಖ್ಯಾತರಾಗಿರುವವರು ತಾಂಡವ್. ಅವರೀಗ ಒಂದು ಕಥೆ ಹೇಳ್ಲಾ ಎಂಬ ವಿನೂತನ ಪ್ರಯೋಗದ ಹಾರರ್ ಚಿತ್ರವೊಂದರ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಹೊಸ ಥರದ ಪೋಸ್ಟರ್ ಸೇರಿದಂತೆ ನಾನಾ ರೀತಿಯಲ್ಲಿ ಈ ಸಿನಿಮಾ ಸುದ್ದಿ ಕೇಂದ್ರದಲ್ಲಿದೆ. ಇದೀಗ ಇದರ ಟ್ರೈಲರ್ ಹೊರ ಬಂದಿದೆ. ಇದುವೇ ಕ್ಷಣ ಕ್ಷಣವೂ ಬೆಚ್ಚಿ ಬೆರಗಾಗಿಸುವಂಥಾ ಡಿಫರೆಂಟಾದ ಕಂಟೆಂಟು ಈ ಚಿತ್ರದಲ್ಲಿದೆ ಎಂಬಂಥಾ ಸುಳಿವನ್ನೂ ಬಿಟ್ಟುಕೊಟ್ಟಿದೆ. ಕ್ರೌಡ್ ಫಂಡಿಂಗ್ ಮೂಲಕ ನಿರ್ಮಾಣಗೊಂಡಿರೋ ಈ ಚಿತ್ರವನ್ನು ಗಿರೀಶ್

ಬಿಡುಗಡೆಯಾಯ್ತು ಐದು ಹಾರರ್ ಕಥೆಗಳ ಟ್ರೈಲರ್..! Read More »

ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್: ಸ್ಟಾರ್ ನಟ, ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ

ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್: ಸ್ಟಾರ್ ನಟ, ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಬೆಳ್ಳಂಬೆಳಿಗ್ಗೆ ಐಟಿ ಇಲಾಖೆ ಶಾಕ್ ನೀಡಿದೆ. ಕನ್ನಡದ ಸ್ಟಾರ್ ನಟರು ಸೇರಿದಂತೆ ನಿರ್ಮಾಪಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ನಟ ರಾಕಿಂಗ್ ಸ್ಟಾರ್ ಯಶ್, ಪವರ್ ಸ್ಟಾರ್ ಪುನೀತ್ರಾಜ್‍ಕುಮಾರ್, ಶಿವರಾಜ್‍ಕುಮಾರ್, ಕಿಚ್ಚಾ ಸುದೀಪ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ವಿಲನ್ ಚಿತ್ರದ ನಿರ್ಮಾಪಕ ಸಿ.ಆರ್.ಮನೋಹರ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್: ಸ್ಟಾರ್ ನಟ, ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ Read More »

ಕನ್ನಡದ ಹಿರಿಯ ನಟ ಸಿ.ಎಚ್​​ ಲೋಕನಾಥ್ ಇನ್ನಿಲ್ಲ

ಕನ್ನಡದ ಹಿರಿಯ ನಟ ಸಿ.ಎಚ್​​ ಲೋಕನಾಥ್ ಇನ್ನಿಲ್ಲ

ಬೆಂಗಳೂರು: ವರ್ಷದ ಕೊನೆ ದಿನ ಮತ್ತೊಂದು ಅಘಾತ ಎದುರಾಗಿದ್ದು ಕನ್ನಡ ಚಿತ್ರರಂಗದ ಹಿರಿಯ ನಟ ಸಿ.ಎಚ್​​ ಲೋಕನಾಥ್​​ ಕೊನೆಯುಸಿರೆಳೆದಿದ್ದಾರೆ. 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಕನ್ನಡದ ಮೇರು ಕಲಾವಿದ ಲೋಕನಾಥ್(90) ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು​​ ಇಂದು ಮುಂಜಾನೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ಧಾರೆ.  ಇವರು ಸುಮಾರು 5 ದಶಕಕ್ಕೂ ಹೆಚ್ಚು ಕಾಲ ಕಲಾಸೇವೆ ಮಾಡಿದ್ದ ಹಿರಿಯ ಕಲಾವಿದರಾಗಿದ್ದಾರು. ಸಂಸ್ಕಾರ, ಗೆಜ್ಜೆಪೂಜೆ, ಭೂತಯ್ಯನ ಮಗ ಅಯ್ಯು, ಬಂಗಾರದ ಮನುಷ್ಯ, ಮಿಂಚಿನ ಓಟ, ನಾಗರ ಹಾವು ಎಂಬ ಅದ್ಭುತ

ಕನ್ನಡದ ಹಿರಿಯ ನಟ ಸಿ.ಎಚ್​​ ಲೋಕನಾಥ್ ಇನ್ನಿಲ್ಲ Read More »

ಕನ್ನಡಿಗರೇ ಎಲ್ಲವನ್ನೂ ಕೊಟ್ಟಿದ್ದಾರೆ, ಬೇರೆ ಭಾಷೆಗೆ ಹೋಗಲ್ಲ ಎಂದ್ರು ಯಶ್

ಬೆಂಗಳೂರು: ಕನ್ನಡಿಗರೇ ಎಲ್ಲವನ್ನೂ ಕೊಟ್ಟಿದ್ದಾರೆ ನಾನು ಬೇರೆ ಭಾಷೆಗೆ ಹೋಗುವುದಿಲ್ಲ ಎಂದು ನಟ ರಾಕಿಂಗ್ ಸ್ಟಾರ್ ಯಶ್ ತಿಳಿಸಿದ್ದಾರೆ. ಕೆ.ಜಿ.ಎಫ್​ ಚಿತ್ರ ಬಿಡುಗಡೆಯಾದ ನಂತರ ಯಶ್​ ಶುಕ್ರವಾರ ಸಂಜೆ ನಿರ್ಮಾಪಕ ವಿಜಯ್​ ಕಿರಗಂದೂರು ಮತ್ತು ಚಿತ್ರತಂಡದ ಜತೆ ಒರಾಯನ್​ ಮಾಲ್​ನಲ್ಲಿ ಚಿತ್ರ ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ಇಷ್ಟು ದಿನ ಕನ್ನಡ ಚಿತ್ರವೊಂದರ ಗಳಿಕೆ ನೂರು ಕೋಟಿ ರೂ. ಗಡಿ ದಾಟುತ್ತೆ ಎಂದು ಮಾತನಾಡಿಕೊಳ್ಳುವುದು ಕಟ್ಟು ಕತೆ

ಕನ್ನಡಿಗರೇ ಎಲ್ಲವನ್ನೂ ಕೊಟ್ಟಿದ್ದಾರೆ, ಬೇರೆ ಭಾಷೆಗೆ ಹೋಗಲ್ಲ ಎಂದ್ರು ಯಶ್ Read More »

Scroll to Top