Karnataka

ನಿರ್ಮಾಣವಾಗಲಿದೆ 111 ಅಡಿ ಎತ್ತರದ ಸಿದ್ದಗಂಗಾ ಶ್ರೀಗಳ ಪ್ರತಿಮೆ

ರಾಮನಗರ: ನಡೆದಾಡುವ ದೇವರು ಎಂದೇ ನಾಡಿನ ಜನಮಾಸನ ದಲ್ಲಿ ಸ್ಥಾನ ಪಡೆದು ಅಭಿನವ ಬಸವಣ್ಣರೆಂದೇ ಖ್ಯಾತರಾದ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ 111 ಅಡಿ ಎತ್ತರ ಪ್ರತಿಮೆ ಜಿಲ್ಲೆಯಲ್ಲಿ ಸ್ಥಾಪನೆಗೊಳ್ಳಲಿದೆ. ಸಿದ್ದಗಂಗಾ ಶ್ರೀಗಳ ಹುಟ್ಟೂರಾದ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ವೀರಾಪುರದಲ್ಲಿ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶುಕ್ರವಾರ (ನ.8) ಚಾಲನೆ ನೀಡಲಿದ್ದಾರೆ. ವೀರಾಪುರದ ಗ್ರಾಮವನ್ನು ಪಾರಂಪರಿಕ ಹಾಗೂ ವಿಶ್ವ ದರ್ಜೆಯ ಸಾಂಸ್ಕೃತಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಈಗಾಗಲೇ ₹25 […]

ನಿರ್ಮಾಣವಾಗಲಿದೆ 111 ಅಡಿ ಎತ್ತರದ ಸಿದ್ದಗಂಗಾ ಶ್ರೀಗಳ ಪ್ರತಿಮೆ Read More »

ಮೈಸೂರಿನ ನಾಲ್ವರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

ಮೈಸೂರು: 2019ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದ್ದು ಮೈಸೂರಿನ ನಾಲ್ವರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 64 ಮಂದಿ ಗಣ್ಯರು ಗೌರವಕ್ಕೆ ಭಾಜನರಾಗಿದ್ದಾರೆ. ಶಿಲ್ಪಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೈಸೂರಿನ ವಿ. ಎ ದೇಶಪಾಂಡೆ, ಯೋಗ ಕ್ಷೇತ್ರದಲ್ಲಿ ವಿಶ್ವದಾಖಲೆ ನಿರ್ಮಿಸಿದ ಕುಮಾರಿ ಖುಷಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಡಾ. ಕೆ ಚಿದಾನಂದಗೌಡರಿಗೆ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಎಚ್ ಕೆ ರಮಾನಾಥ್ ಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. ಈ ಸಾಲಿನ ರಾಜ್ಯೊತ್ಸವ ಪ್ರಶಸ್ತಿ ಪಟ್ಟಿಯನ್ನ ರಾಜ್ಯ

ಮೈಸೂರಿನ ನಾಲ್ವರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ Read More »

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ರಾಜ್ಯದಲ್ಲಿ ಮತ್ತೆ ಭಾರಿ ಮಳೆ ಸಾಧ್ಯತೆ

ಬೆಂಗಳೂರು: ಅರಬ್ಬಿ ಸಮುದ್ರ ಮತ್ತು ಲಕ್ಷದ್ವೀಪದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾಯುಭಾರ ಕುಸಿತದಿಂದ ಕೇರಳ, ಕರ್ನಾಟಕ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರವು ಹೆಚ್ಚಿನ ಮಳೆ ಬೀಳುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಸೂಚನೆ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ರಾಜ್ಯದಲ್ಲಿ ಮತ್ತೆ ಭಾರಿ ಮಳೆ ಸಾಧ್ಯತೆ Read More »

SSLC ಅಂತಿಮ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಪ್ರಸಕ್ತ ವರ್ಷದ SSLC (10ನೇ ತರಗತಿ) ಪರೀಕ್ಷಾ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ. 2020 ಮಾರ್ಚ್ 20 ರಿಂದ ಏಪ್ರಿಲ್ 3 ವರೆಗೆ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 9ರಿಂದ ಮಧ್ಯಾಹ್ನ 12.45 ವರಗೆ ಪರೀಕ್ಷೆಗಳು ನಡೆಯಲಿವೆ. ಪ್ರೌಢ ಶಿಕ್ಷಣಾ ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿರುವ ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ನವೆಂಬರ್ 19ರ ವರೆಗೆ ಅವಕಾಶ ನೀಡಲಾಗಿದೆ. ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಬೇಕಾದರೆ, ನೇರವಾಗಿ ಕರ್ನಾಟಕ ಶಿಕ್ಷಣಾ ಮಂಡಳಿ ಇಲಾಖೆಗೆ

SSLC ಅಂತಿಮ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ Read More »

ತಲಕಾವೇರಿಯಲ್ಲಿ ಇಂದು ಮಧ್ಯರಾತ್ರಿ ತೀರ್ಥೋದ್ಭವ

ಕೊಡಗು: ಕನ್ನಡ ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ತಲಕಾವೇರಿಯ ಪವಿತ್ರ ಬ್ರಹ್ಮ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಪ್ರತ್ಯಕ್ಷವಾಗುತ್ತಾಳೆ. ಇಂದು ತಡರಾತ್ರಿ(ಅ.18) 12:59ಕ್ಕೆ ತೀರ್ಥೋದ್ಭವ ಆಗಲಿದ್ದು, ಬ್ರಹ್ಮಕುಂಡಿಕೆಯಿಂದ ಪವಿತ್ರ ತೀರ್ಥ ಉಕ್ಕಿ ಹರಿಯಲಿದೆ. ಪವಿತ್ರ ತೀರ್ಥೋದ್ಭವ ಕ್ಷೇತ್ರ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದೆ. ಈ ವಿಸ್ಮಯ ನೋಡಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ಇಂದು ಸಂಜೆ ಮಹಾಮಂಗಳಾರತಿ ನಂತರ ಭಕ್ತರಿಗೆ ಕ್ಷೇತ್ರಕ್ಕೆ ಪ್ರವೇಶ ಸಿಗಲಿದೆ. ನಾನಾ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಅರ್ಚಕರ ತಂಡ ಕೂಡ

ತಲಕಾವೇರಿಯಲ್ಲಿ ಇಂದು ಮಧ್ಯರಾತ್ರಿ ತೀರ್ಥೋದ್ಭವ Read More »

ಖ್ಯಾತ ಸ್ಯಾಕ್ಸೊಫೋನ್ ವಾದಕ ಕದ್ರಿ ಗೋಪಾಲನಾಥ್ ನಿಧನ

ಬೆಂಗಳೂರು: ವಿಶ್ವವಿಖ್ಯಾತ ಸ್ಯಾಕ್ಸೊಫೋನ್ ವಾದಕರಾದ ಕದ್ರಿ ಗೋಪಾಲನಾಥ್ ರವರು ನಿಧನರಾಗಿದ್ದಾರೆ. ಗೋಪಾಲನಾಥ್ ಅವರಿಗೆ 69 ವರ್ಷ ವಯಸ್ಸಾಗಿತ್ತು. ಸ್ಯಾಕ್ಸೊಪೋನ್ ವಾದನದಲ್ಲಿ ಕರ್ನಾಟಕ ಸಂಗೀತ ಅಳವಡಿಸಿಕೊಂಡು ವಿಶ್ವಪ್ರಸಿದ್ದಿ ಪಡೆದವರಾಗಿದ್ದರು. ಡಿಸೆಂಬರ್ 11, 1949ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಜಿಪಮೂಡದಲ್ಲಿ ಜನಿಸಿದ ಗೋಪಾಲನಾಥ್ ಜಗತ್ತಿನಾದ್ಯಂತ ಸಾವಿರಾರು ಸಂಗೀತ ಕಚೇರಿ ನೀಡಿದ್ದಾರೆ. ಪದ್ಮಶ್ರೀ, ಸ್ಯಾಕ್ಸೊಫೋನ್ ಚಕ್ರವರ್ತಿ ಸೇರಿ ನೂರಾರು ಗೌರವ, ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಅವರ ತಂದೆ ತನಿಯಪ್ಪ ಅವರೂ ಪ್ರಸಿದ್ಧ ನಾದಸ್ವರ ವಾದಕರಾಗಿದ್ದರು. ಮೈಸೂರು ಅರಮನೆಯ ಬ್ಯಾಂಡ್‌ ಸೆಟ್‌ನಲ್ಲಿ ಸ್ಯಾಕ್ಸೊಫೋನ್ ನೋಡಿ

ಖ್ಯಾತ ಸ್ಯಾಕ್ಸೊಫೋನ್ ವಾದಕ ಕದ್ರಿ ಗೋಪಾಲನಾಥ್ ನಿಧನ Read More »

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ದಿಢೀರ್ ರಾಜಿನಾಮೆ

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿ ಹೆಸರಾಗಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಇಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಬೆನ್ನಲೆ ಪತ್ರ ಬರೆದಿರುವ ಅವರು, ‘ನನ್ನ ರಾಜೀನಾಮೆ ವೈಯಕ್ತಿಕ ನಿರ್ಧಾರ. ಇದಕ್ಕೆ ನೇರವಾಗಿ ಯಾರೊಬ್ಬರೂ ಕಾರಣವಲ್ಲ. ಇಷ್ಟು ದಿನ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದೆ. ಈ ಹಂತದಲ್ಲಿ ಹುದ್ದೆ ತೊರೆದು ಹೋಗುತ್ತಿರುವುದಕ್ಕೆ ಜನರ ಕ್ಷಮೆ ಯಾಚಿಸುತ್ತೇನೆ’. “ಪ್ರಜಾಪ್ರಭುತ್ವದ ಮೂಲ ಆಧಾರ ಸ್ತಂಭಗಳು ಹಿಂದೆಂದೂ ಕಾಣದ ರೀತಿಯಲ್ಲಿ ರಾಜಿ ಮಾಡಿಕೊಳ್ಳುತ್ತಿವೆ. ದೇಶದ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ದಿಢೀರ್ ರಾಜಿನಾಮೆ Read More »

ಕೊಡಗಿನಲ್ಲಿ ಭಾರೀ ಮಳೆ ಮುನ್ಸೂಚನೆ: ರೆಡ್ ಅಲರ್ಟ್ ಘೋಷಣೆ

ಕೊಡಗು: ಕೊಡಗು ಜಿಲ್ಲೆಯಾದ್ಯಂತ ಮತ್ತೆ ಭಾರಿ ಮಳೆ ಸುರಿಯುತ್ತಿದ್ದು ‘ರೆಡ್‌ ಅಲರ್ಟ್‌’ ಘೋಷಿಸಲಾಗಿದೆ. ಜಿಲ್ಲೆಯಾದ್ಯಂತ ಮತ್ತಷ್ಟು ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಮಾನ ಇಲಾಖೆನೀಡಿದ್ದು, ಇದರ ಬೆನ್ನಲೆ ಕೊಡಗು ಜಿಲ್ಲಾ ವಿಪತ್ತು ನಿರ್ವಾಹಣಾ ಪ್ರಾಧಿಕಾರ ‘ರೆಡ್‌ ಅಲರ್ಟ್‌’ ಘೋಷಿಸಿದೆ. ಬೆಳಗ್ಗೆಯಿಂದ ಬಿಟ್ಟು ಬಿಡದೆ ಕೊಡಗಿನ ಭಾಗಮಂಡಲ, ತಲಕಾವೇರಿ ಭಾಗದಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಪರಿಣಾಮ ಮತ್ತೆ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಮಳೆಯಿಂದ ನಾಪೋಕ್ಲು ಭಾಗಮಂಡಲ ಮತ್ತು ಮಡಿಕೇರಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ರಸ್ತೆ ಮೇಲೆ 2 ಅಡಿ ನೀರು

ಕೊಡಗಿನಲ್ಲಿ ಭಾರೀ ಮಳೆ ಮುನ್ಸೂಚನೆ: ರೆಡ್ ಅಲರ್ಟ್ ಘೋಷಣೆ Read More »

ಗುಂಡಿಬಿದ್ದ ರಸ್ತೆಯಲ್ಲಿ ಚಂದ್ರಯಾನ ಮಾಡಿಸಿ ಬಿಬಿಎಂಪಿ ಕಣ್ತೆರೆಸಿದ ಮೈಸೂರಿನ ಕಲಾವಿದ

ಬೆಂಗಳೂರು: ಮೈಸೂರಿನ ಕಲಾವಿದ ಬಾದಲ್ ನಂಜುಂಡಸ್ವಾಮಿ ಬೆಂಗಳೂರಿನ ಹಳ್ಳಬಿದ್ದ ರಸ್ತೆಗಳ ಗುಂಡಿಗಳನ್ನು BBMP ಗಮನಕ್ಕೆ ತರಲು ಬಳಸಿದ ಐಡಿಯಾ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ನಗರದ ಹೇರೋಹಳ್ಳಿ ಮುಖ್ಯರಸ್ತೆಯಲ್ಲಿ ಗುಂಡಿಬಿದ್ದು ಆಳಾಗಿದ್ದನ್ನು ಗಮನಿಸಿದ ಮೈಸೂರು ಮೂಲದ ಬಾದಲ್ ನಂಜುಂಡಸ್ವಾಮಿ ಬೆಂಗಳೂರು ಮಹಾನಗರ ಪಾಲಿಕೆಯ ಗಮನ ಸೆಳೆಯಲು ನಟ ಪೂರ್ಣಚಂದ್ರ ಅವರಿಗೆ ಗಗನಯಾತ್ರಿಯ ವೇಷ ಧರಿಸಿ ಗಗನಯಾತ್ರಿಗಳು ಚಂದ್ರನ ಮೇಲ್ಮೈಯಲ್ಲಿ ನಡೆದಾಡುವಂತೆಯೇ ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ನಡೆದಾಡಿಸಿದ್ದಾರೆ. ನಂತರ ಈ ದೃಶ್ಯವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ

ಗುಂಡಿಬಿದ್ದ ರಸ್ತೆಯಲ್ಲಿ ಚಂದ್ರಯಾನ ಮಾಡಿಸಿ ಬಿಬಿಎಂಪಿ ಕಣ್ತೆರೆಸಿದ ಮೈಸೂರಿನ ಕಲಾವಿದ Read More »

ಜ್ವರದಿಂದ ಮೃತಪಟ್ಟ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆನೆ

ಉಡುಪಿ: ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಸೇರಿದ ಇಂದಿರಾ ಎಂಬ 62 ವರ್ಷದ ಆನೆ ಜ್ವರದಿಂದ ನಿನ್ನೆ ಮೃತಪಟ್ಟಿದೆ. ಕಳೆದ 20 ದಿನಗಳಿಂದ ಆನೆ ಜ್ವರದಿಂದ ಬಳಲುತ್ತಿತ್ತು ಎಂದು ತಿಳಿದುಬಂದಿದೆ. ಕಳೆದ 22 ವರ್ಷಗಳಿಂದ ದೇವಸ್ತಾನದ ಸೇವೆ ಸಲ್ಲಿಸುತ್ತಿದ್ದ ಇಂದಿರಾ ನಿಧನಕ್ಕೆ ಭಕ್ತರು ಕಂಬನಿ ಮೀಡಿದಿದ್ದಾರೆ. ಈ ಆನೆ ಕೊಲ್ಲೂರು ದೇವಸ್ತಾನಕ್ಕೆ ಕಟ್ಟಿಗೆ ಮಾರಾಟಗಾರನಿಂದ ಕೊಡುಗೆ ರೂಪದಲ್ಲಿ ಬಂದಿತ್ತು ಎನ್ನಲಾಗಿದೆ.

ಜ್ವರದಿಂದ ಮೃತಪಟ್ಟ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆನೆ Read More »

Scroll to Top