66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ; ಸ್ಯಾಂಡಲ್ ವುಡ್ ಗೆ 11 ರಾಷ್ಟ್ರ ಪ್ರಶಸ್ತಿ

ನವದೆಹಲಿ: ಇಂದು ದೆಹಲಿಯಲ್ಲಿ 66ನೇಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ ನಡೆದಿದ್ದು, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪ್ರಶಸ್ತಿಯನ್ನು ಪ್ರಧಾನ ಮಾಡಿದ್ದಾರೆ.

66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕನ್ನಡ ಸಿನಿಮಾರಂಗ ಹನ್ನೊಂದು ಪ್ರಶಸ್ತಿಯನ್ನು ಗೆದ್ದುಗೊಂಡಿದೆ. ಸ್ಯಾಂಡಲ್ ವುಡ್ ನ ನಾತಿ ಚರಾಮಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ.

ಸಂಪ್ರದಾಯದ ಪ್ರಕಾರ ರಾಷ್ಟ್ರ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಪ್ರದಾನ ಮಾಡಬೇಕಿತ್ತು. ಆದರೆ ಈ ಬಾರಿ ಕೋವಿಂದ್ ಅವರ ಅನುಪಸ್ಥಿತಿಯಲ್ಲಿ ಉಪರಾಷ್ಟ್ರಪತಿ ನಾಯ್ಡು ಪ್ರಶಸ್ತಿ ನೀಡಿದ್ದಾರೆ. ಭಾರತೀಯ ಸಿನಿಮಾರಂಗದ ಪರಮೋಚ್ಛ ಪ್ರಶಸ್ತಿಯಾದ 50ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಹಿರಿಯ ನಟ ಅಮಿತಾಬ್ ಬಚ್ಚನ್ ಅವರಿಗೆ ಸಂದಿದೆ.

ಕನ್ನಡ ಯಾವ ಸಿನಿಮಾಕ್ಕೆ ಪ್ರಶಸ್ತಿ:

  • ನಾತಿಚರಾಮಿಗೆ ಅತ್ಯುತ್ತಮ ಸಿನಿಮಾ,
  • ಉತ್ತಮ ಸಾಹಿತ್ಯ, ಉತ್ತಮ ಸಂಕಲನ, ಉತ್ತಮ ಗಾಯಕಿ (ಬಿಂದು ಮಾಲಿನಿ) ಹಾಗೂ
  • ಶ್ರುತಿ ಹರಿಹರನ್ ಗೆ ವಿಶೇಷ ಜ್ಯೂರಿ ಪ್ರಶಸ್ತಿ ಸೇರಿದಂತೆ ಒಟ್ಟು ಐದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
  • ಕೆಜಿಎಫ್ ಚಾಪ್ಟರ್ 1 ಅತ್ಯುತ್ತಮ ಸಾಹಸ ಹಾಗೂ ಸ್ಪೆಷಲ್ ಎಫೆಕ್ಟ್ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ.
  • ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಅತ್ಯುತ್ತಮ ಮಕ್ಕಳ ಚಿತ್ರ,
  • ಒಂದಲ್ಲಾ ಎರಡಲ್ಲಾ ಚಿತ್ರದ ಪಿವಿ ರೋಹಿತ್ ಅತ್ಯುತ್ತಮ ಬಾಲ ನಟ,
  • ಒಂದಲ್ಲಾ ಎರಡಲ್ಲಾ ಸಿನಿಮಾಕ್ಕೆ ನರ್ಗಿಸ್ ದತ್ ಪ್ರಶಸ್ತಿಗೆ ಭಾಜನವಾಗಿದೆ.
  • ಸರಳ ವಿರಳ ಸಾಕ್ಷ್ಯ ಚಿತ್ರ ಅತ್ಯುತ್ತಮ ಶೈಕ್ಷಣಿಕ ಸಿನಿಮಾ ಪ್ರಶಸ್ತಿ ಪಡೆದಿದೆ.
Scroll to Top