ಫೆ.21ರಿಂದ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ

ಬೆಂಗಳೂರು: 11 ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇದೇ ಫೆಬ್ರವರಿ 21ರಿಂದ ಚಾಲನೆ ಸಿಗಲಿದೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಂಜೆ 6ಕ್ಕೆ ಸಿಎಂ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಫೆಬ್ರವರಿ 22ರಿಂದ 28ರ ವರೆಗೆ ಚಿತ್ರ ಪ್ರದರ್ಶನ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸುಮಾರು 60 ರಾಷ್ಟ್ರಗಳ 125 ಚಲನಚಿತ್ರಗಳು ಪ್ರದರ್ಶನವಾಗಲಿವೆ.

ಈ ಬಾರಿಯ ಪ್ರಕೃತಿ ವಿಕೋಪ ಕೇಂದ್ರಿ‌ಕರಿಸಿದ ಸಾಕ್ಷ್ಯಚಿತ್ರಗಳು ಪ್ರದರ್ಶನ‌ ಕಾಣಲಿದೆ. ವಿಶೇಷ ಅಂದ್ರೆ, ರೆಬಲ್​ ಸ್ಟಾರ್ ಅಂಬರೀಶ್ ನಟನೆಯ ಏಳು ಸುತ್ತಿನ ಕೋಟೆ, ಅಂತ, ಪಡುವಾರಳ್ಳಿ ಪಾಂಡವರು, ರಂಗನಾಯಕಿ, ನಾಗರಹಾವು ಚಿತ್ರಗಳನ್ನ ನೋಡಬಹುದ. ಅಲ್ಲದೇ , ಲೋಕನಾಥ್ ಎಂ.ಎನ್ ವ್ಯಾಸರಾವ್ ಹಾಗೂ ಮೃಣಾಲ್ ಸೇನ್ ಅವರ ಅತ್ಯುತ್ತಮ ಚಿತ್ರಗಳ ಪ್ರದರ್ಶನ ಕೂಡ ಇರಲಿದೆ.

ತುಮಕೂರು ಶ್ರೀಗಳ ಕಿರುಚಿತ್ರ ಪ್ರದರ್ಶನ

ಚಿತ್ರೋತ್ಸವದಲ್ಲಿ ಇತ್ತೀಚೆಗೆ ಲಿಂಗೈಕ್ಯರಾದ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳು ಹಾಗೂ ಸಾವಯವ ಕೃಷಿಕ ನಾರಾಯಣ ರೆಡ್ಡಿ ಅವರ ಕುರಿತ ಕಿರುಚಿತ್ರ ಪ್ರದರ್ಶನವಾಗಲಿವೆ. ವಿಶೇಷವಾಗಿ ಗಾಂಧಿ 150 ಶೀರ್ಷಿಕೆ ಅಡಿಯಲ್ಲಿ ನಾಲ್ಕು ವಿಶೇಷ ಸಿನಿಮಾಗಳ ಪ್ರದರ್ಶನ ಕಾಣಲಿವೆ.

ಸಮಾರಂಭಕ್ಕೆ ನಟ ಅನಂತ್ ನಾಗ್ ಹಾಗೂ ಬಾಲಿವುಡ್ ನಿರ್ಮಾಪಕ ರಾಹುಲ್ ರವೈಲ್ ಸೇರಿದಂತೆ ಹಲವರು ಆಗಮಿಸಲಿದ್ದಾರೆ. ಉದ್ಘಾಟನಾ ಸಿನಿಮಾವಾಗಿ ಇರಾನ್ ಭಾಷೆಯ ಬಾಂಬ್ ಎ ಲವ್ ಸ್ಟೋರಿ ಪ್ರದರ್ಶನವಾಗಲಿದೆ. ಇನ್ನು, ಬೆಂಗಳೂರಿನ ರಾಜಾಜಿನಗರದಲ್ಲಿನ ಓರಾಯನ್ ಮಾಲ್​ನ ಹನ್ನೊಂದು ಸ್ಕ್ರೀನ್​ಗಳಲ್ಲಿ ಚಿತ್ರ ಪ್ರದರ್ಶನವಾಗಲಿದೆ.

ಚಲನಚಿತ್ರೋತ್ಸವಕ್ಕೆ ಪ್ರವೇಶ ದರ ಹೀಗಿದೆ.!

ಚಿತ್ರೋತ್ಸವದಲ್ಲಿ ನೂರಾರು ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು ಸಾರ್ವಜನಿಕರಿಗೆ 800 ರೂಪಾಯಿ ಹಾಗೂ ವಿದ್ಯಾರ್ಥಿಗಳು, ಹಿರಿಯ ನಾಗರಿಕರಿಗೆ, ಚಿತ್ರೋದ್ಯಮದ ಸದಸ್ಯರಿಗೆ 400 ರೂಪಾಯಿ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.

Leave a Comment

Scroll to Top