ಬೆಂಗಳೂರು: ಕನ್ನಡಿಗರೇ ಎಲ್ಲವನ್ನೂ ಕೊಟ್ಟಿದ್ದಾರೆ ನಾನು ಬೇರೆ ಭಾಷೆಗೆ ಹೋಗುವುದಿಲ್ಲ ಎಂದು ನಟ ರಾಕಿಂಗ್ ಸ್ಟಾರ್ ಯಶ್ ತಿಳಿಸಿದ್ದಾರೆ.
ಕೆ.ಜಿ.ಎಫ್ ಚಿತ್ರ ಬಿಡುಗಡೆಯಾದ ನಂತರ ಯಶ್ ಶುಕ್ರವಾರ ಸಂಜೆ ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ಚಿತ್ರತಂಡದ ಜತೆ ಒರಾಯನ್ ಮಾಲ್ನಲ್ಲಿ ಚಿತ್ರ ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ಇಷ್ಟು ದಿನ ಕನ್ನಡ ಚಿತ್ರವೊಂದರ ಗಳಿಕೆ ನೂರು ಕೋಟಿ ರೂ. ಗಡಿ ದಾಟುತ್ತೆ ಎಂದು ಮಾತನಾಡಿಕೊಳ್ಳುವುದು ಕಟ್ಟು ಕತೆ ಆಗಿತ್ತು. ಆದರೆ ಅದು ಈಗ ನಿಜವಾಗಿದೆ ಎಂದು ಹೇಳಿದರು.
ಕೆ.ಜಿ.ಎಫ್. ಚಿತ್ರ ಬಿಡುಗಡೆಯಾದ 5 ಭಾಷೆಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಗಳಿಕೆಯಲ್ಲೂ ದಾಖಲೆ ನಿರ್ಮಿಸಿದೆ.