ಬೆಂಗಳೂರು: ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ಖ್ಯಾತ ನಟ ಅನಿಲ್ ಕುಮಾರ್ (48) ವಿಧಿವಶರಾಗಿದ್ದಾರೆ.
ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಅವರು ನಗರದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.
ಹೆಗ್ಗೋಡಿನ ನೀನಾಸಂ ನಲ್ಲಿ ತರಬೇತಿ ಪಡೆಇದ್ದ ಅನಿಲ್ “ಮೂಡಲಮನೆ” ಧಾರಾವಾಹಿ ಮೂಲಕ ಮನೆಮಾತಾಗಿದ್ದರು. ಮೂಡಲ ಮನೆ, ಬ್ರಹ್ಮಗಂಟು, ಲಕ್ಷ್ಮೀ ಬಾರಮ್ಮ, ಚಿ ಸೌ ಸಾವಿತ್ರಿ, ಪ್ರೀತಿ ಪ್ರೇಮ, ಅಳಗುಳಿ ಮನೆ, ಮದರಂಗಿ, ಜನುಮದ ಜೋಡಿ, ಮೊದಲಾದ ಧಾರಾವಾಹಿಯಲ್ಲಿ ನಟಿಸಿದ್ದ ಅನಿಲ್ ಕುಮಾರ್ ರಾಜ್ಯ ಪ್ರಶಸ್ತಿ ವಿಜೇತ ಚಿತ್ರ “ಪಲ್ಲಟ” ದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದರು.
ವಿಶೇಷವೆಮದರೆ ಹೆಗ್ಗೋಡಿನ ನೀನಾಸಂನಲ್ಲಿ ತರಬೇತಿ ಪಡೆಯುತ್ತಿದ್ದಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಹಪಾಠಿಯಾಗಿದ್ದರು. ಹೇಮಂತ್ ಅವರ “ಕವಲುದಾರಿ” ಚಿತ್ರದಲ್ಲಿ ಸಹ ಪಾತ್ರ ಮಾಡಿದ್ದ ಅನಿಲ್ ಇತ್ತೀಚೆಗೆ ಅನಾರೊಗ್ಯಕ್ಕೀಡಾಗಿ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದರು.