ಕನ್ನಡದ ಹಿರಿಯ ನಟ ಸಿ.ಎಚ್​​ ಲೋಕನಾಥ್ ಇನ್ನಿಲ್ಲ

ಕನ್ನಡದ ಹಿರಿಯ ನಟ ಸಿ.ಎಚ್​​ ಲೋಕನಾಥ್ ಇನ್ನಿಲ್ಲ

ಬೆಂಗಳೂರು: ವರ್ಷದ ಕೊನೆ ದಿನ ಮತ್ತೊಂದು ಅಘಾತ ಎದುರಾಗಿದ್ದು ಕನ್ನಡ ಚಿತ್ರರಂಗದ ಹಿರಿಯ ನಟ ಸಿ.ಎಚ್​​ ಲೋಕನಾಥ್​​ ಕೊನೆಯುಸಿರೆಳೆದಿದ್ದಾರೆ.

650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಕನ್ನಡದ ಮೇರು ಕಲಾವಿದ ಲೋಕನಾಥ್(90) ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು​​ ಇಂದು ಮುಂಜಾನೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ಧಾರೆ. 

ಹಿರಿಯ ನಟ ಸಿ.ಎಚ್​​ ಲೋಕನಾಥ್ ಇನ್ನಿಲ್ಲ

ಇವರು ಸುಮಾರು 5 ದಶಕಕ್ಕೂ ಹೆಚ್ಚು ಕಾಲ ಕಲಾಸೇವೆ ಮಾಡಿದ್ದ ಹಿರಿಯ ಕಲಾವಿದರಾಗಿದ್ದಾರು. ಸಂಸ್ಕಾರ, ಗೆಜ್ಜೆಪೂಜೆ, ಭೂತಯ್ಯನ ಮಗ ಅಯ್ಯು, ಬಂಗಾರದ ಮನುಷ್ಯ, ಮಿಂಚಿನ ಓಟ, ನಾಗರ ಹಾವು ಎಂಬ ಅದ್ಭುತ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಸದ್ಯ ನಮ್ಮನ್ನ ಅಗಲಿದ ಲೋಕನಾಥ್​​ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ.

ಇಂದು ಮಧ್ಯಾಹ್ನ 12 ರಿಂದ 2.30 ರವರೆಗೂ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ.

ಆರ್ಯಭಟ ಪ್ರಶಸ್ತಿ, ಉತ್ತಮ ಪೋಷಕ ನಟ, ನಾಟಕ ಅಕಾಡಮಿ ಪ್ರಶಸ್ತಿ, ಸಂಘಸಂಸ್ಥೆಗಳಿಂದ ಸನ್ಮಾನ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.

Leave a Comment

Scroll to Top