ಸಿನಿಮಾ: ಇತ್ತೀಚಿನ ದಿನಗಳಲ್ಲಿ ಮಂಗಳೂರು ಮೂಲದ ಹಲವಾರು ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿ ನೆಲೆಕಂಡುಕೊಳ್ಳಲು ಹವಣಿಸುತ್ತಿದ್ದಾರೆ. ಅಂಥಾ ಒಂದು ಹೊಸ ತಂಡ ಲುಂಗಿ ಎಂಬ ಚಿತ್ರ ತಂಡ.
ಇಡೀ ಚಿತ್ರದಲ್ಲಿ ಮಂಗಳೂರು ಭಾಷೆ, ಸೊಗಡು ಮತ್ತು ಅಲ್ಲಿನ ಸಂಸ್ಕೃತಿ, ಆಚಾರ-ವಿಚಾರ ಇರುವಂತಹ ಚಿತ್ರವೊಂದು ಬಿಡುಗಡೆಗೆ ಸಜ್ಜಾಗಿದೆ. ಬಹುತೇಕ ಹೊಸಬರೇ ಸೇರಿ ಮಾಡಿರುವ “ಲುಂಗಿ’ ಎಲ್ಲವೂ ಅಂದುಕೊಂಡಂತೆ ನಡೆದರೆ ಸೆಪ್ಟೆಂಬರ್‌ನಲ್ಲಿ ತೆರೆಗೆ ಬರಲು ಅಣಿಯಾಗುತ್ತಿದೆ. ಇದೀಗ ಚಿತ್ರದ ಮುದ್ದಾದ ಹಾಡೊಂಡು ಬಿಡುಗಡೆಯಾಗಿದ್ದು ಅರ್ಮಾನ್ ಮಲ್ಲಿಕ್ ಕಂಠ ಸಿರಿಯಲ್ಲಿ ಮೂಡಿಬಂದಿರುವ ಹಾಡು ಕೇಳಿ
ಮುಖೇಶ್ ಹೆಗ್ಡೆ ನಿರ್ಮಿಸುತ್ತಿರುವ, ಅಕ್ಷಿತ್ ಶೆಟ್ಟಿ ನಿರ್ದೇಶನದ “ಲುಂಗಿ’ ಚಿತ್ರದ ನಾಯಕನಾಗಿ ಪ್ರಣವ್ ಹೆಗ್ಡೆ, ನಾಯಕಿಯರು ಅಹಲ್ಯಾ ಸುರೇಶ್ ಮತ್ತು ರಾಧಿಕ ರಾವ್ ಇನ್ನುಳಿದಂತೆ ಪ್ರಕಾಶ್, ರೂಪ ವರ್ಕಾಡಿ, ದೀಪಕ್ ರೈ ಪಾಣಜೆ, ಕಾರ್ತಿಕ್, ವಿ.ಜೆ.ವಿನೀತ್, ಮೈಮ್ ರಾಮದಾಸ್, ಸಂದೀಪ್ ಶೆಟ್ಟಿ ತಾರಾಗಣದಲ್ಲಿದ್ದಾರೆ.
ಅರ್ಜುನ್ ಲೂಯಿಸ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಸಿಂಪಲ್ ಸುನಿ, ಅರ್ಜುನ್ ಲೂಯಿಸ್ ಮತ್ತು ವಿಲ್ಸನ್ ಕಟೀಲ್ ಹಾಡುಗಳನ್ನು ರಚಿಸಿದ್ದಾರೆ. ಚಿತ್ರಕ್ಕೆ ರಿಜೊ ಪಿ ಜಾನ್ ಕ್ಯಾಮೆರಾ, ಪ್ರಸಾದ್ ಕೆ ಶೆಟ್ಟಿ ಸಂಗೀತ, ಮನು ಶೆಡ್ಗಾರ್ ಸಂಕಲನ, ಸತೀಶ್ ಬ್ರಹ್ಮಾವರ್ ನಿರ್ಮಾಣ ನಿರ್ವಹಣೆ, ರಕ್ಷಿತ್ ರೈ ಸಹ-ನಿರ್ದೇಶನ ಮತ್ತು ಮಹೇಶ್ ಯೆನ್ಮೂರು ಕಲಾ ನಿರ್ದೇಶನವಿದೆ.