ಮುಂಬೈ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಮುಂಬೈನ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ.
67 ವರ್ಷದ ರಿಷಿಕಪೂರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಅವರ ಸಾವಿನ ವಿಷಯವನ್ನು ಅವರ ಸಹೋದರ ರಣದೀರ್ ಕಪೂರ್ ಖಚಿತ ಪಡಿಸಿದ್ದಾರೆ.
ಇನ್ನು, 2018ರಲ್ಲಿ ರಿಷಿ ಕಪೂರ್ಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಅಮೆರಿಕಾದಲ್ಲಿ ಒಂದು ವರ್ಷ ಚಿಕಿತ್ಸೆ ಪಡೆದು ಕಳೆದ ಸೆಪ್ಟೆಂಬರ್ನಲ್ಲಿ ಭಾರತಕ್ಕೆ ಮರಳಿದ್ದರು. ರಿಷಿ ಬಾಲಿವುಡ್ ದಂತಕತೆ ರಾಜ್ ಕಪೂರ್ರವರ ಎರಡನೇ ಪುತ್ರನಾಗಿದ್ದರು.