ನವದೆಹಲಿ: ಭಾರತ ಸರ್ಕಾರ ಮತ್ತೆ 47 ಚೀನಿ ಆ್ಯಪ್ಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಈ ಅಪ್ಲಿಕೇಶನ್‌ಗಳು ಭಾರತೀಯ ಪ್ರಜೆಗಳ ಖಾಸಗಿತನವನ್ನು ದುರ್ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ ಎಂದು ವರದಿಯಾಗಿದೆ.
ಈ ಹಿಂದೆ 59 ಅಪ್ಲಿಕೇಶನ್ಗಳನ್ನು ಬ್ಯಾನ್ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೆ 47 ಆ್ಯಪ್ಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿದ್ದು, ಇದುವರೆಗೆ ಒಟ್ಟು 106 ಆ್ಯಪ್ಗಳನ್ನು ಬ್ಯಾನ್ ಮಾಡಿದಂತಾಗಿದೆ.
ಇಷ್ಟೆ ಅಲ್ಲದೆ ಇನ್ನೂ ಸುಮಾರು 250 ಆ್ಯಪ್ಗಳ ಪರಿಶೀಲನೆ ನಡೆಸುತ್ತಿದ್ದು, ಸದ್ಯದಲ್ಲೇ ಮತ್ತೊಂದಿಷ್ಟು ಆ್ಯಪ್ಗಳು ಬ್ಯಾನ್ ಆಗುವ ಸಾಧ್ಯತೆ ಇದೆ. ಈಗ ಬ್ಯಾನ್ ಆಗಿರುವ 47 ಆ್ಯಪ್ಗಳ ಪಟ್ಟಿ ಇನ್ನಷ್ಟೇ ಬರಬೇಕಿದೆ.
ಕಳೆದ ತಿಂಗಳು 29ನೇ ತಾರೀಖಿನಂದು ಟಿಕ್-ಟಾಕ್ ಸೇರಿ 59 ಚೀನಿ ಆ್ಯಪ್ಗಳನ್ನು ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು.