ಹೊಸ ವರ್ಷದ ದಿನ ಭಾರತದಲ್ಲಿ ಜನಿಸಿದ ಮಕ್ಕಳ ಸಂಖ್ಯೆ ಎಷ್ಟು ಗೊತ್ತಾ..!?

ನವದೆಹಲಿ: ವಿಶ್ವ ಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್) ಹೊಸ ವರ್ಷದ ದಿನ ವಿಶ್ವದಲ್ಲಿ ಎಷ್ಟು ಮಕ್ಕಳು ಜನಿಸಿದ್ದಾರೆ ಎಂಬ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, 2019 ಹೊಸ ವರ್ಷದ ದಿನ ವಿಶ್ವದಲ್ಲಿ ಒಟ್ಟು 3,95,072 ಮಕ್ಕಳು ಜನಿಸಿದ್ದು, ಭಾರತದ ಮೊದಲ ಸ್ಥಾನದಲ್ಲಿದೆ.

ಜಗತ್ತಿನಲ್ಲಿ 3,95,072 ಮಕ್ಕಳು ಜನಿಸಿದ್ದು, ಅದರಲ್ಲಿ 69,944 ಮಕ್ಕಳು ಭಾರತದಲ್ಲೇ ಜನಿಸಿವೆ ಎಂದು ಯುನಿಸೆಫ್‌ ತಿಳಿಸಿದ್ದು ಈ ಪ್ರಮಾಣ ಜಗತ್ತಿನಲ್ಲೇ ಅತೀ ಹೆಚ್ಚು ಎಂದು ಮಾಹಿತಿ ನೀಡಿದೆ. ಅಲ್ಲದೆ ಜಗತ್ತಿನಲ್ಲಿ ಹುಟ್ಟುವ ಮಕ್ಕಳ ಪೈಕಿ ಶೇಕಡಾ 18ರಷ್ಟು ಭಾರತದಲ್ಲೇ ಹುಟ್ಟುತ್ತವೆ ಎಂದು ವರದಿಯಲ್ಲಿ ತಿಳಿಸಿದೆ.

ಚೀನಾದಲ್ಲಿ 44,940, ನೈಜಿರಿಯಾದಲ್ಲಿ 25,685 ಮಕ್ಕಳು ಜನಿಸಿದ್ದಾರೆ ಎಂದು ಮಾಹಿತಿ ನೀಡಿದೆ. ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲೇ ಕಾಲುಭಾಗದಷ್ಟಿದೆ. ಪಾಕಿಸ್ತಾನ (15,112) ಬಾಂಗ್ಲಾದೇಶ (8,428) ಮಕ್ಕಳು ಹುಟ್ಟಿವೆ.

Scroll to Top