ಭಾರತೀಯ ಮೂಲದ ಅಭಿಜಿತ್‌ ಬ್ಯಾನರ್ಜಿ ಸೇರಿ ಮೂವರಿಗೆ ಅರ್ಥಶಾಸ್ತ್ರ ನೊಬೆಲ್‌

ಸ್ಟಾಕ್​​ಹೋಮ್: ಭಾರತೀಯ ಮೂಲದ ಅಮೆರಿಕಾ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅವರಿಗೆ 2019ನೇ ಸಾಲಿನ ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿದೆ.

ಅಭಿಜಿತ್ ಬ್ಯಾನರ್ಜಿ ಅವರು ಫ್ರೆಂಚ್ ಮೂಲದ ಎಸ್ತಾರ್ ಡ್ಯೂಪ್ಲೋ ಹಾಗೂ ಅಮೆರಿಕಾದ ಮೈಕಲ್ ಕ್ರೆಮರ್ ಜೊತೆ ಪ್ರಶಸ್ತಿ ಹಂಚಿಕೊಂಡಿದ್ದಾರೆ.

“ಜಾಗತಿಕ ಬಡತನವನ್ನು ನಿವಾರಿಸುವ ಪ್ರಾಯೋಗಿಕ ವಿಧಾನ” ಎಂಬ ಗ್ರಂಥಕ್ಕೆ ನೊಬೆಲ್ ಪ್ರಶಸ್ತಿ ಪ್ರತಿಷ್ಟಿತ ನೊಬಲ್ ಪ್ರಶಸ್ತಿ ನೀಡಿಲಾಗಿದೆ. ಅಭಿಜಿತ್ ಅವರು ಭಾರತಲ್ಲಿ ಜನಿಸಿದ್ದು, ಸದ್ಯ ಅಮೆರಿಕಾದ ನಾಗರಿಕರಾಗಿದ್ದಾರೆ. ಅಮರ್ಥ್ಯ ಸೇನ್ ಅವರು 1998ರಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಪಡೆದಿದ್ದರು.

Scroll to Top