ನವದೆಹಲಿ: ಕರ್ನಾಟಕದ ಹೆಮ್ಮೆ, ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥಾಪಕಿ ಸುಧಾಮೂರ್ತಿ ಅವರು ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ವೇಳೆ ಸುಧಾ ಮೂರ್ತಿಯವರು ವೇದಿಕೆಗೆ ಬಂದ ಕೂಡಲೇ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಮತ್ತು ಬಾಲಿವುಡ್ ನಟ ಅಭಿತಾಬ್ ಬಚ್ಚನ್ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು. ಈ ಬಗ್ಗೆ ಸ್ವತಃ ಅಮಿತಾಬ್ ಬಚ್ಚನ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಆದರೆ ಸುಧಾಮೂರ್ತಿ ಅವರು ‘ಕೌನ್ ಬನೇಗ ಕರೋಡ್ ಪತಿ’ ಗೆ ಸ್ಪರ್ಧಿಯಾಗಿ ಹೋಗಿದ್ದಾರಾ ಅಥವಾ ಅತಿಥಿಯಾಗಿ ಹೋಗಿದ್ದಾರಾ ಎಂಬ ಗೊಂದಲ ಮೂಡಿತ್ತು. ಇದೀಗ ಆ ಗೊಂದಲಕ್ಕೆ ತೆರೆ ಬಿದ್ದಿದೆ.
ಸುಧಾಮೂರ್ತಿ ಅವರು ನಟ ಅಭಿತಾಬ್ ಬಚ್ಚನ್ ನಿರೂಪಣೆಯ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಇದೀಗ ಅದರ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಪ್ರೋಮೋದಲ್ಲಿ ಅಮಿತಾಬ್ ಬಚ್ಚನ್, ಸುಧಾಮೂರ್ತಿ ಅವರ ಸಾಧನೆ ಮತ್ತು ಸಮಾಜ ಸೇವೆಯನ್ನು ಪ್ರೇಕ್ಷಕರಿಗೆ ವಿವರಿಸಿದ್ದಾರೆ. ಜೊತೆಗೆ ಬಿಗ್ ಬಿ ಅವರ ಕಾಲಿಗೆ ಬಿದ್ದು, ಆಶೀರ್ವಾದ ಪಡೆದಿದ್ದಾರೆ. ಈ ಕಾರ್ಯಕ್ರಮದ ನವೆಂಬರ್ 29 ರಂದು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ‘ಕೌನ್ ಬನೇಗಾ ಕರೋಡ್ ಪತಿ 11’ ಅಂತಿಮಘಟ್ಟ ತಲುಪಿದೆ. ಹೀಗಾಗಿ ಅಂತಿಮ ಸಂಚಿಕೆಯನ್ನು ಕನ್ನಡತಿ ಸುಧಾಮೂರ್ತಿ ಅವರ ಮೂಲಕ ಸುಖ್ಯಾಂತ ಮಾಡಲಾಗುತ್ತಿದೆ.