ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370 ವಿಧಿ ರದ್ದು

ನವದೆಹಲಿ: ಸ್ವಾತಂತ್ರ್ಯ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರದ್ಧುಗೊಳಿಸಲು ತೀರ್ಮಾನ ತೆಗೆದುಕೊಂಡಿದೆ.

ಸೋಮವಾರ ನಡೆದ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಮಹತ್ವದ ತೀರ್ಮಾನವನ್ನು ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಗೆ ತಿಳಿಸಿದರು. ಪ್ರತಿಪಕ್ಷಗಳ ಗದ್ದಲದ ನಡುವೆ ಸರಕಾರದ ಸಂಕಲ್ಪಗಳನ್ನು ಮಂಡಿಸುತ್ತೇನೆ ಎಂದು ಮಾತು ಆರಂಭಿಸಿದ ಗೃಹ ಸಚಿವ ಅಮಿತ್ ಶಾ ಕಣಿವೆ ರಾಜ್ಯಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ತೆಗೆದು ಹಾಕಲು ತೀರ್ಮಾನಿಸಲಾಗಿದೆ ಎಂದರು.

ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಆರ್ಟಿಕಲ್ 370ನೇ ವಿಧಿಯನ್ನು ಸಂವಿಧಾನಬದ್ಧವಾಗಿ ರದ್ದುಗೊಳಿಸಿದ್ದು, ಇದಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹಿ ಹಾಕಿರುವುದಾಗಿ ತಿಳಿಸಿದರು.

ಮುಖ್ಯಾಂಶಗಳು:

  • ಜಮ್ಮು ಕಾಶ್ಮೀರ ರಾಜ್ಯಕ್ಕಿದ್ದ ವಿಶೇಷಾಧಿಕಾರ ರದ್ದು.
  • ಇನ್ಮುಂದೆ ಸಾಮಾನ್ಯ ರಾಜ್ಯಗಳಂತೆ ಜಮ್ಮು ಕಾಶ್ಮೀರ.
  • ಒಂದೇ ಬಾವುಟ ಹಾರಾಟ, 2ನೇ ಧ್ವಜ ಹಾರಾಟಕ್ಕೆ ಬ್ರೇಕ್​.
  • ಜಮ್ಮುಕಾಶ್ಮೀರ ಭೌಗೋಳಿಕವಾಗಿ ವಿಭಜನೆ.
  • ಜಮ್ಮು ಕಾಶ್ಮೀರ 3 ಭಾಗಗಳಾಗಿ ವಿಭಜನೆ.
  • ಜಮ್ಮು & ಕಾಶ್ಮೀರ ಕೇಂದ್ರಾಡಳಿತ ಪ್ರದೇಶ.
  • ವಿಧಾನಸಭೆ ಸಹಿತ ಕೇಂದ್ರಾಡಳಿತ ಪ್ರದೇಶ.
  • ಲಡಾಖ್ ಕೂಡಾ ಕೇಂದ್ರಾಡಳಿತ ಪ್ರದೇಶ.
  • ಶಿಕ್ಷಣ, ವಿದ್ಯಾರ್ಥಿವೇತನ, ಉದ್ಯೋಗ ಎಲ್ಲರೂ ಅರ್ಹ.
  • ಮಹಿಳೆಯರು ಬೇರೆ ರಾಜ್ಯದವರನ್ನು ವಿವಾಹವಾಗಬಹುದು.
Scroll to Top