
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎರಡನೇ ಬಾರಿ ಕೇಂದ್ರ ಬಜೆಟ್ ಮಂಡನೆ ಮಂಡಿಸಿದ್ದು, ಸುಮಾರು 2 ಗಂಟೆ 40 ನಿಮಿಷಗಳ ಕಾಲ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. ಕೇಂದ್ರ ಬಜೆಟ್ ನಲ್ಲಿ ಈ ಬಾರಿ ಏನು ಪ್ರಮುಖ ಅಂಶಗಳಿವೆ ಎಂಬ ಸಂಫೂರ್ಣ ಮಾಹಿತಿ ಇಲ್ಲಿದೆ.
#Budget2020
— PIB India (@PIB_India) February 1, 2020
Dividend Distribution Tax shifted to individuals instead of companies.
100% tax concession to sovereign wealth funds on investment in infra projects.
Tax on Cooperative societies to be reduced to 22 per cent plus surcharge and cess,as against 30 per cent at present. pic.twitter.com/n2jqEvL25E
ಬಜೆಟ್ ಪ್ರಮುಖ ಅಂಶಗಳು:
ಆದಾಯ ತೆರಿಗೆ ಭಾರೀ ಇಳಿಕೆ – 5 ಲಕ್ಷದವರೆಗೆ ಯಾವುದೇ ತೆರಿಗೆ ಇಲ್ಲ, 5ರಿಂದ 7.5 ಲಕ್ಷದವರೆಗೆ ಶೇ.10 ತೆರಿಗೆ, 7.5 ಲಕ್ಷದಿಂದ 10 ಲಕ್ಷದವರೆಗೆ ಶೇ.15 ತೆರಿಗೆ, 10 ಲಕ್ಷದಿಂದ 12 ಲಕ್ಷದವರೆಗೆ ಶೇ. 20 ತೆರಿಗೆ, 12.5 ಲಕ್ಷದಿಂದ 15 ಲಕ್ಷದವರೆಗೆ ಶೇ. 25 ತೆರಿಗೆ, 15 ಲಕ್ಷಕ್ಕಿಂತ ಮೇಲ್ಪಟ್ಟು ಶೇ.30 ತೆರಿಗೆ.
ಶಿಕ್ಷಣ: 2030ರಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಉದ್ಯೋಗಿಗಳು ಇರುವ ದೇಶವಾಗಿ ಭಾರತ ಹೊರ ಹೊಮ್ಮಲಿದೆ. 150 ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪನೆ. ಶಿಕ್ಷಣದಲ್ಲಿ ವಿದೇಶಿ ಹೂಡಿಕೆ. ಸದ್ಯದಲ್ಲೇ ಹೊಸ ಶಿಕ್ಷಣ ನೀತಿಗೆ ಜಾರಿಗೆ ಕ್ರಮ. 1 ವರ್ಷ ನಗರ- ಸ್ಥಳಿಯ ಸಂಸ್ಥೆಗಳಲ್ಲಿ ತರಬೇತಿ. ರಾಷ್ಟ್ರೀಯು ಪೊಲೀಸ್ ವಿವಿ ಸ್ಥಾಪನೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮೂಲಕ ಆನ್ ಲೈನ್ ಶಿಕ್ಷಣ. ಎಲ್ಲ ಜಿಲ್ಲೆಗಳಿಗೆ ವೈದ್ಯಕೀಯ ಶಿಕ್ಷಣ ಸಂಸ್ಥೆ.
ಎಲ್ ಐಸಿ ಖಾಸಗೀಕರಣ?: ಎಲ್ಐಸಿ ಷೇರುಗಳ ಮಾರಾಟ ಘೋಷಣೆ. ವಿದೇಶಗಳ ಜೊತೆ ರೂಪಾಯಿಯಲ್ಲಿ ವ್ಯವಹಾರಕ್ಕೆ ಒತ್ತು. ಸರ್ಕಾರಿ ಕಂಪನಿಗಳಿಂದ ಬಂಡವಾಳ ಹಿಂತೆಗೆತ.
ಸಣ್ಣ ಕೈಗಾರಿಕೆಗೆ ನೆರವು: ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಹಣ ಹೂಡಿಕೆ ದೊಡ್ಡ ಸಮಸ್ಯೆ. ಈ ಸಮಸ್ಯೆ ನಿವಾರಣೆಗೆ ವಿಶೇಷ ಸಾಲ ಯೋಜನೆ ಘೋಷಣೆ.
ಬ್ಯಾಂಕ್ ಗಳ ಮೇಲೆ ನಿಗಾ: ಠೇವಣಿದಾರರ ಹಣ ಭದ್ರ. ಠೇವಣಿ ವಿಮಾ ಮೊತ್ತ 1 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ. ಐಡಿಬಿಐ ಬ್ಯಾಂಕಿನಲ್ಲಿರುವ ಸರ್ಕಾರಿ ಷೇರುಗಳನ್ನು ಖಾಸಗಿಯವರಿಗೆ ಮಾರಾಟ
ತೆರಿಗೆ ಕಿರುಕುಳದಿಂದ ಮುಕ್ತಿ: ತೆರಿಗೆದಾರರ ಚಾರ್ಟರ್ ಓಪನ್ ಮಾಡುತ್ತೇವೆ. ಸರ್ಕಾರಿ ನೇಮಕಾತಿಗಳಲ್ಲಿ ಬದಲಾವಣೆ. ಆನ್ ಲೈನ್ ಮೂಲಕ ಸರ್ಕಾರಿ ಪರೀಕ್ಷೆಗೆ ಒತ್ತು. ರಾಷ್ಟ್ರೀಯ ನೇಮಕಾತಿ ಸಂಸ್ಥೆ ಸ್ಥಾಪನೆ
ರಾಷ್ಟ್ರೀಯ ಭದ್ರತೆ: ಭ್ರಷ್ಟಾಚಾರ ಮುಕ್ತ ಸರ್ಕಾರವಾಗಿದ್ದು, ಆರೋಗ್ಯ, ಸಂಪತ್ತು. ಸಂತೋಷ, ಭದ್ರತೆ ದೇಶದ ಅಭಿವೃದ್ಧಿಗೆ ಮುಖ್ಯ. ರಾಷ್ಟ್ರೀಯ ಭದ್ರತೆಯೇ ನಮ್ಮ ನಮ್ಮ ಮೊದಲ ಆದ್ಯತೆಯಾಗಿದೆ.
ಪಾರಂಪರಿಕಾ ತಾಣಗಳ ಅಭಿವೃದ್ಧಿ: 5 ಪಾರಂಪರಿಕಾ ತಾಣಗಳ ಅಭಿವೃದ್ಧಿಗೆ ಒತ್ತು. ಸಂಸ್ಕೃತಿ ಇಲಾಖೆಗೆ 3,150 ಕೋಟಿ ಮೀಸಲು. ವಿಶ್ಚ ಪ್ರವಾಸೋದ್ಯಮದಲ್ಲಿ 2014ರಲ್ಲಿ 65ನೇ ಸ್ಥಾನದಲ್ಲಿದ್ದ ನಾವು 2019ರಲ್ಲಿ 34ನೇ ಸ್ಥಾನಕ್ಕೆ ಏರಿದ್ದೇವೆ.
ಬೇಟಿ ಬಚಾವೋದಿಂದ ಲಾಭ: ಬೇಟಿ ಬಚಾವೋ ಬೇಟಿ ಬಡವೋದಿಂದ ಲಾಭವಾಗಿದ್ದು ಶಿಕ್ಷಣದಲ್ಲಿ ಸುಧಾರಣೆಯಾಗಿದೆ. ಈಗ ಶಾಲೆಗೆ ಹೋಗುವ ಹುಡುಗರಿಗಿಂತ ಹುಡುಗಿಯರ ಸಂಖ್ಯೆ ಜಾಸ್ತಿಯಾಗಿದೆ. ಪ್ರಾಥಮಿಕ ಶಾಲೆಯಲ್ಲಿ ಶೇ.93 ರಷ್ಟು ಹುಡುಗಿಯರಿದ್ದರೆ ಶೇ.89 ರಷ್ಟು ಹುಡುಗರಿದ್ದಾರೆ. ಸೆಕೆಂಡರಿ ಶಾಲೆಯಲ್ಲಿ ಶೇ.81ರಷ್ಟು ಬಾಲಕಿಯರಿದ್ದರೆ ಶೇ.72 ರಷ್ಟು ಬಾಲಕರು ಓದುತ್ತಿದ್ದಾರೆ. ಹೈಯರ್ ಸೆಕೆಂಡರಿ ಶಿಕ್ಷಣದಲ್ಲಿ ಶೇ.59.7ರಷ್ಟು ವಿದ್ಯಾರ್ಥಿನಿಯರಿದ್ದರೆ ಶೇ.57.54ರಷ್ಟು ವಿದ್ಯಾರ್ಥಿಗಳು ಓದುತ್ತಿದ್ದಾರೆ.
ಡಿಜಿಟಲ್ ಇಂಡಿಯಾ: ಅಂಗನವಾಡಿಗೂ ಡಿಜಿಟಲ್ ಸೌಲಭ್ಯ, 1 ಲಕ್ಷ ಗ್ರಾಮ ಪಂಚಾಯತ್ ಗಳಿಗೆ ಕೇಬಲ್ ಸಂಪರ್ಕ. ಭಾರತ್ ನೆಟ್ ಗೆ 6 ಸಾವಿರ ಕೋಟಿ ಮೀಸಲು.
ಸ್ಮಾರ್ಟ್ ಮೀಟರ್: ವಿದ್ಯುತ್ ಬಳಕೆದಾರರಿಗೆ ಅನುಕೂಲವಾಗಲು ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆ, 2024ರ ವೇಳಗೆ 100 ಹೊಸ ವಿಮಾನ ನಿಲ್ದಾಣ ಸ್ಥಾಪನೆ, ರಾಷ್ಟ್ರೀಯ ಅನಿಲ ಗ್ರಿಡ್ ವಿಸ್ತರಣೆ
ರೈಲು ಯೋಜನೆ: ಪ್ರವಾಸಿ ತಾಣಗಳಿಗೆ ತೇಜಸ್ ರೈಲು ಸಂಪರ್ಕ, ಬೆಂಗಳೂರಿಗೆ ಸಬ್ ಅರ್ಬನ್ ರೈಲು ಘೋಷಣೆ. ಶೇ.20 ರಷ್ಟು ಹಣ ಕೇಂದ್ರ ಸರ್ಕಾರ ನೀಡಲಿದೆ.
ಎಕ್ಸ್ ಪ್ರೆಸ್ ವೇ: ಚೆನ್ನೈ ಬೆಂಗಳೂರು ಎಕ್ಸ್ ಪ್ರೆಸ್ ವೇ ಶೀಘ್ರವೇ ಶೀಘ್ರವೇ ಘೋಷಣೆ. ದೆಹಲಿ ಮುಂಬೈ ಎಕ್ಸ್ ಪ್ರೆಸ್ ವೇ 2023ಕ್ಕೆ ಮುಕ್ತಾಯ.
ನಿರ್ವಿಕ್ ಯೋಜನೆ: ಪ್ರತಿ ಜಿಲ್ಲೆಯೂ ರಫ್ತು ಹಬ್ ಆಗಿ ಪರಿವರ್ತನೆ. ಸಣ್ಣ ರಫ್ತುದಾರರಿಗೆ ಡಿಜಿಲಟ್ ಮೂಲಕ ಹಣ ಪಾವತಿ. ಕೈಗಾರಿಕಾ ಅಭಿವೃದ್ಧಿಗೆ 27,300 ಕೋಟಿ ರೂ. ಮೀಸಲು
ಉದ್ಯಮ ಭಾರತದ ಶಕ್ತಿ: ಸರಸ್ವತಿ, ಸಿಂಧೂ ನಾಗರಿಕತೆಯ ಸಂದರ್ಭದಲ್ಲೇ ಭಾರತ ವ್ಯಾಪಾರ ವಹಿವಾಟುಗಳನ್ನು ನಡೆಸುತಿತ್ತು. ಕೈಗಾರಿಕೆಗಳಿಗೆ ಭೂಮಿ ನೀಡುವ ಸಂಬಂಧ ಕೈಗಾರಿಕಾ ಅನುಮತಿ ಘಟಕ ಸ್ಥಾಪನೆ. ಮೊಬೈಲ್ ಫೋನ್, ಎಲೆಕ್ಟ್ರಾನಿಕ್ಸ್ ಉತ್ಪಾದನೆ, ಸೆಮಿ ಕಂಡಕ್ಟರ್, ಮೆಡಿಕಲ್ ಉಪಕರಣ ಉತ್ಪಾದನೆಗೆ ಶೀಘ್ರವೇ ಯೋಜನೆ ಪ್ರಕಟ.
ಫಿಟ್ ಇಂಡಿಯಾ: 12 ರೋಗಗಳಿಗೆ ಇಂದ್ರಧನುಷ್ ವಿಸ್ತರಣೆ, ಆಯುಷ್ಮಾನ್ ಭಾರತ್ ವಿಸ್ತರಣೆ. ಜಿಲ್ಲೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಆಸ್ಪತ್ರೆ ನಿರ್ಮಾಣ. ಎಲ್ಲ ಜಿಲ್ಲೆಗಳಲ್ಲಿ ಜನೌಷಧಿ ಕೇಂದ್ರ ವಿಸ್ತರಣೆ. ಆರೋಗ್ಯ ಕ್ಷೇತ್ರಕ್ಕೆ 69 ಸಾವಿರ ಕೋಟಿ ಮೀಸಲು
ನರೇಗಾ ವಿಸ್ತರಣೆ: ಹೈನುಗಾರಿಕೆಗೂ ನರೇಗಾ ವಿಸ್ತರಣೆ ಮಾಡಲಾಗುವುದು. ಮೀನುಗಾರಿಕೆಗಾಗಿ ಸಾಗರ ಮಿತ್ರ ಯೋಜನೆ ಜಾರಿ. ಕೃಷಿ ಕ್ಷೇತ್ರಕ್ಕೆ 2.83 ಲಕ್ಷ ಕೋಟಿ ಮೀಸಲು
ಕಿಸಾನ್ ರೈಲು ಘೋಷಣೆ: 2020ರಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ನಾವು ಬದ್ಧರಾಗಿದ್ದೇವೆ. ಆರ್ಥಿಕತೆಯಲ್ಲಿ ಭಾರತ ವಿಶ್ವದ 5ನೇ ಅತಿ ದೊಡ್ಡ ರಾಷ್ಟ್ರವಾಗಿದ್ದು ರೈತರ ಉತ್ಪನ್ನಗಳನ್ನು ಸಾಗಿಸಲು ಕಿಸಾನ್ ರೈಲು ಘೋಷಣೆ.
ಸಾಲ ಇಳಿಕೆ: ಕೇಂದ್ರ ಸರ್ಕಾರದ ಸಾಲ ಕಡಿಮೆಯಾಗಿದೆ. 2004ರ ಮಾರ್ಚ್ ನಲ್ಲಿ ಶೇ52.2 ರಷ್ಟು ಇದ್ದರೆ 2019ರ ಮಾರ್ಚ್ ವೇಳೆಗೆ ಇದು ಶೇ.48.7ಕ್ಕೆ ಇಳಿಕೆಯಾಗಿದೆ.
ಜಾಗತಿಕ ಮನ್ನಣೆ: ಈ ಹಣಕಾಸು ವರ್ಷದಲ್ಲಿ 40 ಕೋಟಿ ಜಿಎಸ್ ಟಿ ರಿಟರ್ನ್ಸ್ ಫೈಲ್ ಆಗಿದೆ. ಮೋದಿ ಅವಧಿಯಲ್ಲಿ ಹಲವು ಮೈಲಿಗಲ್ಲು ಸ್ಥಾಪನೆಯಾಗಿದ್ದು ಭಾರತಕ್ಕೆ ಜಾಗತಿಕ ಮನ್ನಣೆ ಸಿಕ್ಕಿದೆ. 2006-16ರ 10 ವರ್ಷದ ಅವಧಿಯಲ್ಲಿ 27.1 ಕೋಟಿ ಜನರನ್ನು ಬಡತನದಿಂದ ಮೇಲಕ್ಕೆ ಎತ್ತಲಾಗಿದೆ.
ಜಿಎಸ್ ಟಿಯಿಂದ ಲಾಭ: ಜಿಎಸ್ ಟಿಯಿಂದ ದೇಶಕ್ಕೆ ಲಾಭವಾಗಿದೆ. ನಾವು 16 ಲಕ್ಷ ಮಂದಿ ಹೊಸ ತೆರಿಗೆದಾರರನ್ನು ಸೃಷ್ಟಿಸಿದ್ದೇವೆ. ಸಬ್ ಕಾ ಸಾಥ್, ಸಬ್ ಕಾ ವಿಕಾಶ್, ಸಬ್ ಕಾ ವಿಶ್ವಾಸ್ ಮೂಲಕ ಸರ್ಕಾರದ ಯೋಜನೆಗಳು ನೇರವಾಗಿ ಫಲಾನುಭವಿಗಳನ್ನು ತಲುಪಿದೆ.
You must be logged in to post a comment.