ರಷ್ಯಾ, ಅಮೆರಿಕಾ, ಚೀನಾ ಸಾಲಿಗೆ ಭಾರತ: ಈಗ ಬಾಹ್ಯಾಕಾಶದಲ್ಲೂ ನಾವು ಪವರ್​ಫುಲ್ ..!

ನವದೆಹಲಿ: ಭಾರತ ಇಂದು ಇದೇ ಮೊದಲ ಬಾರಿಗೆ ಲೋ ಆರ್ಬಿಟ್​ ಲೈವ್​ ಸ್ಯಾಟಲೈಟ್​​ ಹೊಡೆದುಹಾಕಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಿದೆ.

ಈವರೆಗೆ ವಿಶ್ವದ ಘಟಾನುಘಟಿ ರಾಷ್ಟ್ರಗಳಾದ ಅಮೆರಿಕಾ, ರಷ್ಯಾ ಮತ್ತು ಚೀನಾ ಮಾತ್ರ ಮಾಡಿದ್ದ ಈ ಸಾಧನೆಯನ್ನು ಈಗ ಭಾರತ ಕೂಡ ಮಾಡಿದ್ದು, ಬಾಹ್ಯಾಕಾಶ ಶಕ್ತಿಯ ಇಲೈಟ್​​ ಕ್ಲಬ್​​ಗೆ ಸೇರಿಕೊಂಡಿದೆ.

ಈಗ ಭಾರತ ನೆಲ, ನೀರು ಹಾಗೂ ಆಕಾಶದಲ್ಲಿ ಮಾತ್ರವಲ್ಲ, ಬಾಹ್ಯಾಕಾಶದಲ್ಲೂ ಹೋರಾಟ ನಡೆಸುವ ಸಾಮರ್ಥ್ಯ ಪಡೆದಿದ್ದು, ದೇಶವನ್ನು ಮತ್ತಷ್ಟು ಬಲಪಡಿಸಿದೆ ಎಂದು ಮೋದಿ ಹೇಳಿದ್ದಾರೆ.

ಸಾಕಷ್ಟು ವಿಫಲತೆಗಳ ನಂತರ 1985ರ ಸೆಪ್ಟೆಂಬರ್​ 13ರಂದು ಅಮೆರಿಕಾ ಆ್ಯಂಟಿ ಸ್ಯಾಟಲೈಟ್​ ಮಿಸೈಲ್ ಟೆಸ್ಟ್ ನಡೆಸುವಲ್ಲಿ ಯಶಸ್ವಿಯಾಗಿತ್ತು. ಎಎಸ್​​ಎಮ್​​-135 ಆ್ಯಂಟಿ ಸ್ಯಾಟಲೈಟ್​ ಬಳಸಿಕೊಂಡು ಪಿ78 ಸ್ಯಾಟಲೈಟ್​​ ಅನ್ನು ಹೊಡೆದು ಹಾಕಿತ್ತು. ಅದಾದ ನಂತರ ಅಮೆರಿಕಾ ಆ್ಯಂಟಿ ಸ್ಯಾಟಲೈಟ್​ ವೆಪನ್​ ಬಳಸಿರಲಿಲ್ಲ. 2008ರ ಫೆಬ್ರವರಿಯಲ್ಲಿ ತನ್ನದೇ ದೇಶದ ಕಾರ್ಯ ನಿರ್ವಹಿಸದ ಸ್ಯಾಟಲೈಟ್​​ವೊಂದನ್ನ​​ ಹೊಡೆದುರುಳಿಸಲು ಸ್ಟ್ರೈಕ್​​ ನಡೆಸಿತ್ತು.

2007ರ ಜನವರಿ 11ರಂದು ಚೀನಾ ಆ್ಯಂಟಿ ಸ್ಯಾಟಿಲೈಟ್​ ಮಿಸೈಲ್ ಟೆಸ್ಟ್​ ಮಾಡಿತ್ತು. ಚೀನಾದ ಎಫ್​​ವೈ-1ಸಿ ಹವಾಮಾನ ಸ್ಯಾಟಲೈಟ್​​ ಅನ್ನು ಕೈನೆಟಿಕ್​ ಕಿಲ್ ವೆಹಿಕಲ್ ಮೂಲಕ ಹೊಡೆದುಹಾಕಲಾಗಿತ್ತು.

ವಿರುದ್ಧ ದಿಕ್ಕಿನಿಂದ ಸೆಕೆಂಡ್​​ಗೆ 8 ಕಿ.ಮೀ ಸ್ಪೀಡ್​​ನಲ್ಲಿ ಬಂದು 750 ಕೆ.ಜಿ ತೂಕದ ವೆದರ್​ ಸ್ಯಾಟಿಲೈಟ್​ ಅನ್ನು 865 ಕಿಲೋಮೀಟರ್​ ಆಲ್ಟಿಟ್ಯೂಡ್​​ನಲ್ಲಿ ಹೊಡೆದುರುಳಿಸಲಾಗಿತ್ತು. ಚೀನಾ ಸರ್ಕಾರ ಕೂಡಲೇ ಈ ವಿಷಯವನ್ನು ಬಹಿರಂಗಪಡಿಸಿರಲಿಲ್ಲ. ಜನವರಿ 23ರಂದು ಚೀನಾ ವಿದೇಶಾಂಗ ಸಚಿವಾಲಯ ಆ್ಯಂಟಿ ಸ್ಯಾಟಲೈಟ್​ ಟೆಸ್ಟ್​ ನಡೆಸಿರುವುದುದಾಗಿ ಅಧಿಕೃತವಾಗಿ ಘೋಷಿಸಿತ್ತು. ಆದರೂ ಅಮೇರಿಕಾ, ಜಪಾನ್ ಹಾಗೂ ಇತರೆ ದೇಶಗಳಿಗೆ ಈ ಬಗ್ಗೆ ಮೊದಲೇ ಮಾಹಿತಿ ನೀಡಲಾಗಿತ್ತು ಎಂದು ಚೀನಾ ಹೇಳಿತ್ತು.

ಚೀನಾ ಈ ಟೆಸ್ಟ್​​ ನಡೆಸಿದ್ದಾಗ ಅಂತರಿಕ್ಷವನ್ನು ಕೂಡ ಮಿಲಿಟರೀಕರಣ ಮಾಡಲಾಗ್ತಿದೆ ಎಂಬ ಟೀಕೆ ವ್ಯಕ್ತವಾಗಿತ್ತು. ಆದ್ರೆ ಆಗ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿ ಜಿಯಾಂಚೋ ಪ್ರತಿಕ್ರಿಯಿಸಿ, ಇದರ ಬಗ್ಗೆ ಭಯಪಡುವಂತದ್ದು ಏನೂ ಇಲ್ಲ. ಬಾಹ್ಯಾಕಾಶದಲ್ಲಿ ಚೀನಾ ಯಾವುದೇ ರೀತಿಯ ಶಸ್ತ್ರಾಸ್ತ್ರ ರೇಸ್​​ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದರು.

ಇನ್ನು ರಷ್ಯಾ 2015ರ ನವೆಂಬರ್​​ನಲ್ಲಿ ಮೊದಲ ಬಾರಿಗೆ ಪಿಎಲ್​​​-19 ನುಡೋಲ್​​ ಹೆಸರಿನಲ್ಲಿ ಈ ಟೆಸ್ಟ್​ ನಡೆಸಿತ್ತು. 2016ರಲ್ಲಿ ಎರಡನೇ ಬಾರಿಗೆ ಹಾಗೂ 2016ರ ಡಿಸೆಂಬರ್​, 2018ರ ಮಾರ್ಚ್​​ 26 ಹಾಗೂ 2018ರ ಡಿಸೆಂಬರ್​ 23ರಂದು ಕೂಡ ನುಡೋಲ್​​ ಪರೀಕ್ಷೆ ನಡೆಸಿತ್ತು.

ಈಗ ಭಾರತ ಕೂಡ ಈ ಪರೀಕ್ಷೆ ನಡೆಸಿ ಯಶಸ್ವಿಯಾಗಿದೆ. ಲೈವ್​​ ಸ್ಯಾಟಲೈಟ್​ ಹೊಡೆದುಹಾಕುವ ಮೂಲಕ ಭಾರತ ಆ್ಯಂಟಿ ಸ್ಯಾಟಲೈಟ್​ ಟೆಸ್ಟ್​ನಲ್ಲಿ ಯಶಸ್ವಿಯಾಗಿದೆ. ಡಿಆರ್​ಡಿಓ ಈ ಸಿಸ್ಟಮ್​ ಅಭಿವೃದ್ಧಿಪಡಿಸಿದೆ. ಈ ಮೂಲಕ ಭಾರತ ಆ್ಯಂಟಿ ಸ್ಯಾಟಲೈಟ್​​ ಸಾಮರ್ಥ್ಯ ಹೊಂದಿರುವ ನಾಲ್ಕನೇ ದೇಶವಾಗಿದೆ ಎಂದು ಮೋದಿ ಘೋಷಿಸಿದ್ದಾರೆ.

Leave a Comment

Scroll to Top