ನವದೆಹಲಿ: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತೀಯ ವಾಯುಪಡೆಯ 12 ಮಿರೇಜ್ ಜೆಟ್ ಯುದ್ಧ ವಿಮಾನಗಳು ಗಡಿ ನಿಯಂತ್ರಣ ರೇಖೆಯ ಬಳಿಯ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಲಾಗಿದ್ದು, ಸಂಪೂರ್ಣ ನಾಶ ಪಡಿಸಲಾಗಿದೆ.
ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಅಡಗುತಾಣಗಳ ಮೇಲೆ ಮುಂಜಾನೆ 3.30ರ ವೇಳೆಗೆ ನಡೆಸಿದ ದಾಳಿಯಲ್ಲಿ 1000 ಕೆ.ಜಿ ಬಾಂಬ್ ಹಾಕಿ ಅಡಗುತಾಣಗಳನ್ನು ಸಂಪೂರ್ಣ ಧ್ವಂಸಗೊಳಿಸಲಾಗಿದೆ.