ಭಾರತದ ಮೊದಲ ಮಹಿಳಾ ಹೃದ್ರೋಗ ತಜ್ಞೆ ಡಾ. ಎಸ್ ಪದ್ಮಾವತಿ ಕೊರೊನಾಗೆ ಬಲಿ

ನವದೆಹಲಿ: ಭಾರತದ ಮೊದಲ ಮಹಿಳಾ ಹೃದ್ರೋಗ ತಜ್ಞೆ ಡಾ. ಎಸ್. ಪದ್ಮಾವತಿ ಕೋವೀಡ್ -19 ಕಾರಣದಿಂದಾಗಿ ನಿಧನರಾಗಿದ್ದಾರೆ.

“ಗಾಡ್ ಮದರ್ ಆಫ್ ಕಾರ್ಡಿಯಾಲಜಿ” ಎಂದು ಪ್ರಸಿದ್ಧವಾಗಿದ್ದ 103 ವರ್ಷದ ಪದ್ಮಾವತಿ ಅವರು 11 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆಗಸ್ಟ್ 29 ರಂದು ಕೋವಿಡ್-19 ಸೋಂಕಿನಿಂದ ನಿಧನರಾಗಿದ್ದಾರೆ ಎಂದು ನ್ಯಾಷನಲ್‌ ಹಾರ್ಟ್‌ ಇನ್‌ಸ್ಟಿಟ್ಯೂಟ್‌ (ಎನ್‌ಎಚ್‌ಐ) ಭಾನುವಾರ ತಿಳಿಸಿದೆ.

ಕೋವಿಡ್ ಸೋಂಕು ತಗುಲಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಉಸಿರಾಟದ ತೊಂದರೆ ಮತ್ತು ಜ್ವರ ಕಾಣಿಸಿಕೊಂಡಿತ್ತು. ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು. ಹೀಗಿದ್ದರೂ ಹೃದಯಾಘಾತದಿಂದಾಗಿ ಮೃತಪಟ್ಟಿದ್ದಾರೆ ಎಂದು ಎನ್‌ಎಚ್‌ಐ ತಿಳಿಸಿದೆ.

ಎನ್‌ಎಚ್‌ಐ ಸ್ಥಾಪಪರಾಗಿದ್ದ ಅವರು 1917 ರಲ್ಲಿ ಬರ್ಮಾದಲ್ಲಿ (ಈಗ ಮ್ಯಾನ್ಮಾರ್) ಜನಿಸಿದರು. ಅವರು ಎರಡನೇ ಮಹಾಯುದ್ಧದ ಸಮಯದಲ್ಲಿ 1942 ರಲ್ಲಿ ಭಾರತಕ್ಕೆ ಬಂದಿದ್ದರು. ರಂಗೂನ್ ವೈದ್ಯಕೀಯ ಕಾಲೇಜಿನಿಂದ ಪದವಿ ಪಡೆದಿದ್ದ ಪದ್ಮಾವತಿ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿಭಾರತಕ್ಕೆ ಹಿಂದಿರುಗಿದ ನಂತರ, ಅವರು ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿದ್ದರು.

1962 ರಲ್ಲಿ, ಡಾ. ಪದ್ಮಾವತಿ ಅವರು ಆಲ್ ಇಂಡಿಯಾ ಹಾರ್ಟ್ ಫೌಂಡೇಶನ್ ಅನ್ನು ಸ್ಥಾಪಿಸಿದರು ಮತ್ತು 1981 ರಲ್ಲಿ ದೆಹಲಿಯಲ್ಲಿ ಆಧುನಿಕ ಹೃದಯ ಆಸ್ಪತ್ರೆಯಾಗಿ ನ್ಯಾಷನಲ್ ಹಾರ್ಟ್ ಇನ್ಸ್ಟಿಟ್ಯೂಟ್ ಅನ್ನು ಸ್ಥಾಪಿಸಿದರು, ದಕ್ಷಿಣ ಭಾಗದಲಿ ಖಾಸಗಿ ವಲಯದಲ್ಲಿ ಮೊದಲ ಹೃದಯ ಕ್ಯಾಟಿಟೆರೈಸೇಶನ್ ಪ್ರಯೋಗಾಲಯವನ್ನು ಹೊಂದಿದ್ದರು ಎಂದು ಎನ್ಎಚ್ಐ ತಿಳಿಸಿದೆ.

ಭಾರತದಲ್ಲಿ ಹೃದ್ರೋಗಶಾಸ್ತ್ರದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರವಾಗಿದ್ದು ಅವರಿಗೆ ಅಮೇರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಮತ್ತು ಎಫ್‌ಎಎಂಎಸ್ ಗೌರವ, 1967 ರಲ್ಲಿ ಪದ್ಮವಿಭೂಷಣ, 1992 ರಲ್ಲಿ ಪದ್ಮಭೂಭೂಷಣ ಪ್ರಶಸ್ತಿ ಸಂದಿತ್ತು.

Leave a Comment

Scroll to Top