
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ನಭೋಮಂಡಲದಲ್ಲಿ ಮತ್ತೂಂದು ಮೈಲುಗಲ್ಲು ಸ್ಥಾಪಿಸಿದ್ದು, ಉಗ್ರರ ಕಾರ್ಯಾಚರಣೆ ಮತ್ತು ಭೂಮಿಯ ಮೇಲೆ ನಿಗಾ ಇಡುವ ರೇಡಾರ್ ಇಮೇಜಿಂಗ್ ಸೆಟಲೈಟ್-2ಬಿ (ರಿಸ್ಯಾಟ್-2ಬಿ) ಉಪಗ್ರಹ ವನ್ನು ಹೊತ್ತಿದ್ದ ಪಿಎಸ್ಎಲ್ವಿ -ಸಿ46 ರಾಕೆಟ್‌ನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ.
?? #ISROMissions ??#PSLVC46 successfully injects #RISAT2B into Low Earth Orbit.
— ISRO (@isro) May 22, 2019
Here's the view of #RISAT2B separation captured by our onboard camera
Our updates will continue. pic.twitter.com/WUTBdNH2XJ
ಇಂದು ಬೆಳಗ್ಗೆ 5:30ರ ಸುಮಾರಿಗೆ ಶ್ರಿಹರಿಕೋಟಾದಲ್ಲಿರೋ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ಎಲ್ವಿ ಉಡಾವಣೆ ವಾಹನದ ಮೂಲಕ ಉಪಗ್ರಹವನ್ನ ಉಡವಾವಣೆ ಮಾಡಲಾಯಿತು.
ಈ ಉಪಗ್ರಹದ ವಿಶೇಷತೆಗಳೇನು..?
- ರಿಸ್ಯಾಟ್-2ಬಿ’ ಉಪಗ್ರಹ 615 ಕೆಜಿ ತೂಕ ಹೊಂದಿದೆ
- ರೇಡಾರ್ ಸೌಲಭ್ಯವನ್ನು ಹೊಂದಿರುವ ಉಪಗ್ರಹ
- ಉಗ್ರರ ಚಲನವಲನ, ಅಡಗುದಾಣಗಳ ಪತ್ತೆಗೆ ಸಹಾಯಕ
- ದೇಶದ ಭದ್ರತೆಗಾಗಿ ಗೂಢಚರ್ಯೆಗಾಗಿ ಈ ಉಪಗ್ರಹ ಬಳಕೆ
- ಭೂಮಿಯಿಂದ 557 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಕಾರ್ಯಾಚರಣೆ
- ದೇಶದ ಇತರೆ ಗೂಢಚಾರಿ ಸ್ಯಾಟಲೈಟ್ಗಳಿಗಿಂದ ಇದು ಹೆಚ್ಚು ಶಕ್ತಿಶಾಲಿ
- ಮೋಡಗಳು ಕವಿದಿದ್ದರೂ, ಶತ್ರು ಪಾಳಯ ಮೇಲೆ ನಿಗಾ ಇಡಲಿದೆ.
- 5 ವರ್ಷಗಳ ಜೀವಿತಾವಧಿ
ರಿಸ್ಯಾಟ್-2ಬಿ ಉಪಗ್ರಹದಿಂದ ಮೂಲಕ ಗಡಿ ಭಾಗದಲ್ಲಿ ಉಗ್ರರ ಚಟುವಟಿಕೆಗಳ ಮೇಲೆ ನಿಗಾ ಇಡಲು ಸಾಧ್ಯವಾಗಲಿದೆ. ಉಗ್ರರ ನೆಲೆ, ತರಬೇತಿ ಕೇಂದ್ರಗಳನ್ನು ಗುರುತಿಸಿ ಅಲ್ಲಿನ ಚಟುವಟಿಕೆಗಳನ್ನೂ ಗಮನಿಸಬಹುದು ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ.
Indian Space Research Organisation (ISRO) launches PSLVC46 from Satish Dhawan Space Centre, Sriharikota. PSLVC46 will launch the RISAT-2B radar earth observation satellite into a 555 km-altitude orbit. pic.twitter.com/iY2paDVjls
— ANI (@ANI) May 22, 2019
You must be logged in to post a comment.