
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಬೇಹುಗಾರಿಕಾ ಉಪಗ್ರಹ ಎಮಿಸ್ಯಾಟ್ ಸೇರಿದಂತೆ 28 ನ್ಯಾನೋ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 9:27ಕ್ಕೆ ಪಿಎಸ್‌ಎಲ್‌ವಿ ಸಿ-45 ರಾಕೆಟ್ ಉಡಾವಣಾ ವಾಹಕದಲ್ಲಿ ಇತ್ತೀಚಿನ ಬೇಹುಗಾರಿಕಾ ಉಪಗ್ರಹ ’ಎಮಿಸ್ಯಾಟ್’ ಹಾಗೂ ಇತರೆ 28 ಉಪಗ್ರಹ ರಾಕೆಟನ್ನು ಉಡಾವಣೆ ಮಾಡಲಾಯಿತು ಎಂದು ಇಸ್ರೋ ತಿಳಿಸಿದೆ.
436 ಕೆಜಿ ತೂಕವುಳ್ಳ ಕಡಿಮೆ ಗುರುತ್ವಾಕರ್ಷಣೆಯ ಕಕ್ಷೆಯಲ್ಲಿ ಕಾರ್ಯ ನಿರ್ವಹಿಸಲಿದೆ. ಎಮಿಸ್ಯಾಟ್ ಉಪಗ್ರಹಕ್ಕೆ ಶತ್ರು ರಾಷ್ಟ್ರಗಳ ನೆಲೆಗಳಲ್ಲಿರುವ ರೇಡಾರ್ ಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯವಿದೆ. ಈ ಮೊದಲು ಏರ್ ಪ್ಲೇನ್‍ಗಳ ಮೂಲಕ ಶತ್ರು ರಾಷ್ಟ್ರಗಳಲ್ಲಿನ ರೇಡಾರ್ ಪತ್ತೆ ಮಾಡಿ ಎಚ್ಚರಿಸುವ ಕೆಲಸವನ್ನ ಮಾಡಲಿದೆ.
ಇಸ್ರೋದ ಪಿಎಸ್‍ಎಲ್‍ವಿ-ಸಿ-45 ರಾಕೆಟ್ ಮೂಲಕ ಡಿಆರ್ ಡಿಒ ಅಭಿವೃದ್ಧಿಪಡಿಸಿದ ಎಮಿಸ್ಯಾಟ್, ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್ ಸ್ಯಾಟಲೈಟ್ ಸೇರಿದಂತೆ ಅಮೆರಿಕದ 24, ಸ್ವಿಟ್ಜಿರ್ ಲೆಂಡ್ ನ 01, ಸ್ಪೇನ್ 1, ಲಿಥುಯೇನಿಯಾದ 02 ಹೊತ್ತೊಯ್ದಿದ್ದು, 3 ಕಕ್ಷೆಗಳಲ್ಲಿ ಕಕ್ಷೆಗೆ ಸೇರಿಸಲಿದೆ.