ಇಸ್ರೋ ಮತ್ತೊಂದು ಮೈಲುಗಲ್ಲು ಜಿಸ್ಯಾಟ್-31 ಉಪಗ್ರಹ ಉಡಾವಣೆ ಯಶಸ್ವಿ

ಇಸ್ರೋ ಮತ್ತೊಂದು ಮೈಲುಗಲ್ಲು ಜಿಸ್ಯಾಟ್-31 ಉಪಗ್ರಹ ಉಡಾವಣೆ ಯಶಸ್ವಿ

ಇಸ್ರೋ ಮತ್ತೊಂದು ಮೈಲುಗಲ್ಲು ಜಿಸ್ಯಾಟ್-31 ಉಪಗ್ರಹ ಉಡಾವಣೆ ಯಶಸ್ವಿ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿರ್ಮಿಸಿರುವ ಜಿಸ್ಯಾಟ್​-31 ಸಂವಹನ ಉಪಗ್ರಹವನ್ನು ಫ್ರೆಂಚ್​ ಗಯಾನ ಉಡಾವಣೆ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

2,536 ಕೆ.ಜಿ ಸಾಮರ್ಥ್ಯದ ಸ್ಯಾಟಲೈಟ್‌ ಅನ್ನು ಏರಿಯಾನ-5 ರಾಕೆಟ್‌ ಮೂಲಕ ಬುಧವಾರ ಬೆಳಗಿನ ಜಾವ 2.31 ಕ್ಕೆ (ಭಾರತೀಯ ಕಾಲಮಾನ) ಉಡಾವಣೆ ಮಾಡಲಾಯಿತು. 42 ನಿಮಿಷಗಳ ನಂತರ ಉಪಗ್ರಹ ನಿಗದಿತ ಕಕ್ಷೆಗೆ ತಲುಪಿತು ಎಂದು ಇಸ್ರೋ ತಿಳಿಸಿದೆ.

ಸೇವೆ ಸ್ಥಗಿತಗೊಳಿಸಲಿರುವ ಕೆಲವು ಉಪಗ್ರಹಗಳ ಸ್ಥಾನದಲ್ಲಿ ಈ ಉಪಗ್ರಹ ಕಾರ್ಯ ನಿರ್ವಹಿಸಲಿದೆ. ಒಟ್ಟು 15 ವರ್ಷ ಈ ಉಪಗ್ರಹ ಸೇವೆಗೆ ಲಭ್ಯವಿರಲಿದೆ. ಈ ಉಪಗ್ರಹ ಟೆಲಿವಿಷನ್​ ಅಪ್​ಲಿಂಕ್​, ಡಿಟಿಎಚ್​ ಟೆಲಿವಿಷನ್​ ಸೇವೆಗಳು, ಮೊಬೈಲ್​ ಫೋನ್​, ಎಟಿಎಂನ ವಿಸ್ಯಾಟ್​, ಸ್ಟಾಕ್​ ಎಕ್ಸ್​ಚೇಂಜ್​, ಇ-ಗವರ್ನನ್ಸ್​ ಸೇವೆ ಸೇರಿ ಇತರೆ ಸಂವಹನ ಉದ್ದೇಶಗಳಿಗೆ ಈ ಉಪಗ್ರಹವನ್ನು ಬಳಸಿಕೊಳ್ಳಲಾಗುವುದು.

ಈ ಉಪಗ್ರಹ ಅರಬ್ಬಿ ಸಮುದ್ರ, ಹಿಂದು ಮಹಾಸಾಗರ, ಬಂಗಾಳ ಕೊಲ್ಲಿಯ ಬಹುತೇಕ ಭಾಗದಲ್ಲಿ ಸಂವಹನ ಸೇವೆ ಕಲ್ಪಿಸಲು ನೆರವಾಗಲಿದೆ. ಜಿಸ್ಯಾಟ್​-31 ಉಪಗ್ರಹ ಕಕ್ಷೆಗೆ ತಲುಪಿದ ನಂತರ ಇಸ್ರೋ ಸಂಪರ್ಕಕ್ಕೆ ಸಿಕ್ಕಿದ್ದು, ಹಾಸನದಲ್ಲಿರುವ ಇಸ್ರೋದ ನಿಯಂತ್ರಣ ಕೇಂದ್ರದ ಮೂಲಕ ಉಪಗ್ರಹವನ್ನು ನಿಯಂತ್ರಿಸಲಾಗುತ್ತಿದೆ ಎಂದು ಇಸ್ರೋ ತಿಳಿಸಿದೆ.

Leave a Comment

Scroll to Top